Antivirus: ಆ್ಯಂಟಿವೈರಸ್ ಇಲ್ಲದೆಯೇ ಲ್ಯಾಪ್​ಟಾಪ್‍ನಿಂದ ವೈರಸ್ ತೆಗೆಯಲು ಹೀಗೆ ಮಾಡಿ

Laptop: ನಿಮ್ಮ ಬಳಿ ದುಬಾರಿ ಬೆಲೆಯ ಆ್ಯಂಟಿವೈರಸ್ ಇಲ್ಲದೆ ಹೋದರೂ ಸಹ ನೀವು ನಿಮ್ಮ ಲ್ಯಾಪ್ಟಾಪ್ ನಿಂದ ವೈರಸ್ ಅನ್ನು ಹೊರತೆಗೆಯಬಹುದು. ಅದು ಹೇಗೆ ಅಂತಿರಾ? ಮುಂದೆ ಓದಿ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಸಾಮಾನ್ಯವಾಗಿ ಲ್ಯಾಪ್​ಟಾಪ್‍ (Laptop), ಕಂಪ್ಯೂಟರ್ (Computer) ಬಳಸುವವರಿಗೆಲ್ಲ ವೈರಸ್ (Virus) ಬಗ್ಗೆ ಹೆಚ್ಚು ಚಿಂತೆ ಇದ್ದೆ ಇರುತ್ತದೆ. ಏಕೆಂದರೆ ಇಂದಿನ ಈ ತಂತ್ರಜ್ಞಾನ ಯುಗದಲ್ಲಿ ತರಾವರಿ ಡಿಜಿಟಲ್ ವೈರಾಣುಗಳು ನಿರ್ಮಾಣವಾಗಿ ನಿಮ್ಮ ಲ್ಯಾಪ್​ಟಾಪ್‍ ಅನ್ನು ಹಾನಿಗೊಳಿಸಬಹುದು, ನಿಮ್ಮ ಅಮೂಲ್ಯವಾದ ಮಾಹಿತಿ ಕದಿಯಬಹುದು, ಅಷ್ಟೆ ಅಲ್ಲದೆ ನೀವು ನಿಮ್ಮ ಖಾತೆಗೆ ಸಂಬಂಧಿಸಿದಂತೆ ಪಾಸ್ವರ್ಡ್ (Password), ಖಾತೆ ಸಂಖ್ಯೆ ಶೇಖರಿಸಿದ್ದರೆ ಅದನ್ನು ಸಹ ಕದಿಯಬಹುದು.

  ಹಾಗಾಗಿ ಬಹಳಷ್ಟು ಜನರು ವೈರಾಣು ತಡೆಯುವ ಆ್ಯಂಟಿವೈರಸ್ ತಂತ್ರಾಂಶವನ್ನು ಅಳವಡಿಸಿಕೊಂಡಿರುತ್ತಾರೆ. ಆದರೆ, ಮಾರುಕಟ್ಟೆಯಲ್ಲಿ ಆ್ಯಂಟಿವೈರಸ್ ಬಲು ದುಬಾರಿ. ಅಲ್ಲದೆ ಇದನ್ನು ಆಗಾಗ ಅಪ್ಡೇಟ್ ಮಾಡುತ್ತಿರಲೇಬೇಕು. ಹಾಗಾಗಿ ಇದೊಂದು ಹೆಚ್ಚು ಹಣ ವ್ಯಯವಾಗುವ ಪ್ರಕ್ರಿಯೆ ಆಗಿಬಿಡುತ್ತದೆ. ಆದಾಗ್ಯೂ ಡೆಸ್ಕ್ ಟಾಪ್ ಮತ್ತು ಲ್ಯಾಪ್ಟಾಪ್ ಗಳು ಆ್ಯಂಟಿವೈರಸ್ ಹೊಂದಿಲ್ಲದೆ ಇದ್ದರೆ ಅವು ವೈರಸ್ ಗಳಿಗೆ ಬೇಗ ತುತ್ತಾಗಬಹುದೆಂದೇ ಪರಿಗಣಿಸಲಾಗಿದೆ. ಹಾಗಾದರೆ, ನಿಮ್ಮ ಬಳಿ ಆ್ಯಂಟಿವೈರಸ್ ಇಲ್ಲವೆಂದರೆ ಏನು ಗತಿ? ವೈರಸ್ ಅಟ್ಯಾಕ್ ಆದರೆ ನಿಮ್ಮ ಲ್ಯಾಪ್ಟಾಗ್ ಗತಿ ಏನಾಗಬಹುದೆಂದು ನಿಮಗನಿಸಬಹುದು ಅಲ್ಲವೆ?

  ಆದರೆ, ಚಿಂತಿಸದಿರಿ, ನಿಮ್ಮ ಬಳಿ ದುಬಾರಿ ಬೆಲೆಯ ಆ್ಯಂಟಿವೈರಸ್ ಇಲ್ಲದೆ ಹೋದರೂ ಸಹ ನೀವು ನಿಮ್ಮ ಲ್ಯಾಪ್ಟಾಪ್ ನಿಂದ ವೈರಸ್ ಅನ್ನು ಹೊರತೆಗೆಯಬಹುದು. ಅದು ಹೇಗೆ ಅಂತಿರಾ? ಮುಂದೆ ಓದಿ...

  ವೈರಸ್ ಅಟ್ಯಾಕ್ ಆಗಿದೆ ಎಂದು ಹೇಗೆ ತಿಳಿಯುತ್ತದೆ

  ಕೆಲ ಮನುಷ್ಯನಿಗೆ ಬರುವ ಕಾಯಿಲೆಗಳಂತೆಯೇ ಮೊದಲಿಗೆ ಲ್ಯಾಪ್ಟಾಪ್ ನಲ್ಲಿ ವೈರಸ್ ಹೊಕ್ಕಿದಾಗ ಯಾವ ಸೂಚನೆಯು ಸಿಗುವುದಿಲ್ಲ. ಆದರೆ, ಆ ವೈರಸ್ ತನ್ನ ನಿಶ್ಚಿತ ಗುರಿ ತಲುಪಿದ ಮೇಲೆ ನಿಮಗೆ ಸ್ಪಷ್ಟವಾಗಿ ಅದರ ಸಂಕೇತಗಳು ಕಾಣಸಿಗಲಾರಂಭಿಸುತ್ತವೆ. ಏನೆನೋ ಪ್ರೋಗ್ರಾಂಗಳು ತನ್ನಿಂದ ತಾನೇ ಓಪನ್ ಆಗುವುದು, ಸಂಬಂಧವಿರದ ಪಾಪಪ್ ಸಂದೇಶಗಳು ಬರುವುದು, ನಕಲಿ ಫೋಲ್ಡರ್‍ ಗಳ ಸೃಷ್ಟಿಯಾಗುವುದು ಇತ್ಯಾದಿ ನಿಮ್ಮ ಲ್ಯಾಪ್ಟಾಪಿಗೆ ವೈರಸ್ ಅಟ್ಯಾಕ್ ಆಗಿದೆ ಎಂದು ತೋರಿಸಿ ಕೊಡುತ್ತದೆ.

  ಹಾಗಾದರೆ, ಮುಂದೆ ಏನು ಮಾಡಬಹುದು? ಸರಳ....ವೈರಸ್ ತೆಗೆಯಿರಿ.

  ಮೊದಲಿಗೆ ವೈರಸ್ ಅನ್ನು ಪತ್ತೆ ಹಚ್ಚಿ ಅದು ಮತ್ತಷ್ಟು ನಿಮ್ಮ ಉಪಕರಣಕ್ಕೆ ಹಾನಿ ಉಂಟು ಮಾಡದಂತೆ ಮಾಡಬೇಕಾಗುತ್ತದೆ. ಅದನ್ನು ಮಾಡಲು ಮೊದಲಿಗೆ ನೀವು Ctrl+Alt+Delete ಬಟನ್ ಗಳನ್ನು ಏಕಕಾಲದಲ್ಲಿ ಒತ್ತಿ ತದನಂತರ ಟಾಸ್ಕ್ ಮ್ಯಾನೇಜರ್ ಅನ್ನು ತೆರೆಯಬೇಕು. ಅಲ್ಲಿ "Processes" ಎಂಬುದರ ಮೇಲೆ ಕ್ಲಿಕ್ ಮಾಡಿ ಯಾವುದಾದರೂ ಅಸಹಜ ಕ್ರಿಯೆ ನಡೆಯುತ್ತಿದೆಯೇ ಎಂದು ಮೊದಲಿಗೆ ಪರಿಶೀಲಿಸಿ. ಏನಾದರೂ ಸಂದೇಹಾಸ್ಪದ ಅನಿಸಿದಲ್ಲಿ ಆ ಬಗ್ಗೆ ಆನ್ಲೈನ್ ನಲ್ಲಿ ಸರ್ಚ್ ಮಾಡಿ ಅದು ವೈರಸ್ಸೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅದು ವೈರಸ್ ಎಂದು ದೃಢಪಟ್ಟಾಗ ಅದರ ಮೇಲೆ ಕ್ಲಿಕ್ ಮಾಡಿ "End Process" ಮೇಲೆ ಕ್ಲಿಕ್ ಮಾಡಿ. ತದನಂತರ ಈ ಕೆಳಗಿನ ಕ್ರಮಗಳನ್ನು ಪಾಲಿಸುವುದರ ಮೂಲಕ ಅದನ್ನು ಶಾಶ್ವತವಾಗಿ ತಡೆಯಬಹುದು.

  ಇದನ್ನೂ ಓದಿ: Xiaomi 12 Pro: ಇದೇ ತಿಂಗಳು ಭಾರತೀಯ ಮಾರುಕಟ್ಟೆಗೆ ಬರಲಿದೆ ಶಿಯೋಮಿ 12 ಪ್ರೊ ಸ್ಮಾರ್ಟ್​ಫೋನ್​!

  ಕ್ರಮ 1 : ನಿಮ್ಮ ವಿಂಡೋವ್ಸ್ ಫೈರ್ ವಾಲ್ ಅನ್ನು ಸಕ್ರಿಯಗೊಳಿಸುವುದರ ಮೂಲಕ ನಿಮ್ಮ ಲ್ಯಾಪ್ಟಾಪ್ ಸುರಕ್ಷತೆ ಹೆಚ್ಚಿಸಿಕೊಳ್ಳಿ. ಕಂಟ್ರೋಲ್ ಪ್ಯಾನಲ್ ತೆರೆಯುವ ಮೂಲಕ ಅಲ್ಲಿಂದ ವಿಂಡೋವ್ಸ್ ಡಿಫೆಂಡರ್ ಬಳಿ ಬಂದು ಅಲ್ಲಿರುವ ಆಯ್ಕೆಗಳ ಮೂಲಕ ಫೈರ್ ವಾಲ್ ಅನ್ನು ಸಕ್ರಿಯಗೊಳಿಸಿ.

  ಕ್ರಮ 2 : ವಿಂಡೋವ್ಸ್ ನಲ್ಲಿ ಮುಂಚಿತವಾಗಿಯೇ ಸುರಕ್ಷತೆಗಾಗಿ ಕೆಲ ಸೌಲಭ್ಯಗಳನ್ನು ನೀಡಲಾಗಿರುತ್ತದೆ. ಅದು ಸಕ್ರಿಯವಾಗುವಂತೆ "ವೈರಸ್ ಮತ್ತು ಥ್ರೆಟ್ ಪ್ರೊಟೆಕ್ಷನ್" ವೈಶಿಷ್ಟ್ಯವನ್ನು ಬಳಸಿ. ಈ ಮೂಲಕ ನಿಮ್ಮ ಲ್ಯಾಪ್ಟಾಪ್ ವೈರಸ್ ದಾಳಿಗೆ ಒಳಗಾಗದಂತೆ ಇದು ತಡೆಯುತ್ತದೆ.

  ಕ್ರಮ 3 : ವಿಂಡೋವ್ಸ್ ಸೆಕ್ಯೂರಿಟಿ ಸೆಕ್ಷನ್ ವಿಭಾಗದಲ್ಲಿ 'Open Windows Defender Security Center' ಮೇಲೆ ಕ್ಲಿಕ್ ಮಾಡಿ. ಅಲ್ಲಿಂದ "ವೈರಸ್ ಮತ್ತು ಥ್ರೆಟ್ ಪ್ರೊಟೆಕ್ಷನ್" ಆಯ್ಕೆಯೆಡೆ ಹೋಗಿ. ಅಲ್ಲಿ ನೀವು ಈ ಮೂರು ಆಯ್ಕೆಗಳನ್ನು ಆನ್ ಮಾಡಬೇಕಾಗಬಹುದು ಹಾಗೂ ಅವುಗಳೆಂದರೆ - ರಿಯಲ್-ಟೈಮ್ ಪ್ರೊಟೆಕ್ಷನ್, ಕ್ಲೌಡ್-ಡೆಲಿವರ್ಡ್ ಪ್ರೊಟೆಕ್ಷನ್ ಹಾಗೂ ಅಟೋಮ್ಯಾಟಿಕ್ ಸ್ಯಾಂಪಲ್ ಸಬ್ಮಿಶನ್.

  ಇದನ್ನೂ ಓದಿ: Meesho: 150 ಭಾರತೀಯ ಉದ್ಯೋಗಿಗಳನ್ನು ವಜಾ ಮಾಡಿದ ಫೇಸ್‌ಬುಕ್ ಬೆಂಬಲಿತ ಪ್ಲಾಟ್​ಫಾರ್ಮ್ ಮೀಶೋ

  ಕ್ರಮ 4 : ಇದಾದ ನಂತರ 'ವೈರಸ್ ಮತ್ತು ಥ್ರೆಟ್ ಪ್ರೊಟೆಕ್ಷನ್' ಅಡಿಯಲ್ಲಿ ಥ್ರೆಟ್ ಹಿಸ್ಟರಿಗೆ ಹೋಗಿ. ಅಲ್ಲಿ ಸ್ಕ್ಯಾನ್ ನೌ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಕೂಡಲೇ ಸ್ಕ್ಯಾನ್ ಆರಂಭಿಸಿ.

  ಕ್ರಮ 5 : ವಿಂಡೋವ್ಸ್ ಡಿಫೆಂಡರ್ ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ನಿಂದ ಎಲ್ಲ ವೈರಸ್ ಗಳನ್ನು ತೆಗೆದು ಹಾಕಿದ ನಂತರ ನಿಮ್ಮ ಉಪಕರಣವನ್ನು ಮರು ಸ್ಟಾರ್ಟ್ ಮಾಡಿ.
  Published by:Harshith AS
  First published: