ವಿಂಡೋಸ್, ಆ್ಯಂಡ್ರಾಯ್ಡ್, ಐಫೋನ್ ಡಿವೈಸ್‌ಗಳಲ್ಲಿ ಫೋಟೋಗಳ ಮಾಹಿತಿ ಅಳಿಸುವುದು ಹೇಗೆ..?

ಡಿಜಿಟಲ್ ಇಮೇಜ್‌ನೊಂದಿಗೆ ಸಂಯೋಜಿತವಾಗಿರುವ ಮೆಟಾಡೇಟಾವನ್ನು ಎಕ್ಸ್‌ಚೇಂಜ್ ಮಾಡಬಹುದಾದ ಇಮೇಜ್ ಫೈಲ್ ಫಾರ್ಮ್ಯಾಟ್‌ನ ಎಕ್ಸಿಫ್ (EXIF) ಎಂಬ ಫಾರ್ಮ್ಯಾಟ್‌ನಲ್ಲಿ ಸಂಗ್ರಹಿಸಲಾಗುತ್ತದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:

  ಒಮ್ಮೊಮ್ಮೆ ನಿಮ್ಮ ಸ್ಮಾರ್ಟ್‌ಫೋನ್ ಎಷ್ಟೋ ಫೋಟೋಗಳನ್ನು ಕ್ಲಿಕ್ಕಿಸಿರುತ್ತದೆ. ಫೋಟೋದಲ್ಲಿ ತೆಗೆದ ದಿನಾಂಕ, ಸ್ಥಳ, ಕ್ಯಾಮೆರಾ ಸೆಟ್ಟಿಂಗ್‌ಗಳು, ಫೋಟೋ ಎಡಿಟ್ ಮಾಡಲು ಬಳಸಿದ ಸಾಫ್ಟ್‌ವೇರ್ ಹೀಗೆ ಎಲ್ಲಾ ಮಾಹಿತಿಗಳನ್ನು ಒಳಗೊಂಡಿರುತ್ತದೆ. ತಾಂತ್ರಿಕ ಭಾಷೆಯಲ್ಲಿ ಇದನ್ನು ಚಿತ್ರದ ಮೆಟಾಡೇಟಾ ಎಂದು ಕರೆಯಲಾಗುತ್ತದೆ. ಆದರೂ, ಈ ಮೆಟಾಡೇಟಾ ಒಮ್ಮೊಮ್ಮೆ ಚಿತ್ರಗಳನ್ನು ಹಂಚಿಕೊಳ್ಳುವಾಗ ಅನಗತ್ಯ ಎಂದೆನಿಸುತ್ತದೆ. ಆ ಸಮಯದಲ್ಲಿ ಈ ಮಾಹಿತಿಯನ್ನು ಬೇರೆ ಬೇರೆ ಡಿವೈಸ್‌ಗಳಲ್ಲಿ ಹೇಗೆ ಅಳಿಸುವುದು ಎಂಬುದನ್ನು ತಿಳಿದುಕೊಳ್ಳೋಣ.


  ಡಿಜಿಟಲ್ ಇಮೇಜ್‌ನೊಂದಿಗೆ ಸಂಯೋಜಿತವಾಗಿರುವ ಮೆಟಾಡೇಟಾವನ್ನು ಎಕ್ಸ್‌ಚೇಂಜ್ ಮಾಡಬಹುದಾದ ಇಮೇಜ್ ಫೈಲ್ ಫಾರ್ಮ್ಯಾಟ್‌ನ ಎಕ್ಸಿಫ್ (EXIF) ಎಂಬ ಫಾರ್ಮ್ಯಾಟ್‌ನಲ್ಲಿ ಸಂಗ್ರಹಿಸಲಾಗುತ್ತದೆ.


  ವಿಂಡೋಸ್ ಪಿಸಿ:


  ಹಂತ 1:ವಿಂಡೋಸ್ ಕಂಪ್ಯೂಟರ್‌ನಲ್ಲಿ ಪಿಕ್ಚರ್‌ಗಳ ಫೋಲ್ಡರ್ ತೆರೆಯಿರಿ


  ಹಂತ 2:ನೀವು ತೆಗೆದುಹಾಕಲು ಬಯಸುವ ಮೆಟಾಡೇಟಾವನ್ನು ಹೈಲೈಟ್ ಮಾಡಿ, ಫೋಟೋದ ಮೇಲೆ ಬಲಕ್ಕೆ ಕ್ಲಿಕ್ ಮಾಡಿ


  ಹಂತ 3:ಆಯ್ಕೆಗಳು ಗೋಚರವಾದಂತೆ, ಡಿಟೈಲ್ಸ್ ಟ್ಯಾಬ್‌ನಲ್ಲಿ ‘ಪ್ರಾಪರ್ಟೀಸ್’ ಆಯ್ಕೆ ಆರಿಸಿ


  ಹಂತ 4:‘ರಿಮೂವ್ ಪ್ರಾಪರ್ಟೀಸ್ ಅಂಡ್ ಪರ್ಸನಲ್ ಇನ್‌ಫಾರ್ಮೇಶನ್’ ಹೆಸರಿರುವ ಕೊನೆಯ ಆಪ್ಶನ್ ಕ್ಲಿಕ್ ಮಾಡಿ


  ಹಂತ 5:ಚಿತ್ರದ ಮೆಟಾಡೇಟಾವನ್ನು ಅಳಿಸುವ ಮುನ್ನ, ಚಿತ್ರದ ಮಾಹಿತಿಯ ಪ್ರತಿಯನ್ನು ಉಳಿಸಬೇಕೇ ಅಥವಾ ಮೂಲ ಕ್ಲಿಕ್‌ನ EXIF ಮಾಹಿತಿಯನ್ನು ತೆಗೆದುಹಾಕಬೇಕೇ ಎಂದು ಕೇಳುತ್ತದೆ.


  ನಿಮಗೆ ಬೇಕಾದ ಆಯ್ಕೆಯನ್ನು ಆರಿಸಿಕೊಂಡು ಎಲ್ಲಾ ಫೋಟೋಗಳ ಮೇಟಾಡೇಟಾವನ್ನು ತೆಗೆದುಹಾಕಬಹುದು.


  ಆ್ಯಪಲ್ ಮ್ಯಾಕ್:


  ಹಂತ 1:ಫೋಟೋ ತೆರೆಯಲು ಪ್ರಿವ್ಯೂ ಬಳಸಿ


  ಹಂತ 2:ಮೆನು ತೆರೆಯಿರಿ ಹಾಗೂ ‘ಟೂಲ್ಸ್’ ಆಯ್ಕೆಮಾಡಿ


  ಹಂತ 3:ಇನ್‌ಸ್ಪೆಕ್ಟರ್ ಶೋ ಮಾಡಿ ಆರಿಸಿ


  ಹಂತ 4:(ಐ) ಟ್ಯಾಬ್ ಕ್ಲಿಕ್ ಮಾಡಿ


  ಹಂತ 5:ಜಿಪಿಎಸ್ ಟ್ಯಾಬ್ ಟ್ಯಾಪ್ ಮಾಡಿ ಹಾಗೂ ಸ್ಥಳ ಮಾಹಿತಿ ತೆಗೆದುಹಾಕಿ


  ಮ್ಯಾಕ್‌ನಲ್ಲಿ ನೀವು ಜಿಪಿಎಸ್ ಟ್ಯಾಬ್ ಹೊರತುಪಡಿಸಿ EXIF ಕ್ಲಿಕ್ ಮಾಡಿದಲ್ಲಿ, ಫೋಟೋದ ಕುರಿತು ಎಲ್ಲಾ ಮಾಹಿತಿ ನೋಡಬಹುದು ಆದರೆ ಅಳಿಸಲಾಗುವುದಿಲ್ಲ.


  ಆ್ಯಂಡ್ರಾಯ್ಡ್‌ಗಾಗಿ:


  ಹಂತ 1:ಚಿತ್ರಗಳು ಸ್ಟೋರ್ ಆಗಿರುವ ಗ್ಯಾಲರಿ ಆ್ಯಪ್ ತೆರೆಯಿರಿ


  ಹಂತ 2:ಇಮೇಜ್ ಆಯ್ಕೆಮಾಡಿ ಹಾಗೂ ‘ಮೋರ್’ ಕ್ಲಿಕ್ ಮಾಡಿ (ಮೂರು ಲಂಬ ಡಾಟ್‌ಗಳು)


  ಹಂತ 3:ಮೂರನೇ ಹಂತ ‘ಡೀಟೇಲ್ಸ್’ ಆಯ್ಕೆಮಾಡುವುದಾಗಿದೆ


  ಹಂತ 4:ಎಡಿಟ್ ಆಪ್ಶನ್ ಕ್ಲಿಕ್ ಮಾಡಿ


  ಹಂತ 5:‘ಲೊಕೇಶನ್’ ಅಳಿಸಿ ಮತ್ತು ‘ಸೇವ್’ ಒತ್ತಿ


  ಆ್ಯಪಲ್ ಐಫೋನ್:


  ಹಂತ 1:ಫೋಟೋಗಳ ಆ್ಯಪ್ ತೆರೆಯಿರಿ


  ಹಂತ 2:ಆಯ್ಕೆಯ ಫೋಟೋ ಆರಿಸಿ


  ಹಂತ 3:‘ಶೇರ್’ ಕ್ಲಿಕ್ ಮಾಡಿ


  ಹಂತ 4:‘ಆಪ್ಶನ್ಸ್’ ಆಯ್ಕೆಮಾಡಿ (‘ಲೊಕೇಶನ್’ ನಂತರ ನಿಮ್ಮ ಸ್ಕ್ರೀನ್‌ನ ಮೇಲ್ಭಾಗದಲ್ಲಿ ಇರುತ್ತದೆ)


  ಹಂತ 5:ಸ್ಥಳ ಅಥವಾ ಸಂಪೂರ್ಣ ಫೋಟೋ ಡೇಟಾ ಟಾಗಲ್ ಮಾಡಿ


  ಹಂತ 6:‘ಡನ್’ ಆಯ್ಕೆಮಾಡಿ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  First published: