Eye Strain: ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್ ನೋಡಿದ್ರೆ ಕಣ್ಣು ನೋವು ಬರುತ್ತಾ? ಇಲ್ಲಿದೆ ನೋಡಿ ಪರಿಹಾರ

Smartphone: ಲ್ಯಾಪ್‌ಟಾಪ್, ಕಂಪ್ಯೂಟರ್ ಮತ್ತು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಗಂಟೆಗಟ್ಟಲೆ ಮುಳುಗಿರುವುದರಿಂದ ನಮ್ಮ ಕಣ್ಣುಗಳ ಮೇಲೆ ತುಂಬಾನೇ ಒತ್ತಡ ಬಿದ್ದು, ಕಣ್ಣುಗಳು ಉರಿಯುವುದಕ್ಕೆ ಮತ್ತು ನೋವಾಗುವುದಕ್ಕೆ ಶುರುವಾದದ್ದು ಬಹುತೇಕರ ಗಮನಕ್ಕೆ ಬಂದಿರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೋವಿಡ್-19 (Covid-19) ಸಾಂಕ್ರಾಮಿಕರೋಗದ ಹಾವಳಿ ಶುರುವಾದಾಗಿನಿಂದಲೂ ಮಕ್ಕಳು ಮನೆಯಲ್ಲಿಯೇ ಕುಳಿತು ಲ್ಯಾಪ್‌ಟಾಪ್‌ಗಳಲ್ಲಿ (Laptop), ಕಂಪ್ಯೂಟರ್‌ಗಳಲ್ಲಿ (Computer) ಮತ್ತು ತಮ್ಮ ಪೋಷಕರ ಸ್ಮಾರ್ಟ್‌ಫೋನ್‌ಗಳಲ್ಲಿ (Smartphones) ಆನ್‌ಲೈನ್ ತರಗತಿಗಳಿಗೆ (Online Class) ಹಾಜರಾಗುವುದರಿಂದ ಹಿಡಿದು ಪೋಷಕರು ಸಹ ಇದರಲ್ಲಿಯೇ ತಮ್ಮ ಕಚೇರಿಯ (Office) ಕೆಲಸಗಳನ್ನು ಮನೆಯಲ್ಲಿಯೇ ಕುಳಿತು ಮಾಡಿಕೊಳ್ಳುವಂತಾಗಿತ್ತು. ಇದರಿಂದ ಮಕ್ಕಳಲ್ಲಿ ಮತ್ತು ದೊಡ್ಡವರ ಆರೋಗ್ಯದಲ್ಲಿ ಅನೇಕ ಸಮಸ್ಯೆಗಳು ಉಲ್ಭಣಗೊಂಡವು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಲ್ಯಾಪ್‌ಟಾಪ್, ಕಂಪ್ಯೂಟರ್ ಮತ್ತು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಗಂಟೆಗಟ್ಟಲೆ ಮುಳುಗಿರುವುದರಿಂದ ನಮ್ಮ ಕಣ್ಣುಗಳ ಮೇಲೆ ತುಂಬಾನೇ ಒತ್ತಡ ಬಿದ್ದು, ಕಣ್ಣುಗಳು ಉರಿಯುವುದಕ್ಕೆ ಮತ್ತು ನೋವಾಗುವುದಕ್ಕೆ (Pain) ಶುರುವಾದದ್ದು ಬಹುತೇಕರ ಗಮನಕ್ಕೆ ಬಂದಿರುತ್ತದೆ.

    ನಿಜವಾಗಿಯೂ ಈ ಎಲ್ಲಾ ಡಿಜಿಟಲ್ ಸಾಧನಗಳನ್ನು ಗಂಟೆಗಟ್ಟಲೆ ನೋಡುವುದರಿಂದ ಕಣ್ಣುಗಳ ಮೇಲೆ ಒತ್ತಡ ಬೀಳುವುದು ಗ್ಯಾರಂಟಿ. ಇಷ್ಟೇ ಅಲ್ಲದೆ ಯಾವುದಾದರೂ ಸಿನಿಮಾ ನೋಡುವುದಿದ್ದರೂ ಸಹ ಇದೇ ಡಿಜಿಟಲ್ ಮಾಧ್ಯಮಗಳಲ್ಲಿ ನೋಡಬೇಕಿತ್ತು. ಈಗ ಶಾಲಾ ಕಾಲೇಜುಗಳು ಶುರುವಾಗಿದ್ದು ಮಕ್ಕಳು ಆನ್‌ಲೈನ್ ತರಗತಿಗಳಿಂದಾಗುವ ಹಾನಿಗಳಿಂದ ಸ್ವಲ್ಪ ಮಟ್ಟಿಗೆ ಬಚಾವ್ ಆಗಿದ್ದಾರೆ ಎಂದು ಹೇಳಬಹುದು.

    ಬಹುತೇಕ ಕಂಪನಿಗಳು ಸಹ ಈಗ ತಮ್ಮ ಉದ್ಯೋಗಿಗಳನ್ನು ಕಂಪನಿಗೆ ಬಂದು ಕೆಲಸ ಮಾಡಲು ಹೇಳಿದ್ದಾರೆ. ಇದೆಲ್ಲಾ ಆದರೂ ಸಹ ನಾವು ಕಂಪನಿಗೆ ಹೋಗಿ ಕೆಲಸ ಮಾಡಿದರೂ ಸಹ ಅಲ್ಲಿಯೂ ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗಳ ಮುಂದೆ ಗಂಟೆಗಟ್ಟಲೆ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಇದ್ದೇ ಇರುತ್ತದೆ.

    ಇದನ್ನೂ ಓದಿ: US ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ ಅಲ್ಜೈಮರ್ ಕಾಯಿಲೆಯನ್ನು ಪತ್ತೆ ಹಚ್ಚುವ ಆ್ಯಪ್!

    ಇದಕ್ಕೆ ಮುಖ್ಯ ಕಾರಣವೆಂದರೆ ಈ ಸಾಧನಗಳಿಂದ ಹೊರ ಹೊಮ್ಮುವಂತಹ ನೀಲಿ ಬಣ್ಣದ ಬೆಳಕು ಎಂದು ಹೇಳಬಹುದು. ಈ ನೀಲಿ ಬಣ್ಣದ ಬೆಳಕು ನಮ್ಮ ಕಣ್ಣುಗಳ ಮೇಲೆ ಅತಿಯಾದ ಒತ್ತಡ ಹೇರಬಾರದು ಎಂದರೆ ನಾವು ಆಗಾಗ್ಗೆ ನಮ್ಮ ಕಣ್ಣುಗಳನ್ನು ಆ ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳ ಪರದೆಯ ಮೇಲಿಂದ ತೆಗೆದು ಬೇರೆ ಕಡೆಗೆ ನೆಡುವುದು. ಕಣ್ಣುಗಳಿಗೆ ಡ್ರಾಪ್ಸ್ ಹಾಕಿಕೊಳ್ಳುವುದು, ನಿಮ್ಮ ಕಣ್ಣುಗಳನ್ನು ಆಗಾಗ್ಗೆ ಮಧ್ಯೆ ಮಧ್ಯೆ ಮಿಟುಕಿಸುವುದು. ಇಷ್ಟೇ ಅಲ್ಲದೆ ಆಗಾಗ್ಗೆ ನೀವು ಕುಳಿತುಕೊಂಡಂತಹ ಆಸನದಿಂದ ಮೇಲಕ್ಕೆ ಎದ್ದು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯುವುದು ಆಗಿದೆ.

    ಇಷ್ಟೇ ಅಲ್ಲದೆ ನಾವು ಈ ಡಿಜಿಟಲ್ ಸಾಧನಗಳಲ್ಲಿಯೇ ಅನೇಕ ರೀತಿಯ ಸೆಟ್ಟಿಂಗ್‌ಗಳನ್ನು ಬದಲಾಯಿಸಿಕೊಂಡು ಈ ಪರದೆಗಳಿಂದ ಹೊರ ಬರುವ ನೀಲಿ ಬೆಳಕನ್ನು ಅಥವಾ ಕಿರಣಗಳನ್ನು ನಾವು ತಡೆಯಲು ನಮ್ಮ ಲ್ಯಾಪ್‌ಟಾಪ್‌ಗಳಲ್ಲಿ, ಕಂಪ್ಯೂಟರ್‌ಗಳಲ್ಲಿ ನೈಟ್ ಲೈಟ್ ಅನ್ನು ಆನ್ ಮಾಡುವುದು. ಹೀಗೆ ಮಾಡುವುದರಿಂದ ನಾವು ಆ ನೀಲಿ ಬಣ್ಣದ ಕಿರಣಗಳು ನೇರವಾಗಿ ನಮ್ಮ ಕಣ್ಣುಗಳ ಮೇಲೆ ಬೀಳುವುದನ್ನು ತಡೆಯಬಹುದಾಗಿದೆ.

    ಇದನ್ನೂ ಓದಿ: Amazon Summer Sale 2022: ಸ್ಮಾರ್ಟ್‌ಫೋನ್‌, ಟಿವಿ, ಇಯರ್‌ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್

    ನೀವು ಲ್ಯಾಪ್ಟಾಪ್ ಬಳಸುತ್ತಿದ್ದರೆ ಏನು ಮಾಡಬೇಕು?

    1. ವಿಂಡೋಸ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ನೀವು ಸೆಟ್ಟಿಂಗ್ಸ್‌ಗೆ ಹೋಗಿ ಡಿಸ್ಪ್ಲೇ ಅನ್ನು ಒತ್ತಿರಿ ಮತ್ತು ನಂತರ ಅದರಲ್ಲಿರುವ ‘ನೈಟ್ ಲೈಟ್’ ಎಂಬ ಆಯ್ಕೆಯನ್ನು ಆನ್ ಮಾಡಿರಿ.

    2. ಮ್ಯಾಕ್ ಆಪರೇಟಿಂಗ್ ಸಿಸ್ಟಮ್ ಮೇಲೆ ಕೆಲಸ ಮಾಡುತ್ತಿದ್ದರೆ, ಆ್ಯಪಲ್ ಲೋಗೋವನ್ನು ಕ್ಲಿಕ್ ಮಾಡಿ, ನಂತರ ‘ಸಿಸ್ಟಂ ಪ್ರಿಫರೆನ್ಸಸ್’ ಅನ್ನು ಆಯ್ಕೆ ಮಾಡಿ ಅದರಲ್ಲಿ ‘ನೈಟ್ ಶಿಫ್ಟ್’ ಅನ್ನು ಆಯ್ಕೆ ಮಾಡಿ.

    ನೀವು ಸ್ಮಾರ್ಟ್ಫೋನ್ ಅನ್ನು ಬಳಸುತ್ತಿದ್ದರೆ ಏನು ಮಾಡಬೇಕು?

    1. ಆಂಡ್ರಾಯ್ಡ್ ಪೋನ್‌ನಲ್ಲಿ ಸೆಟ್ಟಿಂಗ್ಸ್ ಹೋಗಿ ಡಿಸ್ಪ್ಲೇ ಆಯ್ಕೆಯನ್ನು ಒತ್ತಿರಿ ಮತ್ತು ಅದರಲ್ಲಿ ‘ಬ್ಲೂ ಲೈಟ್ ಫಿಲ್ಟರ್’ ಎಂಬ ಆಯ್ಕೆಗೆ ಸಂಬಂಧಿಸಿದಂತೆ ಆಯ್ಕೆಯನ್ನು ಒತ್ತಿರಿ.

    2. ನೀವು ಸ್ಮಾರ್ಟ್ ಟಿವಿ ನೋಡುವಾಗ ಸಹ ನಿಮ್ಮ ಕಣ್ಣುಗಳನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಲು ನೀವು ಈ ಆಧುನಿಕ ಟಿವಿಗಳಲ್ಲಿಯೂ ಸಹ ಡಿಸ್ಪ್ಲೇ ಸೆಟ್ಟಿಂಗ್ಸ್ ಗೆ ಹೋಗಿ ಅದನ್ನು ನೀವು ಬದಲಾಯಿಸಿಕೊಳ್ಳಬಹುದು. ಒಂದು ವೇಳೆ ನೀವು ಸಾದಾ ಟಿವಿಯನ್ನು ನೋಡುತ್ತಿದ್ದರೆ, ಅದರಲ್ಲಿ ನೀವು ಡಿಸ್ಪ್ಲೇ ಸೆಟ್ಟಿಂಗ್ಸ್‌ಗೆ ಹೋಗಿ ಅಲ್ಲಿರುವ ನೀಲಿ ಬಣ್ಣವನ್ನು ನಿಮ್ಮ ಕಣ್ಣಿಗೆ ಹಿತ ನೀಡುವ ಹಳದಿ ಬಣ್ಣಕ್ಕೆ ಅದನ್ನು ಬದಲಾಯಿಸಬಹುದು.
    Published by:Harshith AS
    First published: