Video: ಮೊಬೈಲ್​​ನಲ್ಲಿ ಯ್ಯೂಟೂಬ್​ ವಿಡಿಯೋ ಬ್ಯಾಗ್​​ರೌಂಡ್​ ಪ್ಲೇ ಮಾಡುವುದು ಹೇಗೆ? ಇಲ್ಲಿದೆ ಟ್ರಿಕ್ಸ್​​​​​!

YouTube: ಡೆಸ್ಕ್​​ಟಾಪ್​​ ಬಳಕೆದಾರರು ಯ್ಯೂಟೂಬ್​ ಬ್ಯಾಗ್​ರೌಂಡ್​ ಪ್ಲೇ ಆಯ್ಕೆಯನ್ನುಸುಲಭವಾಗಿ ಬಳಸಬಹುದಾಗಿದೆ. ಹೊಸದೊಂದು ಟ್ಯಾಬ್​ನಲ್ಲಿ ಯ್ಯೂಟೂವ್​ ವಿಡಿಯೋ ಪ್ಲೇ ಮಾಡಿ ಬೇರೆ ಟ್ಯಾಬ್​ನಲ್ಲಿ ಕೆಲಸ ಮಾಡುತ್ತಾ ಬ್ಯಾಗ್​ರೌಂಡ್​ನಲ್ಲಿ ಪ್ಲೇ ಮಾಡುವ ಆಯ್ಕೆಯಿದೆ. ಆದರೆ ಸ್ಮಾರ್ಟ್​ಪೋನ್​ ಪ್ರಿಯರಿಗೆ ಅಂತಹದೊಂದು ಆಯ್ಕೆ ಸಿಗುವುದ ಕಷ್ಟ. ಅಂತವರಿಗೆ ಸುಲಭವಾದ ಟ್ರಿಕ್ಸ್​​ ಇಲ್ಲಿದೆ. ಸ್ಮಾರ್ಟ್​ಫೋನ್​ ಬಳಕೆದಾರರು ಕೂಡ ಯ್ಯೂಟೂಬ್​ ಬಳಸುವ ಮೂಲಕ  ಬ್ಯಾಗ್​ರೌಂಡ್​ ಪ್ಲೇ ಮಾಡಬಹುದಾಗಿದೆ.

news18-kannada
Updated:May 6, 2020, 7:22 PM IST
Video: ಮೊಬೈಲ್​​ನಲ್ಲಿ ಯ್ಯೂಟೂಬ್​ ವಿಡಿಯೋ ಬ್ಯಾಗ್​​ರೌಂಡ್​ ಪ್ಲೇ ಮಾಡುವುದು ಹೇಗೆ? ಇಲ್ಲಿದೆ ಟ್ರಿಕ್ಸ್​​​​​!
ಯ್ಯೂಟೂಬ್​ ಬ್ಯಾಗ್​ರೌಂಡ್​ ಪ್ಲೇ
  • Share this:
ಸ್ಮಾರ್ಟ್​ಫೋನ್​ ಬಳಕೆದಾರರು ದಿನದಲ್ಲಿ ಒಮ್ಮೆಯಾದರೂ ಯ್ಯೂಟೂಬ್​ ಬಳಸದೇ ಇರಲಾರರು. ಸಿನಿಮಾ ಹಾಡು ಕೇಳಲು, ಇಲ್ಲ ಟ್ರೇಲರ್​ ನೋಡಲು, ಯಾವುದೋ ಸುದ್ದಿ ವಾಹಿನಿ ಲೈವ್​​ ವೀಕ್ಷಿಸಲು ಒಮ್ಮೆಯಾದರೂ ಯ್ಯೂಟೂಬ್​​ ಅಪ್ಲಿಕೇಷನ್​ ಬಳಸಿಯೇ ಬಳಸುತ್ತೇವೆ. ಆದರೆ ಯ್ಯೂಟೂಬ್​ನಲ್ಲಿ ಬ್ಯಾಗ್​ರೌಂಡ್​ ಪ್ಲೇಬ್ಯಾಕ್​​ ಆಯ್ಕೆಯೊಂದಿದ್ದರೆ ಒಳ್ಳೆಯದಿತ್ತು ಎಂಬುದು ಅನೇಕರ ಮಾತು.

ಡೆಸ್ಕ್​​ಟಾಪ್​​ ಬಳಕೆದಾರರು ಯ್ಯೂಟೂಬ್​ ಬ್ಯಾಗ್​ರೌಂಡ್​ ಪ್ಲೇ ಆಯ್ಕೆಯನ್ನುಸುಲಭವಾಗಿ ಬಳಸಬಹುದಾಗಿದೆ. ಹೊಸದೊಂದು ಟ್ಯಾಬ್​ನಲ್ಲಿ ಯ್ಯೂಟೂವ್​ ವಿಡಿಯೋ ಪ್ಲೇ ಮಾಡಿ ಬೇರೆ ಟ್ಯಾಬ್​ನಲ್ಲಿ ಕೆಲಸ ಮಾಡುತ್ತಾ ಬ್ಯಾಗ್​ರೌಂಡ್​ನಲ್ಲಿ ಪ್ಲೇ ಮಾಡುವ ಆಯ್ಕೆಯಿದೆ. ಆದರೆ ಸ್ಮಾರ್ಟ್​ಪೋನ್​ ಪ್ರಿಯರಿಗೆ ಅಂತಹದೊಂದು ಆಯ್ಕೆ ಸಿಗುವುದು ಕಷ್ಟ. ಅಂತವರಿಗೆ ಸುಲಭವಾದ ಟ್ರಿಕ್ಸ್​​ ಇಲ್ಲಿದೆ.

ಹಂತ-1: ಆ್ಯಂಡ್ರಾಯ್ಡ್​ ಬಳಕೆದಾರರು ಗೂಗಲ್​ ಅಪ್ಲಿಕೇಶನ್​ ತೆರೆದು ಯ್ಯೂಟೂಬ್​​ ಸರ್ಚ್ ಮಾಡಿರಿ, ನಿಮಗಿಷ್ಟದ ವಿಡಿಯೋವನ್ನು ಆಯ್ಕೆ ಮಾಡಿ. ನಂತರ ಮಿನಿ ಮೈಸ್​ ಮಾಡಿರಿ.

ಹಂತ-2: ನಂತರ ಮತ್ತೆ ಗೂಗಲ್​ ಅಪ್ಲಿಕೇಷನ್​ ತೆರೆಯಿರಿ ಬಲಭಾಗದಲ್ಲಿ ಕಾಣಿಸಿಕೊಳ್ಳುವ ಮೂರು ಚುಕ್ಕಿಗಳನ್ನು ಟ್ಯಾಪ್​ ಮಾಡಿರಿ. ನಂತರ ಅಲ್ಲಿರುವ ಡೆಸ್ಕ್​ಟಾಪ್​​ ಆಯ್ಕೆಯ ಮೇಲೆ ಕ್ಲಿಕ್​​​ ಮಾಡಿರಿ.

ಹಂತ-3: ಡೆಸ್ಕ್​ಟಾಪ್​ ಆಯ್ಕೆಯನ್ನು ಕ್ಲಿಕ್​ ಮಾಡಿದ ನಂತರ ವೆಬ್​ಸೈಟ್​​ ರಿಲೋಡ್​ ಆಗುವವರೆಗೆ ತಾಳ್ಮೆವಹಿಸಿ. ಮತ್ತು ಪ್ಲೇ ಬಟನ್​​ ಟ್ಯಾಪ್​ ಮಾಡಿರಿ.

ಹಂತ-4: ನಂತರ ಮಿನಿಮೈಸ್​ ಮಾಡಿ ನೋಟಿಫಿಕೇಶನ್​​ ಪ್ಯಾನಲ್​ ತೆರೆಯಿರಿ.

ಹಂತ-5: ನೋಟಿಫಿಕೇಶನ್​ ತೆರೆದಂತೆ ವಿಡಿಯೋ ಪ್ಲೇ ಮಾಡುವ ಆಯ್ಕೆ ಕಾಣಸಿಗುತ್ತದೆ. ಟ್ಯಾಪ್​​ ಮಾಡುವ ಮೂಲಕ ಬ್ಯಾಗ್​ರೌಂಡ್​ ಪ್ಲೇ ಮಾಡಬಹುದಾಗಿದೆ.(ಆ್ಯಂಡ್ರಾಯ್ಡ್​ ಬಳಕೆದಾರರು ಈ ರೀತಿಯಾಗಿ ಯ್ಯೂಟೂಬ್​ ವಿಡಿಯೋವನ್ನು ಬ್ಯಾಗ್​ರೌಂಡ್​ ಪ್ಲೇ ಮಾಡಲು ಸುಲಭ ಟ್ರಿಕ್ಸ್​ ಇದಾಗಿದೆ)

First published: May 6, 2020, 6:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading