• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • Twitter: ಟ್ವೀಟ್ ಮಾಡೋಕೆ ಟೈಪ್ ಮಾಡಬೇಕಿಲ್ಲ, ಧ್ವನಿ ಬಳಸಿ ಟ್ವೀಟ್ ಮಾಡುವ ಹೊಸಾ ಆಪ್ಶನ್ ಬಂದಿದೆ..ಆಡಿಯೋ ಟ್ವೀಟ್ ಮಾಡೋದು ಹೀಗೆ...

Twitter: ಟ್ವೀಟ್ ಮಾಡೋಕೆ ಟೈಪ್ ಮಾಡಬೇಕಿಲ್ಲ, ಧ್ವನಿ ಬಳಸಿ ಟ್ವೀಟ್ ಮಾಡುವ ಹೊಸಾ ಆಪ್ಶನ್ ಬಂದಿದೆ..ಆಡಿಯೋ ಟ್ವೀಟ್ ಮಾಡೋದು ಹೀಗೆ...

ಟ್ವಿಟರ್.

ಟ್ವಿಟರ್.

Voice Tweet Feature: ಆ್ಯಪಲ್ ಐಫೋನ್ ಮತ್ತು ಐಪ್ಯಾಡ್ ಬಳಕೆದಾರರು ಕೇವಲ 2 ನಿಮಿಷ 20 ಸೆಕೆಂಡುಗಳ ಧ್ವನಿ ಟ್ವೀಟ್‍ಗಳನ್ನು ಮಾತ್ರ ರೆಕಾರ್ಡ್ ಮಾಡಬಹುದು ಮತ್ತು ಬಳಕೆಯು 2 ನಿಮಿಷ 20 ಸೆಕೆಂಡ್‌ ಮಿತಿಯನ್ನು ಮೀರಿದರೆ ಸಂದೇಶವನ್ನು ಸ್ವಯಂಚಾಲಿತವಾಗಿ ಥ್ರೆಡ್ ಎಂಬ ಆಯ್ಕೆಯಲ್ಲಿ ಇಡಲಾಗುತ್ತದೆ.

ಮುಂದೆ ಓದಿ ...
  • Share this:

Twitter: ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖ ಪಾತ್ರವಹಿಸಿದ ಟ್ವಿಟ್ಟರ್‌ ಫೇಸ್‍ಬುಕ್, ಇನ್‍ಸ್ಟಾಗ್ರಾಮ್‍ಗಿಂತ ಭಿನ್ನ. ಅಕ್ಷರಗಳ ಮಿತಿಗಳನ್ನು ಹೊಂದಿರುವ ಸಂದೇಶ ರವಾನಿಸುವ ಆನ್‍ಲೈನ್ ಸೇವೆಯಾದ ಇದರ ಬಳಕೆದಾರರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ.ಬಳಕೆದಾರ ಸ್ನೇಹಿಯಾಗಲು ಪ್ರಯತ್ನಿಸುತ್ತಿರುವ ಟ್ವಿಟ್ಟರ್‌ ಈಗಾಗಲೇ ಹಲವು ನಕಲಿ ಖಾತೆಗಳನ್ನು ತೆಗೆದುಹಾಕಿ ಹೊಸ ಹೊಸ ನಿಯಮಗಳನ್ನು ಅಳವಡಿಸುವ ಮೂಲಕ ಎಲ್ಲಾ ಸಾಮಾಜಿಕ ಜಾಲತಾಣಗಳನ್ನು ಹಿಂದಿಕ್ಕಲು ಪ್ರಯತ್ನ ನಡೆಸುತ್ತಿದೆ.ಹಾಗಾಗಿ ಟ್ವಿಟ್ಟರ್‌ ಇದೀಗ ಮತ್ತೊಂದು ಹೊಸ ಲಕ್ಷಣವನ್ನು ಅಳವಡಿಸಿಕೊಳ್ಳುತ್ತಿದೆ. ಸ್ವಯಂ-ರಚಿತ ಲೈವ್ ಟ್ರಾನ್ಸ್‌ಸಿಪ್ಷನ್‍ಗಳನ್ನು ಧ್ವನಿ ಟ್ವೀಟ್‍ಗಳೊಂದಿಗೆ ನೀಡುವ ಸಾಮರ್ಥ್ಯವನ್ನು ಟ್ವಿಟ್ಟರ್ ಇತ್ತೀಚೆಗೆ ಸೇರಿಸಿದೆ. ಈ ಹಿಂದೆ ಟ್ವಿಟ್ಟರ್‌ನಲ್ಲಿ ಸಂದೇಶ ಕಳುಹಿಸಲು ನಿಗದಿತ ಅಕ್ಷರಗಳೊಳಗೆ ಟೈಪ್ ಮಾಡಿ ಟ್ವೀಟ್ ಮಾಡಬೇಕಾಗಿತ್ತು. ಆದರೆ ಇನ್ನು ಮಂದೆ ಟ್ವೀಟ್ ಮಾಡುವುದು ಮತ್ತಷ್ಟು ಸುಲಭ. ನಿಮ್ಮ ಧ್ವನಿಯ ಮೂಲಕ ಟ್ವೀಟ್ ಕೆಲಸ ಮತ್ತಷ್ಟು ಸುಲಭ ಎನ್ನುತ್ತದೆ ಕಂಪೆನಿ. ಅಂದರೆ ಟ್ವಿಟ್ಟರ್ ಈಗಾಗಲೇ ಕಳೆದ ವರ್ಷ ಕೈ ಬರಹದ ಸಂದೇಶದ ಬದಲು ಧ್ವನಿ ಸಂದೇಶ ಮಾದರಿಯನ್ನು ಅಳವಡಿಸಿಕೊಂಡಿತ್ತು. ಈ ವೈಶಿಷ್ಟ್ಯತೆ ಪ್ರಾರಂಭದಿಂದ ಐಒಎಸ್ ಬಳಕೆದಾರರರಿಗೆ ಮಾತ್ರ ಲಭ್ಯವಿದ್ಹೊದು, ಆ್ಯಂಡ್ರಾಯ್ಡ್ ಮತ್ತು ಡೆಸ್ಕ್ಟಾಪ್ ಬಳಕೆದಾರರಿಗೆ ಸದ್ಯ ಲಭ್ಯವಿಲ್ಲ.


ಧ್ವನಿ ಸಂದೇಶ ಲಕ್ಷಣದ ಜೊತೆಗೆ ಸ್ವಯಂ-ರಚಿತ ಲೈವ್ ಟ್ರಾನ್ಸ್‌ಸಿಪ್ಷನ್‍ಗಳನ್ನು ಧ್ವನಿ ಟ್ವೀಟ್‍ಗಳೊಂದಿಗೆ ನೀಡುವ ಸಾಮರ್ಥ್ಯವನ್ನು ಟ್ವಿಟ್ಟರ್ ಸೇರಿಸಿದೆ. ಈಗ, ಆ್ಯಂಡ್ರಾಯ್ಡ್ ಮತ್ತು ಡೆಸ್ಕ್ಟಾಪ್ ಬಳಕೆದಾರರಿಗೆ ಧ್ವನಿ ಟ್ವೀಟ್‍ಗಳನ್ನು ಪೋಸ್ಟ್ ಮಾಡುವ ಸಾಮರ್ಥ್ಯವಿಲ್ಲದಿದ್ದರೂ, ಐಒಎಸ್ ಬಳಕೆದಾರರು ಪೋಸ್ಟ್ ಮಾಡಿದ ಧ್ವನಿ ಟ್ವೀಟ್‍ಗಳನ್ನು ಕೇಳಬಹುದು.


ಆ್ಯಪಲ್ ಐಫೋನ್ ಮತ್ತು ಐಪ್ಯಾಡ್ ಬಳಕೆದಾರರು ಕೇವಲ 2 ನಿಮಿಷ 20 ಸೆಕೆಂಡುಗಳ ಧ್ವನಿ ಟ್ವೀಟ್‍ಗಳನ್ನು ಮಾತ್ರ ರೆಕಾರ್ಡ್ ಮಾಡಬಹುದು ಮತ್ತು ಬಳಕೆಯು 2 ನಿಮಿಷ 20 ಸೆಕೆಂಡ್‌ ಮಿತಿಯನ್ನು ಮೀರಿದರೆ ಸಂದೇಶವನ್ನು ಸ್ವಯಂಚಾಲಿತವಾಗಿ ಥ್ರೆಡ್ ಎಂಬ ಆಯ್ಕೆಯಲ್ಲಿ ಇಡಲಾಗುತ್ತದೆ.


ಇದನ್ನೂ ಓದಿ: NEET Exam 2021: ನೀಟ್ ಪರೀಕ್ಷೆಯಲ್ಲಿ ಬದಲಾವಣೆ; ಈ ಬಾರಿ ಇರಲಿವೆ ಆಂತರಿಕ ಪ್ರಶ್ನೆಗಳು..ಮತ್ತೇನು ಹೊಸಾ ರೂಲ್ಸ್ ?

ಆದ್ದರಿಂದ, ನೀವು ಐಫೋನ್ ಮತ್ತು ಐಪ್ಯಾಡ್‍ನಲ್ಲಿ ಟ್ವಿಟ್ಟರ್ ಬಳಸುತ್ತಿದ್ದರೆ ಮತ್ತು ಈ ವೈಶಿಷ್ಟ್ಯವನ್ನು ಹೇಗೆ ಬಳಸಿಕೊಳ್ಳಬಹುದು ಎಂದು ಯೋಚಿಸುತ್ತಿದ್ದರೆ, ಇಲ್ಲಿ ನೋಡಿ..


ಹಂತ 1:ಮೊದಲು ಐಫೋನ್ ಅಥವಾ ಐಪ್ಯಾಡ್‍ನಲ್ಲಿ ನಿಮ್ಮ ಟ್ವಿಟ್ಟರ್ ಖಾತೆ ಓಪನ್ ಮಾಡಬೇಕು


ಹಂತ 2:ನೀವು ಕಳುಹಿಸುವ ಸಂದೇಶವನ್ನು ತಯಾರು ಮಾಡಿಕೊಳ್ಳಬೇಕು


ಹಂತ 3:ಧ್ವನಿ ಟ್ವೀಟ್‍ಗಳನ್ನು ಸೂಚಿಸುವ ‘wavelengths’ ಎಂಬ ಆಯ್ಕೆ ಇರುತ್ತದೆ. ಅದನ್ನು ಕ್ಲಿಕ್ ಮಾಡಿದಾಗ, ನಾವು ಕಳುಹಿಸುವ ಸಂದೇಶವನ್ನು ರೆಕಾರ್ಡ್ ಮಾಡಿಕೊಳ್ಳುತ್ತದೆ.


ಹಂತ 4:ಮುಗಿದ ನಂತರ ಡನ್ ಎಂಬ ಆಯ್ಕೆ ಕ್ಲಿಕ್ ಮಾಡಬೇಕು


ಬಳಕೆದಾರರು ಫಾಲೋ-ಅಪ್ ಟ್ವೀಟ್‍ಗಳನ್ನು ಪಠ್ಯಗಳ ಮೂಲಕ ತಮ್ಮ ಧ್ವನಿ ಟ್ವೀಟ್‍ಗಳಿಗೆ ಸೇರಿಸಬಹುದು. ಆದರೆ, ಬಳಕೆದಾರರು ತಮ್ಮ ಧ್ವನಿ ಬಳಸಿಕೊಂಡು ಟ್ವೀಟ್‍ಗಳಿಗೆ ಪ್ರತ್ಯುತ್ತರಗಳನ್ನು ಪೋಸ್ಟ್ ಮಾಡಲು ಮತ್ತು ಟ್ವೀಟ್‍ಗಳನ್ನು ಮಾಡಲು ಸಾಧ್ಯವಿಲ್ಲ. ಇದನ್ನು ಮೊದಲಿನಂತೆಯೇ ಟ್ವೀಟ್ ಮಾಡಬೇಕಾಗುತ್ತದೆ.




ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

Published by:Soumya KN
First published: