ಟಿಕ್​ ಟಾಕ್​ನಲ್ಲಿ ಹಣಗಳಿಸಲು ಇಲ್ಲಿದೆ ಸುಲಭ ಉಪಾಯ

ಟಿಕ್​ ಟಾಕ್​ನಲ್ಲಿ ಅಪ್ಲೋಡ್​ ಮಾಡುವ ವಿಡಿಯೋಗಳು ವೇಗವಾಗಿ ಜನರನ್ನು ತಲುಪುತ್ತಿದೆ. 15 ಸೆಕೆಂಡುಗಳ ವಿಡಿಯೋಗಳಿಂದ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ಹಾಗಾದ್ರೆ, ಟಿಕ್​ಟಾಕ್​ನಲ್ಲಿ ಹಣಗಳಿಸುವುದು ಹೇಗೆ? ಎಂಬ ಮಾಹಿತಿಗೆ ಉತ್ತರ ಇಲ್ಲಿದೆ.

news18
Updated:August 6, 2019, 6:54 PM IST
ಟಿಕ್​ ಟಾಕ್​ನಲ್ಲಿ ಹಣಗಳಿಸಲು ಇಲ್ಲಿದೆ ಸುಲಭ ಉಪಾಯ
ಸಾಂದರ್ಭಿಕ ಚಿತ್ರ
  • News18
  • Last Updated: August 6, 2019, 6:54 PM IST
  • Share this:
ಚೀನಾ ಮೂಲದ ಟಿಕ್​ ಟಾಕ್ ಆ್ಯಪ್​ ಅನೇಕ ಬಳಕೆದಾರರನ್ನು ಹೊಂದಿದೆ. ಯುವಕ- ಯುವತಿಯರಲ್ಲದೆ ಎಲ್ಲಾ ವಯೋಮಾನದವರನ್ನು ತನ್ನತ್ತ ಸೆಳೆದುಕೊಳ್ಳುವ ಮೂಲಕ ಕ್ರೇಜ್​ ಹುಟ್ಟುಹಾಕಿದೆ.

ಟಿಕ್​ ಟಾಕ್​ನಲ್ಲಿ ಅಪ್ಲೋಡ್​ ಮಾಡುವ ವಿಡಿಯೋಗಳು ವೇಗವಾಗಿ ಜನರನ್ನು ತಲುಪುತ್ತಿದೆ. 15 ಸೆಕೆಂಡುಗಳ ವಿಡಿಯೋಗಳಿಂದ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ಹಾಗಾದ್ರೆ, ಟಿಕ್​ಟಾಕ್​ನಲ್ಲಿ ಹಣಗಳಿಸುವುದು ಹೇಗೆ? ಎಂಬ ಮಾಹಿತಿಗೆ ಉತ್ತರ ಇಲ್ಲಿದೆ.

ಇದನ್ನೂ ಓದಿ: ಪತ್ನಿಯಿಂದ ಸಾಲ ಪಡೆದು ಖರೀದಿಸಿದ ಲಾಟರಿಗೆ ಸಿಕ್ತು ಬಂಪರ್ ಬಹುಮಾನ: ಹೈದರಾಬಾದ್​ ರೈತ ಈಗ ಕೋಟಿಗೊಬ್ಬ..!

ಬಳಕೆದಾರರು ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ಟಿಕ್​ ಟಾಕ್​ ಉತ್ತಮ ವೇದಿಕೆಯಾಗಿದೆ. ವಿಡಿಯೋ ಮೇಕಿಂಗ್​ ಮೂಲಕ ಸಿನಿಮಾ, ಧಾರಾವಾಹಿ, ಕಿರುಚಿತ್ರ ಹೀಗೆ ಒಂದಿಲ್ಲೊಂದು ಅವಕಾಶಗಳು ಬರುವ ಸಾಧ್ಯತೆಗಳಿರುತ್ತವೆ. ಅಂತೆಯೇ, ಜಿಮ್​ ಟ್ರೈನರ್​, ಸ್ವಿಮ್ಮಿಂಗ್​ ಕೋಚ್​, ಫೋಟೋಗ್ರಾರ್​​​​, ಬ್ಯೂಟಿಶಿಯನ್​​​, ಡ್ಯಾನ್ಸ್​ ಮಾಸ್ಟರ್​, ಡ್ರಾಯಿಂಗ್​ ಮಾಸ್ಟರ್​ ಕೆಲಸ ಮಾಡುತ್ತಿರುವವರು ಟಿಕ್​ ಟಾಕ್​ನಲ್ಲಿ ವಿಡಿಯೋ ಶೇರಿಂಗ್​ ಮಾಡಬಹುದು. ಈ ವಿಡಿಯೋಗಳನ್ನು ನೋಡಿ ಟ್ರೈನಿಂಗ್​ ಪಡೆಯಲು ಇಚ್ಚಿಸುವ ಜನರು ನಿಮ್ಮನ್ನು ಸಂಪರ್ಕಿಸುತ್ತಾರೆ. ಇದರಿಂದ ನಿಮ್ಮ ಆದಾಯದ ದಾರಿ ನಿರ್ಮಾಣವಾಗಬಹುದು.

ಇನ್ನು ಟಿಕ್​ ಟಾಕ್ ಸಕ್ರಿಯ​ ಬಳಕೆದಾರರನ್ನು ಹೆಚ್ಚಿಸಿದ್ದು, ಪ್ರಾಡೆಕ್ಟ್​ ಹಾಗೂ ಬ್ಯುಸಿನೆಸ್​ ಸಂಭಂದಿಸಿದ ವಿಡಿಯೋಗಳನ್ನು ಇದರಲ್ಲಿ ಅಪ್ಲೋಡ್​ ಮಾಡಬಹುದಾಗಿದೆ. ಈ ಮೂಲಕ ಬ್ಯುಸಿನೆಸ್​ ಪ್ರೋಮೋಟ್​ ಆಗುತ್ತದೆ. ಜೊತೆಗೆ ನಿಮ್ಮ ಆದಾಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ.

First published:August 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...