ಇನ್ಮೇಲೆ ವಾಟ್ಸ್​ಆ್ಯಪ್​ ಸ್ಟೇಟಸ್​ ಫೇಸ್​ಬುಕ್​ನಲ್ಲೂ ಶೇರ್​ ಮಾಡಬಹುದು; ಹೇಗೆ ಗೊತ್ತಾ?

ಈ ಹಿಂದೆ ಇನ್​ಸ್ಟಾಗ್ರಾಂನಲ್ಲಿ ಅಪ್ಲೋಡ್​ ಮಾಡುವ ಸ್ಟೋರಿಯನ್ನು ಫೇಸ್​ಬುಕ್​ನಲ್ಲೂ ಶೇರ್​ ಮಾಡುವ ಆಯ್ಕೆಯನ್ನು ಫೇಸ್​ಬುಕ್​ ಸಂಸ್ಥೆ ಪರಿಚಯಿಸಿತ್ತು. ಇದೀಗ ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ಅಪ್ಲೋಡ್​ ಮಾಡುವ ಸ್ಟೋರಿಯನ್ನು ನೇರವಾಗಿ ಫೇಸ್​ಬುಕ್​ನಲ್ಲೂ ಶೇರ್​​ ಮಾಡುವ ಆಯ್ಕೆಯನ್ನು ಬಳಕೆದಾರರಿಗೆ ಪರಿಚಯಿಸಿದೆ.

news18-kannada
Updated:September 18, 2019, 7:30 PM IST
ಇನ್ಮೇಲೆ ವಾಟ್ಸ್​ಆ್ಯಪ್​ ಸ್ಟೇಟಸ್​ ಫೇಸ್​ಬುಕ್​ನಲ್ಲೂ ಶೇರ್​ ಮಾಡಬಹುದು; ಹೇಗೆ ಗೊತ್ತಾ?
ವಾಟ್ಸ್​ಆ್ಯಪ್
  • Share this:
ಒಂದೇ ಆ್ಯಪ್​ನಲ್ಲಿ ಫೇಸ್​ಬುಕ್​, ಇನ್​ಸ್ಟಾಗ್ರಾಂ ಮತ್ತು ವಾಟ್ಸ್​ಆ್ಯಪ್​ ಬಳಸುವಂತೆ ಫೇಸ್​ಬುಕ್​ ಸಂಸ್ಥೆ ಚಿಂತನೆ ನಡೆಸುತ್ತಿದೆ, ಅದಕ್ಕಾಗಿ ಹೊಸ ಫೀಚರ್ಸ್​ಗಳನ್ನು ಈ ಮೂರು ಆ್ಯಪ್​ಗಳಲ್ಲಿ ಅಳವಡಿಸುತ್ತಿದೆ. ಇದರ ಬೆನ್ನಲೇ ಬಳಕೆದಾರರಿಗೆ ಫೇಸ್​ಬುಕ್​ ಸಂಸ್ಥೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ಫೇಸ್​ಬುಕ್​ ಶೇರ್​ ಆಯ್ಕೆಯೊಂದನ್ನು ಪರಿಚಯಿಸಿದೆ.

ಈ ಹಿಂದೆ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಸ್ಟೋರಿಯನ್ನು ಫೇಸ್​ಬುಕ್​ನಲ್ಲೂ ಶೇರ್​ ಮಾಡುವ ಆಯ್ಕೆಯನ್ನು ಫೇಸ್​ಬುಕ್​ ಪರಿಚಯಿಸಿತ್ತು. ಇದೀಗ ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ಹಾಕುವ ಸ್ಟೋರಿಯನ್ನು ನೇರವಾಗಿ ಫೇಸ್​ಬುಕ್​ನಲ್ಲೂ ಶೇರ್​​ ಮಾಡುವ ಆಯ್ಕೆಯನ್ನು ಬಳಕೆದಾರರಿಗೆ ಪರಿಚಯಿಸಿದೆ.

ಈಗಾಗಲೇ ಇನ್​​ಸ್ಟಾಗ್ರಾಂ ತನ್ನ ಸ್ಟೇಟಸ್​ನಲ್ಲಿ ಮ್ಯೂಸಿಕ್​ ಸೇರಿಸುವ ಹೊಸ ಆಯ್ಕೆಯನ್ನು ಪರಿಚಯಿಸಿದೆ. ಬಳಕೆದಾರರು ತಮಗಿಷ್ಟವಾದ ಮ್ಯೂಸಿಕ್​ ಜೊತೆಗೆ ಸ್ಟೇಟಸ್​ ಶೇರ್​​ ಮಾಡಬಹುದಾಗಿದೆ. ಇದೀಗ, ವಾಟ್ಸ್​ಆ್ಯಪ್​ನಲ್ಲೂ ಫೇಸ್​ಬುಕ್​ ಶೇರ್​ ಮಾಡುವ ಹೊಸ ಆಯ್ಕೆಯನ್ನು ಪರಿಚಯಿಸಿದ್ದು, ಬಳಕೆದಾರಿಗೆ ಪ್ರಯೋಜನಕ್ಕೆ ಸಿಗಲಿದೆ.  ಆ್ಯಂಡ್ರಾಯ್ಡ್​ ಮತ್ತು ಐಫೋನ್​ಗಳಿಗೆ ನೂತನ ಆಯ್ಕೆ ಲಭ್ಯವಾಗಲಿದೆ.

ವಾಟ್ಸ್​ಆ್ಯಪ್​ ಸ್ಟೇಟಸ್​ ಅನ್ನು ಫೇಸ್​ಬುಕ್​ ಶೇರ್​ ಹೇಗೆ?

ಹಂತ-1: ಮೊದಲಿಗೆ ವಾಟ್ಸ್​ಆ್ಯಪ್​ ಸ್ಟೇಟಸ್​ ಆಯ್ಕೆಯನ್ನು ಕ್ಕಿಕ್​ ಮಾಡಿ.

ಹಂತ-2: ಸ್ಟೇಟಸ್​ ಪಕ್ಕದಲ್ಲಿ ಕಾಣುವ ಮೂರು ಚುಕ್ಕಿಗಳ ಆಷ್ಷನ್​ ಅನ್ನು ಆಯ್ಕೆ ಮಾಡಿ

ಹಂತ-3: ಅದರಲ್ಲಿ ಶೇರ್​ ಟು ಫೇಸ್​ಬುಕ್​ ಆಯ್ಕೆಯನ್ನು ಕ್ಲಿಕ್​ ಮಾಡಿಹಂತ-4: ನಂತರ ನಿಮ್ಮ ಫೇಸ್​ಬುಕ್​ ಖಾತೆ ಗೋಚರಿಸುತ್ತದೆ. ಅಲ್ಲಿ ಶೇರ್​ ನೌ ಆಯ್ಕೆಯನ್ನು ಕ್ಕಿಕ್​ ಮಾಡಿ. ನಂತರ ವಾಟ್ಸ್​ಆ್ಯಪ್​ ಸ್ಟೇಟಸ್​​ ಫೇಸ್​ಬುಕ್​​ಗೆ ಶೇರ್ ಆಗುತ್ತದೆ.​

First published: September 18, 2019, 7:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading