Snapchat: ಕಾರ್ಟೂನ್ 3D ​ಫೇಸ್​ ಫಿಲ್ಟರ್​ ಬಳಸುವುದು ಹೇಗೆ? ಇಲ್ಲಿದೆ ಮಾಹಿತಿ

Snapchat

Snapchat

Snapchat Cartoon Face Filter: ಸ್ನ್ಯಾಪ್‌ಚಾಟ್ ಹೊಸ ಕಾರ್ಟೂನ್ 3D ಸ್ಟೈಲ್ ಲೆನ್ಸ್ ಸದ್ಯ ಟ್ರೆಂಡಿಂಗ್​ನಲ್ಲಿ. ಇದು ಸೆಲ್ಫಿಯಲ್ಲಿ ಡಿಸ್ನಿ ಅಥವಾ ಪಿಕ್ಸರ್ ತರಹದ ಪಾತ್ರಗಳಾಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ. ಬಳಕೆದಾರನ ಮುಖವನ್ನು ಗೊಂಬೆಯಂತೆ ಪರಿವರ್ತಿಸುತ್ತದೆ.

ಮುಂದೆ ಓದಿ ...
  • Share this:

ವಾಟ್ಸ್​​ಆ್ಯಪ್​, ಇನ್​ಸ್ಟಾಗ್ರಾಂ, ಫೇಸ್​ಬುಕ್​ ಹೀಗೆ ನಾನಾ ಜನಪ್ರಿಯ ಆ್ಯಪ್​ಗಳು ಬಳಕೆಯಲ್ಲಿವೆ. ಅದರ ಜತೆಗೆ ಸ್ನಾಪ್​ಚಾಟ್​ ಕೂಡ ಅತಿ ಹೆಚ್ಚು ಬಳಕೆದಾರರನ್ನು ಹೊಂದಿದೆ. ಇದರ ಮೂಲಕ ಅನೇಕರು ಸಂವಹನ ನಡೆಸುತ್ತಾರೆ. ಯುವಕ –ಯುವತಿಯರು ಹೆಚ್ಚಾಗಿ ಸ್ನಾಪ್​ಚಾಟ್​ ಆ್ಯಪ್ ಬಳಕೆ ಮಾಡುತ್ತಿದ್ದಾರೆ. ಅದಕ್ಕೆಂದೆ ಸ್ನಾಪ್​ಚಾಟ್​ ಕೂಡ ಏನಾದರೊಂದು ಫೀಚರ್ಸ್​ಗಳನ್ನು ಗ್ರಾಹಕರಿಗೆ ಒದಗಿಸುತ್ತಿರುತ್ತದೆ. ಇದೀಗ ಸ್ನಾಟ್​ಚಾಟ್​ನಲ್ಲಿ ಹೊಸ ಕಾರ್ಟೂನ್​​ 3ಡಿ ಸ್ಟೈಲ್ಸ್​ ಲೆನ್ಸ್​ ಅನ್ನು ಬಿಡುಗಡೆ ಮಾಡಿದೆ. ಅನೇಕರು ಈ ಫೀಚರ್ಸ್​ ಅನ್ನು ಬಳಸುತ್ತಿದ್ದಾರೆ.


ಸ್ನ್ಯಾಪ್‌ಚಾಟ್ ಹೊಸ ಕಾರ್ಟೂನ್ 3D ಸ್ಟೈಲ್ ಲೆನ್ಸ್ ಸದ್ಯ ಟ್ರೆಂಡಿಂಗ್​ನಲ್ಲಿ. ಇದು ಸೆಲ್ಫಿಯಲ್ಲಿ ಡಿಸ್ನಿ ಅಥವಾ ಪಿಕ್ಸರ್ ತರಹದ ಪಾತ್ರಗಳಾಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ. ಬಳಕೆದಾರನ ಮುಖವನ್ನು ಗೊಂಬೆಯಂತೆ ಪರಿವರ್ತಿಸುತ್ತದೆ.


ಕಂಪನಿಯ ಹೇಳುವ ಪ್ರಕಾರ, ಅನೇಕ ಸ್ನ್ಯಾಪ್‌ಚ್ಯಾಟರ್‌ಗಳು ಈ ಫೀಚರ್​​ ಅನ್ನು ಜಾಗತಿಕವಾಗಿ ಬಳಸುತ್ತಿದ್ದಾರೆ ಮತ್ತು 1.7 ಶತಕೋಟಿ ಬಾರಿ ವೀಕ್ಷಿಸಲಾಗಿದೆ. ಕಾರ್ಟೂನ್ 3D ಸ್ಟೈಲ್ ಮೂಲಕ ಫೋಟೋ ಮತ್ತು ವಿಡಿಯೋ ಎರಡನ್ನು ಬಳಸಬಹುದಾಗಿದೆ.


ಹೊಸ ಸ್ನ್ಯಾಪ್‌ಚಾಟ್ ಕಾರ್ಟೂನ್ 3ಡಿ ಸ್ಟೈಲ್​ ಲೆನ್ಸ್ ಅನ್ನು ನೀವು ಹೇಗೆ ಬಳಸಬಹುದು? ಇಲ್ಲಿದೆ ಮಾಹಿತಿ


ಹಂತ 1: ಸ್ನ್ಯಾಪ್‌ಚಾಟ್ ಆಪ್ ತೆರೆಯಿರಿ (ಇದು ಅಪ್‌ಡೇಟ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ)


 ಹಂತ 2: ಕ್ಯಾಮೆರಾ ಸ್ಕ್ರೀನ್‌ಗೆ ಹೋಗಿ ಮತ್ತು ಕ್ಯಾಮರಾ ಬಟನ್‌ನ ಬಲಭಾಗದಲ್ಲಿರುವ ನಗುತ್ತಿರುವ ಮುಖದ ಐಕಾನ್ ಮೇಲೆ ಟ್ಯಾಪ್ ಮಾಡಿ


 ಹಂತ 3:  ಎಕ್ಸ್‌ಪ್ಲೋರ್ ಮೇಲೆ ಟ್ಯಾಪ್ ಮಾಡಿ ಮತ್ತು ಕಾರ್ಟೂನ್ ಗಾಗಿ ಹುಡುಕಿ, ಕಾರ್ಟೂನ್ 3D ಶೈಲಿ ಆಯ್ಕೆಮಾಡಿ


 ಹಂತ 4: ಕ್ಯಾಮೆರಾದ ಮೇಲೆ ದೀರ್ಘವಾಗಿ ಒತ್ತಿ ಮತ್ತು ವೀಡಿಯೊವನ್ನು ರೆಕಾರ್ಡ್ ಮಾಡಿ


 ಲೆನ್ಸ್ ಪರಿಣಾಮವನ್ನು ಬದಲಾಯಿಸಲು ನೀವು ಪರದೆಯ ಮೇಲೆ ಟ್ಯಾಪ್ ಮಾಡಬಹುದು. ಒಮ್ಮೆ ಮಾಡಿದ ನಂತರ, ಅದನ್ನು ನಿಮ್ಮ ಕ್ಯಾಮೆರಾ ರೋಲ್‌ನಲ್ಲಿ ಉಳಿಸಿ ಮತ್ತು ಅದನ್ನು ಸ್ನ್ಯಾಪ್‌ಚಾಟ್ ಸ್ಟೋರಿ ಅಥವಾ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.







 ಈಗಾಗಲೇ ಅನೇಕರು ಸ್ನ್ಯಾಪ್‌ಚಾಟ್ ಹೊಸ ಕಾರ್ಟೂನ್ 3D ಸ್ಟೈಲ್ ಫಿಲ್ಟರ್‌ ಅನ್ನು ಬಳಸುತ್ತಿದ್ದಾರೆ. ಅಷ್ಟೇ ಏಕೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ

top videos
    First published: