ಉಚಿತವಾಗಿ iOS 12 betaವನ್ನು ಬಳಸುವುದು ಹೇಗೆ? ಇಲ್ಲಿದೆ ಮಾಹಿತಿ


Updated:June 18, 2018, 9:33 PM IST
ಉಚಿತವಾಗಿ iOS 12 betaವನ್ನು ಬಳಸುವುದು ಹೇಗೆ? ಇಲ್ಲಿದೆ ಮಾಹಿತಿ

Updated: June 18, 2018, 9:33 PM IST
ನವದೆಹಲಿ: ಸ್ಮಾರ್ಟ್​ಫೋನ್​​ ಜಗತ್ತಿನ ಲೀಡರ್ ಎಂದೇ ಗುರುತಿಸಿಕೊಂಡಿರುವ ಆ್ಯಪಲ್​ ಇತ್ತೀಚೆಗೆ ಮಾರುಕಟ್ಟೆಗೆ ಹೊಸ ಆಪರೇಟಿಂಗ್​ ಸಿಸ್ಟರ್​ iOS 12ನ್ನು ಪರಿಚಯ ಮಾಡಿಕೊಟ್ಟಿತ್ತು. ಆದರೆ ಇದನ್ನು ಬಳಕೆ ಮಾಡುವವರು ವರ್ಷಕ್ಕೆ 99 ಡಾಲರ್​ ಪಾವತಿಸಬೇಕು. ಅದರಲ್ಲೂ ಮುಖ್ಯವಾಗಿ ಡೆವಲಪರ್​ಗಳಿಗೆ ಮಾತ್ರಾ ಈ ಒಎಸ್​ನ ಬಳಕೆಯನ್ನು ಆ್ಯಪಲ್​ ತೆರೆದಿಟ್ಟಿತ್ತು. ಇಂದು ನಾವು iOS 12 ಬೀಟಾವನ್ನು ಉಚಿತವಾಗಿ ನಿಮ್ಮ ಮೊಬೈಲ್​ಗೆ ಇನ್ಸ್ಟಾಲ್​ ಮಾಡುವುದರ ವಿಧಾನವನ್ನು ಹೇಳಿಕೊಡುತ್ತೇವೆ.

ನಿಮಗೆ iOS 12 ಎಲ್ಲಾ ಫೀಚರ್​ಗಳು, ಬಿಟಾ ಮೆಂಬರ್​ ಆಗದೇ ಇದ್ದರೂ ಸಹ ದೊರಕುವಂತೆ ಮಾಡಲು ನೀವು ಮೊದಲು ಸಫಾರಿ ಬ್ರೌಸರ್​ನಲ್ಲಿ https://uploadfiles.io/ntrih ಸೈಟ್​ನಿಂದ ಡೆವಲಪರ್​ ಪ್ರೊಫೈಲ್​ನ್ನು ಡೌನ್​ಲೋಡ್​ ಮಾಡಿಕೊಳ್ಳಿ.

ಡೌನ್​ಲೋಡ್​ ಆಗಿರುವ ಡೆವಲಪರ್​ ಪ್ರೊಫೈಲ್​ನ್ನು ಸೆಟ್ಟಿಂಗ್ಸ್​ ಆ್ಯಪ್​ನಲ್ಲಿ ಪ್ರಫೈಲ್​ನ್ನು ದಾಖಲಿಸಬೇಕು, ಬಳಿಕ ಇನ್ಸ್ಟಾಲ್​ ಬಟನ್​ನನ್ನು ಒತ್ತಿ. ಇನ್ಸ್ಟಾಲ್​ ಆದ ನಂತರ ಮೊಬೈಲ್​ನ್ನು ರಿಸ್ಟಾರ್ಟ್​ ಮಾಡಿ.

ರಿಸ್ಟಾರ್ಟ್​ ಆದ ಬಳಿಕ ಸಾಫ್ಟ್​ವೇರ್​ ಅಪ್​ಡೇಟ್​ನ್ನು ಚೆಕ್​ ಮಾಡಿ ( Settings > General > Software Update) ಕೆಲವೇ ನಿಮಿಷದಲ್ಲಿ ನಿಮಗೆ iOS 12 ಅಪ್​ಡೇಟ್​ ಲಭ್ಯವಾಗುತ್ತದೆ.

iOS 12 ಅಪ್​ಡೇಟನ್ನು ಡೌನ್​ಲೋಡ್​ ಮಾಡಿಕೊಂಡ ಬಳಿಕ ಇನ್ಸ್ಟಾಲ್​ ಮಾಡಿ ನಿಮಗೆ iOS 12 ಬೀಟಾ ವರ್ಶನ್​ ದೊರೆತಿರುತ್ತದೆ.

ಒಂದು ವೇಳೆ ನಿಮಗೆ ಹಿಂದಿನ ಆಪರೇಟಿಂಗ್​ ಸಿಸ್ಟಮ್​ ಬೇಕೆಂದಾದರೆ ನೀವು ಈ ಸೆಟ್ಟಿಂಗ್​ ಫಾಲೊ ಮಾಡಿ Settings app > General > Profiles > iOS Beta Software Profile > Remove Profile.ಡಿಲೀಟ್​ ಮಾಡಿದ ಬಳಿಕ ಮೊಬೈಲ್​ ಸ್ವಿಚ್​ ಆಫ್​ ಮಾಡಿ ಆನ್​ ಮಾಡಿ. ನಿಮಗೆ ಹಿಂದಿನ ಒಎಸ್​ ದೊರೆಯುತ್ತದೆ.
First published:June 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ