ಇದು ಟೆಕ್ನಾಲಜಿ ಯುಗ (Technology). ಇಲ್ಲಿ ಸ್ಮಾರ್ಟ್ಫೋನ್ ಮೂಲಕ ಏನನ್ನೂ ಮಾಡಬಹುದು. ಇತ್ತೀಚೆಗಂತೂ ಸ್ಮಾರ್ಟ್ಫೋನ್ಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ ಈ ಸ್ಮಾರ್ಟ್ಫೋನ್ಗಳನ್ನು ಬಳಕೆ ಮಾಡಬೇಕಾದ್ರೆ ಅದಕ್ಕೆ ಅದರದೇ ಆದ ಅಪ್ಲಿಕೇಶನ್ಗಳು, ಇಂಟರ್ನೆಟ್ (Internet) ಸೌಲಭ್ಯ ಅಗತ್ಯವಾಗಿರುತ್ತದೆ. ಕೆಲವೊಬ್ಬರು ಮನೆಯಲ್ಲಿಯೇ ಕುಳಿತು ಏನೂ ಸಂಪಾದನೆ ಮಾಡದೆ ಮೊಬೈಲ್ ಬಳಕೆ ಮಾಡುತ್ತಾರೆ. ಆದರೆ ಕೆಲವೊಂದು ಬಾರಿ ನಮ್ಮ ಕೈಯಲ್ಲಿ ಹಣವೇ ಇರಲ್ಲ. ಆದರೆ ಇನ್ಮುಂದೆ ಟೆನ್ಷನ್ ಬೇಡ. ನಿಮ್ಮ ಕೈಯಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಇದ್ದರೆ ಸಾಕು ಸುಲಭದಲ್ಲಿ ಹಣ ಸಂಪಾದನೆ (Online Money Make) ಮಾಡ್ಬಹುದು.
ಎಷ್ಟೋ ಜನರಿಗೆ ಮನೆಯಲ್ಲಿ ಕುಳಿತು ಹಣ ಮಾಡ್ಬೇಕು ಅನ್ನೋ ಆಸೆ ಇರುತ್ತದೆ. ಆದರೆ ಹೇಗೆ ಆರಂಭಿಸೋದು ಅನ್ನೋದು ಐಡಿಯಾವೇ ಗೊತ್ತಾಗಲ್ಲ. ಆದರೆ ಈ ಲೇಖನದಲ್ಲಿ ನೀಡಿರುವ ಮೂಲಕ ನೀವು ನಿಮ್ಮ ಮೊಬೈಲ್ನಲ್ಲಿ ಲಕ್ಷಗಟ್ಟಲೆ ಹಣ ಸಂಪಾದನೆ ಮಾಡ್ಬಹುದು.
ಆನ್ಲೈನ್ ಕ್ಲಾಸ್ ಆರಂಭಿಸಿ
ಮೊಬೈಲ್ನಲ್ಲಿ, ಆನ್ಲೈನ್ನಲ್ಲಿ ಸುಲಭದಲ್ಲಿ ಹಣ ಮಾಡಲು ಉತ್ತಮ ವಿಧಾನವೆಂದರೆ ಆನ್ಲೈನ್ ಕ್ಲಾಸ್ ಆರಂಭಿಸುವುದು. ಇದರಲ್ಲಿ ನೀವು ವಿದ್ಯಾರ್ಥಿಗಳಿ ತರಗತಿಗೆ ಸಂಬಂಧಿಸಿದ ತರಬೇತಿಯನ್ನು ನೀಡಬಹುದು. ಇದಲ್ಲದೆ ಯೋಗ ತರಬೇತಿ, ಫಿಟ್ನೆಸ್ಗೆ ಸಂಬಂಧಿಸಿದ ತರಬೇತಿ ಸೇರಿದಂತೆ ಇನ್ನೂ ಹಲವು ವಿಷಯಗಳಿಗೆ ಸಂಬಂಧಿಸಿದ ತರಬೇತಿ ತರಗತಿಗಳನ್ನು ಆರಂಭಿಸಿ ಹಣ ಮಾಡಬಹುದು. ಈ ಮೂಲಕ ನೀವು ಯಾವ ವಿಷಯದಲ್ಲಿ ಪರಿಣಿತಿ ಹೊಂದಿದ್ದೀರೋ ಆ ವಿಷಯದಲ್ಲಿ ತರಗತಿ ಆರಂಭಿಸಿ ಸಾವಿರಗಟ್ಟಲೆ ಹಣ ಮಾಡಬಹುದು.
ಆನ್ಲೈನ್ ಸೇಲ್ ಆರಂಭಿಸಿ
ಇತ್ತೀಚೆಗೆ ಇಕಾಮರ್ಸ್ ತಾಣಗಳು ಭಾರೀ ದೊಡ್ಡ ಮಾರುಕಟ್ಟೆಯಾಗಿ ವಿಸ್ತರಣೆಯಾಗಿದೆ. ಆದ್ದರಿಂದ ಮೊಬೈಲ್ ಬಳಕೆದಾರರು ರೀಟೇಲ್ ವ್ಯಾಪರವನ್ನು ಮಾಡುತ್ತಿದ್ದರೆ, ಅಥವಾ ಯಾವುದಾದರು ಪ್ರೊಡಕ್ಟ್ ಅನ್ನು ಉತ್ಪಾದನೆ ಮಾಡಿ ಮಾರಾಟ ಮಾಡುವ ಪ್ಲ್ಯಾನ್ನಲ್ಲಿದ್ದರೆ ಆನ್ಲೈ ಪ್ಲಾಟ್ಫಾರ್ಮ್ಗಳು ಬಹಳ ಉತ್ತಮ ಆಯ್ಕೆಯಾಗಿದೆ. ಕೆಲವೊಬ್ಬರು ಸೋಶಿಯಲ್ ಮೀಡಿಯಾಗಳನ್ನು ಇತ್ತೀಚೆಗೆ ಪ್ರಚಾರಕ್ಕಾಗಿಯೇ ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ, ಈ ಮೂಲಕ ನಿಮ್ಮ ಪ್ರೊಡಕ್ಟ್ ಅನ್ನು ಪ್ರಚಾರನೂ ಮಾಡ್ಬಹುದು, ಸೇಲ್ ಕೂಡ ಮಾಡಬಹುದಾಗಿದೆ.
ಯೂಟ್ಯೂಬ್ ಚಾನೆಲ್ ಓಪನ್ ಮಾಡಿ
ಇತ್ತೀಚೆಗೆ ಆನ್ಲೈನ್ ಮೂಲಕ ಸುಲಭವಾಗಿ ಹಣ ಮಾಡುವಂತಹ ಒಂದು ಪ್ಲಾಟ್ಫಾರ್ಮ್ ಇದೆ ಎಂದರೆ ಅದು ಯೂಟ್ಯೂಬ್. ಯೂಟ್ಯೂಬ್ ಅನ್ನು ಎಷ್ಟೋ ಜನರು ಉದ್ಯೋಗವನ್ನಾಗಿ ರೂಪಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಯೂಟ್ಯೂಬ್ ನೀಡಿರುವಂತಹ ಅವಕಾಶಗಳು ಅಂತಾನೇ ಹೇಳಬಹುದು. ಯೂಟ್ಯೂಬ್ನಲ್ಲಿ ಯಾರು ಬೇಕಾದರು ಚಾನೆಲ್ ಅನ್ನು ರಚಿಸಿಕೊಳ್ಳಬಹುದಾಗಿದೆ.
ಆದರೆ ಆ ಚಾನೆಲ್ ಏನದರೂ ಉದ್ದೇಕ್ಕಾಗಿ ರಚಿಸಿರಬೇಕು. ಉದಾಹರಣೆಗೆ ಎಷ್ಟೋ ಜನ ಆಹಾರಕ್ಕೆ ಸಂಬಂಧಪಟ್ಟ, ಡ್ಯಾನ್ಸ್, ದೇವಾಸ್ಥಾನಗಳ ಮಾಹಿತಿ ಈ ರೀತಿಯ ವಿಡಿಯೋಗಳನ್ನು ಮಾಡುವ ಮೂಲಕ ಹಣ ಮಾಡುತ್ತಿರುತ್ತಾರೆ. ಅದೇ ರೀತಿ ನೀವೂ ಸಹ ಚಾನೆಲ್ ಮಾಡಿಕೊಂಡು ಈ ರೀತಿಯ ವಿಡಿಯೋಗಳನ್ನು ಮಾಡಬಹುದು. ಆದರೆ ಮುಖ್ಯವಾಗಿ ಯೂಟ್ಯೂಬ್ನ ನಿಯಮಗಳನ್ನು ಪಾಲಿಸಬೇಕು.
ಬ್ಲಾಗ್ ಅನ್ನು ರಚಿಸಿ
ಹೆಚ್ಚಿನ ಜನರಿಗೆ ಬರವಣಿಗೆ ಮೇಲೆ ಹೆಚ್ಚಿನ ಆಸಕ್ತಿ ಇರುತ್ತದೆ. ಬರವಣಿಗೆ ಮೇಲೆ ಆಸಕ್ತಿ ಇದ್ದವರು ಬ್ಲಾಗ್ ಅಥವಾ ವೆಬ್ಸೈಟ್ ಅನ್ನು ಪ್ರಾರಂಭಿಸಬಹುದು. ಇದರಲ್ಲಿ ನಿಮ್ಮ ಆಸಕ್ತಿಗೆ ಸಂಬಂಧಪಟ್ಟ ಲೇಖನಗಳನ್ನು ನಿರಂತರವಾಗಿ ಬರೆದು ಪಬ್ಲಿಶ್ ಮಾಡುವ ಮೂಲಕ ಜನಪ್ರಿಯತೆಯನ್ನು ಪಡೆಯಬಹುದು.
ಇದನ್ನೂ ಓದಿ: ಸಂಗೀತ ಪ್ರಿಯರಿಗೆ ಗುಡ್ ನ್ಯೂಸ್! ಬಂದಿದೆ ನೋಡಿ ನಾಯ್ಸ್ ಕಂಪೆನಿಯ ಹೊಸ ಇಯರ್ಬಡ್ಸ್
ಜೊತೆಗೆ ಇದರಲ್ಲಿ ಜಾಹೀರಾತುಗಳನ್ನುಪಡೆಯುವ ಮೂಲಕ ಹಣವನ್ನು ಸಂಪಾದಿಸಬಹುದಾಗಿದೆ. ಆದರೆ ಈ ಬ್ಲಾಗ್ ವೆಬ್ಸೈಟ್ ಅನ್ನು ಓಪನ್ ಮಾಡಲು ಮೊದಲಿಗೆ ಫ್ರೀ ಸಾಫ್ಟ್ವೇರ್ ಅನ್ನು ಬಳಸುವುದು ಉತ್ತಮ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ