ಬೇಸಿಗೆಯ (Summer) ಉರಿ ತಾಳಲಾರದೇ ಪ್ರತಿಯೊಬ್ಬರೂ ಇದೀಗ ತಮ್ಮ ತಮ್ಮ ಮನೆಗಳಲ್ಲಿ ಎಸಿ, ಏರ್‌ಕೂಲರ್‌ಗಳನ್ನು ಹೆಚ್ಚಾಗಿಯೇ ಬಳಸುತ್ತಿದ್ದಾರೆ. ಬಿಸಿಲಿನ ಝಳಕ್ಕೆ ತಂಪಿನ ಆನಂದವನ್ನು ಪಡೆಯಲು ಈ ಉಪಕರಣಗಳನ್ನು ಬಳಕೆ ಮಾಡುತ್ತವೆಯಾದರೂ ತಿಂಗಳ ಕೊನೆಗೆ ಇದು ಜೇಬಿಗೆ ಚೆನ್ನಾಗಿಯೇ ಕತ್ತರಿ ಹಾಕುತ್ತವೆ. ಎಸಿ (AC) ಬಳಸಿದ್ದರ ಪರಿಣಾಮವಾಗಿ ಮನೆಯ ವಿದ್ಯುತ್ ಬಿಲ್ (Current Bill) ಕೂಡ ಅಷ್ಟೇ ಏರಿಕೆಯಾಗಬಹುದು.
ಸರಿ ಒಂದೆಡೆ ಬಿಸಿಲಿನ ತಾಪಮಾನ ಇನ್ನೊಂದೆಡೆ ವಿಪರೀತ ಬರುವ ಕರೆಂಟ್ ಬಿಲ್ ಇದೆಲ್ಲವನ್ನೂ ನಿಭಾಯಿಸಲು ನೀವು ಪರಿಹಾರವನ್ನು ಕಂಡುಕೊಳ್ಳಲೇಬೇಕು. ಹಾಗಿದ್ದರೆ ಇಂದಿನ ಲೇಖನದಲ್ಲಿ ಎಸಿ ಬಳಸಿಕೊಂಡೇ ಕರೆಂಟ್ ಬಿಲ್ ಮಿತಗೊಳಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ
ಬಳಸದೇ ಇದ್ದಾಗ ಎಸಿಯನ್ನು ಆನ್ನಲ್ಲಿ ಇಡ್ಬೇಡಿ
ಇಂದಿನ ದಿನಗಳಲ್ಲಿ ತಂತ್ರಜ್ಞಾನ ಎಷ್ಟು ಅಭಿವೃದ್ಧಿಯಾಗಿದೆ. ಎಸಿ ಬಟನ್ ಪ್ರೆಸ್ ಮಾಡಿದರೆ ಸಾಕು ಆನ್ ಆಗುತ್ತದೆ. ಆದರೆ ಅದನ್ನು ನಂತರ ಯಾರೂ ಆಫ್ ಮಾಡಲೇ ಹೋಗುವುದಿಲ್ಲ. ಕೊಠಡಿ ತಂಪಾಗಿ ಇರಲಿ ಎಂದೇ ಎಷ್ಟೋ ಎಸಿ ಬಳಕೆದಾರರು ಎಸಿ ಆಫ್ ಮಾಡುವುದಿಲ್ಲ. ಇದರಿಂದ ವಿದ್ಯುತ್ ಬಿಲ್ ವಿಪರೀತವಾಗುತ್ತದೆ.
ಇದನ್ನೂ ಓದಿ: ನಿಮ್ಮ ಮೊಬೈಲ್ ಹ್ಯಾಕ್ ಆಗಿದ್ಯಾ? ಈ ಟಿಪ್ಸ್ ಮೂಲಕ ಚೆಕ್ ಮಾಡಿಕೊಳ್ಳಿ
ಎಸಿ ತಾಪಮಾನವನ್ನು ಆಪ್ಟಿಮಮ್ ಮಟ್ಟದಲ್ಲಿರಿಸಿ
ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (BEE) ಪ್ರಕಾರ, 24 ಡಿಗ್ರಿ ಮಾನವ ದೇಹಕ್ಕೆ ಸೂಕ್ತವಾದ ತಾಪಮಾನವಾಗಿದೆ. ಹಾಗಾಗಿ ಕಡಿಮೆ ತಾಪಮಾನಕ್ಕೆ ಎಸಿ ಹೊಂದಿಸುವುದರಿಂದ ಹೆಚ್ಚು ಕೂಲಿಂಗ್ ದೊರೆಯುತ್ತದೆ ಎಂಬುದು ಸರಿಯಲ್ಲ. ಎಸಿ ತಾಪಮಾನವನ್ನು ಆಪ್ಟಿಮಮ್ ತಾಪಮಾನದಲ್ಲಿ ಇರಿಸುವುದರಿಂದ ಹೆಚ್ಚು ವಿದ್ಯುತ್ ಬಿಲ್ ಉಳಿಸಬಹುದಾಗಿದೆ.
ಹೆಚ್ಚುವರಿ ಬಳಕೆಯನ್ನು ತಪ್ಪಿಸಲು ಟೈಮರ್ ಬಳಸಿ
ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರತಿಯೊಂದು ಎಸಿ ಬಳಕೆದಾರರಿಗೆ ಅವರ ಅವಶ್ಯಕತೆಗಳಿಗೆ ಅನುಗುಣವಾಗಿ ಟೈಮರ್‌ಗಳನ್ನು ಹೊಂದಿಸುವ ವ್ಯವಸ್ಥೆಯನ್ನೊಳಗೊಂಡಿದೆ.
ಆದರೆ ಹೆಚ್ಚಿನವರು ಟೈಮರ್ ಬಳಸುವುದಿಲ್ಲ. ಎಸಿ ಆಫ್ ಮಾಡಲು ಈ ಟೈಮರ್ ನೆರವಾಗುತ್ತದೆ. ಇದರಿಂದ ಎಸಿಯ ಅನಗತ್ಯ ಬಳಕೆಯನ್ನು ಕಡಿಮೆ ಮಾಡಬಹುದಾಗಿದೆ.
ನಿಯಮಿತವಾಗಿ ಎಸಿ ಸರ್ವೀಸಿಂಗ್ ಮಾಡಿಸಿ
ಹೆಚ್ಚಿನ ಮ್ಯಾನುಫ್ಯಾಕ್ಚರ್‌ಗಳು ಎಸಿ ಸರ್ವೀಸಿಂಗ್ ಅನ್ನು ಆಗಾಗ್ಗೆ ಮಾಡಿಸಬೇಕು. ಬಳಕೆಯಲ್ಲಿಲ್ಲದಾಗ ಅಂದರೆ ಮಳೆಗಾಲ ಅಥವಾ ಚಳಿಗಾಲದ ಸಮಯದಲ್ಲಿ ಎಸಿ ಸರ್ವೀಸಿಂಗ್ ಕಡ್ಡಾಯವಾಗಿದೆ.
ಇದರಿಂದ ಎಸಿಯಲ್ಲಿರುವ ಧೂಳು ಹಾಗೂ ಇನ್ನಿತರ ಕೊಳಕುಗಳನ್ನು ಸರ್ವೀಸಿಂಗ್ ಮೂಲಕ ನಿವಾರಿಸಬಹುದಾಗಿದೆ. ಎಸಿ ಸರ್ವೀಸಿಂಗ್ ಎಸಿಯ ಬಳಕೆಯ ಅವಧಿಯನ್ನು ಹೆಚ್ಚಿಸುತ್ತದೆ ಹಾಗೂ ಎನರ್ಜಿಯನ್ನು ಬಳಕೆಯನ್ನು ಕಡಿಮೆ ಮಾಡುತ್ತದೆ.
ತಂಪಾದ ಗಾಳಿ ಕೊಠಡಿಯಿಂದ ಹೊರಹೋಗದಂತೆ ಜಾಗ್ರತೆ ವಹಿಸಿ
ಎಸಿ ಚಾಲನೆಯಲ್ಲಿರುವಾಗ ನಿಮ್ಮ ಕೊಠಡಿಯು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ಕಿಟಕಿ ಬಾಗಿಲನ್ನು ಸಂಪೂರ್ಣವಾಗಿ ಮುಚ್ಚಿ. ಪ್ಯಾನೆಲ್‌ಗಳಲ್ಲಿ ಅಂತರವಿದ್ದರೆ ಅದನ್ನು ನೋಡಿಕೊಳ್ಳಿ. ಇದು ಕೋಣೆಯನ್ನು ತ್ವರಿತವಾಗಿ ಹಾಗೂ ಹೆಚ್ಚುಕಾಲ ತಂಪಾಗಿರಿಸಲು ಸಹಕಾರಿಯಾಗಿದೆ.
ತಂಪಾದ ಗಾಳಿ ಹೊರಹೋದ ಸಮಯದಲ್ಲಿ ಕೊಠಡಿ ತಂಪಾಗಲು ಎಸಿ ಇನ್ನಷ್ಟು ಸಮಯ ತೆಗೆದುಕೊಳ್ಳುತ್ತದೆ ಇದರಿಂದ ಕರೆಂಟ್ ಬಿಲ್ ಕೂಡ ಏರಿಕೆಯಾಗುತ್ತದೆ. ಇದರಿಂದ ವೃಥಾ ಸುಮ್ಮನೆ ಶಕ್ತಿಯ ಪೋಲಾಗುತ್ತದೆ.
ಎಸಿ ಆನ್‌ನಲ್ಲಿರುವಾಗ ಮಧ್ಯಮ ಗತಿಯಲ್ಲಿ ಸೀಲಿಂಗ್ ಫ್ಯಾನ್ ಚಲಾಯಿಸಿ
ಎಸಿ ಚಾಲನೆಯಲ್ಲಿರುವಾಗ ಕಡಿಮೆ ಅಥವಾ ಮಧ್ಯಮ ವೇಗದಲ್ಲಿ ಸೀಲಿಂಗ್ ಫ್ಯಾನ್ ಅನ್ನು ಆನ್ ಮಾಡುವುದು ಕೋಣೆಯನ್ನು ತ್ವರಿತವಾಗಿ ತಂಪಾಗಿಸಲು ಸಹಾಯ ಮಾಡುತ್ತದೆ. ಒಮ್ಮೆ ನೀವು ನಿಮ್ಮ ಎಸಿ ತಾಪಮಾನವನ್ನು ಗರಿಷ್ಠ ಮಟ್ಟದಲ್ಲಿ ಹೊಂದಿಸಿದರೆ, ತಂಪಾದ ಗಾಳಿಯ ಕೋಣೆಯ ಪೂರ್ತಿ ಹರಡಲು ಫ್ಯಾನ್ ಅನ್ನು ಆನ್ ಮಾಡಬೇಕಾಗುತ್ತದೆ.
ಎಸಿ ಆನ್‌ನಲ್ಲಿರುವಾಗ ಹೆಚ್ಚು ವೇಗದಲ್ಲಿ ಫ್ಯಾನ್ ಚಾಲನೆ ಮಾಡಬೇಡಿ ಫ್ಯಾನ್ ಹೆಚ್ಚು ವೇಗದಲ್ಲಿದ್ದಾಗ ಎಸಿ ಕೋಣೆಯನ್ನು ತಂಪಾಗಿಸಲು ಅಗತ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ