HOME » NEWS » Tech » HOW TO MAINTAIN YOUR CAR DURING A LOCKDOWN STG HG

ಲಾಕ್‌ಡೌನ್‌ ಸಮಯದಲ್ಲಿ ನಿಮ್ಮ ಕಾರನ್ನು ಉತ್ತಮವಾಗಿ ನಿರ್ವಹಣೆ ಮಾಡಲು ಈ ಅಂಶಗಳನ್ನು ಗಮನದಲ್ಲಿಡಿ!

ವಾಹನಗಳು ತುಕ್ಕು ಹಿಡಿಯುವುದು, ಬ್ಯಾಟರಿ ಮತ್ತು ಎಂಜಿನ್‌ನಲ್ಲಿ ತೊಂದರೆ - ಈ ರೀತಿ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಆದ್ದರಿಂದ ಈ ಕೆಳಗೆ ಸೂಚಿಸಿದ ಅಂಶಗಳು ನಿಮ್ಮ ಕಾರನ್ನು ಸಮಸ್ಯೆಯಿಂದ ದೂರ ಇರಿಸಲು ಸಹಾಯವಾಗಲಿದೆ.

news18-kannada
Updated:April 12, 2021, 4:18 PM IST
ಲಾಕ್‌ಡೌನ್‌ ಸಮಯದಲ್ಲಿ ನಿಮ್ಮ ಕಾರನ್ನು ಉತ್ತಮವಾಗಿ ನಿರ್ವಹಣೆ ಮಾಡಲು ಈ ಅಂಶಗಳನ್ನು ಗಮನದಲ್ಲಿಡಿ!
ಕಾರು
  • Share this:
ಈಗಂತೂ ಕೊರೋನಾ ಆರ್ಭಟದ ಪರಿಣಾಮ ಪ್ರಮುಖ ನಗರಗಳಲ್ಲಿ ದೀರ್ಘಾವಧಿ ಲಾಕ್‌ಡೌನ್‌ ಜಾರಿಗೊಳಿಸಿದ್ದರಿಂದ ಜನರು ತಮ್ಮ ದಿನ ನಿತ್ಯದ ಕೆಲಸಗಳಿಗೆ ಕಡಿವಾಣ ಹಾಕಬೇಕಾಗಿ ಬಂತು. ಅದರಲ್ಲೂ ಖಾಸಗಿ ವಲಯದ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿರುವುದರಿಂದ ಹಲವಾರು ದಿನಗಳ ಕಾಲ ಕಾರನ್ನು ಬಳಸದೇ ಇರುವುದರಿಂದ ಕಾರು ಸಮಸ್ಯೆಗೆ ಒಳಗಾಗುವ ಸಾಧ್ಯತೆ ಹೆಚ್ಚು.

ವಾಹನಗಳು ತುಕ್ಕು ಹಿಡಿಯುವುದು, ಬ್ಯಾಟರಿ ಮತ್ತು ಎಂಜಿನ್‌ನಲ್ಲಿ ತೊಂದರೆ - ಈ ರೀತಿ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಆದ್ದರಿಂದ ಈ ಕೆಳಗೆ ಸೂಚಿಸಿದ ಅಂಶಗಳು ನಿಮ್ಮ ಕಾರನ್ನು ಸಮಸ್ಯೆಯಿಂದ ದೂರ ಇರಿಸಲು ಸಹಾಯವಾಗಲಿದೆ.

ವಾರದಲ್ಲಿ ಒಮ್ಮೆಯಾದರೂ ಕಾರು ಚಾಲನೆ ಅವಶ್ಯ:

ಕಾರನ್ನು ಸುಸ್ಥಿಯಲ್ಲಿಡಲು ಇದು ತುಂಬಾ ಸರಳ ಮಾರ್ಗವಾಗಿದೆ. ವಾರದಲ್ಲಿ ಒಮ್ಮೆಯಾದರೂ ಕಾರನ್ನು ಚಾಲನೆ ಮಾಡುವುದರಿಂದ ಬ್ರೇಕ್ ಡಿಸ್ಕ್ ಮತ್ತು ಕ್ಯಾಲಿಪರ್‌ಗಳಂತಹ ಭಾಗಗಳನ್ನು ತುಕ್ಕು ಹಿಡಿಯುವುದನ್ನು ತಪ್ಪಿಸಬಹುದಾಗಿದೆ. ಕಾರನ್ನು ಬಹಳ ದಿನಗಳವರೆಗೆ ಬಳಸದೇ ಇದ್ದರೆ, ಬ್ರೇಕ್‌ಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸದಿರಲು ಕಾರಣವಾಗಬಹುದು. ಕಾರು ನಿಷ್ಕ್ರಿಯವಾಗಬಾರದೆಂದರೆ ಚಾಲನೆ ಮಾಡುವುದು ಉತ್ತಮ.

ಟೈರ್‌ನಲ್ಲಿ ಪುನಃ ಗಾಳಿ ತುಂಬಿಸಿ;

ಕಾರು ಟೈರ್ ನ ಉತ್ತಮ ನಿರ್ವಹಣೆಯಿಂದ ನಿಮ್ಮ ಕಾರನ್ನು ಉತ್ತಮ ಚಾಲನೆಯಲ್ಲಿಡಲು ಸಹಾಯವಾಗಲಿದೆ. ಬಹಳ ದಿನಗಳ ಕಾಲ ಕಾರು ಬಳಸದೇ ಇದ್ದರೆ ಟೈರ್‌ಗಳ ಗಾಳಿ ಕಳೆದುಕೊಳ್ಳಬಹುದು. ಹತ್ತಿರದ ಪೆಟ್ರೋಲ್ ಸ್ಟೇಷನ್ ಅಥವಾ ರಿಪೇರಿ ಅಂಗಡಿಯನ್ನು ಮುಚ್ಚಿದಲ್ಲಿ, ಟೈರ್ ಪ್ರೆಶರ್ ಗೇಜ್ ಅನ್ನು ವಾಯು ಒತ್ತಡದ ಪಂಪ್ ಜೊತೆಗೆ ಸುಲಭವಾಗಿ ಇರಿಸುವುದರ ಮೂಲಕ ಉತ್ತಮ ಸ್ಥಿತಿಯಲ್ಲಿಡಬಹುದಾಗಿದೆ.

ಕ್ರಿಮಿ-ಕೀಟಗಳ ಬಗ್ಗೆ ಎಚ್ಚರ:ಬಹಳ ದಿನಗಳವರೆಗೆ ಕಾರನ್ನು ಬಳಸದೇ ಇದ್ದರೆ ಕಾರಿನಲ್ಲಿ ಕ್ರಿಮಿ, ಕೀಟ ಇಲ್ಲವೇ ಪುಟ್ಟ ಪ್ರಾಣಿಗಳು ಕಾರಿನ್ನು ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಳ್ಳುತ್ತವೆ. ಮೌಸ್‌ಟ್ರಾಪ್‌ಗಳು, ಪುದೀನಾ ಎಣ್ಣೆ ಸೇರಿದಂತೆ ಕ್ರಿಮಿ-ಕೀಟ ನಿವಾರಕ ದ್ರವೌಷಧಗಳನ್ನು ಬಳಸುವುದರ ಮೂಲಕ ಅವುಗಳನ್ನು ತಡೆಯಲು ಸಹಾಯವಾಗಲಿದೆ. ಆಗಾಗ್ಗೆ ಕಾರನ್ನು ಚಾಲನೆ ಮಾಡುವುದರಿಂದ ಕ್ರಿಮಿ-ಕೀಟಗಳು ಎಂಜಿನ್ ನಲ್ಲಿ ಗೂಡುಕಟ್ಟದಂತೆ ತಡೆಗಟ್ಟಬಹುದಾಗಿದೆ.

ಸಮತಟ್ಟಾದ ನೆಲದ ಮೇಲೆ ನಿಲ್ಲಿಸಿದರೆ ಹ್ಯಾಂಡ್ ಬ್ರೇಕ್ ನಿಷ್ಕ್ರಿಯಗೊಳಿಸಿ:

ಒಂದು ವೇಳೆ ಏರು ಅಥವಾ ಇಳಿಜಾರು ಇಲ್ಲವೇ ತಗ್ಗು ಪ್ರದೇಶಗಳಲ್ಲಿ ದೀರ್ಘಾವದಿ ಕಾಲದವರೆಗೆ ಕಾರನ್ನು ಹ್ಯಾಂಡ್ ಬ್ರೇಕ್ ಮೂಲಕ ನಿಲ್ಲಿಸಿದ್ದರೆ ಸಮಸ್ಯೆ ಎದುರಿಸಬೇಕಾಗಬಹುದು. ಹ್ಯಾಂಡ್ ಬ್ರೇಕ್ ತುಕ್ಕು ಹಿಡಿಯುವುದರಿಂದ ಬ್ರೇಕ್ ಪ್ಯಾಡ್‌ಗಳನ್ನು ಬ್ರೇಕ್ ರೋಟಾರ್‌ಗಳು ಸಮಸ್ಯೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಆದ್ದರಿಂಡ ನಿಮ್ಮ ಕಾರನ್ನು ಸಮತಟ್ಟಾದ ನೆಲದ ಮೇಲೆ ನಿಲ್ಲಿಸಿ. ಇಲ್ಲವಾದಲ್ಲಿ, ಟೈರ್ ಸ್ಟಾಪರ್ ಬಳಸುವುದು ಉತ್ತಮ.

ಕಾರನ್ನು ಹೊದಿಕೆಯಿಂದ ಮುಚ್ಚಿ:

ನಿಮ್ಮ ನಿವಾಸದಲ್ಲಿ ನಿಮಗೆ ಆಶ್ರಯ ಪಾರ್ಕಿಂಗ್ ಸ್ಥಳವಿಲ್ಲದಿದ್ದರೆ, ನಿಮ್ಮ ಕಾರನ್ನು ನಿಲ್ಲಿಸಿದ ಜಾಗದಲ್ಲಿ ನಿರಂತರವಾಗಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳದಂತೆ ನೋಡಿಕೊಳ್ಳಿ. ಏಕೆಂದರೆ ಇದು ಕಾರಿನ ಬಣ್ಣದ ಮೇಲೆ ಪರಿಣಾಮ ಬೀಳುತ್ತದೆ. ಆದ್ದರಿಂದ ಕಾರನ್ನು ಕವರ್ ಮೂಲಕ ಹೊದಿಕೆ ಮಾಡಿ. ಇದರಿಂದ ಸಣ್ಣ ಧೂಳಿನ ಕಣಗಳಿಂದ ಮತ್ತು ಸೂರ್ಯದ ಶಾಖದಿಂದ ಸುರಕ್ಷತೆ ಕಾಪಾಡಿಕೊಳ್ಳಬಹುದು.

ಕಾರಿನ ಒಳಾಂಗಣದ ಸ್ವಚ್ಛತೆ ಕಾಪಾಡಿ:

ವಾರಕ್ಕೊಮ್ಮೆ, ಪೋರ್ಟಬಲ್ ವ್ಯಾಕ್ಯೂಮ್ ಕ್ಲೀನರ್ ತೆಗೆದುಕೊಂಡು ಕಾರಿನ ಆಸನಗಳ ಅಂಚುಗಳನ್ನು ಸ್ವಚ್ಛಗೊಳಿಸಿ, ಏಕೆಂದರೆ ಉಳಿದಿರುವ ಆಹಾರ ತುಣುಕುಗಳು ಕೊಳೆಯಬಹುದು ಮತ್ತು ಲಾಕ್ ಮಾಡಲಾದ ಒಳಾಂಗಣಗಳು ದುರ್ವಾಸನೆ ಬೀರುವುದು. ಆದ್ದರಿಂದ ನಿಮ್ಮ ಕಾರಿನ ಒಳಗಡೆ ಸ್ವಚ್ಛತೆ ಕಾಪಾಡಿ.

ಆಯಿಲ್ ಬದಲಾಯಿಸಿ:

ಎಂಜಿನ್ ಆಯಿಲ್ ತುಕ್ಕು ನಿರೋಧಕಗಳಂತಹ ರಕ್ಷಣಾತ್ಮಕ ಸೇರ್ಪಡೆಗಳನ್ನು ಹೊಂದಿದೆ. ಇದರಿಂದ ಕಾರಿನ ಎಂಜಿನ್ ಅನ್ನು ಆರೋಗ್ಯಕರವಾಗಿಡಲು ಸಹಾಯವಾಗಲಿದೆ. ದೀರ್ಘಕಾಲದ ಲಾಕ್‌ಡೌನ್ ಸಂದರ್ಭದಲ್ಲಿ, 90 ದಿನಗಳ ನಂತರ ಅದನ್ನು ಬದಲಾಯಿಸುವುದು ಉತ್ತಮ. ಇದರಿಂದಾಗಿ ತೈಲದ ರಕ್ಷಣಾತ್ಮಕ ಘಟಕಗಳ ಸಾಮರ್ಥ್ಯವನ್ನು ಕಾಪಾಡಿಕೊಳ್ಳಬಹುದು.

ಇತರ ಘಟಕಗಳನ್ನು ಪರಿಶೀಲಿಸಿ:

ಕಾರಿನೊಳಗಿನ ಡ್ರೈವ್ ಬೆಲ್ಟ್‌ಗಳಂತಹ ಮೆದು ಭಾಗಗಳು ನಿರಂತರವಾಗಿ ಶಾಖಕ್ಕೆ ಒಡ್ಡಿಕೊಳ್ಳುವುದು ಅಥವಾ ದೀರ್ಘಕಾಲದ ಬಳಕೆಯಿಂದ ಒಣಗಬಹುದು ಮತ್ತು ಇದು ಬಿರುಕುಗಳು ಕಾಣಿಸಿಕೊಳ್ಳಲುವ ಸಂಭವ ಹೆಚ್ಚು. ಆದ್ದರಿಂದ, ಸಂಪೂರ್ಣ ಪರಿಶೀಲನೆ ನಡೆಸುವುದು ಮುಖ್ಯ.

ಈ ಮೇಲಿನ ಅಂಶಗಳ ಮೂಲಕ ನಿಮ್ಮ ಕಾರನ್ನು ಉತ್ತಮ ಸ್ಥಿತಿಯಲ್ಲಿಡಲು ಸಹಾಯವಾಗಲಿದೆ.
First published: April 12, 2021, 4:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories