• Home
  • »
  • News
  • »
  • tech
  • »
  • Free Internet: ಫ್ರೀಯಾಗಿ ಇಂಟರ್ನೆಟ್‌ ಉಪಯೋಗಿಸುವುದು ಹೇಗೆ? ಈ ಟ್ರಿಕ್ಸ್‌ ಫಾಲೋ ಮಾಡಿ

Free Internet: ಫ್ರೀಯಾಗಿ ಇಂಟರ್ನೆಟ್‌ ಉಪಯೋಗಿಸುವುದು ಹೇಗೆ? ಈ ಟ್ರಿಕ್ಸ್‌ ಫಾಲೋ ಮಾಡಿ

ಇಂಟರ್ನೆಟ್‌ ಫ್ರೀ

ಇಂಟರ್ನೆಟ್‌ ಫ್ರೀ

ಜಿಯೋ ನೀಡುತ್ತಿದೆ ಗ್ರಾಹಕರಿಗೆ ಉಚಿತ ಇಂಟರ್ನೆಟ್. ಹಾಗಿದ್ರೆ ಈ ಉಚಿತ ನೆಟ್‌ವರ್ಕ್‌ ಸಂಪರ್ಕವನ್ನು ಹೇಗೆ ಪಡೆಯಬಹುದು, ಎಷ್ಟು ನೆಟ್‌ವರ್ಕ್‌ ವೇಗವನ್ನು ಹೊಂದಿದೆ.  ಇದಕ್ಕೆಲ್ಲಾ ಮಾಹಿತಿ ಇಲ್ಲಿದೆ.

  • Share this:

    ಹಲವಾರು ಟೆಲಿಕಾಂ ಕಂಪನಿಗಳು (Telecom Company) ತನ್ನ ನೆಟ್‌ವರ್ಕ್‌ (Network) ಅನ್ನು ವೇಗಗೊಳಿಸಲು ಹಲವಾರು ಪ್ರಯತ್ನಗಳನ್ನು ಪಡುತ್ತಿರುತ್ತಾರೆ. ಇದರ ಮುಖ್ಯ ಉದ್ದೇಶ ಗ್ರಾಹಕರನ್ನು ತನ್ನತ್ತ ಆಕರ್ಷಿಸುವುದಾಗಿದೆ. ಅದ್ರಲ್ಲೂ ಟೆಲಿಕಾಂ ಸಂಸ್ಥೆಗಳಲ್ಲಿ ಜಿಯೋ (Jio) ಜನರಿಗೆ ದಿನದಿಂದ ದಿನಕ್ಕೆ ಗ್ರಾಹಕರಿಗೆ ಆಫರ್‌ಗಳನ್ನು (Offer) ನೀಡುತ್ತಲೇ ಇರುತ್ತಾರೆ. ಜಿಯೋ ತನ್ನ ಗ್ರಾಹಕರಿಗೆ ಒಂದಕ್ಕಿಂತ ಒಂದು ಕೊಡುಗೆಗಳನ್ನು ಜಾರಿಗೆ ತರುತ್ತಿದ್ದು, ಅವು ಕಡಿಮೆ ಹಣವನ್ನು ಹೊಂದಿರುತ್ತದೆ. ಮತ್ತು ಸಾಕಷ್ಟು ಪ್ರಯೋಜನಗಳನ್ನು ಹೊಂದಿವೆ. ರಿಲಯನ್ಸ್ (Reliance Jio) ಮಾಲೀಕತ್ವದ ಜಿಯೋ, ಜಿಯೋ ಫೈಬರ್ (Jio Fiber) ಹೆಸರಿನ ಬ್ರಾಡ್‌ಬ್ಯಾಂಡ್ (Broadband) ಸೇವೆಯನ್ನು ಹೊಂದಿದ್ದು, ಇದರಲ್ಲಿ ಅತ್ಯಂತ ವೇಗದ ಇಂಟರ್ನೆಟ್ (Internet) ಅನ್ನು ನೀವು ಅನುಭವಿಸಬಹುದು. ಕಂಪನಿಯು ಬಳಕೆದಾರರಿಗೆ ತಮ್ಮ ವೈಫೈ (Wi Fi) ಅನ್ನು ಉಚಿತವಾಗಿ (Free) ಬಳಸಲು ಅನುಮತಿಸುತ್ತಿದೆ.


    ಹಾಗಿದ್ರೆ ಈ ಉಚಿತ ನೆಟ್‌ವರ್ಕ್‌ ಸಂಪರ್ಕವನ್ನು ಹೇಗೆ ಪಡೆಯಬಹುದು, ಎಷ್ಟು ನೆಟ್‌ವರ್ಕ್‌ ವೇಗವನ್ನು ಹೊಂದಿದೆ.  ಇದಕ್ಕೆಲ್ಲಾ ಮಾಹಿತಿ ಇಲ್ಲಿದೆ.


    ಕೊಡುಗೆ ಏನು?


    ಈ ಕೊಡುಗೆಯ ಬಗ್ಗೆ ಹೇಳುವುದಾದರೆ, ಕಂಪನಿಯು ಜಿಯೋ ಫೈಬರ್ ಅನ್ನು ಉಚಿತವಾಗಿ ಬಳಸಲು ಅವಕಾಶವನ್ನು ನೀಡುತ್ತಿದೆ. ಉಚಿತವಾಗಿ ಹೇಗೆ ಸೌಲಭ್ಯವನ್ನು ಪಡೆಯವುದು? ಎಂಬ ಪ್ರಶ್ನೆ ನಿಮಗೆ ಮೂಡಬಹುದು.


    How to use internet for free Follow these tricks
    ಇಂಟರ್ನೆಟ್‌ ಫ್ರೀ


    ಇದನ್ನೂ ಓದಿ: Redmi Note 12 Pro+ ಫೋನಿನಲ್ಲಿ 200-MP ಸ್ಯಾಮ್‌ಸಂಗ್ HPX ಕ್ಯಾಮೆರಾ! ನೀವು ನೋಡಲೇಬೇಕು


    ಏಕೆಂದರೆ ಹಲವಾರು ಕಂಪನಿಗಳ ಈ ರೀತಿಯ ಸೇವೆಯನ್ನು  ಬಳಸಬೇಕಾದರೆ ಅದಕ್ಕೆ ನಿರ್ದಿಷ್ಟ ಮೊತ್ತಗಳನ್ನು ಪಾವತಿಸಬೇಕು. ಆದರೆ ಇದರ ಯೋಜನೆಯೇ ಭಿನ್ನವಾಗಿದೆ. ಇಲ್ಲಿ ಗ್ರಾಹಕರು ಜಿಯೋ ಫೈಬರ್‌ ಮೂಲಕ ಉಚಿತ ವೈಫೈ ಕನೆಕ್ಷನ್‌ ಅನ್ನು ನಿಮಗೆ ಪಡೆಯುವ ಅವಕಾಶವನ್ನು ಕಂಪನಿ ನೀಡುತ್ತಿದೆ.


    ಈ ಆಫರ್‌ ಹೇಗೆ ಬಳಸಿಕೊಳ್ಳುವುದು?


    ವಿಶೇಷವಾಗಿ ಕಂಪನಿ ತನ್ನ ಗ್ರಾಹಕರಿಗೆ ಯಾವುದೇ ರೀತಿಯ ವಂಚನೆ ಮಾಡಲು ಬಯಸುತ್ತಿಲ್ಲ ಎಂದು ಹೇಳಲಾಗಿದ್ದು  ಮತ್ತು ಅದಕ್ಕಾಗಿಯೇ ಫೈಬರ್ ಸಂಪರ್ಕವನ್ನು ತೆಗೆದುಕೊಳ್ಳುವ ಮೊದಲು ಕಂಪನಿಯು ನಿಮಗೆ ಪ್ರಾಯೋಗಿಕ ಅವಧಿಯನ್ನು ನೀಡುತ್ತಿದೆ, ಇದರಲ್ಲಿ ನೀವು 1 ತಿಂಗಳವರೆಗೆ ಫೈಬರ್ ಸೇವೆಯ ಲಾಭವನ್ನು ಪಡೆಯಬಹುದು ಮತ್ತು ನಂತರ ಒಂದು ತಿಂಗಳ ಬಳಿಕ ಗ್ರಾಹಕರಿಗೆ ಈ ಸೇವೆ ಇಷ್ಟವಾದರೆ, ನೀವು ಸೇವೆಯನ್ನು ಮುಂದುವರೆಸಬಹುದಾಗಿದೆ. ಒಂದು ವೇಳೆ ಮುಂದುವರಿಸಿದರೆ ನಂತರ ಈ ಸೇವೆಗೆ ತಕ್ಕ ಹಣವನ್ನು ಕಂಪನಿ ನಿರ್ಧರಿಸುತ್ತದೆ. ಆ ಹಣವನ್ನು ಪಾವತಿ ಮಾಡ್ಬೇಕು.


    ಯೋಜನೆ ಬಳಸುವುದು ಕಡ್ಡಾಯವಲ್ಲ:


    ಈ ಯೋಜನೆ ಗ್ರಾಹಕರಿಗೆ ಕಡ್ಡಾಯವಾಗಿರುವುದಿಲ್ಲ. ಏಕೆಂದರೆ ಬಳಕೆದಾರರು ತಮ್ಮ ಒಂದು ತಿಂಗಳ ಸೇವೆಯನ್ನು ಬಳಸಿ ಇಷ್ಟವಾದರೆ, ಹೊಂದಿಕೆಯಾದರೆ ಮಾತ್ರ ನಂತರದ ತಿಂಗಳಿನಲ್ಲೂ ಇದನ್ನು ಬಳಸಬಹುದು. ಆದರೆ ಆಗ ಮಾತ್ರ ಕಂಪನಿ ಹೇಳುವ ಮೊತ್ತವನ್ನು ಪಾವತಿ ಮಾಡಬೇಕು. ಈ ಮೊತ್ತ ಕೂಡ ಬಳಕೆದಾರರಿಗೆ ಕೈಗೆಟಕುವ ದರದಲ್ಲಿರುತ್ತದೆ.


    ಇದನ್ನೂ ಓದಿ: ಈ ಜ್ಯಾಕೆಟ್‌ ಧರಿಸಿದರೆ ಚಳಿಯೇ ಆಗಲ್ವಂತೆ! ಫೀಚರ್ಸ್‌, ಬೆಲೆ ಬಗ್ಗೆ ಕಂಪ್ಲೀಟ್‌ ಮಾಹಿತಿ ಇಲ್ಲಿದೆ


    ಇದು ಜಿಯೋ ಗ್ರಾಹಕರಿಗಾಗಿ ಬಿಡುಗಡೆ ಮಾಡುತ್ತಿರುವ ವಿಶೇಷ ಆಫರ್‌ ಆಗಿದೆ. ಇಲ್ಲಿ ಗ್ರಾಹಕರು ತಮಗೆ ಇಷ್ಟಬಂದಂತೆ ಬಳಸಬಹುದು. ಆದರೆ ಈ ಆಫರ್‌ ಒಂದು ತಿಂಗಳು ಮಾತ್ರ ಉಪಯೋಗಿಸಬಹುದು. ನಂತರ ಪಾವತಿ ಮಾಡಿ ಈ ಸೌಲಭ್ಯವನ್ನು ಪಡೆಯಬಹುದು. ಆದರೆ ಜಿಯೋ ನೀಡುವಂತಹ ಪ್ರತಿಯೊಂದು ಆಫರ್‌ಗಳು ಕೂಡ ಜನರಿಗೆ ಸುಲಭವಾಗುವಂತೆಯೇ ಇರುತ್ತದೆ.


    ಈ ಯೋಜನೆ ಒಂದು ರೀತಿಯಲ್ಲಿ ನೆಟ್‌ವರ್ಕ್‌ ಇಲ್ಲದ ಪ್ರದೇಶಗಳಲ್ಲಿ ಬಹಳಷ್ಟು ಉಪಯೋಗವಾಗುತ್ತದೆ.

    Published by:Harshith AS
    First published: