ಉಚಿತವಾಗಿ PlayStation 5 ಆರ್ಡರ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಪ್ಲೇ ಸ್ಟೇಷನ್5 ಅನ್ನು ಲೈವ್ ಆಗಿ ಮಾರಾಟ ಮಾಡುತ್ತಿದೆ. ಗ್ರಾಹಕರು ಪ್ಲೇ ಸ್ಟೇಷನ್ 5 ಅನ್ನು ಹೇಗೆ ಆರ್ಡರ್ ಮಾಡಬಹುದು? ಈ ಬಗ್ಗೆ ಮಾಹಿತಿ ಇಲ್ಲಿದೆ.
PlayStation 5 - ಇಂದಿನಿಂದ ಪಿಎಸ್5 ಮತ್ತು ಪಿಎಸ್ 5 ಡಿಜಿಟಲ್ ಆವೃತ್ತಿಯನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ. ಅಮೆಜಾನ್, ಫ್ಲಿಪ್ಕಾರ್ಟ್, ಗೇಮ್ಸ್ ದಿ ಶಾಪ್, ಪ್ರಿಪೇಯ್ಡ್ ಗೇಮರ್ ಕಾರ್ಡ್, ರಿಲಯನ್ಸ್ ಡಿಜಿಟಲ್, ಸೋನಿ ಸೆಂಟರ್, ವಿಜಯ್ ಸೇಲ್ಸ್ನಲ್ಲಿ ಗ್ರಾಹಕರಿಗೆ ಖರೀದಿಸಲು ಸಿಗುತ್ತಿದೆ. ಅದರ ಜೊತೆಗೆ ಎಕ್ಸಿಕ್ಲೂಸೀವ್ ಆಗಿ ShopAtSCಯಲ್ಲಿ ಮಾರಾಟ ಮಾಡುತ್ತಿದೆ. ಅಂದಹಾಗೆಯೇ ಪ್ಲೇ ಸ್ಟೇಷನ್ 5 ತುಂಬಾ ಸೀಮಿತವಾಗಿದ್ದು, ಗ್ರಾಹಕರಿಗೆ ಆರ್ಡರ್ ಮತ್ತು ಖರೀದಿಸಲು ಇದು ಉತ್ತಮ ಅವಕಾಶವೆಂದು ಕಂಪನಿ ತಿಳಿಸಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಪ್ಲೇ ಸ್ಟೇಷನ್ 5 ಅನ್ನು ಲೈವ್ ಆಗಿ ಮಾರಾಟ ಮಾಡುತ್ತಿದೆ. ಗ್ರಾಹಕರು ಪ್ಲೇ ಸ್ಟೇಷನ್ 5 ಅನ್ನು ಹೇಗೆ ಆರ್ಡರ್ ಮಾಡಬಹುದು? ಈ ಬಗ್ಗೆ ಮಾಹಿತಿ ಇಲ್ಲಿದೆ.
ಸೋನಿ ಇಂಡಿಯಾ ಪ್ಲೇ ಸ್ಟೇಷನ್ 5 ಅನ್ನು ರಿಟೇಲರ್ ಸೆಂಟರ್ಗಳಲ್ಲಿ ಮಾರಾಟ ಮಾಡುತ್ತಿದೆ. ಸೋನಿ ವೆಬ್ಸೈಟ್ ಮೂಲಕ ಖರೀದಿಸಬಹುದಾಗಿದೆ. ಅಷ್ಟು ಮಾತ್ರವಲ್ಲದೆ ಉಚಿತವಾಗಿ ವಿತರಣೆ ಮಾಡುತ್ತಿದೆ. ಮೇ 24ರಿಂದ ಅಂಗಡಿಗಳಲ್ಲೂ ಖರೀದಿಸಲು ಅವಕಾಶ ಮಾಡಿಕೊಟ್ಟಿದೆ.
ಆನ್ಲೈನ್ ಮಳಿಗೆಯ ಮೂಲಕ ಖರೀದಿಸಬಹುದು!
ಅಮೆಜಾನ್ ಮೂಲಕ ಪ್ಲೇಸ್ಟೇಷನ್ 5 ಅನ್ನು ಖರೀದಿಸಬಹುದು. ಜೊತೆಗೆ ಉಚಿತವಾಗಿ ಮನೆಯ ಬಾಗಿಲಿಗೆ ಡೆಲಿವರಿ ಮಾಡುತ್ತಿದೆ. ಪ್ರೈಮ್ ಸದಸ್ಯರಲ್ಲದವರಿಗೂ ಈ ಸೌಲಭ್ಯ ಸಿಗಲಿದೆ.
ಅಮೆಜಾನ್ ಗ್ರಾಹಕರಿಗಾಗಿ ನೋ-ಕಾಸ್ಟ್ ಇಎಮ್ಐಯಲ್ಲಿ ಖರೀದಿಸುವ ಆಫರ್ ನೀಡುತ್ತಿದೆ. ಹೆಚ್ಡಿಎಫ್ಸಿ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಐಸಿಐಸಿಐ, ಎಸ್ಬಿಐ ಕಾರ್ಡ್ ಬಳಕೆದಾರರು ಈ ಸೌಲಭ್ಯ ಒದಗಿಸುತ್ತಿದೆ.
ಗೇಮ್ಸ್ ದಿ ಶಾಪ್ನಲ್ಲಿ ಪ್ಲೇಸ್ಟೇಷನ್ 5 ಅನ್ನು ಆರ್ಡರ್ ಮಾಡಬಹುದಾಗಿದೆ, ಗೇಮ್ಸ್ ಸ್ಟೋರ್ ಗೇಮ್ ಮೂಲಕ ಮನೆಯ ಬಾಗಿಲಿಗೆ ಉಚಿತವಾಗಿ ವಿತರಣೆ ಮಾಡಬಹುದಾಗಿದೆ. ಗೇಮ್ಸ್ ದಿ ಶಾಪ್ ಮೂಲಕ ಪ್ಲೇಸ್ಟೇಷನ್ 5 ಖರೀದಿಸಲು ಖಾತೆಯ ಅಗತ್ಯವಿರುವುದಿಲ್ಲ. ಆದರೆ ಇಮೇಲ್ ವಿಳಾಸ ಮುಖ್ಯ.
ಫ್ಲಿಪ್ಕಾರ್ಟ್ ಮೂಲಕ ಖರೀದಿಸಿ:
ಪ್ಲಿಪ್ಕಾರ್ಟ್ ಕೂಡ ಉಚಿತ ಹೋಮ್ ಡೆಲಿವರಿಯೊಂದಿಗೆ ಪ್ಲೇಸ್ಟೇಷನ್ 5 ಅನ್ನು ಖರೀದಿಸುವ ಅವಕಾಶ ಮಾಡಿಕೊಟ್ಟಿದೆ. ಮತ್ತೊಂದು ವಿಚಾರವೆಂದರೆ ಫ್ಲಿಪ್ಕಾರ್ಟ್ ಇಎಮ್ಐ ಆಯ್ಕೆಯಲ್ಲಿ ಖರೀದಿಸುವ ಅವಕಾಶ ಮಾಡಿಕೊಟ್ಟಿದೆ. ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರು ಖರೀದಿ ಮಾಡಬಹುದಾಗಿದೆ.
ಪ್ರಿಪೇಯ್ಡ್ ಗೇಮರ್ ಕಾರ್ಡ್:
ಬೆಂಗಳೂರು ಮೂಲದ ಆನ್ಲೈನ್ ಗೇಮ್ಸ್ ಸ್ಟೋರ್ ಪ್ರಿಪೇಯ್ಡ್ ಗೇಮರ್ ಕಾರ್ಡ್ ಮೂಲಕ ಪಿಎಸ್5 ಅನ್ನು ಆರ್ಡರ್ ಮಾಡಬಹುದಾಗಿದೆ. ಜೊತೆಗೆ ಉಚಿತ ಹೋಮ್ ಡೆಲಿವರಿ ಸೌಲಭ್ಯವನ್ನು ನೀಡುತ್ತಿದೆ.
ಗ್ರಾಹಕರಿಗೆ ಪ್ರಿಪೇಯ್ಡ್ ಗೇಮರ್ ಕಾರ್ಡ್ ಮೂಲಕ ಪ್ಲೇಸ್ಟೇಷನ್ 5 ಖರೀದಿಸಲು ಖಾತೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಮಾತ್ರವಲ್ಲದೆ ಉಚಿತವಾಗಿ ಮನೆ ಬಾಗಿಲಿಗೆ ಡೆಲಿವರಿ ಮಾಡುವ ಅವಕಾಶ ನೀಡುತ್ತಿದೆ.
ರಿಲಯನ್ಸ್ ಡಿಜಿಟಲ್
ರಿಲಯನ್ಸ್ ಡಿಜಿಟಲ್ ಮೂಲಕ ಪ್ಲೇಸ್ಟೇಷನ್ 5 ಖರೀದಿಸಬಹುದಾಗಿದೆ. ಅಂತೆಯೇ ವಿಜಯ್ ಸೇಲ್ಸ್ ಕೂಡ ಪ್ಲೇಸ್ಟೇಷನ್ 5 ಮಾರಾಟ ಮಾಡುತ್ತಿದೆ.
Published by:Harshith AS
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ