Virus infection: ಹೀಗೆ ಮಾಡಿದ್ರೆ ಮಾತ್ರ ಐಫೋನ್ ಅಥವಾ ಆ್ಯಂಡ್ರಾಯ್ಡ್‌ ಫೋನ್‍ಗಳನ್ನು ವೈರಸ್‍ಗಳಿಂದ ರಕ್ಷಿಸಬಹುದು!

Virus Attack: ನೀವು ಸೈಬರ್ ವಂಚನೆಯ ಜಾಲಕ್ಕೆ ಬಲಿಯಾಗಬಾರದು ಎಂದಿದ್ದರೆ, ನಿಮ್ಮ ಮೊಬೈಲ್‍ನ (Mobile) ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕೆಲವು ಸಂಗತಿಗಳ ಬಗ್ಗೆ ಕಣ್ಣಿಟ್ಟು, ಅವುಗಳನ್ನು ವೈರಸ್‍ಗಳಿಂದ (Virus) ರಕ್ಷಿಸುವುದು ಅತ್ಯಗತ್ಯ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಸ್ಮಾರ್ಟ್‌ಫೋನ್‍ಗಳ (Smart phones) ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಅವುಗಳ ಮೇಲೆ ನಮ್ಮ ಅವಲಂಬನೆ ಕೂಡ ಅಧಿಕವಾಗುತ್ತಿರುವುದು, ಅತ್ಯಧಿಕ ಸಂಖ್ಯೆಯ ಸೈಬರ್ ಕ್ರೈಂಗಳಿಗೆ (Cyber Crime) ಕಾರಣವಾಗುತ್ತಿದೆ. ಅದಕ್ಕೆ, ನಿಮ್ಮ ಐಫೋನ್ (Iphone) ಅಥವಾ ಆ್ಯಂಡ್ರಾಯ್ಡ್‌ ಫೋನ್‍ಗಳ (Android Phone) ಒಳಗೆ ನಿಮಗೆ ತಿಳಿಯದ ಹಾಗೆ, ಲಿಂಕ್ (Link) ಅಥವಾ ಆ್ಯಪ್‍ಗಳ (App) ಮೂಲಕ ಪ್ರವೇಶಿಸುವ ವೈರಸ್‍ಗಳು ಕಾರಣವಾಗುತ್ತವೆ. ನಮ್ಮ ಮೊಬೈಲ್‍ಗಳನ್ನು ಪ್ರವೇಶಿಸುವ ಆ ವೈರಸ್‍ಗಳು, ನಿಮ್ಮ ಮೊಬೈಲ್‍ನ ಆಪರೇಟಿಂಗ್ ಸಿಸ್ಟಮ್‍ನ ದುರ್ಬಲ ಜಾಗಗಳನ್ನು ಟಾರ್ಗೆಟ್ (Target) ಮಾಡುತ್ತವೆ. ಅದರ ಪರಿಣಾಮವಾಗಿ, ಮೊಬೈಲ್‍ನಲ್ಲಿ ಖಾಸಗಿ ಮಾಹಿತಿ ಕಳವು, ಹಣಕಾಸಿನ ಮೋಸ ಅಥವಾ ನೆಟ್‍ವರ್ಕ್ ಕರಪ್ಶನ್ ಮುಂತಾದ ತೊಂದರೆಗಳು ಸಂಭವಿಸುತ್ತವೆ. ಎಲ್ಲಾ ಅಪ್ಲಿಕೇಶನ್‍ಗಳು (Applications) ಹಾಗಿರುವುದಿಲ್ಲವಾದರೂ, ಹಲವಾರು ಮೋಸದ ಆ್ಯಪ್‍ಗಳು (Apps), ದೋಷಪೂರಿತ ಫೈಲ್ ಅಟ್ಯಾಚ್‍ಮೆಂಟ್‍ಗಳು ಮತ್ತು ವಂಚಕ ವೆಬ್‍ಸೈಟ್‍ಗಳ ಕಾರಣದಿಂದ ಸೈಬರ್ ಅಪರಾಧಗಳು ಸಂಭವಿಸುತ್ತವೆ. ಹಾಗಾಗಿ ಇಂಟರ್‌ನೆಟ್‍ನಲ್ಲಿ ಬ್ರೌಸ್ ಮಾಡುವಾಗ ಮತ್ತು ಆ್ಯಪ್‍ಗಳನ್ನು ಮಾಡುವಾಗ ತುಂಬಾ ಜಾಗರೂಕರಾಗಿರಬೇಕು. ನೀವು ಸೈಬರ್ ವಂಚನೆಯ ಜಾಲಕ್ಕೆ ಬಲಿಯಾಗಬಾರದು ಎಂದಿದ್ದರೆ, ನಿಮ್ಮ ಮೊಬೈಲ್‍ನ (Mobile) ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕೆಲವು ಸಂಗತಿಗಳ ಬಗ್ಗೆ ಕಣ್ಣಿಟ್ಟು, ಅವುಗಳನ್ನು ವೈರಸ್‍ಗಳಿಂದ (Virus) ರಕ್ಷಿಸುವುದು ಅತ್ಯಗತ್ಯ.

  ನಿಮ್ಮ ಫೋನ್ ಅನ್ನು ವೈರಸ್ ಇನ್‍ಫೆಕ್ಷನ್‍ನಿಂದ ರಕ್ಷಿಸುವ ಮಾರ್ಗಗಳು

  ಭವಿಷ್ಯದ ವೈರಸ್‍ಗಳಿಂದ ಮತ್ತು ಸೆಕ್ಯುರಿಟಿ ಅಪಾಯಗಳಿಂದ ನಿಮ್ಮ ಮೊಬೈಲನ್ನು ಸುರಕ್ಷಿತವಾಗಿ ಇಡುವುದು ಬಹಳ ಮುಖ್ಯ. ಆ ಕುರಿತು ನೀವು ಗಮನದಲ್ಲಿ ಇಟ್ಟುಕೊಳ್ಳಬೇಕಾದ ಕೆಲವು ಸಂಗತಿಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

  1. ಸಾಮಾನ್ಯವಲ್ಲದ ಪಾಪ್ ಅಪ್‍ಗಳು ಅಥವಾ ಸಾಮಾನ್ಯವಲ್ಲದ ಟೆಕ್ಸ್ಟ್‌ ಮೆಸೇಜ್‍ಗಳಲ್ಲಿ, ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಅಥವಾ ಇಮೇಲ್‍ಗಳಲ್ಲಿ ಇರುವ ಲಿಂಕ್‍ಗಳ ಮೇಲೆ ಕ್ಲಿಕ್ ಮಾಡಬೇಡಿ. ಅಂತಹ ಲಿಂಕ್‍ಗಳು ಒಂದು ಟ್ರ್ಯಾಪ್ ಕೂಡ ಆಗಿರಬಹುದು.

  2. ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್‌ ಆ್ಯಪ್ ಸ್ಟೋರ್‌ನಂತಹ ಅಧಿಕೃತ ಆ್ಯಪ್ ಸ್ಟೋರ್‌ಗಳಿಂದಲೇ ಆ್ಯಪ್‍ಗಳನ್ನು ಇನ್‍ಸ್ಟಾಲ್ ಮಾಡಿಕೊಳ್ಳಿ. ಹಾಗಂತ ಅವುಗಳನ್ನು ಕೂಡ ಕಣ್ಣು ಮುಚ್ಚಿ ನಂಬುವಂತಿಲ್ಲ. ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್‌ನ ಆ್ಯಪ್ ಸ್ಟೋರ್‌ಗಳ ಕೆಲವು ಮಾಲ್‍ವೇರ್ ಉಳ್ಳ ಕೆಲವು ಆ್ಯಪ್‍ಗಳು ಇರಬಹುದಾದ ಸಾಧ್ಯತೆ ಇರುವುದರಿಂದ, ಯಾವುದೇ ಆ್ಯಪ್‍ಗಳನ್ನು ಡೌನ್‍ಲೋಡ್ ಮಾಡಿಕೊಳ್ಳುವ ಮೊದಲು, ಅವುಗಳ ಬಗ್ಗೆ ಕೂಲಂಕುಶವಾಗಿ ರಿಸರ್ಚ್ ಮಾಡಿಕೊಳ್ಳುವುದು ಸರಿಯಾದ ಮಾರ್ಗ.

  3. ನಿಮ್ಮ ಫೋನ್ ಅನ್ನು ಜೈಲ್‍ಬ್ರೇಕಿಂಗ್ ಅಥವಾ ಮಾಡಿಫೈ ಮಾಡುವುದನ್ನು ತಪ್ಪಿಸಿ.

  4. ಯಾವುದೇ ಆ್ಯಪ್ ಅನ್ನು ಇನ್‍ಸ್ಟಾಲ್ ಮಾಡುವ ಮೊದಲು ಆ್ಯಪ್ ಅನುಮತಿಯನ್ನು ಪರಿಶೀಲಿಸಿಕೊಳ್ಳಬೇಕು. ಹಾಗೆ ಮಾಡುವುದರಿಂದ ಆ ಆ್ಯಪ್ ನಿಮ್ಮ ಫೋನ್‍ನಿಂದ ಏನನ್ನೆಲ್ಲ ಆ್ಯಕ್ಸೆಸ್ ಮಾಡಲು ಅನುಮತಿ ಕೇಳುತ್ತಿದೆ ಎಂಬುದನ್ನು ತಿಳಿಯಬಹುದು (ಅದನ್ನು ಕಣ್ಣು ಮುಚ್ಚಿ ನಂಬುವ ಬದಲು).

  ಇದನ್ನೂ ಓದಿ: Google Chrome: ಗ್ರೂಗಲ್​​ ಕ್ರೋಮ್​ ಬಳಕೆದಾರರೇ, ತಕ್ಷಣವೇ ಬ್ರೌಸರ್ ನವೀಕರಿಸಿ

  5. ನಿಮ್ಮ ಫೋನ್ ಡಾಟಾವನ್ನು ನಿತ್ಯವೂ ಬ್ಯಾಕಪ್ ಮಾಡುವುದನ್ನು ಮರೆಯಬೇಡಿ. ಅಷ್ಟೇ ಅಲ್ಲ, ನಿಮ್ಮ ಫೋನ್‍ನಲ್ಲಿ ಹೊಸ ಸಾಫ್ಟ್‌ವೇರ್ ಆವೃತ್ತಿಗಳನ್ನು ಅಪ್‍ಡೇಟ್ ಮಾಡುತ್ತಾ ಇರಬೇಕು (ಹೊಚ್ಚ ಹೊಸ ಸೆಕ್ಯುರಿಟಿ ಪ್ಯಾಚ್‍ಗಳನ್ನು ಅವು ಹೊಂದಿರುತ್ತವೆ).

  6. ನಿಮ್ಮ ಫೋನ್‍ನಲ್ಲಿ ಯಾವುದಾದರೂ ಸಂಶಯಾಸ್ಪದ ಚಟುವಟಿಕೆಗಳು ನಡೆಯುತ್ತಿವೆಯೇ ಎಂಬುದನ್ನು ನಿರಂತರವಾಗಿ ಗಮನಿಸುತ್ತಿರಿ ಮತ್ತು ನಿಮ್ಮ ಮನಸ್ಸಿನ ಮಾತನ್ನು ನಂಬಿ. ಕೆಲವೊಂದು ಬಾರಿ ಏನಾದರೂ ನಿಜವಾಗಲು, ತೀರಾ ಒಳ್ಳೆಯದು ಅನಿಸಿದೆ, ಅದು ಬಹುಶ: ಆಗಿರಬಹುದು.

  ಇದನ್ನೂ ಓದಿ: Air Conditioner ಆನ್​ ಮಾಡಿದ್ರೆ ವಿದ್ಯುತ್​​ ಬಿಲ್​ ಜಾಸ್ತಿ ಬರುತ್ತಾ? ಕಡಿಮೆ ಬರುವಂತೆ ಮಾಡಲು ಹೀಗೆ ಮಾಡಿ

  7. ಸ್ಪೀಡ್ ಕ್ಲೀನ್, ಸೂಪರ್ ಕ್ಲೀನ್ ಮತ್ತು ರಾಕೆಟ್ ಕ್ಲೀನರ್‌ನಂತಹ “ಆಪ್ಟಿಮೈಸಿಂಗ್” ಮತ್ತು “ಕ್ಲೀನಿಂಗ್” ಆ್ಯಪ್‍ಗಳನ್ನು ಇನ್‍ಸ್ಟಾಲ್ ಮಾಡಲು ಹೋಗಬೇಡಿ. 2020 ನೇ ಫೆಬ್ರವರಿಯಲ್ಲಿ, ಲೆಕ್ಕವಿಲ್ಲದಷ್ಟು ದುರುದ್ದೇಶಪೂರಿತ ಆ್ಯಂಡ್ರಾಯ್ಡ್‌ ಆ್ಯಪ್‍ಗಳು , “ಕ್ಲೀನರ್ಸ್” ಮತ್ತು “ಆಪ್ಟಿಮೈಸರ್” ಆ್ಯಪ್‍ಗಳ ಮಾರುವೇಶದಲ್ಲಿ ಇದ್ದದ್ದು ಕಂಡು ಬಂದಿತ್ತು.
  Published by:Harshith AS
  First published: