ಜಿಯೋ ಗಿಗಾಫೈಬರ್​ ರಿಜಿಸ್ಟ್ರೇಷನ್​ ಮಾಡಿಕೊಳ್ಳುವುದು ಹೇಗೆ?

news18
Updated:August 15, 2018, 2:26 PM IST
ಜಿಯೋ ಗಿಗಾಫೈಬರ್​ ರಿಜಿಸ್ಟ್ರೇಷನ್​ ಮಾಡಿಕೊಳ್ಳುವುದು ಹೇಗೆ?
news18
Updated: August 15, 2018, 2:26 PM IST
ಕಳೆದ ತಿಂಗಳು ರಿಲಯನ್ಸ್​​ ನಡೆಸಿದ್ದ ವಾರ್ಷಿಕ ಸಮ್ಮೇಳನದಲ್ಲಿ ಅಧ್ಯಕ್ಷ ಮುಖೇಶ್​ ಅಂಭಾನಿ ಜಿಯೋ ಫೋನ್​ 2 ಬಳಿಕ ಘೋಷಿಸಿದ ಮಹತ್ತರ ಹಾಗೂ ನೂತನ ಪ್ರಾಜೆಕ್ಟ್​​ನಲ್ಲಿ ಒಂದಾದ ಜಿಯೋ ಗಿಗಾಫೈಬರ್​ ಪಡೆಯಲು ಆನ್​ಲೈನ್​ನಲ್ಲಿ ರೆಜಿಸ್ಟ್ರೇಷನ್​ ಆರಂಭವಾಗಿದೆ.

ಸ್ವಾತಂತ್ರ್ಯ ದಿನಾಚರಣೆಯ ದಿನವೇ ಎಲ್ಲರಿಗೂ ಮಧ್ಯಾಹ್ನ 12 ಗಂಟೆಯಿಂದ ಜಿಯೋಗಿಗಾ ಫೈಬರ್​ ರೆಜಿಸ್ಟ್ರೇಷನ್​ ಆರಂಭವಾಗಿದೆ, ಇದರಲ್ಲಿ ಒಂದು ಜಿಬಿವರೆಗೂ ಇಂಟರ್​ನೆಟ್​ ವೇಗವನ್ನು ಪಡೆಯಲು ಈಗಿಗಾಬೈಟ್​ ಸಹಕಾರಿ. ಇದರೊಂದಿಗೆ ಸೆಟ್​ಅಪ್​ ಬಾಕ್ಸ್​ ಕೂಡಾ ನೀಡಲಾಗುತ್ತದೆ. ಇದರಲ್ಲಿ 600ಕ್ಕೂ ಅಧಿಕ ಟಿವಿ ಚಾನೆಲ್​ಗಳು ಲಭ್ಯವಿರಲಿದೆ.

jio.comನಲ್ಲಿ ನೀವು ಈ ಸೌಲಭ್ಯವನ್ನು ಪಡೆಯಬಹುದು. ಅಥವಾ ಈ ಸೂಚನೆಯನ್ನು ಅನುಸರಿಸಿ


  • ಮೊದಲು ಈ ವೆಬ್​ಸೈಟ್​ಗೆ https://gigafiber.jio.com/registration ಭೇಟಿ ನೀಡಿ.

  • ಒಂದು ವೇಳೆ ನಿಮ್ಮ ಮನೆ ಅಥವಾ ಕಚೇರಿಗೆ ಇಂಟರ್​ನೆಟ್​ ಸೇವೆ ಬೇಕೆಂದರೆ ಅಲ್ಲೇ ಲೊಕೇಶನ್​ ಆಯ್ಕೆ ಮಾಡಲು ಅವಕಾಶ ಇರುತ್ತದೆ.

  • ನಿರ್ಧಿಷ್ಟ ವಿಳಾಸ ಇಲ್ಲಿ ಸಿದೇ ಇದ್ದರೆ ನೀವೇ CHANGE ಬಟನ್​ಗೆ ಕ್ಲಿಕ್​ ಮಾಡಿ ಬದಲಾಯಿಸಬಹುದು,

  • Loading...

  • ಮುಂದಿನ ಪೇಜ್​ನಲ್ಲಿ ನೀವು ಮೊಬೈಲ್​ ನಂಬರ್​, ಹಾಗು ನಿಮ್ಮ ಹೆಸರನ್ನು ನಮೂದಿಸಿ,

  • ಒಟಿಪಿ ದೊರೆತ ಬಳಿಕ ಉಳಿದಿರುವ ವಿಳಾಸ ಮಾಹಿತಿಯನ್ನು ಪೂರ್ಣಗೊಳಿಸಿ

  • ಒಂದು ಬಾರಿ ನೀವು ವಿಳಾಸವನ್ನು ಪೂರ್ಣವಾಗಿ ಭರ್ತಿಗೊಳಿಸಿದರೆ ಸಾಕು. ಅದೇ ವಿಳಾಸಕ್ಕೆ ಇಂಟರ್​ನೆಟ್​ ಸೇವೆ ದೊರಕುತ್ತದೆ.

First published:August 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...