Apple Watch: ಆ್ಯಪಲ್ ವಾಚ್​ನಲ್ಲಿ ಪಾಸ್‌ಕೋಡ್ ರೀಸೆಟ್​ ಮಾಡಲು ಗೊತ್ತಿದ್ಯಾ? ಇಲ್ಲಿದೆ ನೋಡಿ ಮಾಹಿತಿ

ಆ್ಯಪಲ್ ವಾಚ್ ಗೆ ಪ್ರವೇಶವನ್ನು ಮರಳಿ ಪಡೆಯಲು ಇರುವ ಏಕೈಕ ಮಾರ್ಗವೆಂದರೆ ನಿಮ್ಮ ವಾಚ್ ಅನ್ನು ಮರು ಹೊಂದಿಸುವುದು. ಆದ್ದರಿಂದ, ನಿಮ್ಮ ಆ್ಯಪಲ್ ವಾಚ್ ಪಾಸ್‌ಕೋಡ್ ಅನ್ನು ನೀವು ಹೇಗೆ ಮರು ಹೊಂದಿಸಬಹುದು ಎಂಬುದನ್ನು ನೋಡೋಣ ಬನ್ನಿ.

ಆ್ಯಪಲ್ ವಾಚ್

ಆ್ಯಪಲ್ ವಾಚ್

  • Share this:
    ಈಗಂತೂ ಎಲ್ಲಾ ರೀತಿಯ ಸಾಧನಗಳಿಗೆ ಪಾಸ್‌ವರ್ಡ್ (Password) ಮತ್ತು ಪಾಸ್‌ಕೋಡ್ ಗಳನ್ನು  (Passcode)ನಮೂದಿಸಿಯೆ ಆ ಸಾಧನಗಳಲ್ಲಿ ಪ್ರವೇಶವನ್ನು ಪಡೆಯಬಹುದು ಎಂದು ಬಹುತೇಕವಾಗಿ ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಅದರಲ್ಲೂ ಈ ಆ್ಯಪಲ್ ವ್ಯಾಚ್ (Apple Watch) ಎನ್ನುವುದು ಅನೇಕ ಬಾರಿ ಒಳ್ಳೆಯ ಕಾರಣಗಳಿಗಾಗಿ ಸುದ್ದಿಯಲ್ಲಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

    ನೀವು ಕೆಲವೊಮ್ಮೆ ಈ ಮೊಬೈಲ್ ಫೋನ್ ಮತ್ತು ಸ್ಮಾರ್ಟ್ ವಾಚ್ ಗಳಿಗೆ ಇಟ್ಟಿರುವ ಪಾಸ್‌ವರ್ಡ್ ಮತ್ತು ಪಾಸ್‌ಕೋಡ್ ಗಳು ಮರೆತು ಹೋಗಿದ್ದರೆ, ನೆನಪಿನಲ್ಲಿ ಉಳಿದಿರುವ ಸಂಖ್ಯೆಯನ್ನು ನೆನಪಿಸಿಕೊಂಡು ಅದನ್ನು ತೆರೆಯಲು ಪ್ರಯತ್ನಿಸುತ್ತೇವೆ. ಆದರೆ ಕೆಲವೊಮ್ಮೆ ತುಂಬಾ ಬಾರಿ ಅದನ್ನು ತಪ್ಪು ಕೋಡ್ ಮೂಲಕ ಪ್ರಯತ್ನಿಸಿದರೆ ನಿಮ್ಮ ಆ್ಯಪಲ್ ವಾಚ್ ಲಾಕ್ ಆಗಬಹುದು. ಆನಂತರ ಆ ಮರೆತು ಹೋದ ಸರಿಯಾದ ಪಾಸ್‌ಕೋಡ್ ಅನ್ನು ಹಾಕಿ ತೆಗೆಯಲು ಹರ ಸಾಹಸವೇ ಪಡಬೇಕಾಗುತ್ತದೆ.

    ನಿಮ್ಮ ಆ್ಯಪಲ್ ವಾಚ್ ಲಾಕ್ ಆಗುವುದು ಒಂದು ತುಂಬಾನೇ ಸಂದಿಗ್ಧ ಪರಿಸ್ಥಿತಿ ಎಂದು ಹೇಳಬಹುದು, ಏಕೆಂದರೆ ಪಾಸ್‌ಕೋಡ್ ಇಲ್ಲದೆ ಪ್ರವೇಶವನ್ನು ಮರಳಿ ಪಡೆಯಲು ಯಾವುದೇ ಅನ್ಯ ಮಾರ್ಗಗಳೆ ಇಲ್ಲ. ನೀವು ಅಂತಹ ಪರಿಸ್ಥಿತಿಯಲ್ಲಿ ಇರಲು ಸಾಕಷ್ಟು ಕಾರಣಗಳಿವೆ. ಇದರಲ್ಲಿ ಆ್ಯಪಲ್ ವಾಚ್ ಗೆ ಇರಿಸಿದಂತಹ ಪಾಸ್‌ಕೋಡ್ ಅನ್ನು ಮರೆತು ಬಿಡುವುದು ತುಂಬಾನೇ ಸಾಮಾನ್ಯವಾದ ಕಾರಣವಾಗಿದೆ ಎಂದು ಹೇಳಬಹುದು. ಆದರೆ ಕೆಲವೊಮ್ಮೆ, ಹೆಚ್ಚು ಸರಿಯಾದ ಪಾಸ್‌ಕೋಡ್ ಅನ್ನು ಹೊಡೆಯಲು ಅನೇಕ ಪ್ರಯತ್ನಗಳು ನಡೆದಿದ್ದರೆ, ಕೆಲವು ಕಾರಣಗಳಿಗಾಗಿ, ನೀವು ಅದನ್ನು ಮರು ಹೊಂದಿಸಿರಬಹುದು, ಇದಕ್ಕೆ ಪಾಸ್‌ವರ್ಡ್ ಅಗತ್ಯವಿದೆ.

    ಕಾರಣ ಏನೇ ಇರಲಿ, ಆ ಆ್ಯಪಲ್ ವಾಚ್ ಗೆ ಪ್ರವೇಶವನ್ನು ಮರಳಿ ಪಡೆಯಲು ಇರುವ ಏಕೈಕ ಮಾರ್ಗವೆಂದರೆ ನಿಮ್ಮ ವಾಚ್ ಅನ್ನು ಮರು ಹೊಂದಿಸುವುದು. ಆದ್ದರಿಂದ, ನಿಮ್ಮ ಆ್ಯಪಲ್ ವಾಚ್ ಪಾಸ್‌ಕೋಡ್ ಅನ್ನು ನೀವು ಹೇಗೆ ಮರು ಹೊಂದಿಸಬಹುದು ಎಂಬುದನ್ನು ನೋಡೋಣ ಬನ್ನಿ.

    ಇದನ್ನೂ ಓದಿ: Realme GT 2: ಈ ಸ್ಮಾರ್ಟ್​ಫೋನ್​ ಮೇಲೆ ಸಿಗುತ್ತೆ 5 ಸಾವಿರ ರೂಪಾಯಿಯ ಕ್ಯಾಶ್​​ಬ್ಯಾಕ್​!

    ನೀವು ಆ್ಯಪಲ್ ವಾಚ್ ಅನ್ನು ವಾಚ್ ನಿಂದ ಮರು ಹೊಂದಿಸಬಹುದು, ಸ್ವತಃ ವಾಚ್ ನಿಂದ ಅಥವಾ ನಿಮ್ಮ ಐಫೋನ್ ಬಳಸಿ ಇದನ್ನು ಮಾಡಬಹುದು. ಮೊದಲಿಗೆ, ವಾಚ್ ದಿಂದಲೇ ನೀವು ನಿಮ್ಮ ಸಾಧನವನ್ನು ಹೇಗೆ ಮರು ಹೊಂದಿಸಬಹುದು ಎಂಬುದನ್ನು ನೋಡೋಣ ಬನ್ನಿ.

    ವಾಚ್ ನಲ್ಲಿ ಆ್ಯಪಲ್ ವಾಚ್ ಚಾರ್ಜರ್ ಅನ್ನು ಪ್ಲಗ್ ಇನ್ ಮಾಡಿ. ಪರದೆಯ ಮೇಲೆ 'ಪವರ್ ಆಫ್' ಪ್ರದರ್ಶಿತವಾಗುವವರೆಗೆ ಸೈಡ್ ಬಟನ್ ಅನ್ನು ಹಿಡಿದುಕೊಳ್ಳಿ. ಈಗ, ಪರದೆಯ ಮೇಲೆ ಕಾಣಿಸುವಂತಹ  'ಎರೇಸ್ ಆಲ್ ಕಂಟೆಂಟ್ ಆಂಡ್ ಸೇಟ್ಟಿಂಗ್ಸ್' ಎಂಬ ಆಯ್ಕೆಯನ್ನು ಒತ್ತಿ ಡಿಜಿಟಲ್ ಕಿರೀಟವನ್ನು ಹಿಡಿದಿಟ್ಟುಕೊಳ್ಳಿ. 'ರೀಸೆಟ್' ಮೇಲೆ ಟ್ಯಾಪ್ ಮಾಡಿ ಮತ್ತು ದೃಢೀಕರಿಸಿ. ಪ್ರಕ್ರಿಯೆಯು ಪೂರ್ಣಗೊಂಡ ನಂತರ, ನೀವು ವಾಚ್ ಅನ್ನು ಮತ್ತೆ ಜೋಡಿಸಬಹುದು. ನಿಮ್ಮ ವಾಚ್ ನ ಎಲ್ಲಾ ಆರಂಭಿಕ ಸೆಟ್ಟಿಂಗ್ ಗಳು ಮತ್ತು ವಿಷಯಗಳನ್ನು ಉಳಿಸಿಕೊಳ್ಳಲು 'ರೀಸ್ಟೋರ್ ಫ್ರಮ್ ಬ್ಯಾಕಪ್’ ಎಂಬ ಆಯ್ಕೆಯನ್ನು ಒತ್ತಿರಿ.

    ಇದನ್ನೂ ಓದಿ: Google Play Store: ಆ್ಯಪ್​ಗಳು ಡೇಟಾ ಹೇಗೆ ಬಳಸುತ್ತವೆ ಎಂಬ ಮಾಹಿತಿಯನ್ನು ನೀಡಲಿದೆ ಗೂಗಲ್​ ಪ್ಲೇ ಸ್ಟೋರ್​

    ನಿಮ್ಮ ಐಫೋನ್ ಮೂಲಕ ನಿಮ್ಮ ವಾಚ್ ಅನ್ನು ಮರು ಹೊಂದಿಸಲು, ಈ ಹಂತಗಳನ್ನು ಅನುಸರಿಸಿ.

    1. ಮೊದಲಿಗೆ ಆ್ಯಪಲ್ ವಾಚ್ ಅಪ್ಲಿಕೇಶನ್ ಅನ್ನು ತೆರೆಯಿರಿ
    2. ನಂತರ ಆ ಅಪ್ಲಿಕೇಶನ್ ನಲ್ಲಿ, ‘ಮೈ ವಾಚ್’ ಟ್ಯಾಬ್ ಅನ್ನು ಹುಡುಕಿ ತದನಂತರ ಅದರಲ್ಲಿ 'ಜನರಲ್' ಅನ್ನು ಟ್ಯಾಪ್ ಮಾಡಿ.
    3. ಇಲ್ಲಿ, ರೀಸೆಟ್ ಮಾಡುವ ಆಯ್ಕೆಯನ್ನು ನೀವು ಕಂಡು ಕೊಳ್ಳುವಿರಿ.
    4. 'ಎರೇಸ್ ಆ್ಯಪಲ್ ವಾಚ್ ಕಂಟೆಂಟ್ ಮತ್ತು ಸೆಟ್ಟಿಂಗ್ಸ್' ಅನ್ನು ಆಯ್ಕೆ ಮಾಡಿ.
    5. 'ಕನ್ಫರ್ಮ್' ಎಂಬ ಆಯ್ಕೆಯನ್ನು ಟ್ಯಾಪ್ ಮಾಡಿ.
    6. ಈಗ, ನಿಮ್ಮ ಆ್ಯಪಲ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.
    7. ನಿಮ್ಮ ವಾಚ್ ಅನ್ನು ಮತ್ತೆ ಜೋಡಿಸಿ ಮತ್ತು ಬ್ಯಾಕಪ್ ಅನ್ನು ಪುನಃಸ್ಥಾಪಿಸಿಕೊಳ್ಳಿರಿ.
    ನಿಮ್ಮ ಆ್ಯಪಲ್ ವಾಚ್ ಅನ್ನು ಪ್ರವೇಶಿಸುವುದು ಸಣ್ಣ ಪರದೆಯಲ್ಲಿ ಪಾಸ್‌ಕೋಡ್ ಗಳನ್ನು ಪ್ರವೇಶಿಸಲು ಕೆಲವರಿಗೆ ಕಠಿಣ ವಾಗಬಹುದು. ಅಂತಹವರು ಐಫೋನ್ ವೈಶಿಷ್ಟ್ಯದೊಂದಿಗೆ ಅನ್ಲಾಕ್ ಅನ್ನು ಸಕ್ರಿಯಗೊಳಿಸಲು ಸೂಚಿಸಲಾಗಿದೆ.
    Published by:Harshith AS
    First published: