ಟೆಲಿಗ್ರಾಮ್ (Telegram) ಒಂದು ಮೆಸೇಜಿಂಗ್ ಅಪ್ಲಿಕೇಶನ್ (Messaging Application) ಆಗಿದೆ. ಆದರೆ ಯಾವಾಗ ವಾಟ್ಸಪ್ (Whatsapp) ಜಾಗತಿಕವಾಗಿ ಕಾಲಿಟ್ಟಿತೋ ಟೆಲಿಗ್ರಾಮ್ ಬಳಕೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತನೇ ಹೋಯಿತು. ಆದರೆ ಇತ್ತೀಚೆಗೆ ವಾಟ್ಸಪ್ಗೆ ಟಕ್ಕರ್ ನೀಡುವಂತಹ ಒಂದು ಮೆಸೇಜಿಂಗ್ ಅಪ್ಲಿಕೇಶನ್ ಇದ್ದರೆ ಅದು ಟೆಲಿಗ್ರಾಮ್ ಅಂತಾನೇ ಹೇಳ್ಬಹುದು. ಇದು ವಾಟ್ಸಪ್ನಂತೆ ಮೆಸೇಜ್ ಮಾಡುವಂತಹ ಫೀಚರ್ಸ್ ಅನ್ನು ಹೊಂದಿದ್ದು, ಅದಕ್ಇಂತಲೂ ಇನ್ನೂ ಹಲವಾರು ಫೀಚರ್ಸ್ಗಳನ್ನು ಇದು ಹೊಂದಿದೆ. ಸದ್ಯ ಟೆಲಿಗ್ರಾಮ್ ಅಪ್ಲಿಕೇಶನ್ ಕೇವಲ ಸಿನೆಮಾಗಳನ್ನು (Cinema) ಶೇರ್ ಮಾಡಲು, ಡೌನ್ಲೋಡ್ (Download) ಮಾಡುವ ಪ್ರಕ್ರಿಯೆಯಲ್ಲಿ ಬಹಳಷ್ಟು ಮುಂಚೂಣಿಯಲ್ಲಿದೆ. ಇನ್ಮುಂದೆ ಟೆಲಿಗ್ರಾಮ್ ಅನ್ನು ಸಿಮ್ ಇಲ್ಲದೆಯೇ ಬಳಕೆ ಮಾಡಬಹುದಾಗಿದೆ.
ಹೌದು, ಟೆಲಿಗ್ರಾಮ್ ಒಂದು ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿದ್ದು ಇದು ಹಲವಾರು ಫೀಚರ್ಸ್ಗಳನ್ನು ಒಳಗೊಂಡಿದೆ. ಇದರ ಫೀಚರ್ಸ್ ಮೂಲಕವೇ ಹೆಚ್ಚು ಗ್ರಾಹಕರನ್ನು ಹೊಂದಿದ್ದು, ಇದೀಗ ಸಿಮ್ ಇಲ್ಲದೆಯೂ ಟೆಲಿಗ್ರಾಮ್ ಅನ್ನು ಬಳಕೆ ಮಾಡುವಂತಹ ಫೀಚರ್ಸ್ ಅನ್ನು ಬಿಡುಗಡೆ ಮಾಡಿದೆ. ಹಾಗಿದ್ರೆ ನಿಮಗೂ ಸಿಮ್ ಬಳಕೆ ಮಾಡದೇ ಟೆಲಿಗ್ರಾಮ್ ಓಪನ್ ಮಾಡ್ಬೇಕಾ ಇಲ್ಲಿದೆ ಓದಿ ಕಂಪ್ಲೀಟ್ ಡಿಟೇಲ್ಸ್.
ಹೊಸ ಫೀಚರ್ಸ್ನೊಂದಿಗೆ ಟೆಲಿಗ್ರಾಮ್ ಸೈನ್ ಇನ್ ಮಾಡಿ
ಟೆಲಿಗ್ರಾಮ್ ಅಪ್ಲಿಕೇಶನ್ ಅನ್ನು ಲಾಗಿನ್ ಆಗ್ಬೇಕಾದ್ರೆ ಸಿಮ್ ಅಥವಾ ಮೊಬೈಲ್ ನಂಬರ್ ಬೇಕೇ ಬೇಕು. ಆದರೆ ಇನ್ಮುಂದೆ ಟೆಲಿಗ್ರಾಮ್ ಸೈನ್ ಇನ್ ಆಗಲು ಯಾವುದೇ ಸಿಮ್ ಅಥವಾ ನಂಬರ್ನ ಅಗತ್ಯವಿಲ್ಲ. ಸಿಮ್ಗಳ ಸಹಾಯವಿಲ್ಲದೆಯೇ ಡೈರೆಕ್ಟ್ ಆಗಿ ಲಾಗಿನ್ ಆಗಬಹುದಾಗಿದೆ. ಅದಕ್ಕಾಗಿ ಟೆಲಿಗ್ರಾಮ್ ನೋ ಸಿಮ್ ಸೈನ್ ಇನ್ ಫೀಚರ್ಸ್ ಅನ್ನು ಪರಿಚಯಿಸಿದೆ. ಈ ಮೂಲಕ ಯಾವುದೇ ಸಿಮ್ ಅಥವಾ ನಂಬರ್ ಅನ್ನು ಕನೆಕ್ಟ್ ಮಾಡದೆಯೇ ಟೆಲಿಗ್ರಾಮ್ ಅನ್ನು ಓಪನ್ ಮಾಡಬಹುದಾಗಿದೆ.
ಇದನ್ನೂ ಓದಿ: ವರ್ಕ್ ಫ್ರಮ್ ಹೋಮ್ನಲ್ಲಿದ್ದೀರಾ? ಬಂದಿದೆ ನೋಡಿ ಬಿಎಸ್ಎನ್ಎಲ್ನ ಹೊಸ ರೀಚಾರ್ಜ್ ಪ್ಲಾನ್ಸ್
ಇದು ಬಳಕೆದಾರರ ಪ್ರೈವಸಿಗೆ ಉತ್ತಮ
ಸಾಮಾನ್ಯವಾಗಿ ಟೆಲಿಗ್ರಾಮ್ ತನ್ನ ಬಳಕೆದಾರರು ಸಿಮ್ ಅಥವಾ ಮೊಬೈಲ್ ನಂಬರಿಂದ ಲಾಗಿನ್ ಆಗಿದ್ದರು ಅಪರಿಚಿತರಿಗೆ ಮೊಬೈಲ್ ನಂಬರ್ ಅನ್ನು ತೋರಿಸುವುದಿಲ್ಲ. ಈ ಕಾರಣಕ್ಕಾಗಿಯೇ ಟೆಲಿಗ್ರಾಮ್ ಬಳಕೆದಾರರ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಶನ್ ಎಂದೆನಿಸಿದೆ. ಇದರಿಂದ ಬಳಕೆದಾರರ ಮಾಹಿತಿ ಯಾರಿಗೂ ತಿಳಿಯುವುದಿಲ್ಲ. ಇನ್ನು ಹೊಸದಾಗಿ ನೋ ಸಿಮ್ ಸೈನ್ ಇನ್ ಫೀಚರ್ಸ್ ಮಾತ್ರ ಇನ್ನಷ್ಟು ಬಳಕೆದಾರರ ಪ್ರೈವಸಿಯನ್ನು ಕಾಪಾಡುತ್ತದೆ.
ಫ್ರಾಗ್ಮೆಂಟ್ ಬ್ಲಾಕ್ಚೈನ್ ಪ್ಲಾಟ್ಫಾರ್ಮ್
ಟೆಲಿಗ್ರಾಮ್ನಲ್ಲಿ ನೋ ಸಿಮ್ ಸೈನ್ ಇನ್ ಫೀಚರ್ ಅನ್ನು ಬಳಸಬೇಕಾದರೆ ಅದಕ್ಕಾಗಿ ಫ್ರಾಗ್ಮೆಂಟ್ ಬ್ಲಾಕ್ಚೈನ್ ಎಂಬ ಪ್ಲಾಟ್ಫಾರ್ಮ್ ಅನ್ನು ಬಳಸಬೇಕಾಗುತ್ತದೆ.ಫ್ರಾಗ್ಮೆಂಟ್ ಪ್ಲಾಟ್ಫಾರ್ಮ್ನಲ್ಲಿ ಲಭ್ಯವಿರುವ ಬ್ಲಾಕ್ಚೈನ್ ಚಾಲಿತ ಗುರುತೇ ಇಲ್ಲದ ಸಂಖ್ಯೆಗಳನ್ನು ಬಳಸುವುದಕ್ಕೆ ನಿಮಗೆ ಅನುಮತಿ ನೀಡುತ್ತದೆ. ಇದರಲ್ಲಿ ಯಾವುದಾದರೂ ಸಂಖ್ಯೆಯನ್ನು ಆಯ್ಕೆ ಮಾಡುವ ಮೂಲಕ ಟೆಲಿಗ್ರಾಮ್ ಅನ್ನು ಲಾಗ್ ಇನ್ ಮಾಡಬಹುದು. ಫ್ರಾಗ್ಮೆಂಟ್ ಬ್ಲಾಕ್ಚೈನ್ ಮೂಲಕ ಟೆಲಿಗ್ರಾಮ್ನಲ್ಲಿ ಸಿಮ್ ಇಲ್ಲದೆ ಸೈನ್ ಇನ್ ಆಗಲು ಈ ಕ್ರಮಗಳನ್ನು ಅನುಸರಿಸಿ.
ಮೊಬೈಲ್ ನಂಬರ್ ಇಲ್ಲದೆ ಟೆಲಿಗ್ರಾಮ್ಗೆ ಸೈನ್ ಇನ್ ಹೇಗೆ ಆಗುವುದು/
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ