Online Payment without Internet: ಇಂಟರ್ನೆಟ್ ಇಲ್ಲದೆಯೇ ಆನ್‌ಲೈನ್ ಹಣ ಪಾವತಿ ಮಾಡುವ ಸ್ಮಾರ್ಟ್​​ ವಿಧಾನ ಇಲ್ಲಿದೆ

UPI without internet: ನೆಟ್​​ ಸ್ಲೋ ಇಲ್ಲವೇ ಸಿಗ್ನಲ್​ ಸಿಗದಿರುವುದು ನಿಮಗೆ ಕಿರಿಕಿರಿ ಉಂಟು ಮಾಡುತ್ತೆ. ಹಣ ಪಾವತಿಯಾಗಿದೆಯೋ, ಮುಂದೆ ಆಗುತ್ತದೆಯೋ, ಪರ್ಸ್​​​ನಲ್ಲಿರುವ ನಗದು ಹಣವನ್ನು ಕೊಡುವುದೋ ಎಂಬ ಗೊಂದಲಕ್ಕೆ ಬೀಳುತ್ತಿರಿ. ಇದನ್ನು ತಡೆಯುವ ದೃಷ್ಟಿಯಿಂದ ನೆಟ್​ ಇಲ್ಲದಿದ್ದರು ಮೊಬೈಲ್​ ಮೂಲಕ ಹಣ ಪಾವತಿಸುವ ವಿಧಾನ ಪರಿಚಯಿಸಲಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    How to pay online : 2016ರ ನೋಟ್​​ ಬ್ಯಾನ್​ ಬಳಿಕ ಭಾರತದಲ್ಲಿ ಡಿಜಿಟಲ್​ ಹಣ ಪಾವತಿಯ ವಿಧಾನ ಹೆಚ್ಚು ಮುನ್ನಲೆಗೆ ಬಂತು. ಕೊರೊನಾ ಕಾಲದಲ್ಲಂತೂ ಗ್ರಾಹಕರು ಅಂತರ ಕಾಯ್ದುಕೊಳ್ಳಲು ಆನ್​​​ಲೈನ್​​ ಪೇಮೆಂಟ್​​ನ ಹೆಚ್ಚು ಅಚ್ಚಿಕೊಂಡರು. ಎಷ್ಟೋ ಶಾಪ್​ಗಳಲ್ಲಿ ಕೇವಲ ಆನ್​​ಲೈನ್​​ ಪೇಮೆಂಟ್​ಗೆ ಮಾತ್ರ ಅವಕಾಶವಿದೆ. ಮೊಬೈಲ್​​ ಮೂಲಕ UPI ಪೇಮೆಂಟ್​​ ಮಾಡಬಹುದು. ಆದರೆ ಇನ್ನೇನು ಹಣ ವರ್ಗಾವಣೆ ಆಗಬೇಕು ಅನ್ನುವಾಗ ನೆಟ್​​ ಸಮಸ್ಯೆ ಎದುರಾಗುತ್ತದೆ. ನೆಟ್​​ ಸ್ಲೋ ಇಲ್ಲವೇ ಸಿಗ್ನಲ್​ ಸಿಗದಿರುವುದು ನಿಮಗೆ ಕಿರಿಕಿರಿ ಉಂಟು ಮಾಡುತ್ತೆ. ಹಣ ಪಾವತಿಯಾಗಿದೆಯೋ, ಮುಂದೆ ಆಗುತ್ತದೆಯೋ, ಪರ್ಸ್​​​ನಲ್ಲಿರುವ ನಗದು ಹಣವನ್ನು ಕೊಡುವುದೋ ಎಂಬ ಗೊಂದಲಕ್ಕೆ ಬೀಳುತ್ತಿರಿ. ಇದನ್ನು ತಡೆಯುವ ದೃಷ್ಟಿಯಿಂದ ನೆಟ್​ ಇಲ್ಲದಿದ್ದರು ಮೊಬೈಲ್​ ಮೂಲಕ ಹಣ ಪಾವತಿಸುವ ವಿಧಾನ ಪರಿಚಯಿಸಲಾಗಿದೆ.

    ಯುಪಿಐ ಪಾವತಿಯನ್ನು ಆಫ್‌ಲೈನ್‌ನಲ್ಲಿ ಹೇಗೆ ಮಾಡುವುದು? 

    ಯುಪಿಐ (UPI) ಬಳಸಿಕೊಂಡು ಪೇಮೆಂಟ್ ಮಾಡುವ ಸಂದರ್ಭದಲ್ಲಿ ನಿಧಾನಗತಿಯ ಇಂಟರ್ನೆಟ್‌ನಿಂದಾಗಿ ನೀವು ಸಂಕಷ್ಟ ಅನುಭವಿಸಿರಬಹುದು. ನಿಮ್ಮ ಫೋನ್ 2 ಜಿ ಇಂಟರ್ನೆಟ್ ಸಂಪರ್ಕವನ್ನು ಪಡೆದುಕೊಳ್ಳುತ್ತಿದ್ದರೆ ಯುಪಿಐ ಪೇಮೆಂಟ್ ಪ್ರಕ್ರಿಯೆ ನಡೆಸಲು ಡಿವೈಸ್ ಸಮರ್ಥವಾಗಿರುವುದಿಲ್ಲ. ಆದರೆ ಯುಪಿಐ ಅನ್ನು ಆಫ್‌ಲೈನ್‌ನಲ್ಲಿ ಕೂಡ ಬಳಸಬಹುದು ಎಂಬುದು ನಿಮಗೆ ಗೊತ್ತಿಲ್ಲದೇ ಇದ್ದರೆ  ಆ ವಿಧಾನವನ್ನು ತಿಳಿದುಕೊಳ್ಳಬಹುದಾಗಿದೆ. ಹೌದು ಈ ಲೇಖನದಲ್ಲಿ ಯುಪಿಐ ಪಾವತಿಯನ್ನು ಆಫ್‌ಲೈನ್‌ನಲ್ಲಿ ಹೇಗೆ ಮಾಡುವುದು ಎಂಬುದನ್ನು ನಾವು ತಿಳಿಸುತ್ತಿದ್ದೇವೆ. ನಿಮ್ಮ ಫೋನ್‌ನಿಂದ *99# USSD ಕೋಡ್ ಬಳಸಿಕೊಂಡು ಯುಪಿಐ ಅನ್ನು ಆಫ್‌ಲೈನ್ ಮೋಡ್‌ನಲ್ಲಿ ಬಳಸಬಹುದಾಗಿದೆ.

    *99# ಮೂಲಕ ಹಣ ಪಾವತಿಸಬಹುದು

    *99# ಸರ್ವೀಸ್ ಅನ್ನು ಎಲ್ಲಾ ಮೊಬೈಲ್ ಬಳಕೆದಾರರನ್ನೊಳಗೊಂಡಂತೆ ಪರಿಚಯಿಸಲಾಗಿದ್ದು, ಸ್ಮಾರ್ಟ್‌ಫೋನ್ ಬಳಸಲಿ ಬಳಸದೇ ಇರಲಿ ಇದು ಸಹಕಾರಿಯಾಗಿರಲಿದೆ. ನೀವು ಬಳಸುತ್ತಿರುವ ಫೋನ್ ಸಂಖ್ಯೆ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದಲ್ಲಿ ನೀವು *99# ಬಳಸಿಕೊಂಡು ಯುಪಿಐ ನ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಸ್ಮಾರ್ಟ್‌ಫೋನ್ ಬಳಕೆದಾರರಿಗೆ *99# ಮೂಲಕ ಯುಪಿಐ ಬಳಸಲು ಬಳಕೆದಾರರು ಯುಪಿಐ ಅಪ್ಲಿಕೇಶನ್‌ಗಳಿಗೆ ಪ್ರವೇಶ ಪಡೆದುಕೊಳ್ಳಬೇಕು ಆದರೆ ಫೀಚರ್ ಫೋನ್ ಬಳಕೆದಾರರು *99# USSD ಕೋಡ್ ಅನ್ನು ಬಳಸಿಕೊಂಡು ಮಾತ್ರವೇ ಯುಪಿಐ ಮೂಲಕ ಪಾವತಿ ಮಾಡಬಹುದು.

    ಇದನ್ನೂ ಓದಿ: Mobile phone users ALERT: ಮೊಬೈಲ್ ಸಿಮ್ ಖರೀದಿ ನಿಯಮದಲ್ಲಿ ದೊಡ್ಡ ಬದಲಾವಣೆ ತಂದ ಸರ್ಕಾರ.. ಏನದು?

    ನಿಮ್ಮ ಫೋನ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೀವು ಯುಪಿಐಗೆ ನೋಂದಾಯಿಸಿಕೊಳ್ಳದೇ ಇದ್ದಲ್ಲಿ ಕೆಳಗಿನ ಯುಎಸ್‌ಎಸ್‌ಡಿ ಕೋಡ್‌ಗಳನ್ನು ಅನುಸರಿಸಿಕೊಂಡು ಅದನ್ನು ಮಾಡಬಹುದಾಗಿದೆ.

    1.ಮೊದಲಿಗೆ ನಿಮ್ಮ ಫೋನ್‌ನ ಡಯಲರ್ ವಿಭಾಗ ತೆರೆಯಿರಿ. ಇಲ್ಲಿ *99# ನಮೂದಿಸಿ ಹಾಗೂ ಕಾಲ್ ಬಟನ್ ಮೇಲೆ ಸ್ಪರ್ಶಿಸಿ.
    2.ನೀವು ಸಾಕಷ್ಟು ಆಯ್ಕೆಗಳಿರುವ ಮೆನುವನ್ನು ಡಿವೈಸ್ ಸ್ಕ್ರೀನ್ ಮೇಲೆ ಕಾಣುತ್ತೀರಿ ನಾವು ಹಣವನ್ನು ಮಾತ್ರ ಕಳುಹಿಸುತ್ತಿರುವುದರಿಂದ 1 ಕ್ರಮಸಂಖ್ಯೆಯನ್ನು ಟೈಪ್ ಮಾಡಿ ಹಾಗೂ ಸೆಂಡ್ ಟ್ಯಾಪ್ ಮಾಡಿ (ಸ್ಪರ್ಶಿಸಿ).
    3.ಪಾವತಿ ಸ್ವೀಕರಿಸುವವರಿಂದ ನೀವು ಹೊಂದಿರುವ ಮಾಹಿತಿಯನ್ನು ಆಯ್ಕೆಮಾಡಿ, ಸಂಖ್ಯೆ ಟೈಪ್ ಮಾಡಿ ಸೆಂಡ್ ಸ್ಪರ್ಶಿಸಿ. ಉದಾಹರಣೆಗೆ ಯುಪಿಐ ವ್ಯಾಪಾರಿಯ ಮೊಬೈಲ್ ಸಂಖ್ಯೆ ಹೊಂದಿದ್ದಲ್ಲಿ ಕ್ರಮಸಂಖ್ಯೆ 1 ಅನ್ನು ಟೈಪ್ ಮಾಡಬೇಕು ಹಾಗೂ ಸೆಂಡ್ ಸ್ಪರ್ಶಿಸಬೇಕು.
    4.ವ್ಯಾಪಾರಿಯ ಯುಪಿಐ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ನಮೂದಿಸಿ ಹಾಗೂ ಸೆಂಡ್ ಸ್ಪರ್ಶಿಸಿ.
    5.ಅಮೌಂಟ್ ನಮೂದಿಸಿ ಸೆಂಡ್ ಒತ್ತಿ
    6.ಪೇಮೆಂಟ್‌ಗಾಗಿ ರಿಮಾರ್ಕ್ ನಮೂದಿಸಿ
    7.ವಹಿವಾಟನ್ನು ಪೂರ್ಣಗೊಳಿಸಲು ನಿಮ್ಮ ಯುಪಿಐ ಪಿನ್ ನಮೂದಿಸಿ
    8.ಇಂಟರ್ನೆಟ್ ಸಹಾಯವಿಲ್ಲದೆಯೇ ನಿಮ್ಮ ಯುಪಿಐ ವಹಿವಾಟು ಪೂರ್ಣಗೊಳ್ಳುತ್ತದೆ.

    *99# ಬಳಸಿಕೊಂಡು ಯುಪಿಐ ನಿಷ್ಕ್ರಿಯಗೊಳಿಸುವುದು ಹೇಗೆ: ಫೋನ್‌ನಲ್ಲಿ ಡೈಲರ್ ತೆರೆಯಿರಿ ಹಾಗೂ *99# ನಮೂದಿಸಿ ಆಯ್ಕೆಗಳ ಪಟ್ಟಿಯಿಂದ ಕ್ರಮಸಂಖ್ಯೆ 4 ಆರಿಸಿ 7 ಕ್ರಮಸಂಖ್ಯೆ ಟೈಪ್ ಮಾಡಿ ಮತ್ತು ಯುಪಿಐ ಯಿಂದ ನೋಂದಣಿ ರದ್ದುಗೊಳಿಸಲು ಸೆಂಡ್ ಸ್ಪರ್ಶಿಸಿ. ಯುಪಿಐನಿಂದ ನೋಂದಣಿ ರದ್ದುಗೊಳಿಸಲು ನೀವು ಬಯಸಿದ್ದರೆ ದೃಢೀಕರಿಸಲು 1 ಅನ್ನು ಒತ್ತಿ.
    Published by:Kavya V
    First published: