Nearby Share ಬಳಸಿ ಫೈಲ್‌ಗಳು, ಡಾಕ್ಯುಮೆಂಟ್‌ಗಳನ್ನು ಹಂಚಿಕೊಳ್ಳುವುದು ಹೀಗೆ

Android: ಗೂಗಲ್‌ನ ನಿಯರ್‌ಬೈ ಶೇರಿಂಗ್ ಸೇವೆಯು ಬಹುತೇಕ ಆ್ಯಪಲ್‌ನ ಏರ್‌ಡ್ರಾಪ್ ಮಾದರಿಯಲಿದ್ದು ಪ್ರಸ್ತುತ ಈ ವೈಶಿಷ್ಟ್ಯವು ಈಗ ಎಲ್ಲಾ ಆ್ಯಂಡ್ರಾಯ್ಡ್ 6.0 ಅಥವಾ ಅದರ ಮೇಲಿನ ಆ್ಯಂಡ್ರಾಯ್ಡ್‌ಗಳಲ್ಲಿ ಚಾಲನೆಯಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೆಲವು ಆ್ಯಪ್‌ಗಳು ಬ್ಯಾನ್ ಆದ ನಂತರ ಫೈಲ್‌ಗಳು (File), ಡಾಕ್ಯುಮೆಂಟ್‌ಗಳನ್ನು (Documents) ಹಂಚಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಇದಕ್ಕಂತಾನೆ ಗೂಗಲ್ (Google) ತನ್ನ ಬಳಕೆದಾರರಿಗೆ ಆ್ಯಂಡ್ರಾಯ್ಡ್ ಡಿವೈಸ್‌ಗಳಲ್ಲಿ (Android) ಫೈಲ್ ಶೇರ್ ಮಾಡಲು ನಿಯರ್ ಬೈ ಶೇರ್ (Nearby Share) ಅನ್ನು 2020ರಲ್ಲಿ ಪರಿಚಯಿಸಿತು. ಗೂಗಲ್‌ನ ನಿಯರ್‌ಬೈ ಶೇರಿಂಗ್ ಸೇವೆಯು ಬಹುತೇಕ ಆ್ಯಪಲ್‌ನ ಏರ್‌ಡ್ರಾಪ್ ಮಾದರಿಯಲಿದ್ದು ಪ್ರಸ್ತುತ ಈ ವೈಶಿಷ್ಟ್ಯವು ಈಗ ಎಲ್ಲಾ ಆ್ಯಂಡ್ರಾಯ್ಡ್ 6.0 ಅಥವಾ ಅದರ ಮೇಲಿನ ಆ್ಯಂಡ್ರಾಯ್ಡ್‌ಗಳಲ್ಲಿ ಚಾಲನೆಯಲ್ಲಿದೆ. ಈ ಮೂಲಕ ಬಹುತೇಕ ಆ್ಯಂಡ್ರಾಯ್ಡ್ ಬಳಕೆದಾರರು ಈಗ ಫೈಲ್‌, ದಾಖಲೆ, ಫೋಟೋಗಳನ್ನು (Photo) Nearby Share ಮೂಲಕ ಹಂಚಿಕೊಳ್ಳಬಹುದು.

    ನಿಯರ್‌ಬೈ ಶೇರ್ (Nearby Share) ಎಂದರೇನು?

    ನಿಯರ್‌ಬೈ ಶೇರ್ ಒಂದು ಫೋನಿನಿಂದ ಹತ್ತಿರದ ಮತ್ತೊಂದು ಫೋನಿಗೆ ತ್ವರಿತವಾಗಿ ಫೈಲ್, ಡಾಕ್ಯುಮೆಂಟ್ಸ್, ಫೋಟೋಗಳನ್ನು ವರ್ಗಾಹಿಸುವ ವಿಧಾನವಾಗಿದೆ. ಈ ಸೇವೆಯು ಬಳಕೆದಾರರಿಗೆ ವೇಗವಾಗಿ ಎಲ್ಲ ಮಾದರಿಯ ಫೈಲ್ ಟ್ರಾನ್ಸ್‌ಫರ್‌ ಮಾಡಲು ಸಹಕಾರಿಯಾಗಿದ್ದು, ಬೇರೆ ಡಿವೈಸ್‌ಗೆ ಕನೆಕ್ಟ್ ಮಾಡಲು ಬಳಕೆದಾರರು ವೈಫೈ, ಬ್ಲೂಟೂತ್ ಮತ್ತು ಲೊಕೇಶನ್ ಆಯ್ಕೆಗಳನ್ನು ಆನ್ ಮಾಡಿಕೊಳ್ಳಬೇಕಾಗುತ್ತದೆ. ಒಟ್ಟಾರೆ ಗೂಗಲ್‌ನ ನಿಯರ್‌ಬೈ ಶೇರಿಂಗ್ ಸೇವೆಯು ಆ್ಯಪಲ್‌ನ ಏರ್‌ಡ್ರಾಪ್ ಮಾದರಿಯನ್ನು ಹೋಲುವ ತಂತ್ರಜ್ಞಾನವಾಗಿದೆ.

    ನಿಯರ್‌ಬೈ ಶೇರ್‌ಗೆ ಬೆಂಬಲಿಸುವ ಸಾಧನಗಳು
    ಈಗಾಗಲೇ ಹೇಳಿದಂತೆ ಈ ವೈಶಿಷ್ಟ್ಯ ಈಗ ಎಲ್ಲರಿಗೂ ಲಭ್ಯವಿದೆ. Nearby Share ಆ್ಯಂಡ್ರಾಯ್ಡ್‌ 6.0 ಬೆಂಬಲಿಸುವ ಸಾಧನಗಳ ಜೊತೆ ಅದರ ಹೆಚ್ಚಿನ ಆವೃತ್ತಿಯಲ್ಲೂ ಲಭ್ಯವಿದೆ. ಇದು ಸ್ಮಾರ್ಟ್‌ಫೋನ್, ಟ್ಯಾಬ್, ಟಿವಿಗೂ ಬೆಂಬಲಿಸುತ್ತದೆ.

    Nearby Share ಬಳಸಲು ಏನು ಬೇಕು?
    Nearby Share ಉಪಯೋಗ ಪಡೆದುಕೊಳ್ಳಲು ನಿಮಗೆ ಹತ್ತಿರದಲ್ಲಿಯೇ ಮತ್ತೊಂದು ಸ್ಮಾರ್ಟ್‌ಫೋನ್ ಬೇಕು ಅಷ್ಟೆ.

    Nearby Share ಬಳಸಿ ಆ್ಯಂಡ್ರಾಯ್ಡ್ ಡಿವೈಸ್‌ನಲ್ಲಿ ಡಾಕ್ಯುಮೆಂಟ್‌ಗಳನ್ನು ಮತ್ತು ಇತರ ಮಲ್ಟಿಮೀಡಿಯಾ ಫೈಲ್ ಶೇರ್ ಮಾಡುವುದು ಹೇಗೆ?
    ಎಲ್ಲಾ ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ಈ ಪ್ರಕ್ರಿಯೆ ಒಂದೇ ಆಗಿರುತ್ತದೆ. ಆ್ಯಂಡ್ರಾಯ್ಡ್ ಸಾಧನಗಳು OEMಗಳನ್ನು ಕಸ್ಟಮ್ ಬಳಕೆದಾರ ಇಂಟರ್‌ಫೇಸ್‌ಗೆತೆರೆಯುತ್ತದೆ

    ಇದನ್ನೂ ಓದಿ: Eye Strain: ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್ ನೋಡಿದ್ರೆ ಕಣ್ಣು ನೋವು ಬರುತ್ತಾ? ಇಲ್ಲಿದೆ ನೋಡಿ ಪರಿಹಾರ

    ನಿಮ್ಮ ಆ್ಯಂಡ್ರಾಯ್ಡ್ ಫೋನ್‌ನಲ್ಲಿ Nearby Share ಅನ್ನು ಬಳಸಲು ಹೀಗೆ ಮಾಡಿ
    * ನೀವು ಶೇರ್ ಮಾಡಲು ಬಯಸುವ ಯಾವುದಾದರೂ ಫೈಲ್ ಶೇರ್ ಐಕಾನ್ ಟ್ಯಾಪ್ ಮಾಡಿ

    * ತ್ವರಿತ ಟ್ವಾಗಲ್‌ಗಳಿಗಾಗಿ ಎರಡು ಬಾರಿ ಮೇಲಿನಿಂದ ಕೆಳಗೆ ಸ್ವೈಪ್ ಮಾಡಿ. ನಂತರ ಹತ್ತಿರದ
    Nearby Share ಆಯ್ಕೆ ಮಾಡಿ ಟ್ಯಾಪ್ ಮಾಡಿ
    * ನಂತರ Nearby Share ಅನ್ನು ಸಕ್ರಿಯಗೊಳಿಸಲು ಆನ್ ಬಟನ್ ಟ್ಯಾಪ್ ಮಾಡಿ.

    * ನಿಮ್ಮ ಲಿಂಕ್ ಅನ್ನು ಹಂಚಿಕೊಳ್ಳಲು Nearby Share ಬೇರೆ ಡಿವೈಸ್ ಸಂಪರ್ಕವನ್ನು ಹುಡುಕುತ್ತದೆ.

    * ಹತ್ತಿರದಲ್ಲಿ ಲಭ್ಯವಿರುವ ಯಾವುದೇ ಫೋನ್‌ಗಳ ಸಂಪರ್ಕಗಳು ನಿಮ್ಮ ಫೋನ್‌ನಲ್ಲಿ ಕಾಣಿಸುತ್ತದೆ.

    * ಈಗ ನೀವು ನೀವು ಶೇರ್ ಮಾಡಲು ಬಯಸುವ ಫೋನ್ ಅನ್ನು ಟ್ಯಾಪ್ ಮಾಡಿ.

    ಇದನ್ನೂ ಓದಿ: US ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ ಅಲ್ಜೈಮರ್ ಕಾಯಿಲೆಯನ್ನು ಪತ್ತೆ ಹಚ್ಚುವ ಆ್ಯಪ್!

    ಆ್ಯಂಡ್ರಾಯ್ಡ್ ಫೋನ್‌ನಲ್ಲಿ Nearby Share ಅನ್ನು ಸ್ವೀಕರಿಸುವುದು ಹೇಗೆ?

    • Nearby Share ಪಾಪ್-ಅಪ್ ನೋಟಿಫಿಕೇಶನ್ ಅನ್ನು ಟ್ಯಾಪ್ ಮಾಡಿ.
    • ನಂತರ ಟರ್ನ್ ಆನ್ ಆಯ್ಕೆ ಟ್ಯಾಪ್ ಮಾಡಿ.
    • ನಿಮ್ಮ ಫೋನ್ ನಿಮ್ಮೊಂದಿಗೆ ಏನನ್ನು ಶೇರ್ ಮಾಡಲಾಗುತ್ತಿದೆ ಎಂದು ಸರ್ಚ್ ಮಾಡುತ್ತದೆ.
    • ಶೇರ್/ಫೈಲ್ ಸ್ವೀಕರಿಸಲು ಅಕ್ಸೆಪ್ಟ್ ಆಯ್ಕೆ ಮೇಲೆ ಟ್ಯಾಪ್ ಮಾಡಿ.

    ನಿಮ್ಮೊಂದಿಗೆ ಯಾರು ವಿಷಯವನ್ನು ಹಂಚಿಕೊಳ್ಳಬಹುದು ಎಂಬುದನ್ನು ಆಯ್ಕೆ ಮಾಡಲು ಹಂತಗಳು
    - ನಿಮ್ಮ ಫೋನ್‌ನಲ್ಲಿ ಸೆಟ್ಟಿಂಗ್‌ಗಳ ಅಪ್ಲಿಕೇಶನ್ ತೆರೆಯಿರಿ.
    - ಕೆಳಗೆ ಸ್ಕ್ರಾಲ್ ಮಾಡಿ ಮತ್ತು Google ಅನ್ನು ಟ್ಯಾಪ್ ಮಾಡಿ.
    - ಡಿವೈಸ್ ಕನೆಕ್ಷನ್ ಆಯ್ಕೆ ಟ್ಯಾಪ್ ಮಾಡಿ.
    - ನಿಮ್ಮ ಆಯ್ಕೆಗಳನ್ನು ಆರಿಸಿ: ಇಲ್ಲಿ ನಿಮಗೆ ಎವರಿ ಒನ್, ಮೈ ಕಾಂಟ್ಯಾಕ್ಸ್‌, ಮತ್ತು ಹಿಡನ್ ಎಂಬ ಆಯ್ಕೆಯನ್ನು ತೋರಿಸುತ್ತದೆ . ಇಲ್ಲಿ ನಿಮಗೆ ಬೇಕಾದ ಆಯ್ಕೆಯನ್ನು ನೀವು ಆರಿಸಿಕೊಳ್ಳಬಹುದು.
    Published by:Harshith AS
    First published: