HOME » NEWS » Tech » HOW TO PAY ELECTRICITY BILL ONLINE USING DIGITAL PAYMENT PAYTM PHONEPE GOOGLE PAY HG

Electricity Bill: ವಿದ್ಯುತ್​​ ಬಿಲ್​ ಪಾವತಿಸಿಲ್ಲವೇ? ಹಾಗದ್ರೆ ಈ ಆ್ಯಪ್​ ಬಳಸಿ

Online Bill Payment: ಈಗಾಗಲೇ ಬಾಕಿ ಉಳಿದಿರುವ ಬಿಲ್​ಗಳನ್ನು ಸುಲಭವಾಗಿ ಪಾವತಿಸಲು ಸದ್ಯದ ಮಾರ್ಗವೊಂದಿದೆ. ಅದುವೆ ಆನ್​ಲೈನ್​ ಪಾವತಿ. ಗ್ರಾಹಕರು ಅಧಿಕೃತ ಆ್ಯಪ್​​ಗಳನ್ನು ತಮ್ಮ ಸ್ಮಾರ್ಟ್​ಪೋನ್​ನಲ್ಲಿ ಡೌನ್​ಲೋಡ್​ ಮಾಡಿಕೊಂಡು ಆನ್​ಲೈನ್​​ನಲ್ಲಿ ಪಾವತಿ ಮಾಡಬಹುದಾಗಿದೆ. ಅದಕ್ಕಾಗಿ ಸಹಾಯ ಮಾಡುವ ಕೆಲವೊಂದು ಆ್ಯಪ್​​ಗಳು ಇಲ್ಲಿವೆ..

news18-kannada
Updated:May 12, 2020, 5:29 PM IST
Electricity Bill: ವಿದ್ಯುತ್​​ ಬಿಲ್​ ಪಾವತಿಸಿಲ್ಲವೇ? ಹಾಗದ್ರೆ ಈ ಆ್ಯಪ್​ ಬಳಸಿ
ಪ್ರಾತಿನಿಧಿಕ ಚಿತ್ರ
  • Share this:
ಕೊರೋನಾ ಲಾಕ್​ಡೌನ್​ ಪ್ರಾರಂಭವಾದ ದಿನದಿಂದ ಸರ್ಕಾರಿ ಸೇರಿದಂತೆ ಅನೇಕ ಖಾಸಗಿ ಕಂಪೆನಿಗಳು ಬಾಗಿಲು ಮುಚ್ಚಿವೆ. ಹೀಗಾಗಿ ಜನರು ಕೆಲವೊಂದು ವ್ಯವಹಾರ ಮಾಡಲು ಆನ್​ಲೈನ್​ ಮೊರೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ವಿದ್ಯುತ್​ ಬಿಲ್​, ನೀರಿನ ಬಿಲ್, ಮೊಬೈಲ್​ ರೀಚಾಜ್​ ಹೀಗೆ ಅನೇಕ ಬಿಲ್​​ ಪಾವತಿಯನ್ನು ಮುಂದೂಡುತ್ತಿದ್ದಾರೆ. ಹೀಗೆ ಮಾಡಿದರೆ ಕತ್ತಲಲ್ಲಿ ದಿನ ದೂಡುವ ಪರಿಸ್ಥಿತಿ ಎದುರಾಗಬಹುದು.

ಈಗಾಗಲೇ ಬಾಕಿ ಉಳಿದಿರುವ ಬಿಲ್​ಗಳನ್ನು ಸುಲಭವಾಗಿ ಪಾವತಿಸಲು ಸದ್ಯದ ಮಾರ್ಗವೊಂದಿದೆ. ಅದುವೆ ಆನ್​ಲೈನ್​ ಪಾವತಿ. ಗ್ರಾಹಕರು ಅಧಿಕೃತ ಆ್ಯಪ್​​ಗಳನ್ನು ತಮ್ಮ ಸ್ಮಾರ್ಟ್​ಪೋನ್​ನಲ್ಲಿ ಡೌನ್​ಲೋಡ್​ ಮಾಡಿಕೊಂಡು ಆನ್​ಲೈನ್​​ನಲ್ಲಿ ಪಾವತಿ ಮಾಡಬಹುದಾಗಿದೆ. ಅದಕ್ಕಾಗಿ ಸಹಾಯ ಮಾಡುವ ಕೆಲವೊಂದು ಆ್ಯಪ್​​ಗಳು ಇಲ್ಲಿವೆ..

ಮೊಬಿಕ್ವಿಕ್​​:

ಅನೇಕರು ಆನ್​ಲೈನ್​ ಮೂಲಕ ವಿದ್ಯುತ್​​ ಬಿಲ್​ಗಳನ್ನು ಪಾವತಿ ಮಾಡುತ್ತಿದ್ದಾರೆ. ಅದಲ್ಲದೆ ಕೆಲವು ಆ್ಯಪ್​​ಗಳನ್ನು ಡೌನ್​​​ಲೋಡ್​ ಮಾಡಿಕೊಂಡು ಬಿಲ್​ ಕಟ್ಟುತ್ತಿದ್ದಾರೆ. ಕರೆಂಟ್​ ಬಿಲ್​ಗಳನ್ನು ಸುಲಭವಾಗಿ ಪಾವತಿ ಮಾಡಲು ಮೊಬಿಕ್ವಿಕ್​​ ಬೆಸ್ಟ್​ ಆ್ಯಪ್​ ಆಗಿದೆ.

ಮೊಬಿಕ್ವಿಕ್​ ಖಾತೆಯಲ್ಲಿ ಹಣ ಕ್ರೆಡಿಟ್​ ಮಾಡುವ ಮೂಲಕ ವಿದ್ಯುತ್​ ಬಿಲ್​ ಪಾವತಿಸಬಹುದಾಗಿದೆ. ಆ್ಯಪ್​​ ತೆರೆದು ಸ್ಕ್ರಾಲ್​ ಮಾಡಿದಂತೆ ವಿದ್ಯುತ್​ ಪಾವತಿ ಆಯ್ಕೆ ಕಾಣಿಸುತ್ತದೆ. ಆ ಆಯ್ಕೆಯ ಮೇಲೆ ಕ್ಲಿಕ್​ ಮಾಡಿ ಗ್ರಾಹಕ ಸಂಖ್ಯೆಯನ್ನು ನಮೂದಿಸಿದ ಬೇಕು. ಆಗ ಸ್ಕ್ರೀನ್​ ಮೇಲೆ ಎಲೆಕ್ಟ್ರಿಕ್​ ಮೊತ್ತ ತೋರಿಸುತ್ತದೆ. ನಂತರ ಪೇಮೆಂಟ್​ ವಿಭಾಗಕ್ಕೆ ತೆರಳಿ ವಿದ್ಯುತ್​ ಬಿಲ್​​​ ಪಾವತಿಸಬಹುದಾಗಿದೆ.

ಪೇಟಿಯಂ:

ಪೇಟಿಯಂ ಆ್ಯಪ್​ನಲ್ಲಿ ವಿದ್ಯುತ್​ ಬಿಲ್​, ಮೊಬೈಲ್​ ರೀಚಾರ್ಜ್​, ಟಿವಿ ರೀಚಾರ್ಜ್​, ಗ್ಯಾಸ್​ ಬಿಲ್​ ಹೀಗೆ ಆಯ್ಕೆಗಳಿರುತ್ತವೆ. ಸದ್ಯದ ಲಾಕ್​ಡೌನ್​ ಪರಿಸ್ಥಿತಿಯಲ್ಲಿ ಯಾರು ವಿದ್ಯುತ್​​​ ಮುಂತಾದ ಬಿಲ್​ಗಳನ್ನು ಪಾವತಿಸಿಲ್ಲವೋ ಅವರಿಗೆ ಈ ಆ್ಯಪ್​ ಸಹಾಯ ಮಾಡುತ್ತದೆ.ಆ್ಯಂಡ್ರಾಯ್ಡ್​ ಬಳಕೆದಾರರು ಗೂಗಲ್​ ಪ್ಲೇಸ್ಟೋರ್​​ನಲ್ಲಿ ದೊರಕುವ ಪೇಟಿಯಂ ಆ್ಯಪ್​ ಡೌನ್​ಲೋಡ್​​ ಮಾಡಿಕೊಳ್ಳಬೇಕು. ನಂತರ ಆ್ಯಪ್​​​ ತೆರೆದಂತೆ ಲಾಗಿನ್​ ಆಯ್ಕೆಯನ್ನು ಕೇಳುತ್ತದೆ. ಲಾಗಿನ್​ ಆದ ನಂತರ ಸ್ಟೇ ಎಟ್​​ ಹೋಂ ಎಸೆಸ್ಸೆಂಶಿಯಲ್​​ ಆಯ್ಕೆ ಮೇಲೆ ಕ್ಲಿಕ್​ ಮಾಡಿದರೆ ಎಲೆಕ್ಟ್ರಿಸಿಟಿ ಆಯ್ಕೆ ಕಾಣಸಿಗುತ್ತದೆ. ಆ ಆಯ್ಕೆಯ ಮೇಲೆ ಕ್ಲಿಕ್​ ಮಾಡಿ ಆನ್​​​ಲೈನ್​ ಮೂಲಕ ಹಣ ಪಾವತಿಸಬಹುದು.

ಭೀಮ್​ ಆ್ಯಪ್​​:

ನ್ಯಾಷನಲ್​​ ಪೇಮೆಂಟ್​​​​ ಕಾಪೋರೇಶನ್​​​ ಮಾಲಿಕತ್ವದ ಆ್ಯಪ್​ ಇದಾಗಿದೆ. ಆ್ಯಂಡ್ರಾಯ್ಡ್​ ಮತ್ತು ಐಒಎಸ್​ ಬಳಕೆದಾರರು ಕೂಡ ಈ ಆ್ಯಪ್​ ಅನ್ನು ಬಳಸಬಹುದಾಗಿದೆ. ಈ ಆ್ಯಪ್​ನಲ್ಲಿ ಬಿಲ್​ ಪಾವತಿ ಮಾಡುವ ಆಯ್ಕೆಯಿದೆ. ಅದರ ಮೂಲಕ ಹೊಸ ಬಿಲ್​ ಮತ್ತು ಬಾಕಿ ಇರುವ ಬಿಲ್​ಪಾವತಿ ಮಾಡಬಹುದಾಗಿದೆ.

ವಿದ್ಯುತ್​ ಮಂಡಳಿ ವೆಬ್​​​ಸೈಟ್​​:

ವಿದ್ಯುತ್​ ಮಂಡಳಿಯ ಅಧಿಕೃತ ವೆಬ್​ಸೈಟ್​ ಮೂಲಕವು ಆನ್​ಲೈನ್​ ಬಿಲ್​​ ಪಾವತಿ ಮಾಡಬಹುದಾಗಿದೆ. ಭಾರತದಲ್ಲಿ ಪ್ರತಿ ರಾಜ್ಯದಲ್ಲಿ ವಿದ್ಯುತ್​​ ಮಂಡಳಿಗಳು ತಮ್ಮದೇ ಆದ ವೆಬ್​ಸೈಟ್​ಗಳನ್ನು ಹೊಂದಿದ್ದಾರೆ. ಇದರ ಉಪಯೋಗವನ್ನು ಪಡೆದುಕೊಂಡು ವಿದ್ಯುತ್​ ಬಿಲ್​ ಪಾವತಿ ಮಾಡಬಹುದಾಗಿದೆ.

ಮುಖ್ಯ ಮಾಹಿತಿ:

ವಿದ್ಯುತ್​​ ಮತ್ತು ಇತರೆ ಬಿಲ್​ಗಳ ಪಾವತಿ ಆಯ್ಕೆಯನ್ನು ಹೊಂದಿರುವ ಮೊಬಿಕ್ವಿಲ್​, ಭೀಮ್​, ಪೆಟಿಯಂ ಆ್ಯಪ್​​ಗಳು ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಸಿಗಲಿದೆ. ಸ್ಮಾರ್ಟ್​ಫೋನ್​ ಬಳಕೆದಾರರು ಅಧಿಕೃತ ಆ್ಯಪ್​​ಗಳನ್ನು ಪ್ಲೇಸ್ಟೋರ್​ ಮೂಲಕ ಡೌನ್​​​ಲೋಡ್​ ಮಾಡಿ ಬಿಲ್​ ಪಾವತಿ ಮಾಡಬಹುದಾಗಿದೆ. ಇನ್ನು ಐಒಎಸ್​​ ಬಳಕೆದಾರರು ಆ್ಯಪ್​ ಸ್ಟೋರ್​ ಮೂಲಕ ಆ್ಯಪ್ ಡೌನ್​ಲೋಡ್​ ಮಾಡಬಹುದಾಗಿದೆ.

coronavirus hairstyle: ಈ ದೇಶದಲ್ಲಿ ಟ್ರೆಂಡ್​ ಆಗುತ್ತಿದೆ ‘ಕೊರೋನಾ​​ ಹೇರ್​​ಸ್ಟೈಲ್‘​​!
First published: May 12, 2020, 5:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories