HOME » NEWS » Tech » HOW TO PURCHASE AMAZON PRIME MEMBERSHIP IN INDIA HAS

ಉಚಿತವಾಗಿ ಅಮೆಜಾನ್​​ ಪ್ರೈಮ್​ ಮೆಂಬರ್​ಶಿಪ್​ ಪಡೆದುಕೊಳ್ಳುವುದು ಹೇಗೆ ಗೊತ್ತಾ?

Amazon Prime: ಅಮೆಜಾನ್​ ಪ್ರೈಮ್​ ಸದಸ್ಯತ್ವ ಪಡೆದುಕೊಳ್ಳುವ ಗ್ರಾಹಕರು ತಿಂಗಳಿಗೆ 129 ರೂ. ಪಾವತಿಸಬೇಕು. ವಾರ್ಷಿಕ ಸದಸ್ಯತ್ವ ಪಡೆದುಕೊಳ್ಳುವ ಗ್ರಾಹಕರು 999 ರೂ. ಪಾವತಿಸುವ ಮೂಲಕ ಪ್ರೈಮ್​​ ಸದಸ್ಯತ್ವ ಪಡೆದುಕೊಳ್ಳ ಬಹುದಾಗಿದೆ. ಏರ್​ಟೆಲ್​, ಬಿಎಸ್​ಎನ್​ಎಲ್​ ಮತ್ತು ವೊಡಾಫೋನ್​ ಸಿಮ್​ ಬಳಕೆಯ ಗ್ರಾಹಕರು ಅಮೆಜಾನ್​ ಪ್ರೈಮ್​ ಸದಸ್ಯತ್ವ ಪಡೆಯಲು ವಿಶೇಷ ಆಫರ್​ ಅನ್ನು ಲಭ್ಯವಿದೆ .

Harshith AS | news18
Updated:July 18, 2019, 6:20 PM IST
ಉಚಿತವಾಗಿ ಅಮೆಜಾನ್​​ ಪ್ರೈಮ್​ ಮೆಂಬರ್​ಶಿಪ್​ ಪಡೆದುಕೊಳ್ಳುವುದು ಹೇಗೆ ಗೊತ್ತಾ?
ಅಮೆಜಾನ್
  • News18
  • Last Updated: July 18, 2019, 6:20 PM IST
  • Share this:
ಆನ್​ಲೈನ್​ ಇ-ಕಾಮರ್ಸ್​ ಮಳಿಗೆಯಾದ ಅಮೆಜಾನ್ ಪ್ರತಿಬಾರಿ​ ಹೊಸದಾದ ಆಫರ್​ ಅನ್ನು ಬಿಡುಗಡೆ  ಮಾಡುತ್ತಾ ಬಂದಿದೆ. ಈ ಬಾರಿಯೂ ಅಮೆಜಾನ್​ ಜುಲೈ 15 ರಿಂದ 16 ರ ವರೆಗೆ ಎರಡು ದಿನಗಳ ಕಾಲ ‘ಅಮೆಜಾನ್​ ಪ್ರೈಮ್​​ ಡೇ ಸೇಲ್‘​ ಆಫರ್​ ಅನ್ನು ನೀಡುತ್ತಿದೆ.  ಅಮೆಜಾನ್​ ಪ್ರೈಮ್​ ಮೆಂಬರ್​ಶಿಪ್​ ಪಡೆದ ಗ್ರಾಹಕರಿಗೆ ಅಮೆಜಾನ್​ನಲ್ಲಿ ವಿಶೇಷ ಆಫರ್​ ಮತ್ತು ಹೆಚ್ಚುವರಿ ಡಿಸ್ಕೌಂಟ್​ ಅನ್ನು ನೀಡುತ್ತಿದೆ. ಹಾಗಿದ್ದರೆ, ಗ್ರಾಹಕರು ಈ ಆಫರ್​ ಅನ್ನು ಸದುಪಯೋಗ ಪಡಿಸಿಕೊಳ್ಳುವುದು ಹೇಗೆ? ಅಮೆಜಾನ್​ ಪ್ರೈಮ್​ ಸದಸ್ಯತ್ವ  ಪಡೆದುಕೊಳ್ಳುವುದು ಹೇಗೆ.? ಇಲ್ಲಿದೆ ಮಾಹಿತಿ..

ಅಮೆಜಾನ್​ ಪ್ರೈಮ್​ ಸದಸ್ಯತ್ವ ಪಡೆದುಕೊಳ್ಳುವ ಗ್ರಾಹಕರು ತಿಂಗಳಿಗೆ 129 ರೂ. ಪಾವತಿಸಬೇಕು. ವಾರ್ಷಿಕ ಸದಸ್ಯತ್ವ ಪಡೆದುಕೊಳ್ಳುವ ಗ್ರಾಹಕರು 999 ರೂ. ಪಾವತಿಸುವ ಮೂಲಕ ಪ್ರೈಮ್​​ ಸದಸ್ಯತ್ವ ಪಡೆದುಕೊಳ್ಳ ಬಹುದಾಗಿದೆ. ಏರ್​ಟೆಲ್​, ಬಿಎಸ್​ಎನ್​ಎಲ್​ ಮತ್ತು ವೊಡಾಫೋನ್​ ಸಿಮ್​ ಬಳಕೆಯ ಗ್ರಾಹಕರು ಅಮೆಜಾನ್​ ಪ್ರೈಮ್​ ಸದಸ್ಯತ್ವ ಪಡೆಯಲು ವಿಶೇಷ ಆಫರ್​ ಅನ್ನು ಲಭ್ಯವಿದೆ .

ಏರ್ಟೆಲ್ ಆಫರ್
ಏರ್‌ಟೆಲ್ ಬಳಕೆಯ ಗ್ರಾಹಕರು ತಿಂಗಳಿಗೆ  299 ರೂ. ಪ್ರಿಪೇಯ್ಡ್ ರೀಚಾರ್ಜ್ ಮಾಡಿದರೆ, ಮತ್ತು ಪೋಸ್ಟ್‌ಪೇಯ್ಡ್ ಗ್ರಾಹಕರು 499, 749, 999 ಮತ್ತು 1599 ಹಾಗೂ 1099 ರೂ. ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ಪಡೆದುಕೊಂಡರೆ ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್ ಮೂಲಕ ಅಮೆಜಾನ್ ಪ್ರೈಮ್ ಮೆಂಬರ್‌ಶಿಪ್ ಪಡೆದುಕೊಳ್ಳಬಹುದು.

ಬಿಎಸ್ಎನ್ಎಲ್ ಆಫರ್
ಬಿಎಸ್‌ಎನ್‌ಎಲ್ ಗ್ರಾಹಕರು ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಮೂಲಕ 399 ರೂ., 745 ರೂ. ಮತ್ತು ಅದಕ್ಕೂ ಹೆಚ್ಚಿನ ಲ್ಯಾಂಡ್‌ಲೈನ್ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಪಡೆದುಕೊಂಡರೆ, www.portal.bsnl.in ಮೂಲಕ ಅಮೆಜಾನ್ ಪ್ರೈಮ್ ಸದಸ್ಯತ್ವ ಉಚಿತವಾಗಿ ಪಡೆದುಕೊಳ್ಳಬಹುದು

ವೊಡಾಫೋನ್ ಪ್ಲ್ಯಾನ್ವೊಡಾಫೋನ್ ಗ್ರಾಹಕರು ತಿಂಗಳಿಗೆ 399 ರೂ. ವೊಡಾಫೋನ್ ರೆಡ್‌ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಪಡೆದುಕೊಂಡರೆ, ಅವರು ವೊಡಾಫೋನ್ ಪ್ಲೇ ಆ್ಯಪ್ ಮೂಲಕ ಅಮೆಜಾನ್ ಪ್ರೈಮ್ ಮೆಂಬರ್‌ಶಿಪ್ ಉಚಿತ ಆಫರ್ ಪಡೆದುಕೊಳ್ಳಬಹುದು.
First published: July 14, 2019, 8:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories