ಫೇಸ್​ಬುಕ್​ ರಿಚಾರ್ಜ್​ ಹೇಗೆ?


Updated:April 19, 2018, 11:34 PM IST
ಫೇಸ್​ಬುಕ್​ ರಿಚಾರ್ಜ್​ ಹೇಗೆ?

Updated: April 19, 2018, 11:34 PM IST
ವಾಷಿಂಗ್ಟನ್​: ಪೇಸ್​ಬುಕ್​ ಮೆಸೇಂಜರ್​ನಲ್ಲಿ ಪ್ರಿಪೇಯ್ಡ್​ ರಿಚಾರ್ಜ್​ ಮಾಡುವ ಟೆಸ್ಟಿಂಗ್​ ಆಪರೇಷನ್​ ಬಿಟ್ಟ ಬಳಿಕ ಫೇಸ್​ಬುಕ್​ ತನ್ನ ಅಪ್ಲಿಕೇಶನ್​ನಲ್ಲಿ ರಿಚಾರ್ಜ್​ ಆಪ್ಷನ್​ ನೀಡಿದೆ.

ರೀಚಾರ್ಜ್​ ಮಾಡುವುದು ಹೇಗೆ?

ನಿಮ್ಮ ಫೇಸ್ ಬುಕ್ ಪೇಜ್​ನ ಬಲಭಾಗದ ತುದಿಯಲ್ಲಿ ನಿಮಗೆ ರಿಚಾರ್ಜ್ ಐಕಾನ್ ಕಾಣಿಸುತ್ತದೆ. ಅಕಸ್ಮಾತ್ ನಿಮಗೆ ಕಾಣಿಸದೇ ಹೋದಲ್ಲಿ ನೀವು ಸೀ ಮೋರ್ ಅನ್ನೋ ಐಕಾನ್ ಮೇಲೆ ಕ್ಲಿಕ್ ಮಾಡಬಹುದು.ಇದಾದ ಮೇಲೆ ಹೊಸ ಪೇಜ್ ತೆರೆದುಕೊಳ್ಳತ್ತೆ. ಬಳಿಕ ನೀವು ಯಾವ್ ಕಾರ್ಡ್ ಬಳಸುತ್ತೀರಿ (ಡೆಬಿಟ್ ಅಥವಾ ಕ್ರೆಡಿಟ್) ಎಂದು ಕೇಳಿದಾಗ ನೀವದನ್ನು ಆಯ್ಕೆ ಮಾಡಬೇಕು. ಬಳಿಕ ರಿಚಾರ್ಜ್ ನೌ ಮೇಲೆ ಕ್ಲಿಕ್ ಮಾಡಿ ಫೋನ್ ನಂಬರ್ ನೀಡಿದ ಬಳಿಕ, ನಿಮಗೊಂದು ಒಟಿಪಿ ನಂಬರ್ ಸಿಗುತ್ತೆ. ಇದನ್ನು ನೀಡಿದಲ್ಲಿ ನೀವು ರಿಚಾರ್ಜ್ ಮಾಡಬಹುದು. ಒಂದು ವೇಳೆ ನಿಮಗೆ ರಿಚಾರ್ಜ್​ ಪ್ಯಾಕ್​ ಕುರಿತು ತಿಳಿದುಕೊಳ್ಳಬೇಕು ಎನಿಸಿದರೆ ಬ್ರೌಸ್​ ಪ್ಲಾನ್​ನ ಮೇಲೆ ಕ್ಲಿಕ್​ ಮಾಡಿ ನಿಮಗೆ ಬೇಕಾದ ಪ್ಲಾನ್​ ಆಯ್ಕೆ ಮಾಡಿಕೊಳ್ಳಿ.

 

 
First published:April 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ