WhatsApp: ವಾಟ್ಸ್​ಆ್ಯಪ್​ ಚಾಟ್​ ಡಿಲೀಟ್​ ಆದ್ರೆ ಟೆನ್ಶನ್​ ಮಾಡ್ಬೇಡಿ... ಹೀಗೆ ಮರಳಿ ಪಡಿಬೋದು

WhatsApp Chats Recover: ನಿಮ್ಮ ಕೆಲವು ಪ್ರಮುಖ ವಾಟ್ಸ್‌ಆ್ಯಪ್ ಸಂದೇಶಗಳು ಆಕಸ್ಮಿಕವಾಗಿ ಅಳಿಸಿ ಹೋದರೆ, ಗಾಬರಿ ಆಗಬೇಡಿ. ಅಳಿಸಿ ಹೋದ ವಾಟ್ಸ್‌ಆ್ಯಪ್ ಸಂದೇಶಗಳನ್ನು ಮರು ಪಡೆಯಲು ಸಾಧ್ಯವಿದೆ. ನೀವು ಕೆಲವು ಸರಳ ಹಂತಗಳನ್ನು ಅನುಸರಿಸಿದರೆ ಸಾಕು, ಆ ಮೂಲಕ ಅಳಿಸಿ ಹೋದ ವಾಟ್ಸ್‌ಆ್ಯಪ್ ಸಂಭಾಷಣೆಗಳನ್ನು ಮರು ಪಡೆಯಬಹುದು.

ವಾಟ್ಸ್‌ಆ್ಯಪ್ / WhatsApp

ವಾಟ್ಸ್‌ಆ್ಯಪ್ / WhatsApp

  • Share this:
    ಗೂಗಲ್ ಡ್ರೈವ್ (Google Drive) ಮತ್ತು ಮೊಬೈಲ್ ಬ್ಯಾಕಪ್‍ನ (Mobile Backup) ಸಹಾಯದಿಂದ ಈ ಅಳಿಸಿ ಹೋದ ವಾಟ್ಸ್‌ಆ್ಯಪ್ (WhatsApp) ಸಂದೇಶಗಳನ್ನು (Chats) ಮರು ಪಡೆಯಬಹುದಾಗಿದೆ. ಸಂದೇಶಗಳನ್ನು ಮರು ಸ್ಥಾಪಿಸಲು, ವಾಟ್ಸ್‌ಆ್ಯಪ್ ಬಳಕೆದಾರರು, ಕೆಳಗೆ ತಿಳಿಸಲಾದ ಸರಳ ಹಂತಗಳನ್ನು ಅನುಸರಿಸಬೇಕು.

    ನಿಮ್ಮ ಕೆಲವು ಪ್ರಮುಖ ವಾಟ್ಸ್‌ಆ್ಯಪ್ ಸಂದೇಶಗಳು ಆಕಸ್ಮಿಕವಾಗಿ ಅಳಿಸಿ ಹೋದರೆ, ಗಾಬರಿ ಆಗಬೇಡಿ. ಅಳಿಸಿ ಹೋದ ವಾಟ್ಸ್‌ಆ್ಯಪ್ ಸಂದೇಶಗಳನ್ನು ಮರು ಪಡೆಯಲು ಸಾಧ್ಯವಿದೆ. ನೀವು ಕೆಲವು ಸರಳ ಹಂತಗಳನ್ನು ಅನುಸರಿಸಿದರೆ ಸಾಕು, ಆ ಮೂಲಕ ಅಳಿಸಿ ಹೋದ ವಾಟ್ಸ್‌ಆ್ಯಪ್ ಸಂಭಾಷಣೆಗಳನ್ನು ಮರು ಪಡೆಯಬಹುದು. ಗೂಗಲ್ ಡ್ರೈವ್ ಮತ್ತು ಮೊಬೈಲ್ ಬ್ಯಾಕಪ್‍ನ ಸಹಾಯದಿಂದ ಈ ಅಳಿಸಿ ಹೋದ ವಾಟ್ಸ್‌ಆ್ಯಪ್ ಸಂದೇಶಗಳನ್ನು ಮರು ಪಡೆಯಬಹುದಾಗಿದೆ. ಸಂದೇಶಗಳನ್ನು ಮರು ಸ್ಥಾಪಿಸಲು, ವಾಟ್ಸ್‌ಆ್ಯಪ್ ಬಳಕೆದಾರರು, ಕೆಳಗೆ ತಿಳಿಸಲಾದ ಸರಳ ಹಂತಗಳನ್ನು ಅನುಸರಿಸಬೇಕು.

    ಅಳಿಸಿ ಹೋದ ವಾಟ್ಸ್‌ಆ್ಯಪ್ ಸಂದೇಶಗಳನ್ನು ಮರು ಪಡೆದುಕೊಳ್ಳುವುದು ಹೇಗೆ?

    ಈ ಪ್ರಕ್ರಿಯೆ ಸರಿಯಾಗಿ ಕೆಲಸ ಮಾಡಬೇಕು ಎಂದಾದಲ್ಲಿ, ನಿಮ್ಮ ವಾಟ್ಸ್‌ಆ್ಯಪ್ ಖಾತೆಯಲ್ಲಿ ಬ್ಯಾಕಪ್ ಆಯ್ಕೆ ಸಕ್ರಿಯಗೊಂಡಿರಬೇಕು. ಈ ತ್ವರಿತ ಸಂದೇಶ ವೇದಿಕೆ, ತನ್ನ ಬಳಕೆದಾರರಿಗೆ ದಿನಕ್ಕೊಮ್ಮೆ, ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಚಾಟ್‍ಗಳನ್ನು ಬ್ಯಾಕಪ್ ಮಾಡಲು ಅನುವು ಮಾಡಿಕೊಡುತ್ತದೆ. ಪ್ರತಿದಿನ ವಾಟ್ಸ್‌ಆ್ಯಪ್‌ನಲ್ಲಿ ಚಾಟ್/ ಸಂದೇಶಗಳನ್ನು ಬ್ಯಾಕಪ್ ಮಾಡುವುದು ಉತ್ತಮ. ಅಳಿಸಿ ಹೋದ ಸಂದೇಶಗಳನ್ನು ಮರು ಪಡೆಯಲು ನೀವು ಬ್ಯಾಕಪ್ ಫೀಚರ್ ಅನ್ನು ಸಕ್ರಿಯಯಗೊಳಿಸಬೇಕು ಮತ್ತು ನಿಮಗೆ ಸೂಕ್ತ ಬ್ಯಾಕಪ್ ಆಯ್ಕೆಯನ್ನು ಆರಿಸಿಕೊಳ್ಳಬೇಕಾಗುತ್ತದೆ.

    ಅಳಿಸಿ ಹೋದ ವಾಟ್ಸ್‌ಆ್ಯಪ್ ಸಂದೇಶಗಳನ್ನು ಮರು ಪಡೆಯಲು ಈ ಹಂತಗಳನ್ನು ಅನುಸರಿಸಿ

    ಹಂತ 1 : ನಿಮ್ಮ ಮೊಬೈಲ್ ಮೂಲಕ ಗೂಗಲ್ ಖಾತೆಗೆ ಲಾಗಿನ್ ಆಗಿ.
    ಹಂತ 2 : ಬಳಿಕ, ನಿಮ್ಮ ವಾಟ್ಸ್‌ಆ್ಯಪ್ ಖಾತೆಗೆ 10 ಅಂಕೆಗಳ ಮೊಬೈಲ್ ಸಂಖ್ಯೆ ಬಳಸಿ ಮರು ಲಾಗಿನ್ ಆಗಿ.
    ಹಂತ 3 : ನೀವು ಒಮ್ಮೆ ಲಾಗಿನ್ ಆದ ಬಳಿಕ, ಗೂಗಲ್ ಡ್ರೈವ್‍ನಿಂದ ನಿಮ್ಮ ಚಾಟ್ ಇತಿಹಾಸವನ್ನು ಮರು ಪಡೆಯಲು ವಾಟ್ಸ್‌ಆ್ಯಪ್ ಒಂದು ಪ್ರಾಂಪ್ಟ್ ಅನ್ನು ತೋರಿಸುತ್ತದೆ.
    ಹಂತ 4 : ‘ರಿಸ್ಟೋರ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಹಳೆಯ ಸಂದೇಶಗಳ ಬ್ಯಾಕಪ್‍ಗಾಗಿ ‘ನೆಕ್ಸ್ಟ್’ ಆಯ್ಕೆಯನ್ನು ಒತ್ತಿರಿ.
    ಹಂತ 5 : ಸಂದೇಶಗಳನ್ನು ಮರು ಸ್ಥಾಪಿಸುವ ಮೊದಲು ನಿಮ್ಮ ಫೋನ್‍ಗೆ ಸ್ಥಿರ ವೈಫೈ ನೆಟ್‍ವರ್ಕ್ ಸಂಪರ್ಕ ಕಲ್ಪಿಸಿ.

    ನಿಮ್ಮ ಚಾಟ್ ಇತಿಹಾಸ ಗೂಗಲ್ ಡ್ರೈವ್‍ನಲ್ಲಿ ಸಂಗ್ರಹ ಆಗಿಲ್ಲವಾದರೆ, ವಾಟ್ಸ್‌ಆ್ಯಪ್ ಲೋಕಲ್ ಸ್ಟೋರೇಜ್‍ನಿಂದ ಸಂದೇಶಗಳನ್ನು ಮರುಪಡೆಯಲು ಆಯ್ಕೆಯನ್ನು ನೀಡುತ್ತದೆ. ಆದರೆ ಈ ಆಯ್ಕೆ ಹೊಸ ಫೋನ್‍ನಲ್ಲಿ ಕಾರ್ಯ ನಿರ್ವಹಿಸುವುದಿಲ್ಲ ಎಂಬುದನ್ನು ಗಮನಿಸಬೇಕು.

    ಇದನ್ನು ಓದಿ: Word of the Year 2021: ಈ ವರ್ಷ ಹೆಚ್ಚು ಬಳಕೆಯಲ್ಲಿದ್ದ ಪದ ಯಾವುದು ಗೊತ್ತಾ? ನೀವೂ ಕೂಡ ದಿನಕ್ಕೆ 5 ಬಾರಿಯಾದರು ಹೇಳಿರುತ್ತೀರಿ!

    ಲೋಕಲ್ ಸ್ಟೋರೇಜ್‍ನಿಂದ ವಾಟ್ಸ್‌ಆ್ಯಪ್ ಸಂದೇಶಗಳನ್ನು ಮರು ಪಡೆದುಕೊಳ್ಳುವುದು ಹೇಗೆ?

    ಹಂತ 1 : ನಿಮ್ಮ ಫೋನ್‍ನ ಫೈಲ್ ಮ್ಯಾನೇಜರ್ ತೆರೆಯಿರಿ.
    ಹಂತ 2 : ಸಾಮಾನ್ಯವಾಗಿ, ಇಂಟರ್ನಲ್ ಸ್ಟೋರೇಜ್ ವಿಭಾಗದ ಒಳಗಿರುವ ವಾಟ್ಸ್‌ಆ್ಯಪ್ ಫೋಲ್ಡರ್‌ಗೆ ಹೋಗಿ.
    ಹಂತ 3 : ಅಲ್ಲಿ ಡಾಟಾಬೇಸ್ ಅನ್ನು ಅಯ್ಕೆ ಮಾಡಿಕೊಳ್ಳಿ.
    ಹಂತ 4: ಅಲ್ಲಿ ನಿಮ್ಮ ಎಲ್ಲಾ ಚಾಟ್‍ಗಳ ಬ್ಯಾಕ್‍ಅಪ್ ಇರುತ್ತದೆ.

    ಇದನ್ನು ಓದಿ: ಡಿಸೆಂಬರ್​ನಲ್ಲಿ ಬಿಡುಗಡೆಯಾಗುತ್ತಿದೆ ಈ 5 ಹೊಸ Video Games; ಆಡಿ, ಆನಂದಿಸಿ..!

    ಹಳೆಯ ಚಾಟ್‍ಗಳ ಬ್ಯಾಕ್‍ಅಪ್ ಪಡೆಯಲು , ನಿವು ವಾಟ್ಸ್‌ಆ್ಯಪ್ ಅನ್ನು ಅನ್‍ಇನ್‍ಸ್ಟಾಲ್ ಮಾಡಿ, ಮತ್ತೆ ಇನ್‍ಸ್ಟಾಲ್ ಮಾಡಬೇಕಾಗುತ್ತದೆ. ಬಳಿಕ ನಿಮ್ಮ ಮೊಬೈಲ್ ನಂಬರ್‌ನಿಂದ ಲಾಗಿನ್ ಮಾಡಿ, ‘ರಿಕವರ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಆ ನಂತರ, ಆರಿಸಿಕೊಂಡ ಡಾಟಾಬೇಸ್ ಫೋಲ್ಡರ್ ಅನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ಅದಕ್ಕೆ ಮುಂದಿನ ಚಾಟ್‍ಗಳನ್ನು ಮರುಪಡೆಯಲು, ಅದಕ್ಕೆ msgstore.db.crypt12 ಎಂದು ಮರು ನಾಮಕರಣ ಮಾಡಿ. ಕ್ರಿಪ್ಟ್ ಎಕ್ಸ್‌ಟೆನ್ಶನ್ ಬದಲಾಗದಂತೆ ನೋಡಿಕೊಳ್ಳಿ.

    ವಾಟ್ಸ್‌ಆ್ಯಪ್ ತನ್ನ ಸರ್ವರ್‌ಗಳಲ್ಲಿ ಸಂಭಾಷಣೆಗಳನ್ನು ಉಳಿಸಿಕೊಳ್ಳುವುದಿಲ್ಲ ಎಂಬುದರ ಬಗ್ಗೆ ಗಮನವಿರಲಿ. ಅದು ಗೂಗಲ್ ಡ್ರೈವ್ ಅಥವಾ ನಿಮ್ಮ ಮೊಬೈಲ್‍ನ ಇಂಟರ್ನಲ್ ಸ್ಟೋರೇಜ್‍ನಲ್ಲಿ ಡಾಟಾಬೇಸ್‍ಗಳನ್ನು ರಚನೆ ಮಾಡುತ್ತದೆ. ಆಕಸ್ಮಿಕವಾಗಿ ಅಳಿಸಿ ಹೋದ ಚಾಟ್‍ಗಳನ್ನು ಮರು ಸ್ಥಾಪಿಸಲು ಇವುಗಳನ್ನು ಬಳಸಬಹುದು.

    ಇತ್ತೀಚಿನ ರಾಜ್ಯರಾಷ್ಟ್ರೀಯಕೊರೋನಾವೈರಸ್​ಮತ್ತಿತರ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್​ ಮಾಡಿ. ನ್ಯೂಸ್​18 ಕನ್ನಡವನ್ನು ಫೇಸ್​ಬುಕ್​ನಲ್ಲಿ ಫಾಲೋ ಮಾಡಲು ಇಲ್ಲಿ ಕ್ಲಿಕ್​ ಮಾಡಿ, ಟ್ವಿಟ್ಟರ್​ಗಾಗಿ ಇಲ್ಲಿ ಕ್ಲಿಕ್​ ಮಾಡಿ.
    Published by:Harshith AS
    First published: