ಸ್ಮಾರ್ಟ್ಫೋನ್ಗಳು (Smartphones) ಇತ್ತೀಚೆಗೆ ಹೆಚ್ಚಿನ ಜನರ ಅಗತ್ಯ ಸಾಧನವಾಗಿಬಿಟ್ಟಿದೆ. ಯಾವುದೇ ಕೆಲಸವನ್ನು ಕ್ಷಣಮಾತ್ರದಲ್ಲಿ ಮಾಡಲು ಸಹಾಯಕವಾಗುವ ಒಂದು ಟೆಕ್ನಾಲಜಿ ಇದ್ದರೆ ಅದು ಮೊಬೈಲ್ನಲ್ಲಿ ಮಾತ್ರ ಸಾಧ್ಯ. ಕೆಲವೊಮ್ಮೆ ನಮಗೆ ಸ್ಮಾರ್ಟ್ಫೋನ್ಗಳಲ್ಲಿ ಏನಾದರು ಗೇಮ್ ಆಡುವಾಗ, ವಿಡಿಯೋ ನೋಡುವಾಗ ಅದನ್ನು ಮತ್ತೆ ನೋಡಲು ಸ್ಕ್ರೀನ್ಶಾಟ್ (Screen Short) ಅಥವಾ ಸ್ಕ್ರೀನ್ ರೆಕಾರ್ಡ್ (Screen Record) ಮಾಡಿಕೊಳುತ್ತೇವೆ. ಆದರೆ ಇದನ್ನು ಮಾಡಲು ನಾವು ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಇನ್ನು ಕೆಲವರಿಗೆ ಈಗಿನ ಹೊಸ ಸ್ಮಾರ್ಟ್ಫೋನ್ಗಳಲ್ಲಿ ಮೊದಲೇ ಡೌನ್ಲೋಡ್ ಆಗಿರುತ್ತದೆ. ಆದರೆ ಥರ್ಡ್ ಪಾರ್ಟಿ ಆ್ಯಪ್ಗಳಲ್ಲಿ (Third Party Apps) ಬೆಸ್ಟ್ ಅಪ್ಲಿಕೇಶನ್ಗಳು ಯಾವುದೆಂದು ಈ ಕೆಳಗೆ ಲೇಖನದಲ್ಲಿ ನೀಡಿದ್ದೇವೆ.
ಆಂಡ್ರಾಯ್ಡ್ನಲ್ಲಿ ಸುಲಭದಲ್ಲಿ ಡೌನ್ಲೋಡ್ ಮಾಡಿ, ಸ್ಕ್ರೀನ್ ರೆಕಾರ್ಡ್ ಮಾಡಬಹುದಾದ ಬೆಸ್ಟ್ ಆ್ಯಪ್ಗಳು ಯಾವುದೆಂದು ಈ ಲೇಖನದ ಮೂಲಕ ತಿಳಿಯಿರಿ.
ಎಝಡ್ ಸ್ಕ್ರೀನ್ ರೆಕಾರ್ಡರ್:
ಎಝಡ್ ಸ್ಕ್ರೀನ್ ರೆಕಾರ್ಡರ್ ಆ್ಯಪ್ ಆಂಡ್ರಾಯ್ಡ್ ಫೋನ್ಗಳಲ್ಲಿ ಸ್ಕ್ರೀನ್ ರೆಕಾರ್ಡ್ ಮಾಡಬಹುದಾದ ಬೆಸ್ಟ್ ಆ್ಯಪ್ಗಳಾಗಿದೆ. ಈ ಆ್ಯಪ್ ಅನ್ನು ಬಳಕೆದಾರು ಗೂಗಲ್ ಪ್ಲೇ ಸ್ಟೋರ್ ಮೂಲಕ ಫ್ರೀಯಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.
ಇದನ್ನೂ ಓದಿ: ಐಫೋನ್ ಪ್ರಿಯರೇ ಇಲ್ಲೊಮ್ಮೆ ಗಮನಿಸಿ, ಇಲ್ಲೊಬ್ಬರು ಕಳಕೊಂಡದ್ದು ಬರೋಬ್ಬರಿ 8 ಲಕ್ಷ ರೂಪಾಯಿ
ಆದರೆ ಇದರ ಪಾಪ್ಅಪ್ ವಿಂಡೋ ಸ್ಕ್ರೀನ್ನಲ್ಲಿ ಬರಬೇಕಾದ್ರೆ ನೀವು ಪರ್ಮಿಷನ್ ನೀಡುವುದು ಮುಖ್ಯವಾಗಿರುತ್ತದೆ. ನಂತರ ನಿಮ್ಮ ಆ್ಯಪ್ ನಿಮ್ಮ ಸ್ಕ್ರೀನ್ನಲ್ಲಿ ಕಂಟ್ರೋಲ್ ಮಾಡಲು ಅವಕಾಶವನ್ನು ನೀಡುತ್ತದೆ. ನೀವು ಅವುಗಳನ್ನು ಆಕ್ಸೆಸ್ ಮಾಡಿ ರೆಕಾರ್ಡಿಂಗ್, ರೆಕಾರ್ಡ್ ಆದ ವಿಡಿಯೋ ಸೆಂಡ್ ಮಾಡುವ ಕೆಲಸ ಅಥವಾ ಎಡಿಟ್ ಮಾಡುವ ಕೆಲಸವನ್ನು ಒಮ್ಮೆಲೆ ಮಾಡಬಹುದಾಗಿದೆ.
ಡಿಯು ರೆಕಾರ್ಡರ್:
ಇನ್ನು ಸ್ಮಾರ್ಟ್ಫೋನ್ಗಳಲ್ಲಿ ಸ್ಕ್ರೀನ್ ರೆಕಾರ್ಡ್ ಮಾಡಲಿರುವಂತಹ ಬೆಸ್ಟ್ ಆ್ಯಪ್ಗಳಲ್ಲಿ ಡಿಯು ರೆಕಾರ್ಡರ್ ಆ್ಯಪ್ ಸಹ ಒಂದು. ಇದನ್ನು ಬಳಸಲು ತುಂಬಾ ಸುಲಭ. ಈ ಅಪ್ಲಿಕೇಶನ್ ಬಳಕೆದಾರರಿಗೆ ಹಲವು ಫೀಚರ್ಸ್ಗಳನ್ನು ಸಹ ನೀಡುತ್ತದೆ. ಇನ್ನು ಈ ಡಿಯು ರೆಕಾರ್ಡರ್ ಆ್ಯಪ್ ಅನ್ನು ಎರಡು ರೀತಿಯಲ್ಲಿ ನೀವು ಇದರ ರೆಕಾರ್ಡಿಂಗ್ ಅನ್ನು ಕಂಟ್ರೋಲ್ ಮಾಡಬಹುದು. ಒಂದು ಪಾಪ್ ಅಪ್ ವಿಂಡೋ ಮೂಲಕ ಮತ್ತು ನಾಟಿಫಿಕೇಷನ್ ಬಾರ್ ಮೂಲಕ. ಜೊತೆಗೆ ಇದರಲ್ಲಿ ಸೆಟ್ಟಿಂಗ್ಸ್ ಮೂಲಕ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಸಹ ಸೆಟ್ ಮಾಡಿಟ್ಟುಕೊಳ್ಳಬಹುದು.
ಸ್ಕ್ರೀನ್ ರೆಕಾರ್ಡರ್:
ಸ್ಕ್ರೀನ್ ರೆಕಾರ್ಡರ್ ಆ್ಯಪ್ ಅನ್ನು ಡೌನ್ಲೋಡ್ ಮಾಡಿದ್ರೆ ಬಳಕೆದಾರರಿಗೆ ಉತ್ತಮ. ಏಕೆಂದರೆ ಈ ಆ್ಯಪ್ ಬಳಸುವವರಿಗೆ ಯಾವುದೇ ರೀತಿಯಲ್ಲಿ ಜಾಹೀರಾತುಗಳು ಬರುವುದಿಲ್ಲ ಮತ್ತು ಸಂಪೂರ್ಣವಾಗಿ ಉಚಿತವಾಗಿಯೇ ಸೌಲಭ್ಯವನ್ನು ನೀಡುತ್ತದೆ. ಬೇರೆ ಆ್ಯಪ್ ಗಳಂತೆ ಈ ಅಪ್ಲಿಕೇಶನ್ನಲ್ಲೂ ಪಾಪ್ ಅಪ್ ವಿಂಡೋ ಪರ್ಮಿಷನ್ ಬೇಕಾಗುತ್ತದೆ. ಇದನ್ನು ಇನ್‌ಸ್ಟಾಲ್ ಮಾಡಿದರೆ ಚಿಕ್ಕದೊಂದು ಟೂಲ್ ನಿಮ್ಮ ಸ್ಕ್ರೀನ್ ಕೆಳಭಾಗದಲ್ಲಿ ಕಾಣಿಸುತ್ತೆ. ಈ ಟೂಲ್ ಮೂಲಕ ನೀವು ರೆಕಾರ್ಡ್ ಮಾಡಕು ಎಷ್ಟು ಹೊತ್ತು ಬೇಕಾದರು ಸಮಯ ತೆಗೆದುಕೊಳ್ಳಬಹುದು ಮತ್ತು ಸೆಟ್ ಸಹ ಮಾಡಬಹುದಾಗಿದೆ.
ಈ ಆ್ಯಪ್ ಮೂಲಕ ಇನ್ಮುಂದೆ ಮನೆಯಿಂದಲೇ ವೈದ್ಯರ ಸಲಹೆ ಪಡೆಯಿರಿ
ಇಸಂಜೀವಿನಿ ಅಪ್ಲಿಕೇಶನ್
ಇ-ಸಂಜೀವಿನಿ ಆ್ಯಪ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ಪರಿಚಯಿಸಿದೆ. ಇದು ಟೆಲಿಮೆಡಿಸಿನ್ ಆ್ಯಪ್ ಅಂತನೂ ಕರೆಯಬಹುದು. ಈ ಆ್ಯಪ್ ಮೂಲಕ ಯಾರೂ ಬೇಕಾದರು ತಮಗೆ ಬೇಕಾದ ವೈದ್ಯರಿಂದ ಸಲಹೆಯನ್ನು ಪಡೆಯಬಹುದು. ಇದು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತದೆ.
ಈ ಆ್ಯಪ್ ಅನ್ನು ನಿಮ್ಮ ಸ್ಮಾರ್ಟ್‌ಫೋನ್ ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡರೆ ರೋಗಿಗಳ ನೋಂದಣಿ, ಟೋಕನ್ ಕ್ರಿಯೇಟ್, ವೈದ್ಯರೊಂದಿಗೆ ಆಡಿಯೋ-ವಿಡಿಯೋ ಕಾಲ್ ಮೂಲಕ ಸಮಾಲೋಚನೆ, ಇ-ಪ್ರಿಸ್ಕ್ರಿಪ್ಷನ್ ಮತ್ತು ಎಸ್‌ಎಮ್‌ಎಸ್ ಹಾಗೂ ಇಮೇಲ್ ನೋಟಿಫಿಕೇಶನ್ ಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಆ್ಯಪ್‌ನಲ್ಲಿ ರಾಜ್ಯದ ವೈದ್ಯರು ತಮ್ಮದೇ ಆದ ರೀತಿಯಲ್ಲಿ ಸೇವೆಯಲ್ಲಿ ಬಳಕೆದಾರರಿಗೆ ನೀಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ