ಇಯರ್​ಫೋನ್​ ಬಳಸದೆ ಆಡಿಯೋ ಸಂದೇಶ ಆಲಿಸುವುದು ಹೇಗೆ? ಇಲ್ಲಿದೆ ವಾಟ್ಸಾಪ್​ ಟ್ರಿಕ್​


Updated:June 11, 2018, 4:26 PM IST
ಇಯರ್​ಫೋನ್​ ಬಳಸದೆ ಆಡಿಯೋ ಸಂದೇಶ ಆಲಿಸುವುದು ಹೇಗೆ? ಇಲ್ಲಿದೆ ವಾಟ್ಸಾಪ್​ ಟ್ರಿಕ್​
Men pose with smartphones in front of displayed Whatsapp logo in this illustration September 14, 2017. REUTERS/Dado Ruvic

Updated: June 11, 2018, 4:26 PM IST
ನವದೆಹಲಿ: ವಾಟ್ಸಾಪ್​ನಲ್ಲಿ ದಿನವೊಂದಕ್ಕೆ ಸಾವಿರಾರು ಸಂದೇಶಗಳು ಶೆರ್​ ಆಗುತ್ತಲೇ ಇರುತ್ತದೆ, ಇದರಲ್ಲೂ ಮುಖ್ಯವಾಗಿ ಆಡಿಯೋ ಸಂದೇಶಗಳು ಹೆಚ್ಚು ವೈರಲ್​ ಆಗುತ್ತವೆ. ಆದರೆ ನೀವು ಮೀಟಿಂಗ್​ ಅಥವಾ ಯಾವುದೇ ಸಂದರ್ಭದಲ್ಲಿ ನೆಚ್ಚಿನ ಮಿತ್ರರು ಕಳುಹಿಸಿದ ಆಡಿಯೋ ಸಂದೇಶವನ್ನು ಇಯರ್​ಫೋನ್​ ಬಳಸದೇ, ಮತ್ತು ಯಾರಿಗೂ ಆ ಸಂದೇಶ ಕೇಳದಂತೆ ಆಲಿಸುವುದು ಹೇಗೆ ಎಂಬ ವಾಟ್ಸಾಪ್​ ಟ್ರಿಕ್​ನ್ನು ಈ ಬಾರಿ ನಿಮಗೆ ತಿಳಿಸಿಕೊಡುತ್ತೇವೆ.

ಹೆಚ್ಚಿನ ಸಂದರ್ಭದಲ್ಲಿ ನಾವು ಹೆಡ್​ಫೋನ್​ ಅಥವಾ ಇಯರ್​ಫೋನ್​ಗಳನ್ನು ಉಪಯೋಗಿಸುವುದಿಲ್ಲ, ಆದರೆ ಮಿತ್ರರು ಕಳುಹಿಸಿದ ಆಡಿಯೋವನ್ನು ಎಲ್ಲರ ಮುಂದೆ ಕೇಳಲು ಸಂಕೋಚ ಪಡುತ್ತೇವೆ. ಜೋರಾದ ಸಂಗೀತವೋ ಅಥವಾ ನಮಗೆಂದೇ ಕಳುಹಿಸಿದ ವಾಯ್ಸ್​ನೋಟ್​ನ್ನು ಎಲ್ಲರ ಮುಂದೆ ಕೇಳಲು ನಮಗೂ ಮುಜುಗರ ಆಗುತ್ತದೆ. ಇದನ್ನು ತಡೆಗಟ್ಟಲು ನಿಮಗೆ ಬಂದ ಆಡಿಯೋ ಮೆಸೇಜ್​ನ್ನು ಪ್ಲೇ ಮಾಡಿ ಕಿವಿಗಿಟ್ಟುಕೊಳ್ಳಿ.

ಆಡಿಯೋ ಫೈಲ್​ನ್ನು ತೆರೆದು ನೇರವಾಗಿ ಕಿವಿಗಿಟ್ಟುಕೊಳ್ಳುವುದರಿಂದ ಅದು ಸೆಕೆಂಡರಿ ಸ್ಪೀಕರ್ ಅಥವಾ ಇಯರ್​ ಸ್ಪೀಕರ್​ನಲ್ಲಿ ಮಾತ್ರಾ ಪ್ಲೇ ಆಗುತ್ತದೆ. ಇದು ನೋಡುಗರಿಗೆ ನೀವು ಫೋನಿನಲ್ಲಿ ಸಂಭಾಷಣೆಯಲ್ಲಿರುಂತೆ ಕಾಣುತ್ತದೆ. ನೆನಪಿಡಿ ಈ ಫೀಚರ್​ ಕೇವಲ ಆಡಿಯೋ ಫೈಲ್​ಗೆ ಮಾತ್ರಾ ಅನ್ವಯವಾಗುತ್ತದೆ. ವೀಡಿಯೋ ಸಂದೇಶಗಳಿಗೆ ಇದು ಅನ್ವಯವಾಗುವುದಿಲ್ಲ. ಅಂತಯೇ ಈ ರೀತಿ ಟ್ರಿಕ್​ ಬಳಸಲು ನೀವು ಯಾವುದೇ ರೀತಿಯ ಅಪ್​ಡೇಟ್​ ಮಾಡಬೇಕಾಗಿಲ್ಲ.

ಇನ್ನು ವಾಯ್ಸ್​ನೋಟ್​ಗಳನ್ನು ಹೆಚ್ಚಾಗಿ ಬಳಸಲೆಂದೇ ವಾಟ್ಸಾಪ್​ ಇತ್ತೀಚೆಗೆ ಆಡಿಯೋ ರೆಕಾರ್ಡಿಂಗ್​ ಆಯ್ಕೆಗೆ ಹೊಸ ಅಪ್​ಡೇಟ್​ ಬಿಟ್ಟಿತ್ತು. ಈ ಮೂಲಕ ನೀವು ರೆಕಾರ್ಡಿಂಗ್​ ಐಕಾನ್​ನ್ನು ಸ್ಕ್ರೀನ್​ ಮೇಲೆ ಎಳೆದಾಗ ಅದು ಲಾಕ್​ ಆಗಿ ರೆಕಾರ್ಡಿಂಗ್​ ಆರಂಭಿಸುತ್ತದೆ. ಬಳಿಕ ನಿಮ್ಮ ಸಂದೇಶವನ್ನು ಸೆಂಡ್​ ಮಾಡಬಹುದು.

 
First published:June 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...