ಮೊಬೈಲ್​ನಲ್ಲಿ ಫೋಟೋ ಕ್ಲಿಕ್ಕಿಸುವುದು ಹೇಗೆ ? ಇಲ್ಲಿದೆ ಮಾಹಿತಿ


Updated:July 29, 2018, 5:02 PM IST
ಮೊಬೈಲ್​ನಲ್ಲಿ ಫೋಟೋ ಕ್ಲಿಕ್ಕಿಸುವುದು ಹೇಗೆ ? ಇಲ್ಲಿದೆ ಮಾಹಿತಿ
Pramod Pailoor

Updated: July 29, 2018, 5:02 PM IST
ಹೊಸ ಮೊಬೈಲ್​ಗಳನ್ನು ಖರೀದಿಸುವ ಮುನ್ನ ಪ್ರತಿಯೊಬ್ಬರು ಅದರ ವೈಶಿಷ್ಟ್ಯಗಳ ಕಡೆ ಹೆಚ್ಚು ಗಮನ ನೀಡುತ್ತಾರೆ. ಅದರಲ್ಲೂ ಪ್ರಮುಖವಾಗಿ ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಗುಣಮಟ್ಟದ ಕ್ಯಾಮೆರಾ ಮೊಬೈಲ್​  ಕಡೆ ಹೆಚ್ಚಿನ ಜನವಾಲುತ್ತಿದ್ದಾರೆ.  ಹೀಗಾಗಿ ಅತ್ಯುತ್ತಮ ಚಿತ್ರಗಳನ್ನು ತೆಗೆಯಲು ಈಗಿನ ಸ್ಮಾರ್ಟ್​ಫೋನ್​ಗಳಲ್ಲಿ ಸಾಧ್ಯವಾಗುತ್ತದೆ. ಆದರೆ ಹೆಚ್ಚಿನ ಜನರು ಉತ್ತಮ ಕ್ಯಾಮೆರಾ ಇರುವ ಸ್ಮಾರ್ಟ್​ಫೋನ್​ ಹೊಂದಿದ್ದರೂ ಅತ್ಯಾಕರ್ಷಣೆಯ ಚಿತ್ರಗಳನ್ನು ಪಡೆಯುವುದರಲ್ಲಿ ಫೇಲ್​ ಆಗುತ್ತಾರೆ.

ಇಂದು ನಾವು ಸ್ಮಾರ್ಟ್​ಫೋನ್​ಗಳಲ್ಲಿ ಅತ್ಯುತ್ತಮವಾಗಿ ಚಿತ್ರಗಳನ್ನು ಹೇಗೆ ಕ್ಲಿಕ್ಕಿಸಬೇಕು ಎಂಬುದನ್ನು  ಇಲ್ಲಿ ಹೇಳಿದ್ದೇವೆ, ಇದರಂತೆ ಅನುಸರಿಸಿದರೆ ಉತ್ತಮ ಚಿತ್ರಗಳನ್ನು ಪಡೆಯುವುದರಲ್ಲಿ ಸಂಶಯವಿಲ್ಲ.

ಪೊಟ್ರೇಟ್​ ಮೋಡ್​
ಭಾವಚಿತ್ರಕ್ಕಾಗಿ ಈ ಮೋಡ್​ನ್ನು ಬಳಕೆ ಮಾಡುತ್ತಾರೆ, ಇತ್ತೀಚಿನ ದಿನಗಳಲ್ಲಿ ಡ್ಯುಯಲ್​ ಕ್ಯಾಮೆರಾ ಬಂದಿರುವ ಕಾರಣ ಈ ಮೋಡ್​ನಲ್ಲಿ ಚಿತ್ರಗಳನ್ನು ತೆಗೆಯಲು ಅತ್ಯಂತ ಸುಲಭವಾಗಬಹುದು. ಆದರೆ ಹೆಚ್ಚಿನ ಸಂದರ್ಭದಲ್ಲಿ ನೀವು ತೆಗೆದ ಚಿತ್ರ ಕುಟುಂಬದವರಿಗಾಗಲಿ ಅಥವಾ ಸ್ವತಃ ನಿಮಗೇ ಇಷ್ಟವಾಗದೇ ಇರಬಹುದು. ಹೀಗಾಗಿ ಇನ್ನೂ ಹೆಚ್ಚು ಆಕರ್ಷಕವಾಗಿ ಚಿತ್ರಿಸಲು ಈ ರೀತಿ ಮಾಡಿಬೆಳಕಿನ ಕಡೆ ಹೆಚ್ಚು ನಿಗಾಯಿಡಿ
ಪೋಟ್ರೇಟ್​ ಚಿತ್ರಗಳು ಅಥವಾ ಭಾವಚಿತ್ರಗಳನ್ನು ತೆಗೆಯುವ ಸಂದರ್ಭದಲ್ಲಿ ಬೆಳಕನ್ನು ಸೂಕ್ಷ್ಮವಾಗಿ ಗಮನಿಸಿ, ಬೆಳಕಿನ ಮುಂಭಾಗದಲ್ಲಿ ವ್ಯಕ್ತಿ ಅಥವಾ ವಸ್ತು( subject)ವನ್ನು ನಿಲ್ಲಿಸಿಕೊಳ್ಳಿ, ಆಗ ಮುಖದ ಮೇಲೆ ನೇರವಾಗಿ ಬೆಳಕು ಬೀಳುತ್ತದೆ. ಬೇಕಾದರೆ ನೀವು ವ್ಯಕ್ತಿಯ ಒಂದು ಭಾಗಕ್ಕಷ್ಟೇ ಬೆಳಕು ಚೆಲ್ಲುವಂತೆ ಮಾಡಿ ಫೋಟೊಗಳನ್ನು ಕ್ಲಿಕ್ಕಿಸ  ಬಹುದು. ಈ ಮೂಲಕ ಕಲಾತ್ಮಕವಾಗಿಯೂ ಚಿತ್ರಗಳನ್ನು ಪಡೆಯಬಹುದು.
Loading...

ನೋಸ್​ರೂಂ ಮತ್ತು ಹೆಡ್​ರೂಂ
ಯಾವುದೇ ಚಿತ್ರಗಳನ್ನು ತೆಗೆಯುವ ಮುನ್ನ ಕೆಲವು ನಿಯಮಗಳನ್ನು ಪಾಲಿಸಬೇಕು, ತಲೆಯ ಮೇಲಿನ ಭಾಗ ಹಾಗೂ ಮುಖದ ಎಡ ಅಥವಾ ಬಲ ಭಾಗದ ಜಾಗವನ್ನು ಖಾಲಿಬಿಡಬೇಕು.ಫೋಕಸ್​​
ಹೆಚ್ಚಿನ ಮೊಬೈಲ್​ ಕ್ಯಾಮೆರಾಗಳು ಆಟೋ ಫೋಕಸ್​ ಆಯ್ಕೆಯನ್ನು ನೀಡುತ್ತದೆ ಆದರೆ ನೀವು ಸೂಚಿಸಿದ ವಸ್ತುವಿನ ಮೇಲೆ ಅದು ಫೋಕಸ್​ ತೆಗೆದುಕೊಳ್ಳದೇ ಇರಬಹುದು. ಇಂತಹ ಸಂದರ್ಭದಲ್ಲಿ ನೀವು ಫೋಕಸ್​ ಆಯ್ಕೆ ಬದಲಾಯಿಸಿ ನಿಮಗೆ ಬೇಕಾದ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳಿ.ಆ್ಯಕ್ಷನ್​ ಪೊಟೋಸ್​
ನೀವು ಗಮನಿಸಿದಂತೆ ಪೋಟ್ರೆಟ್​ ಚಿತ್ರಗಳನ್ನು ಎಲ್ಲರೂ ತೆಗೆಯುತ್ತಾರೆ, ಆದರೆ ಸಾಕಷ್ಟು ಮಂದಿ ಆ್ಯಕ್ಷನ್​ ಅಥವಾ ವೇಗದಲ್ಲಿ ಚಲಿಸುತ್ತಿರುವ ವಸ್ತು/ವ್ಯಕ್ತಿಯನ್ನು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿಯಲು ವಿಫಲರಾಗುತ್ತಾರೆ. ಹೀಗಾಗಿ ಆ್ಯಕ್ಷನ್​ ಫೋಟೋಸ್​ ತೆಗೆಯುವ ಮುನ್ನ ಈ ಅಂಶಗಳನ್ನು ನೆನಪಿಟ್ಟುಕೊಳ್ಳಿಸಹನೆ
ಆ್ಯಕ್ಷನ್​ ಚಿತ್ರಗಳನ್ನು ತೆಗೆಯಲು ಮೊದಲು ನೀವು ಸಹನಾ ಮೂರ್ತಿಗಳಾಗಿರಬೇಕು, ಏಕೆಂದರೆ ನೀವು ಗುರುತಿಸಿದ್ದ ವಸ್ತು ಅಥವಾ ವ್ಯಕ್ತಿ ಚಲಿಸುತ್ತಿದ್ದರೆ ಮೊದಲು ನೀವು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ, ಬಳಿಕ ಸರಿಯಾದ ಸಮಯಕ್ಕೆ ಚಿತ್ರವನ್ನು ಕ್ಲಿಕ್ಕಿಸಬೇಕು.

ಬರ್ಸ್ಟ್​ ಮೋಡ್​
ಎಲ್ಲಾ ಮೊಬೈಲ್​ಗಳಲ್ಲಿ ಬರ್ಸ್ಟ್​ ಮೋಡ್​ ಆಯ್ಕೆಯಿರುತ್ತದೆ, ಚಲನೆಯಲ್ಲಿರುವ ಚಿತ್ರಗಳನ್ನು ಪಡೆಯಲು ಈ ಬರ್ಸ್ಟ್​ ಮೋಡ್​ ಹೆಚ್ಚು ಪರಿಣಾಮಕಾರಿಯಾಗಿ ಬಳಕೆಯಾಗುತ್ತದೆ.

ಪ್ರೋ ಮೋಡ್​
ಈಗಿನ ಮೊಬೈಲ್​ಲ್ಲಿ ನೀವು ಪ್ರೋ ಮೋಡ್​ ಆಯ್ಕೆಯನ್ನು ಬಳಸಲು ಅವಕಾಶ ಮಾಡಲಾಗಿದೆ, ಪ್ರೋ ಮೋಡ್​ನಲ್ಲಿ ನಿಮಗೆ ಬೇಕಾದ ರೀತಿಯಲ್ಲಿ ಐಎಸ್​ಒ ಹಾಗು ಶಟರ್​ ಸ್ಪೀಡ್​ನ್ನು ಹೆಚ್ಚು-ಕಡಿಮೆ ಮಾಡಿಕೊಳ್ಳಬಹುದು. ಶಟರ್​ ಸ್ಪೀಡ್​ ಹೆಚ್ಚಾದಷ್ಟು ನಮ್ಮ ಚಿತ್ರಗಳು ಬ್ಲರ್​ ಆಗುವುದು ತಪ್ಪಿಸಬಹುದು.ಲ್ಯಾಂಡ್​ಸ್ಕೇಪ್​ ಮೋಡ್​
ಅತ್ಯಾಕರ್ಷಕ ದೃಶ್ಯಗಳನ್ನು ನಾವು ಸೆರೆಹಿಡಿಯಲು ಲ್ಯಾಂಡ್​ಸ್ಕೇಪ್​ ಮೋಡ್​ಗಳನ್ನು ಬಳಸುತ್ತೇವೆ, ಆದರೆ ಫೋನ್​ಗಳಲ್ಲಿ ನಾವು ಬಯಸಿದ ಮಾದರಿಯಲ್ಲಿ ಫೋಟೊಗಳನ್ನು ಪಡೆಯಲು ಅಸಾಧ್ಯವಾಗುತ್ತದೆ. ಹಲವಾರು ವಸ್ತು, ಆಕೃತಿ, ವಸ್ತುನಿಷ್ಠತೆ ಎಲ್ಲವನ್ನು ಒಂದೇ ಚೌಕಟ್ಟಿಗೆ ತರಲು ಈ ನಿಯಮಗಳನ್ನು ಪಾಲಿಸಿ.

ಈ ಚಿತ್ರಗಳನ್ನು ಛಾಯಚಿತ್ರಗಾರ ಪ್ರಮೋದ್​ ಅವರು ತಮ್ಮ ಮೊಬೈಲ್​ನಲ್ಲೇ ಕ್ಲಿಕ್ಕಿಸಿದ್ದಾರೆ. ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಹೆಚ್ಚಿನ ಮೊಬೈಲ್​ಗಳು ಡಿಎಸ್​ಎಲ್​ಆರ್​ ಕ್ಯಾಮೆರಾಗಳಿಗೂ ಸ್ಪರ್ಧೆ ನೀಡುತ್ತವೆ. ಹೀಗಾಗಿ ನಾವು ಸತತ ಪ್ರಯತ್ನ ಪಟ್ಟರೆ ಅತ್ಯುತ್ತಮ ಚಿತ್ರವನ್ನು ಕ್ಲಿಕ್ಕಿಸಬಹುದು : ಪ್ರಮೋದ್​ ಪೈಲೂರ್​ಬೆಳಕಿನ ಆಯ್ಕೆ
ನಾವು ಲ್ಯಾಂಡ್​ಸ್ಕೇಪ್​ ಮೋಡ್​ನಲ್ಲಿ ಚಿತ್ರಗಳನ್ನು ಪಡೆಯಲು ಬೆಳಕಿನ ಆಯ್ಕೆ, ಯಾವ ಪ್ರಮಾಣದ ಬೆಳಕು ಬೇಕು ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಂಡಿರಬೇಕು, ಸೂರ್ಯೋಧಯ ಅಥವಾ ಸೂರ್ಯಾಸ್ತಮಾನದ ಸಂದರ್ಭದಲ್ಲಿ  ತೆಗೆದ ಚಿತ್ರಗಳು ಹೆಚ್ಚು ಜನರನ್ನು ಆಕರ್ಷಿಸುತ್ತದೆ.

ಅಡ್ಡಲಾಗಿ ತೆಗೆದ ಚಿತ್ರಗಳು ಸಮತಲವಾಗಿದ್ದರೆ ಮಾತ್ರಾ ಎಲ್ಲರಿಗೂ ಇಷ್ಟವಾಗುತ್ತದೆ. ನೋಡಲು ಕೂಡ ಹೆಚ್ಚು ಆಕರ್ಷಣೆಯನ್ನು ಪಡೆದಿರುತ್ತದೆ. ಇದನ್ನು ಯಾವುದೇ ಲೋಪವಿಲ್ಲದೆ ಕ್ಲಿಕ್ಕಿಸಲು ಗ್ರಿಡ್​ಲೈನ್​ ಆಯ್ಕೆಯನ್ನು ಬಳಸಿ.

ಫ್ಲಾಷ್​ ಬಳಸಲೇ ಬೇಡಿ
ಲ್ಯಾಂಡ್​ಸ್ಕೇಪ್​ ಮೋಡ್​ ಬಳಕೆ ಮಾಡುವ ಸಂದರ್ಭದಲ್ಲಿ ಫ್ಲಾಷ್​ ಲೈಟ್​ ಬಳಸಲೇ ಬೇಡಿ. ನೈಸರ್ಗಿಕವಾಗಿ ದೊರಕುವು ಬೆಳಕನ್ನೇ ಬಳಸಿ ಚಿತ್ರಗಳನ್ನು ಸೆರೆಹಿಡಿಯಿರಿ.ಪೋಸ್ಟ್- ​ಪ್ರೊಸೆಸಿಂಗ್​ ತಿಳಿದಿರಿ

ನೀವು ಯಾವುದೇ ಚಿತ್ರವನ್ನು ಎಷ್ಟೇ ಚಂದವಾಗಿ ತೆಗೆಯಲು ಯತ್ನಿಸಿದರೂ ಪೋಸ್ಟ್​ಪ್ರೊಸೆಸಿಂಗ್​ ಟಚ್​ ನೀಡಲೆಬೇಕು. ನಿಮ್ಮ ಚಿತ್ರದಲ್ಲಿ ಎಕ್ಸ್​ಪೋಷರ್, ಕ್ರಾಪಿಂಗ್​, ನೋಯ್ಸ್​ ರಿಡಕ್ಷನ್​ ಎಂಬೆಲ್ಲಾ ಆಯ್ಕೆಗಳನ್ನು ಮಾಡುವುದರಿಂದ ಚಿತ್ರವನ್ನು ಇನ್ನಷ್ಟು ಕಲರ್​ಫುಲ್​ ಮಾಡಬಹುದು. ಇದಕ್ಕಾಗಿ ಸ್ನಾಪ್​ಫೀಡ್​, ಪಿಕ್ಸ್​ಆರ್ಟ್​, ಅಡೋಬ್​ ಲೈಟ್​ರೂಂ ಮುಂತಾದ ಅಪ್ಲಿಕೇಶನ್​ಗಳನ್ನು ಉಪಯೋಗಿಸಬಹುದು.
First published:July 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...