HOME » NEWS » Tech » HOW TO MAINTAIN APPLE 100 PERCENT IPHONE BATTERY HEALTH ACCORDING TO APPLE HG

Iphone: ಶೇ.100 ರಷ್ಟು ಚಾರ್ಜ್ ಉಳಿಸುವುದು ಹೇಗೆ? ಆ್ಯಪಲ್ ಹೇಳಿದ ಈ ಟ್ರಿಕ್ಸ್​​ ಬಳಸಿ ನೋಡಿ

Apple Iphone: ಆ್ಯಪಲ್ ಪ್ರಿಯರು ತಮ್ಮ ಬಳಿ​ ಐಫೋನ್​ ಇದ್ದರೆ ಅದರ ಬ್ಯಾಟರಿ ಉಳಿಸಲು ತಲೆ ಕಡೆಸಿಕೊಳ್ಳಬೇಕಾದ ಅಗತ್ಯವಿಲ್ಲ. ಏಕೆಂದರೆ ಬ್ಯಾಟರಿ ಸಮಸ್ಯೆಯನ್ನು ನಿವಾರಿಸಲು ಆ್ಯಪಲ್ ಸಂಸ್ಥೆ 819 ಕೋಟಿ ರೂ.ವನ್ನು ಬ್ಯಾಟರಿ ಗೇಟ್​​ ಕೇಸ್​ಗೆ ಪಾವತಿಸಿದೆ.

news18-kannada
Updated:May 31, 2021, 11:16 AM IST
Iphone: ಶೇ.100 ರಷ್ಟು ಚಾರ್ಜ್ ಉಳಿಸುವುದು ಹೇಗೆ? ಆ್ಯಪಲ್ ಹೇಳಿದ ಈ ಟ್ರಿಕ್ಸ್​​ ಬಳಸಿ ನೋಡಿ
iPhone 12
  • Share this:
ಆ್ಯಪಲ್​ ಪ್ರಾಡೆಕ್ಟ್​​ ಖರೀದಿಸುವುದೇ ಒಂದು ಸಾಹಸ ಎಂಬುದು ಕೆಲವರಿಗೆ ಅನಿಸಿದರೆ, ಇನ್ನು ಕೆಲವರಿಗೆ ಐಫೋನ್​ ಬಳಸುವುದರ ಜೊತೆಗೆ ಅದರ ಬ್ಯಾಟರಿ ಉಳಿಸುವುದು ಮತ್ತೊಂದು ಸಾಹಸ. ಎಷ್ಟೇ ಫೋನ್​ ಬಳಸಿದರು ಅದರ ಬ್ಯಾಟರಿ ಉಳಿಸಲು ನಾನಾ ಪ್ರಯತ್ನ ಮಾಡುತ್ತಾರೆ. ಆದರೀಗ ಆ್ಯಪಲ್ ಪ್ರಿಯರು ತಮ್ಮ ಬಳಿ​ ಐಫೋನ್​ ಇದ್ದರೆ ಅದರ ಬ್ಯಾಟರಿ ಉಳಿಸಲು ತಲೆ ಕಡೆಸಿಕೊಳ್ಳಬೇಕಾದ ಅಗತ್ಯವಿಲ್ಲ. ಏಕೆಂದರೆ ಬ್ಯಾಟರಿ ಸಮಸ್ಯೆಯನ್ನು ನಿವಾರಿಸಲು ಆ್ಯಪಲ್ ಸಂಸ್ಥೆ 819 ಕೋಟಿ ರೂ.ವನ್ನು ಬ್ಯಾಟರಿ ಗೇಟ್​​ ಕೇಸ್​ಗೆ ಪಾವತಿಸಿದೆ.

ಆ್ಯಪಲ್​​ ಐಫೋನ್​ ಮಾತ್ರವಲ್ಲದೆ, ಐಪ್ಯಾಡ್​, ಮ್ಯಾಕ್​, ಆ್ಯಪಲ್​ ವಾಚ್ ​ನೂತನ ಮಾದರಿಯನ್ನು ಆಗಾಗ ಪರಿಚಯಿಸುತ್ತಿರುತ್ತದೆ. ಮಾತ್ರವಲ್ಲದೆ, ಉತ್ತಮ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಆದರೆ ಈ ಹಿಂದೆ ಆ್ಯಪಲ್​ ಬ್ಯಾಟರಿ ಪ್ರಾಡೆಕ್ಟ್​ಗಳಲ್ಲಿ ಅಳವಡಿಸಲಾದ ಬ್ಯಾಟರಿಯನ್ನು ಉದ್ದೇಶಪೂರ್ವಕವಾಗಿ ನಿಧಾನಗೊಳಿಸುತ್ತಿದೆ ಎಂದು ಆರೋಪಿಸಲಾಗಿತ್ತು. ಇದೀಗ ಈ ವಿಚಾರವಾಗಿಯೇ ಪ್ರಕರಣವನ್ನು ಇತ್ಯರ್ಥಗೊಳಿಸಲು 819 ಕೋಟಿ ರೂ ಅನ್ನು ಪಾವತಿಸಿದೆ.

ಇನ್ನು ಬ್ಯಾಟರಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಲಹೆಗಳು ಮತ್ತು ಶಿಫಾರಸುಗಳನ್ನು ಹಂಚಿಕೊಳ್ಳುವುದರ ಹೊರತಾಗಿ ಬ್ಯಾಟರಿ ಮತ್ತು ಕಾರ್ಯಕ್ಷಮತೆ ನಿರ್ವಹಣಾ ವೈಶಿಷ್ಟ್ಯಗಳನ್ನು ಬಳಕೆದಾರರಿಗೆ ಆ್ಯಪಲ್ ಪರಿಚಯಿಸಿದೆ. ಆ್ಯಪಲ್ ಕೆಲವು ಸಂಗತಿಯನ್ನು ಹೇಳಿಕೊಂಡಿದ್ದು, ಅದರಲ್ಲಿ ಇತ್ತೀಚಿನ ಸಾಫ್ಟ್‌ವೇರ್‌ಗೆ ನವೀಕರಿಸುವುದು, ಹೆಚ್ಚಿನ ಸುತ್ತುವರಿದ ತಾಪಮಾನವನ್ನು ತಪ್ಪಿಸುವುದು, ಚಾರ್ಜ್ ಮಾಡುವಾಗ ಅದರದೇ ಚಾರ್ಜರ್​ನಲ್ಲಿ ಜಾರ್ಚ್​ ಮಾಡುವುದರ ಬಗ್ಗೆ ತಿಳಿಸಿದೆ.

ಆ್ಯಪಲ್ ತನ್ನ ವೆಬ್‌ಸೈಟ್‌ನಲ್ಲಿ ಐಫೋನ್‌ನ ಬ್ಯಾಟರಿ ಮತ್ತು ಜೀವಿತಾವಧಿಯನ್ನು ಹೇಗೆ ಗರಿಷ್ಠಗೊಳಿಸಬಹುದು ಎಂಬು ಬಗ್ಗೆ ವಿವರಿಸಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ನಿಮ್ಮ ಐಫೋನ್ ನವೀಕರಿಸಿ

1.ಐಫೋನ್‌ನಲ್ಲಿ, ಸೆಟ್ಟಿಂಗ್‌ಗೆ ಹೋಗಿ.

2.ಜನರಲ್ ಮೇಲೆ ಟ್ಯಾಪ್ ಮಾಡಿ.3.ಸಾಫ್ಟ್‌ವೇರ್ ನವೀಕರಣವನ್ನು ಟ್ಯಾಪ್ ಮಾಡಿ.

4.ಇನ್ನು ಐಫೋನ್ ಅನ್ನು ನಿಮ್ಮ ಕಂಪ್ಯೂಟರ್‌ಗೆ ಪ್ಲಗ್ ಮಾಡಬಹುದು ಮತ್ತು ಅದನ್ನು ಐಟ್ಯೂನ್ಸ್‌ನ ಇತ್ತೀಚಿನ ಆವೃತ್ತಿಯೊಂದಿಗೆ ನವೀಕರಿಸಬಹುದು.

5.ವೈ-ಫೈ ಸಂಪರ್ಕವನ್ನು ಬಳಸುವ ಮೂಲಕ ನಿಮ್ಮ ಬ್ಯಾಟರಿ ಅವಧಿಯನ್ನು ಸಹ ನೀವು ಕಾಪಾಡಿಕೊಳ್ಳಬಹುದು. ನಿಮ್ಮ ಐಫೋನ್‌ನ ಪರದೆಯಲ್ಲಿ ಮೂಡುವ ಬ್ರೈಟ್​ನೆಸ್​ ಅನ್ನು ನೀವು ಮಂದಗೊಳಿಸಬಹುದು ಅಥವಾ ಆಟೋಮ್ಯಾಟಿಕ್​ ಬ್ರೈಟ್​ನೆಸ್​  ಆನ್ ಮಾಡಬಹುದು.

ಮಂದ ಡಿಸ್​ಪ್ಲೇ ಬ್ರೈಟ್​ನೆಸ್​, ಅಟೋ ಬ್ರೈಟ್​ನೆಸ್​

1. ಸೆಟ್ಟಿಂಗ್‌ಗಳಿಗೆ ಹೋಗಿ.

2. ಜನರಲ್ ಆಯ್ಕೆಯ ಮೇಲೆ ಟ್ಯಾಪ್ ಮಾಡಿ.

3. Accessibilityಯ ಮೇಲೆ ಟ್ಯಾಪ್ ಮಾಡಿ.

4. Display Accommodations ಮೇಲೆ ಟ್ಯಾಪ್ ಮಾಡಿ.

5. ಅಟೋ ಬ್ರೇಟ್​ನೆಸ್​ ಆನ್‌ಗೆ ಹೊಂದಿಸಿ.

6. ನಂತರ ಪವರ್ ಮೋಡ್ ಅನ್ನು ಸಕ್ರಿಯಗೊಳಿಸಿ



ಕಡಿಮೆ ಪವರ್ ಮೋಡ್ ಅನ್ನು ಸಕ್ರಿಯಗೊಳಿಸಿ

1. ಸೆಟ್ಟಿಂಗ್‌ಗೆ ಹೋಗಿ.

2. ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಬ್ಯಾಟರಿಯನ್ನು ಟ್ಯಾಪ್ ಮಾಡಿ.

3. ಕಡಿಮೆ ಪವರ್ ಮೋಡ್ ಅನ್ನು ಆನ್ ಮಾಡಲು ಟಾಗಲ್ ಮಾಡಿ.

ಬ್ಯಾಟರಿ ಸೆಟ್ಟಿಂಗ್‌ಗಳಿಗೆ (ಸೆಟ್ಟಿಂಗ್‌ಗಳು> ಬ್ಯಾಟರಿ) ಹೋಗಿ ಬಳಕೆದಾರರು ತಮ್ಮ ಐಫೋನ್ ಬ್ಯಾಟರಿ ಬಳಕೆಯ ಮಾಹಿತಿಯನ್ನು ವೀಕ್ಷಿಸಬಹುದು. ಬ್ಯಾಟರಿಯನ್ನು ಸಂರಕ್ಷಿಸಲು, ಐಫೋನ್ ಬಳಕೆದಾರರು ಹಿನ್ನೆಲೆ ಅಪ್ಲಿಕೇಶನ್ ರಿಫ್ರೆಶ್ ಮತ್ತು ಸ್ಥಳ ಸೇವೆಗಳಂತಹ ಸೆಟ್ಟಿಂಗ್‌ಗಳನ್ನು ಸಹ ಆಫ್ ಮಾಡಬಹುದು. ಹೇಗೆ ಎಂಬುದು ಇಲ್ಲಿದೆ:

1. ಸೆಟ್ಟಿಂಗ್‌ಗಳಿಗೆ ಹೋಗಿ.

2. ಜನರಲ್ ಮೇಲೆ ಟ್ಯಾಪ್ ಮಾಡಿ.

3. ಹಿನ್ನೆಲೆ ಅಪ್ಲಿಕೇಶನ್ ರಿಫ್ರೆಶ್ ಮೇಲೆ ಟ್ಯಾಪ್ ಮಾಡಿ.

4. ಹಿನ್ನೆಲೆ ಅಪ್ಲಿಕೇಶನ್ ರಿಫ್ರೆಶ್ ಅನ್ನು ಸಂಪೂರ್ಣವಾಗಿ ಆಫ್ ಮಾಡಿ.



ಅಪ್ಲಿಕೇಶನ್‌ಗಳಿಗಾಗಿ ಸ್ಥಳ ಸೇವೆಗಳನ್ನು ಆಫ್ ಮಾಡಿ

1. ಸೆಟ್ಟಿಂಗ್‌ಗಳಿಗೆ ಹೋಗಿ.

2. ಪ್ರೈವೆಸಿ ಸೆಟ್ಟಿಂಗ್​ ಅನ್ನು ಟ್ಯಾಪ್ ಮಾಡಿ.

3. ಸ್ಥಳ ಸೇವೆಗಳನ್ನು ಟ್ಯಾಪ್ ಮಾಡಿ.
Published by: Harshith AS
First published: May 31, 2021, 11:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories