Paytm: ಕಾಲೇಜು ಶುಲ್ಕ ಪಾವತಿಸಿಲ್ವಾ? ಪೇಟಿಎಂ ಆ್ಯಪ್ ಮೂಲಕ ಹೀಗೆ ಪಾವತಿಸಿ

Paytm: ಪೇಟಿಎಂ ಆ್ಯಪ್ ಅಥವಾ ಪೇಟಿಎಂ ವೆಬ್‍ಸೈಟ್ ಮೂಲಕ ಕಾಲೇಜು ಅಥವಾ ಶಿಕ್ಷಣ ಶುಲ್ಕವನ್ನು ಪಾವತಿಸಬೇಕಿದ್ದರೆ, ಅದನ್ನು ಯಾವ ರೀತಿ ಮಾಡಬಹುದು ಎಂಬುದನ್ನು ಹಂತ ಹಂತವಾಗಿ ಇಲ್ಲಿ ತಿಳಿಸಲಾಗಿದೆ.

paytm / ಪೇಟಿಎಂ

paytm / ಪೇಟಿಎಂ

  • Share this:
    ಕೊರೊನಾ ವೈರಸ್ (Corona Virus) ಸಾಂಕ್ರಾಮಿಕದ ಮಹಾಸ್ಫೋಟದ ಕಾರಣದಿಂದ ಇಡೀ ಜಗತ್ತಿನ ಜೀವನ ಶೈಲಿಯಲ್ಲಿ ಬದಲಾವಣೆ ಆಗಿದೆ. ಮನೆಯಲ್ಲಿದ್ದುಕೊಂಡೇ ತಮ್ಮ ಕೆಲಸಗಳನ್ನು ಮಾಡುವುದಕ್ಕೆ ಪ್ರಾಶಸ್ತ್ಯ ನೀಡುತ್ತಿದ್ದಾರೆ ಜನರು. ಹಾಗಾಗಿ ಈಗ ವಿಶ್ವದಲ್ಲಿ ಬಹುಪಾಲು ಎಲ್ಲವೂ ಆನ್‍ಲೈನ್‍ಮಯ (Online). ಈ ದಿನಗಳಲ್ಲಿ ಹೆಚ್ಚಿನ ಕೆಲಸಗಳನ್ನು ಆನ್‍ಲೈನ್ ಮೂಲಕವೇ ಮುಗಿಸಲು ಸಾಧ್ಯವಿದೆ. ಮನೆಯಿಂದಲೇ ಕೆಲಸ ಮಾಡುವುದರಿಂದ (Work From Home) ಹಿಡಿದು ಶಿಕ್ಷಣ (Education) ಪಡೆಯುವುದರವರೆಗೆ, ದಿನಸಿ ಸಾಮಾನುಗಳನ್ನು ಖರೀದಿಸುವುದರಿಂದ ಹಿಡಿದು ಬಟ್ಟೆಗಳನ್ನು (Dress) ಕೊಳ್ಳುವುದರವರೆಗೆ ಎಲ್ಲಾ ಕೆಲಸಗಳನ್ನು ಆನ್‍ಲೈನ್ ಸಹಾಯದಿಂದ, ಒಂದೇ ಒಂದು ಕ್ಲಿಕ್‍ನ ಮೂಲಕ ಕೂತಲ್ಲೇ ಮುಗಿಸಿ ಬಿಡಬಹುದು. ಅದೇ ರೀತಿ, ಆನ್‍ಲೈನ್ ಮೂಲಕ ಕಾಲೇಜು ಶುಲ್ಕವನ್ನು (College Fees) ಕೂಡ ಕಟ್ಟಲು ಸಾಧ್ಯವಿದೆ. ನೀವು ಪೇಟಿಎಂ (Paytm) ಬಳಕೆದಾರರಾಗಿದ್ದರೆ, ನಿಮ್ಮ ಶಿಕ್ಷಣ ಶುಲ್ಕವನ್ನು ಆ ಆ್ಯಪ್ ಮೂಲಕವೇ ಪಾವತಿಸುವ ಆಯ್ಕೆ ಇದೆ.

    ಅದಕ್ಕಾಗಿ ಮೊದಲು ನೀವು ಪೇಟಿಎಂ ಆ್ಯಪ್ ಅನ್ನು ಇನ್‍ಸ್ಟಾಲ್ ಮಾಡಿಕೊಳ್ಳಬೇಕು, ಪೇಟಿಎಂ ಡಿಜಿಟಲ್ ವ್ಯಾಲೆಟ್ ಅನ್ನು ಆ್ಯಕ್ಟಿವೇಟ್ ಮಾಡಬೇಕು, ಬಳಿಕ ಅದಕ್ಕೆ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಬೇಕು, ಒಂದು ಪೇಟಿಎಂ ಬ್ಯಾಂಕ್ ಉಳಿತಾಯ ಖಾತೆಯನ್ನು ತೆರೆಯಬೇಕು ಮತ್ತು ಕಾಲೇಜು ಶುಲ್ಕವನ್ನು ಕಟ್ಟಬೇಕು. ಪೇಟಿಎಂ ಮಾತ್ರವಲ್ಲ, ಗೂಗಲ್ ಪೇ, ಫೋನ್ ಪೇ ಮತ್ತಿತರ ಕೆಲವು ಆ್ಯಪ್‍ಗಳ ಮೂಲಕವೂ ಆನ್‍ಲೈನ್ ಪಾವತಿ ಮಾಡಬಹುದು.

    ಪೇಟಿಎಂ ಆ್ಯಪ್ ಅಥವಾ ಪೇಟಿಎಂ ವೆಬ್‍ಸೈಟ್ ಮೂಲಕ ಕಾಲೇಜು ಅಥವಾ ಶಿಕ್ಷಣ ಶುಲ್ಕವನ್ನು ಪಾವತಿಸಬೇಕಿದ್ದರೆ, ಅದನ್ನು ಯಾವ ರೀತಿ ಮಾಡಬಹುದು ಎಂಬುದನ್ನು ಹಂತ ಹಂತವಾಗಿ ಇಲ್ಲಿ ತಿಳಿಸಲಾಗಿದೆ. ಆದರೆ, ನೀವು ಆನ್‍ಲೈನ್ ಮೂಲಕ ಕಾಲೇಜು ಶುಲ್ಕವನ್ನು ಪಾವತಿಸುವಾಗ ಕೆಲವೊಂದು ವಿಷಯಗಳ ಕುರಿತು ಎಚ್ಚರಿಕೆ ವಹಿಸಬೇಕಾಗುತ್ತದೆ. ನೀವು ನಿಮ್ಮ ಶಿಕ್ಷಣ ಸಂಸ್ಥೆಯ ವಿವರವನ್ನು ಅತ್ಯಂತ ಜಾಗರೂಕತೆಯಿಂದ ದಾಖಲಿಸಬೇಕು. ಅಷ್ಟೇ ಅಲ್ಲ, ಆನ್‍ಲೈನ್ ಪಾವತಿ ಮಾಡುವಾಗ ಸ್ಥಿರವಾದ ಇಂಟರ್‌ನೆಟ್‌ ಸಂಪರ್ಕವನ್ನು ಬಳಸಿ ಮತ್ತು ನಿಮ್ಮ ಪೇಟಿಎಂ ವ್ಯವಹಾರದ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

    ಇದನ್ನು ಓದಿ: Google Chrome ಬಳಕೆದಾರರೇ ಹುಷಾರ್; ಸರ್ಕಾರದಿಂದ ಬಂದಿದೆ ಹೊಸ ಎಚ್ಚರಿಕೆ ಸಂದೇಶ

    ಪೇಟಿಎಂ ಆ್ಯಪ್ ಮೂಲಕ ಕಾಲೇಜು ಶುಲ್ಕ ಪಾವತಿಸುವ ವಿಧಾನ

    1. ನಿಮ್ಮ ಸ್ಮಾರ್ಟ್‍ಫೋನ್‍ನಲ್ಲಿ ಪೇಟಿಎಂ ಆ್ಯಪ್ ಇನ್‍ಸ್ಟಾಲ್ ಮಾಡಿ ಮತ್ತು ಲಾಗಿನ್ ಆಗಿರಿ.

    2. ‘ರೀಚಾರ್ಜ್ ಮತ್ತು ಬಿಲ್ ಪೇಮೆಂಟ್ಸ್’ ವಿಭಾಗಕ್ಕೆ ಹೋಗಿ.

    3. ಆ ನಂತರ, ‘ಅದರ್ ಸರ್ವೀಸಸ್’ ವಿಭಾಗದಲ್ಲಿರುವ ‘ಎಜುಕೇಶನ್ ಫೀಸ್’ ಆಯ್ಕೆಯನ್ನು ಒತ್ತಿರಿ.

    4. ಕಾಲೇಜಿನ ಲೊಕೇಶನ್ ಅನ್ನು ಆಯ್ಕೆ ಮಾಡಿ, ಕಾಲೇಜಿನ ಹೆಸರು ಮತ್ತು ಅದು ಇರುವ ಪ್ರದೇಶದ ಹೆಸರನ್ನು ನಮೂದಿಸಿ.

    5. ಕೊನೆಯದಾಗಿ, ನೀವು ಕಾಲೇಜಿನ ಮಾರ್ಗಸೂಚಿಗೆ ಅನುಗುಣವಾಗಿ ಎಲ್ಲಾ ಅಗತ್ಯ ಮಾಹಿತಿಗಳನ್ನು ನಮೂದಿಸಬೇಕಾಗುತ್ತದೆ. ಈ ಎಲ್ಲಾ ಅವಶ್ಯಕ ಪ್ರಕ್ರಿಯೆಗಳು ಮುಗಿದ ಬಳಿಕ, ‘ಪ್ರೊಸೀಡ್’ ಆಯ್ಕೆಯನ್ನು ಒತ್ತುವ ಮೂಲಕ ನಿಮ್ಮ ಶುಲ್ಕನ್ನು ಆನ್‍ಲೈನ್‍ನಲ್ಲಿ ಪಾವತಿಸಬಹುದು.

    ಇದನ್ನು ಓದಿ: Infinix Zero 5G: ಪ್ರೇಮಿಗಳ ದಿನದಂದು ಬಿಡುಗಡೆಗೊಳ್ಳಲಿದೆ ಇನ್ಫಿನಿಕ್ಸ್​ ಝಿರೋ 5G ಸ್ಮಾರ್ಟ್​ಫೋನ್​

    ಪೇಟಿಎಂ ವೆಬ್‍ಸೈಟ್ ಮೂಲಕ ಕಾಲೇಜು ಶುಲ್ಕ ಪಾವತಿಸುವ ವಿಧಾನ

    ಹಂತ 1:
    ನೀವು ಬಳಸುವ ಬ್ರೌಸರ್ ತೆರೆಯಿರಿ ಮತ್ತು ಪೇಟಿಎಂ ವೆಬ್‍ಸೈಟ್‍ಗೆ ಸೈನ್ ಇನ್ ಆಗಿ.

    ಹಂತ 2:
    ‘ರಿಚಾರ್ಜ್ ಅಂಡ್ ಪೇ ಬಿಲ್ಸ್ ಆನ್ ಪೇಟಿಎಂ’ ಆಯ್ಕೆಯನ್ನು ಹುಡುಕಿರಿ ಮತ್ತು ‘ಎಜುಕೇಶನ್’ ಎಂಬ ಆಯ್ಕೆಯನ್ನು ಮೇಲೆ ಕ್ಲಿಕ್ ಮಾಡಿ.

    ಹಂತ 3 :
    ಆ ಬಳಿಕ ನೀವು, ಕಾಲೇಜಿನ ಲೊಕೇಶನ್, ಹೆಸರು, ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಕಾಲೇಜಿನ ಮಾರ್ಗಸೂಚಿಯಲ್ಲಿ ತಿಳಿಸಿರುವ ಶುಲ್ಕದ ವಿವರಗಳನ್ನು, ದಾಖಲಾತಿ ಸಂಖ್ಯೆ ಅಥವಾ ಗುರುತಿನ ಸಂಖ್ಯೆಯನ್ನು ನಮೂದಿಸಬೇಕು.

    ಹಂತ 4 :
    ನಂತರ, ಆನ್‍ಲೈನ್‍ನಲ್ಲಿ ಕಾಲೇಜು ಶುಲ್ಕ ಪಾವತಿಸಲು ‘ಪ್ರೊಸೀಡ್’ ಆಯ್ಕೆಯನ್ನು ಒತ್ತಿರಿ.
    Published by:Harshith AS
    First published: