ನಿಮ್ಮ ಆ್ಯಂಡ್ರಾಯ್ಡ್​ ಮೊಬೈಲ್​ ಸ್ಪೀಡ್​ ವೃದ್ಧಿಸುವುದು ಹೇಗೆ?


Updated:August 26, 2018, 5:56 PM IST
ನಿಮ್ಮ ಆ್ಯಂಡ್ರಾಯ್ಡ್​ ಮೊಬೈಲ್​ ಸ್ಪೀಡ್​ ವೃದ್ಧಿಸುವುದು ಹೇಗೆ?

Updated: August 26, 2018, 5:56 PM IST
ನಮ್ಮ ಪ್ರತಿನಿತ್ಯದ ಜೀವನದಲ್ಲಿ ಸ್ಮಾರ್ಟ್​ಫೋನ್​ ಕೂಡಾ ಒಂದು ಅವಿಭಾಜ್ಯ ಅಂಗ ಎಂದರೂ ತಪ್ಪಾಗಲಾರದು. ಆದರೆ ಹೆಚ್ಚಿನ ಸಂದರ್ಭದಲ್ಲಿ ನಾವು ಇನ್ಸ್ಟಾಲ್​ ಮಾಡಿರುವ ಆ್ಯಪ್​ಗಳಿಂದಲೋ ಅಥವಾ ಹೆಚ್ಚಿನ ಗ್ರಾಫಿಕ್​ ಬಳಕೆಯಿಂದಲೋ ನಮ್ಮ ಆ್ಯಂಡ್ರಾಯ್ಡ್​ ಮೊಬೈಲ್​ ಕಾರ್ಯ ನಿರ್ವಹಣೆಯ ವೇಗದ ಮಿತಿ ಕುಂಠಿತಗೊಳ್ಳುತ್ತದೆ.

ಇತ್ತೀಚಿನ ಎಲ್ಲಾ ಮೊಬೈಲ್​ಗಳು ಕನಿಷ್ಟ ಎಂದರೂ 4GB ಇಂದ 8GB RAM ಹೊಂದಿವೆ, ಆದರೂ ಒಂದು ಬಾರಿ ಹ್ಯಾಂಗ್​ ಆದ ಮೊಬೈಲ್​ನ್ನು ಹಿಂದಿನ ಸ್ಥಿತಿಗೆ ತರುವಲ್ಲಿ ನಮ್ಮ ಅರ್ಧ ಜೀವ ಹೈರಾಣಾಗುತ್ತದೆ. ಒಂದು ವೇಳೆ ನಿಮ್ಮ ಬಳಿ ಉತ್ತಮ RAM ಇರುವ ಮೊಬೈಲ್​ ಇದ್ದೂ ಹ್ಯಾಂಗ್​ ಆಗುವ ಸಮಸ್ಯೆಯಿದೆ ಎಂದಾದಾರೆ ಹೆಚ್ಚಿನ RAM ಉಪಯೋಗಿಸುವ ಆ್ಯಪ್​ಗಳ ಮಾಹಿತಿಯನ್ನು ನೀವು ಕಲೆಹಾಕಿ ಅವುಗಳನ್ನು ಕಾರ್ಯವನ್ನು ಸ್ಥಗಿತಗೊಳಿಸಬೇಕು. ಬಳಿಕ ನಿಮ್ಮ ಮೊಬೈಲ್​ ಅತ್ಯಂತ ಮೃದುವಾಗಿ ಕಾರ್ಯ ನಿರ್ವಹಿಸುವಂತೆ ಮಾಡಿಕೊಳ್ಳಬಹುದು.


  • ಹೆಚ್ಚು RAM ಬಳಕೆ ಮಾಡುವ ಆ್ಯಪ್​ಗಳನ್ನು ತಿಳಿದುಕೊಳ್ಳಲು ಈ ರೀತಿ ಮಾಡಿ.

  • ಮೊದಲು ಸೆಟ್ಟಿಂಗ್ ಆಯ್ಕೆ ಮಾಡಿಕೊಂಡು, ಬಳಿಕ ಸ್ಟೋರೇಜ್​ ಅಥವಾ ಮೆಮೊರಿ ಆಯ್ಕೆಯನ್ನು ಒತ್ತಿರಿ

  • ಈ ಸ್ಟೋರೇಜ್​ ವಿಭಾಗದಲ್ಲಿ ಹೆಚ್ಚಿ ಮೆಮೊರಿಯನ್ನು ಬಳಸುತ್ತಿರುವ ಆ್ಯಪ್​ ಮಾಹಿತಿ ನಿಮಗೆ ಲಭ್ಯವಾಗುತ್ತದೆ.

  • Loading...

  • ಇನ್ನು ಮೆಮೊರಿ ಎಂಬ ವಿಭಾಗವನ್ನು ಆಯ್ಕೆ ಮಾಡಿದರೆ, ಅಪ್ಲಿಕೇಶನ್​ಗಳು ಬಳಸಿರುವ RAM ಕುರಿತು ಮಾಹಿತಿ ಲಭ್ಯವಾಗುತ್ತದೆ, ಎಷ್ಟು ಪ್ರಮಾಣದಲ್ಲಿ RAM ಬಳಕೆಯಾಗುತ್ತದೆ ಎಂಬುದರ ಕುರಿತು ಸ್ಪಷ್ಟ ಮಾಹಿತಿ ದೊರಕುತ್ತದೆ.


ಈ ಮಾಹಿತಿಯ ಮೇರೆಗೆ ನಿಮ್ಮ ಆ್ಯಪ್​ಗಳನ್ನು ಅನ್​ಇನ್ಸ್ಟಾಲ್​ ಅಥವಾ ಅವುಗಳ ಕಾರ್ಯ ನಿರ್ವಹಣೆಯನ್ನು ಸ್ಥಗಿತಗೊಳಿಸಬಹುದು. ಈ ರೀತಿ ಮಾಡುವುದರಿಂದ ನಿಮ್ಮ ಮೊಬೈಲ್​ ಬ್ಯಾಟರಿ ಲೈಪ್​ನ್ನು ಕೂಡಾ ವೃದ್ಧಿಸಬಹುದು.
First published:August 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...