ಭಾರತ ಸೇರಿದಂತೆ ವಿಶ್ವದಾದ್ಯಂತ ಅನೇಕ ದೇಶಗಳು ವಾಟ್ಸ್ಆ್ಯಪ್ ಅನ್ನು ಬಳಸುತ್ತಿವೆ. ಹಾಗಾಗಿ ಹೆಚ್ಚಿನ ಬಳಕೆದಾರರನ್ನು ವಾಟ್ಸ್ಆ್ಯಪ್ ಹೊಂದಿದೆ. ಇದರ ಮೂಲಕ ಮೆಸೇಜ್, ಧ್ವನಿ ಕರೆ, ವಿಡಿಯೋ ಕರೆ ಮಾಡಬಹುದಾಗಿದೆ. ಆದರೆ ವಾಟ್ಸ್ಆ್ಯಪ್ಗೆ ಬರುವ ಕರೆಯನ್ನು ರೆಕಾರ್ಡ್ ಮಾಡುವ ಬಗ್ಗೆ ತಿಳಿದಿದೆಯಾ? ಹಾಗಿದ್ದರೆ, ಈ ಸ್ಟೋರಿ ಓದಿ.
ವಾಟ್ಸ್ಆ್ಯಪ್ ಈವರೆಗೆ ಧ್ವನಿ ಕರೆಯನ್ನು ರೆಕಾರ್ಡ್ ಮಾಡುವ ಫೀಚರ್ ಅನ್ನು ನೀಡಿಲ್ಲ. ಆದರೆ ಥರ್ಡ್ಪಾರ್ಟಿ ಅಪ್ಲಿಕೇಶನ್ ಮೂಲಕ ಕರೆಗಳನ್ನು ರೆಕಾರ್ಡ್ ಮಾಡಬಹುದಾಗಿದೆ. ಹೌದು. Otter.Ai ಆ್ಯಪ್ ಮೂಲಕ ಕರೆ ರೆಕಾರ್ಡ್ ಮಾಡಬಹುದಾಗಿದೆ. ಈ ಆ್ಯಪ್ ಧ್ವನಿ ಹಿಡಿದಿಟ್ಟುಕೊಳ್ಳಲು ಪರಿಣಾಮಕಾರಿಯಾಗಿದ್ದು, ರೆಕಾರ್ಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಸಾಕು ವಾಟ್ಸ್ಆ್ಯಪ್ ಕರೆಯನ್ನು ರೆಕಾರ್ಡ್ ಮಾಡುತ್ತದೆ.
Otter.Ai ಆ್ಯಪ್ನ ಮತ್ತೊಂದು ವಿಶೇಷವೆಂದರೆ ವಾಯ್ಸ್ ಕರೆಗಳು ಟೆಕ್ಸ್ಟ್ ಮಾದರಿಯಲ್ಲಿ ರೂಪಾಂತರಗೊಳ್ಳುತ್ತದೆ. ರೆಕಾರ್ಡ್ ಮಾತ್ರವಲ್ಲದೆ, ಟೆಕ್ಸ್ಟ್ ರೂಪದಲ್ಲಿ ಪಡೆಯಬಹುದಾಗಿದೆ. ಆದರೆ ಈ ಆ್ಯಪ್ ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಬಳಕೆಗೆ ಸಿಗುತ್ತಿದೆ. ಇದರಲ್ಲಿ ಪ್ರತಿ ತಿಂಗಳ 600 ನಿಮಿಷ ಕರೆಗಳನ್ನು ರೆಕಾರ್ಡ್ ಮಾಡಬಹುದು.
ಗೂಗಲ್ ಪ್ಲೇ ಸ್ಟೋರ್ಗೆ ತೆರಳಿ Otter.Ai ಆ್ಯಪ್ ಅನ್ನು ಡೌನ್ಲೋಡ್ ಮಾಡಿ ಬಳಸಬಹುದಾಗಿದೆ. ಇನ್ನು ಪ್ಲೇ ಸ್ಟೋರ್ನಲ್ಲಿ ಸಾಕಷ್ಟು ಆ್ಯಪ್ಗಳಿದ್ದು, ಅಟೋಮ್ಯಾಟಿಕ್ ಕರೆಗಳ ರೆಕಾರ್ಡ್ ಹೀಗೆ ನಾನಾ ಫೀಚರ್ ಹೊಂದಿರುವ ಥರ್ಡ್ ಪಾರ್ಟಿ ಆ್ಯಪ್ಗಳಿವೆ.
ಮತ್ತೆ 132 ಆನ್ಲೈನ್ ಗೇಮಿಂಗ್ ಸೈಟ್ಗಳನ್ನ ಬ್ಯಾನ್ ಮಾಡಲು ಮುಂದಾದ ಆಂಧ್ರ ಸರ್ಕಾರ! ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ