ಸಾಮಾಜಿಕ ತಾಣಗಳು (Social Media) ಒಮ್ಮೊಮ್ಮೆ ಪ್ರಯೋಜನಕಾರಿಯಾದರೆ ಒಮ್ಮೊಮ್ಮೆ ಅವುಗಳಷ್ಟು ಕಿರಿಕಿರಿಯನ್ನುಂಟು ಮಾಡುವ ತಾಣಗಳು ಬೇರೊಂದಿರುವುದಿಲ್ಲ. ಫೇಸ್ಬುಕ್ (Facebook), ಟ್ವಿಟರ್(Twitter), ಇನ್ಸ್ಟಾಗ್ರಾಮ್ಗಳು (Instagram) ಸಂವಹನ ನಡೆಸುವ ತಾಣಗಳಾಗಿ ಸಮುದಾಯದಲ್ಲಿ ಹೆಸರು ಮಾಡಿದ್ದರೂ ಅವುಗಳ ನೋಟಿಫಿಕೇಶನ್ಗಳು (Notification) ಸಂವಹನಗಳಿಗೆ ಸಹಕಾರಿ ಎಂದೆನಿಸಿದರೂ ಕೆಲವೊಮ್ಮೆ ಬಹಳಷ್ಟು ಕಿರಿಕಿರಿಯನ್ನುಂಟು ಮಾಡುತ್ತವೆ. ಆದರೆ ಈ ಕಿರಿಕಿರಿಯಿಂದ ದೂರವಾಗಲು ದಾರಿಯು ಇದೆ. ಹಾಗದ್ರೆ ಹೇಗೆ ಈ ನೋಟಿಫಿಕೇಶನನ್ನು ನಿರ್ವಹಿಸುವುದು ಅನ್ನುವುದನ್ನು ತಿಳಿಯೋಣ ಬನ್ನಿ.
ಕಿರಿಕಿರಿ ಉಂಟುಮಾಡುವ ಫೇಸ್ಬುಕ್ ನೋಟಿಫಿಕೇಶನ್ಗಳು
ಫೇಸ್ಬುಕ್ ನೋಟಿಫಿಕೇಶನ್ಗಳ ವಿಷಯವನ್ನೇ ತೆಗೆದುಕೊಂಡರೆ ಇದು ನಿಮ್ಮ ಸಂವಾದಕ್ಕೆ ಸಹಕಾರಿಯಾಗಿದ್ದರೂ ಅಧಿಸೂಚನೆಗಳು ಒಮ್ಮೆಮ್ಮೆ ಏಕಾಏಕಿಯಾಗಿ ಬಂದಾಗ ಕಿರಿಕಿರಿ ಎಂದೇ ಅನಿಸಿಬಿಡುತ್ತದೆ. ಹೀಗಾದಾಗ ಈ ನೋಟಿಫಿಕೇಶನ್ಗಳನ್ನು ಆಫ್ ಮಾಡಲೇಬೇಕಾದ ಅನಿವಾರ್ಯತೆ ಬಂದೊದಗುತ್ತದೆ. ಹಾಗಿದ್ದರೆ ಅದನ್ನು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಡೆಸ್ಕ್ಟಾಪ್ನಲ್ಲಿ ನೋಟಿಫಿಕೇಶನ್ ಆಫ್ ಮಾಡುವುದು
ನಿಮ್ಮ ಡೆಸ್ಕ್ಟಾಪ್ನಲ್ಲಿಯೇ ಫೇಸ್ಬುಕ್ ನೋಟಿಫಿಕೇಶನ್ಗಳನ್ನು ಆಫ್ ಮಾಡಲು ಸೆಟ್ಟಿಂಗ್ಸ್ ಹಾಗೂ ಪ್ರೈವಸಿ > ಸೆಟ್ಟಿಂಗ್ಸ್ > ನೋಟಿಫಿಕೇಶನ್ಸ್ ಇಲ್ಲಿಗೆ ಹೋಗಿ. ನಿಮಗೆ ಸೂಚನೆ ನೀಡುವ ಕೆಲಸವನ್ನು ನೋಟಿಫಿಕೇಶನ್ ಮಾಡುತ್ತದೆ. ನೋಟಿಫಿಕೇಶನ್ ಸ್ವೀಕರಿಸುವ ಬಗೆಯನ್ನು ನೀವು ಆರಿಸಬಹುದು.
ಇಲ್ಲದಿದ್ದರೆ ನೀವು ಸಂಪೂರ್ಣವಾಗಿ ಇದನ್ನು ಆಫ್ ಮಾಡಬಹುದು. ಅಪ್ಲಿಕೇಶನ್ನಲ್ಲಿ ಕೆಳಭಾಗದಲ್ಲಿ ಮೆನು ಬಟನ್ ಸ್ಪರ್ಶಿಸಿ ಹಾಗೂ ಹಾಗೂ ಸೆಟ್ಟಿಂಗ್ಸ್ > ನೋಟಿಫಿಕೇಶನ್ಸ್ > ನೋಟಿಫಿಕೇಶನ್ ಸೆಟ್ಟಿಂಗ್ಸ್ ಇಲ್ಲಿಗೆ ಹೋಗಿ. ನೀವಿಲ್ಲಿ ನೋಟಿಫಿಕೇಶನ್ ಆನ್ ಅಥವಾ ಆಫ್ ಮಾಡಬಹುದು.
ಡೆಸ್ಕ್ಟಾಪ್ನಲ್ಲಿ ಫೇಸ್ಬುಕ್ ನೋಟಿಫಿಕೇಶನ್ ನಿರ್ವಹಣೆ ಹಾಗೂ ಆಫ್ ಮಾಡುವುದು ಹೇಗೆ
ಸೆಟ್ಟಿಂಗ್ಗಳ ಮೆನುವಿನಲ್ಲಿ ನೀವು ಈ ಕ್ರಿಯೆಗಳನ್ನು ನಡೆಸಬಹುದಾಗಿದೆ. ಪುಟದ ಬಲ ಮೇಲ್ಭಾಗದಲ್ಲಿ ನಿಮ್ಮ ಪ್ರೊಫೈಲ್ ಕ್ಲಿಕ್ ಮಾಡಿ ಹಾಗೂ ಮೆನುವಿನಲ್ಲಿ ಇದು ಗೋಚರಿಸುತ್ತದೆ ಸೆಟ್ಟಿಂಗ್ಸ್ ಹಾಗೂ ಗೌಪ್ಯತೆ > ಸೆಟ್ಟಿಂಗ್ಸ್ > ನೋಟಿಫಿಕೇಶನ್ಸ್ಗೆ ಹೋಗಿ.
ಅಧಿಸೂಚನೆ ಸೆಟ್ಟಿಂಗ್ಗಳ ಆಯ್ಕೆ
ಫೇಸ್ಬುಕ್ ನಿಮಗೆ ನೀಡಬಹುದಾದ ಎಲ್ಲಾ ಅಧಿಸೂಚನೆಗಳ ವ್ಯಾಪಕವಾದ ಪಟ್ಟಿಯನ್ನು ಇಲ್ಲಿ ನಿಮಗೆ ಪ್ರಸ್ತುತಪಡಿಸಲಾಗುತ್ತದೆ. ನಿಮಗೆ ಬೇಕಿದ್ದರೆ ನೋಟಿಫಿಕೇಶನ್ ನಿರ್ವಹಿಸುವ ಹಾಗೂ ಆಫ್ ಮಾಡುವ ಮತ್ತು ಪ್ರತಿ ಅಧಿಸೂಚನೆ ಪ್ರಕಾರಕ್ಕೆ ಅಧಿಸೂಚನೆ ಸೆಟ್ಟಿಂಗ್ಗಳನ್ನು ಆಯ್ಕೆ ಮಾಡುವ ಸಂದರ್ಭವಾಗಿದೆ.
ಯಾವ ವಿಭಾಗದಲ್ಲಿ ಆಫ್ ಮಾಡಬಹುದು ?
ನೀವು ಪುಶ್ ಅಧಿಸೂಚನೆ (ಫೇಸ್ಬುಕ್ ಪುಟದಲ್ಲಿ ಕಾಣಿಸಿಕೊಳ್ಳುವ), ಇಮೇಲ್, ಎಸ್ಎಂಎಸ್ ಅಥವಾ ಈ ಮೂರರಲ್ಲಿ ಯಾವುದೇ ಸಂಯೋಜನೆಯ ನಡುವೆ ಆಯ್ಕೆ ಮಾಡಬಹುದು. ಫೇಸ್ಬುಕ್ ಅಧಿಸೂಚನೆಗಳನ್ನು ಸಂಪೂರ್ಣವಾಗಿ ಆಫ್ ಮಾಡಲು, ಎಲ್ಲಾ ಆಯ್ಕೆಗಳನ್ನು ಟಾಗಲ್ ಆಫ್ ಮಾಡಿ.
ರಿಮೈಂಡರ್ಗಳಂತಹ ಕೆಲವು ಸಂದರ್ಭಗಳಲ್ಲಿ, ಫೇಸ್ಬುಕ್ ಅಧಿಸೂಚನೆಗಳನ್ನು ಆಫ್ ಮಾಡಲು ಪ್ರತ್ಯೇಕ ಟಾಗಲ್ ಇರುತ್ತದೆ. ಸುರಕ್ಷಿತ ಭಾಗದಲ್ಲಿರಲು ಎಲ್ಲವನ್ನೂ ಆಫ್ ಮಾಡಿ.
ಇದನ್ನೂ ಓದಿ: WhatsApp: ನಿಮ್ಮ ಚಾಟ್ ಅನ್ನು ಯಾರಾದ್ರೂ ಓದುತ್ತಿದ್ದಾರೆ ಎಂಬ ಅನುಮಾನವೇ? ಹಾಗಿದ್ರೆ ಅದನ್ನ ಹೀಗೆ ಪತ್ತೆ ಮಾಡಿ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ