AI Technology: ನಿಮ್ಮ ಮೊಬೈಲ್ ಪಾಸ್​ವರ್ಡ್​ ಹ್ಯಾಕ್​ ಆಗದಂತೆ ಮಾಡಲು ಇಲ್ಲಿದೆ ಉಪಾಯ! ಈ ರೀತಿ ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

10 ಅಕ್ಷರಗಳಿರುವ ಪಾಸ್‍ವರ್ಡ್‍ಲ್ಲಿ ಲೋವರ್ ಕೇಸ್ ಅಕ್ಷರಗಳಿದ್ದ ಹ್ಯಾಕ್ ಮಾಡಲು ಒಂದು ಗಂಟೆ ತೆಗೆದುಕೊಳ್ಳುತ್ತದೆ. ಅದೇ ಎಲ್ಲಾ ರೀತಿಯ ಅಂಶಗಳನ್ನು ಒಳಗೊಂಡಿರುವ ಪಾಸ್‍ವರ್ಡ್‍ಗಳಿದ್ದರೆ ನಾಲ್ಕು ಗಂಟೆ ತೆಗೆದುಕೊಳ್ಳುತ್ತದೆ.

  • Share this:

ಇತ್ತೀಚಿನ ದಿನಮಾನಗಳಲ್ಲಿ ಪ್ರಚಲಿತಗೊಳ್ಳುತ್ತಿರುವ ಗಣಕ ವಿಜ್ಞಾನದ ಭಾಗವಾಗಿರುವ ಕೃತಕ ಬುದ್ಧಿಮತ್ತೆಯ (ಎಐ) ಬಳಕೆ (Use) ಹೆಚ್ಚಳಗೊಳ್ಳುತ್ತಿದೆ. ಇದರಲ್ಲಿ ಸಾಕಷ್ಟು ಸಾಧಕ ಬಾಧಕಗಳಿದ್ದು, ಇವುಗಳನ್ನು ಕೆಲವರು ಒಪ್ಪಿದರೆ, ಇನ್ನು ಕೆಲವರು ಭಯಭೀತಗೊಳ್ಳುತ್ತಿದ್ದಾರೆ. ಏಕೆಂದರೆ ಇತ್ತೀಚಿನ ಅಧ್ಯಯನದ ಪ್ರಕಾರ, ಕೃತಕ ಬುದ್ಧಿಮತ್ತೆಯ (Artificial Inteligence) ಸಹಾಯದಿಂದ ಪಾಸ್‌ವರ್ಡ್ಗಳನ್ನು (Password) ಒಂದೇ ನಿಮಿಷದಲ್ಲಿ ಭೇದಿಸಬಹುದು ಎಂಬ ಅಪಾಯಕಾರಿ ಅಂಶ ಬಯಲಾಗಿದೆ. ಇದರಿಂದ ಜನರು ತಮ್ಮ ತಮ್ಮ ಪಾಸ್‍ವರ್ಡ್‍ಗಳ ಸುರಕ್ಷತೆಯ ಬಗ್ಗೆ ಆತಂಕಕ್ಕೆ ಒಳಗಾಗಿದ್ದಾರೆ.


ಹೋಮ್ ಸೆಕ್ಯುರಿಟಿ ಹೀರೋಸ್ ಅಧ್ಯಯನ, ಕೃತಕ ಬುದ್ಧಿಮತ್ತೆಯ ಸಹಾಯದಿಂದ ಶೇಕಡಾ 51ರಷ್ಟು ಸಾಮಾನ್ಯ ಪಾಸ್‍ವರ್ಡ್‍ಗಳನ್ನು ಕೇವಲ ಒಂದೇ ನಿಮಿಷದಲ್ಲಿ ಭೇದಿಸಬಹುದಾಗಿದೆ. ಇದಲ್ಲದೆ, ಶೇಕಡಾ 65ರಷ್ಟು ಸಾಮಾನ್ಯ ಪಾಸ್‍ವರ್ಡ್‍ಗಳನ್ನು ಭೇದಿಸಲು ಒಂದು ಗಂಟೆಯೊಳಗೂ, ಶೇಕಡಾ 81ರಷ್ಟು ಪಾಸ್‍ವರ್ಡ್‍ಗಳನ್ನು ಭೇದಿಸಲು ಒಂದು ತಿಂಗಳಿಗಿಂತ ಕಡಿಮೆ ಸಮಯವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.


ಅಧ್ಯಯನದ ವೇಳೆ 15,680,000 ಪಾಸ್‌ವರ್ಡ್ಗಳ ಪಟ್ಟಿಯನ್ನು ಪರೀಕ್ಷಿಸಲು ಪಾಸ್‌ಗ್ಯಾನ್ (PassGAN) ಎಂಬ ಕೃತಕ ಬುದ್ಧಿಮತ್ತೆಯ ಪಾಸ್‌ವರ್ಡ್ ಅನ್ನು ಬಳಸಿದೆ. ಈ ಮೂಲಕ ಸುಮಾರು 51 ಪ್ರತಿಶತ ಸಾಮಾನ್ಯ ಪಾಸ್‍ವರ್ಡ್‍ಗಳನ್ನು ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಮತ್ತು 65 ಪ್ರತಿಶತ ಪಾಸ್‍ವರ್ಡ್‍ಗಳನ್ನು ಒಂದು ಗಂಟೆಯೊಳಗೆ ಭೇದಿಸಬಹುದು. ಇದಲ್ಲದೆ, ಒಂದು ತಿಂಗಳೊಳಗೆ 81 ಪ್ರತಿಶತ ಪಾಸ್‍ವರ್ಡ್‍ಗಳನ್ನು ಭೇದಿಸಬಹುದು ಎಂದು ಅಧ್ಯಯನದಿಂದ ಗೊತ್ತಾಗಿದೆ.


ಇದನ್ನೂ ಓದಿ: Smartphone Usage: ಮೊಬೈಲ್​ನಲ್ಲಿ ಇದನ್ನು ಪುರುಷರಿಗಿಂತ ಮಹಿಳೆಯರೇ ಜಾಸ್ತಿ ನೋಡೋದಂತೆ! ಸಮೀಕ್ಷೆಯಲ್ಲಿ ಗುಟ್ಟು ರಟ್ಟು!


ಕೃತಕ ಬುದ್ಧಿಮತ್ತೆಯ ಅಪಾಯದಿಂದ ತಪ್ಪಿಸಿಕೊಳ್ಳಲು ಯಾವ ರೀತಿ ಪಾಸ್‍ವರ್ಡ್‍ಗಳು ಸುರಕ್ಷಿತ?


ಸಾಮಾನ್ಯವಾಗಿ ಕೆಲವರು ಪಾಸ್‌ವರ್ಡ್ಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದಕ್ಕೆ ಕಷ್ಟವಾಗುತ್ತದೆ ಎಂದು ಉದ್ದದ್ದ ಪಾಸ್‍ವರ್ಡ್‍ಗಳನ್ನು ಕ್ರಿಯೇಟ್ ಮಾಡುವ ಗೋಜಿಗೆ ಹೋಗದೆ ಊರಿನ ಹೆಸರು, ಮೊಬೈಲ್ ನಂಬರ್, ಜನ್ಮದಿನಾಂಕಗಳನ್ನು ಪಾಸ್‍ವರ್ಡ್‍ಗಳನ್ನು ಮಾಡಿಕೊಳ್ಳುವುದೇ ಹೆಚ್ಚು. ಇದರಿಂದ ಅಪಾಯ ಹೆಚ್ಚು ಎಂದು ಹೇಳುತ್ತದೆ ಅಧ್ಯಯನ. ಹಾಗಾಗಿ ಈ ರೀತಿಯಾಗಿ ಮಾಡದೆ 18 ಅಕ್ಷರಗಳಿರುವ ಪಾಸ್‍ವರ್ಡ್‍ಗಳನ್ನು ಕ್ರಿಯೇಟ್ ಮಾಡಬೇಕು.




ಇದರಲ್ಲಿ ಚಿಹ್ನೆಗಳು, ಸಂಖ್ಯೆಗಳು, ಕ್ಯಾಪಿಟಲ್ ಲೆಟರ್ಸ್, ಸ್ಮಾಲ್ ಲೆಟರ್ಸ್ ಒಳಗೊಂಡಂತೆ ಪಾಸ್‌ವರ್ಡ್ ಕ್ರಿಯೇಟ್ ಮಾಡಬೇಕು. ಈ ರೀತಿ ಇದ್ದರೆ ಕೃತಕ ಬುದ್ಧಿಮತ್ತೆಗೆ ಇದನ್ನು ಭೇದಿಸಲು ಕನಿಷ್ಟ 10 ತಿಂಗಳು ತೆಗೆದುಕೊಳ್ಳುತ್ತದೆ. ಈ ನಿಯಮವನ್ನು ಫಾಲೋ ಮಾಡುವ ಮೂಲಕ ಕೃತಕ ಬುದ್ಧಿಮತ್ತೆಯ ಅಪಾಯದಿಂದ ತಪ್ಪಿಸಿಕೊಳ್ಳಬಹುದು.


ಪಾಸ್‍ವರ್ಡ್‍ಗಳನ್ನು ಕೃತಕ ಬುದ್ಧಿಮತ್ತೆಯ ಅಪಾಯದಿಂದ ಸುರಕ್ಷಿತವಾಗಿರಿಸುವುದು ಹೇಗೆ?


ಪಾಸ್‍ವರ್ಡ್‍ಗಳ ರಚನೆಯಲ್ಲಿ ಕೇವಲ ಅಂಕಿಗಳನ್ನು ಬಳಸುವುದು ನಿಜಕ್ಕೂ ಅಪಾಯದ ಹೆಜ್ಜೆ. ಹಾಗಾಗಿ ಮೊದಲು ಕೇವಲ ಅಂಕಿಗಳನ್ನು ಹೊಂದಿರುವ ಪಾಸ್‌ವರ್ಡ್ ಅನ್ನು ಕ್ರಿಯೇಟ್ ಮಾಡುವ ಅಭ್ಯಾಸವನ್ನು ಬಿಡಬೇಕು. 10 ಅಂಕಿಗಳಿದ್ದರೆ ಸುಲಭವಾಗಿ ಹ್ಯಾಕ್ ಮಾಡಬಹುದು ಎಂದು ಅಧ್ಯಯನವು ಹೇಳುತ್ತದೆ.


10 ಅಕ್ಷರಗಳಿರುವ ಪಾಸ್‍ವರ್ಡ್‍ಲ್ಲಿ ಲೋವರ್ ಕೇಸ್ ಅಕ್ಷರಗಳಿದ್ದ ಹ್ಯಾಕ್ ಮಾಡಲು ಒಂದು ಗಂಟೆ ತೆಗೆದುಕೊಳ್ಳುತ್ತದೆ. ಅದೇ ಎಲ್ಲಾ ರೀತಿಯ ಅಂಶಗಳನ್ನು ಒಳಗೊಂಡಿರುವ ಪಾಸ್‍ವರ್ಡ್‍ಗಳಿದ್ದರೆ ನಾಲ್ಕು ಗಂಟೆ ತೆಗೆದುಕೊಳ್ಳುತ್ತದೆ.


ಅಕ್ಷರಗಳು, ಚಿಹ್ನೆಗಳು ಮತ್ತು ಸಂಖ್ಯೆಗಳನ್ನು ಬಳಸಿಕೊಂಡು ಹತ್ತು ಅಕ್ಷರಗಳುಳ್ಳ ಪಾಸ್‌ವರ್ಡ್ ಅನ್ನು ಬಳಸಿದರೆ, ಅದನ್ನು ಅರ್ಥಮಾಡಿಕೊಳ್ಳಲು ಐದು ವರ್ಷಗಳು ತೆಗೆದುಕೊಳ್ಳಬಹುದು ಎಂದು ಅಧ್ಯಯನ ತಿಳಿಸಿದೆ.


ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಎಐ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು, ಯಾವುವೆಂದರೆ


1. ಕನಿಷ್ಟ 15 ಅಂಶಗಳುಳ್ಳ (ಚಿಹ್ನೆಗಳು, ಸಂಖ್ಯೆಗಳು, ಕ್ಯಾಪಿಟಲ್ ಲೆಟರ್ಸ್, ಸ್ಮಾಲ್ ಲೆಟರ್ಸ್) ಪಾಸ್‌ವರ್ಡ್ ರಚನೆ ಮಾಡಿ


2. ಪಾಸ್‍ವರ್ಡ್‍ಗಳು ಕನಿಷ್ಠ ಎರಡು ಅಕ್ಷರಗಳು (ಅಪ್ಪರ್ ಆಂಡ್ ಲೋವರ್ ಕೇಸ್), ಸಂಖ್ಯೆಗಳು ಮತ್ತು ಚಿಹ್ನೆಗಳನ್ನು ಹೊಂದಿರಲಿ.


3. ಜನರಿಗೆ ಗೋಚರವಾಗುವ ಪಾಸ್‍ವರ್ಡ್‍ಗಳ ಬಳಕೆ ತಪ್ಪಿಸಿ

top videos
    First published: