Fake Banking Apps: ಇವು ನಕಲಿ ಬ್ಯಾಂಕ್​ ಆ್ಯಪ್​ಗಳು! ಹಣ ದೋಚುವ ಇಂಥಾ ಆ್ಯಪ್​ಗಳನ್ನು ಪತ್ತೆ ಹಚ್ಚೋದು ಹೀಗೆ..

Online Frauds: ಇತ್ತೀಚಿನ ದಿನಗಳಲ್ಲಿ, ನಕಲಿ ಬ್ಯಾಂಕಿಂಗ್ ಆ್ಯಪ್‌ಗಳು ಕೂಡ ವಂಚನೆಯ ವಿಧಾನವಾಗಿ ಮಾರ್ಪಟ್ಟಿವೆ. ನಕಲಿ ಆ್ಯಪ್‌ಗಳನ್ನು ಗೊತ್ತಿಲ್ಲದೆ ಬಳಸುವ ಜನರು ಕೂಡ ಅವುಗಳನ್ನು ಗುರುತಿಸಲು ಸಾಧ್ಯವಾಗದೇ ಇರುವುದು ಸಂಕಷ್ಟಕ್ಕೆ ಮತ್ತೊಂದು ದಾರಿಯಾಗಿದೆ.

Photo: Google

Photo: Google

  • Share this:
    Fake Banking Apps: ಡಿಜಿಟಲ್ ಯುಗದಲ್ಲಿ ಜನರು ಮನೆಯಲ್ಲಿಯೇ ಕುಳಿತುಕೊಂಡು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಬಳಸಿಕೊಂಡು ಬ್ಯಾಂಕುಗಳಿಗೆ ಸಂಬಂಧಿಸಿದ ಹೆಚ್ಚಿನ ಕೆಲಸವನ್ನು ನಿರ್ವಹಿಸುತ್ತಾರೆ. ಇದು ಬ್ಯಾಂಕಿಗೆ ಹೋಗುವ ಸಮಯವನ್ನು ಉಳಿಸುತ್ತದೆ ಮತ್ತು ಎಲ್ಲಾ ಕೆಲಸಗಳು ಬೇಗನೆ ಮುಗಿಯುತ್ತವೆ. ಆದರೆ ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯಗಳು ಹೆಚ್ಚಾದಾಗಿನಿಂದ, ಸೈಬರ್ ಅಪರಾಧ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಇದಕ್ಕೆ ಮುಖ್ಯ ಕಾರಣವೆಂದರೆ, ಅನೇಕ ಜನರಿಗೆ ಸೈಬರ್ ಅಪರಾಧದ ಬಗ್ಗೆ ಸಾಕಷ್ಟು ಮಾಹಿತಿ ಇಲ್ಲ ಮತ್ತು ಸೈಬರ್ ಅಪರಾಧಿಗಳು ಜನರನ್ನು ಹೇಗೆ ಆನ್ಲೈನ್ ​​ಬ್ಯಾಂಕ್ ವಂಚನೆಗೆ ಬಲಿಪಶುವನ್ನಾಗಿ ಮಾಡುತ್ತಾರೆ ಎಂಬ ಬಗ್ಗೆ ಗೊತ್ತಿಲ್ಲ.

    ಇತ್ತೀಚಿನ ದಿನಗಳಲ್ಲಿ, ನಕಲಿ ಬ್ಯಾಂಕಿಂಗ್ ಆ್ಯಪ್‌ಗಳು ಕೂಡ ವಂಚನೆಯ ವಿಧಾನವಾಗಿ ಮಾರ್ಪಟ್ಟಿವೆ. ನಕಲಿ ಆ್ಯಪ್‌ಗಳನ್ನು ಗೊತ್ತಿಲ್ಲದೆ ಬಳಸುವ ಜನರು ಕೂಡ ಅವುಗಳನ್ನು ಗುರುತಿಸಲು ಸಾಧ್ಯವಾಗದೇ ಇರುವುದು ಸಂಕಷ್ಟಕ್ಕೆ ಮತ್ತೊಂದು ದಾರಿಯಾಗಿದೆ.

    ನಕಲಿ ಬ್ಯಾಂಕಿಂಗ್ ಆಪ್‌ಗಳು ನಿಜವಾದ ಬ್ಯಾಂಕಿಂಗ್ ಆ್ಯಪ್‌ಗಳಂತೆ ಕಾಣುತ್ತವೆ ಮತ್ತು ಇಂತಹ ಪರಿಸ್ಥಿತಿಯಲ್ಲಿ ಬಳಕೆದಾರರು ಮೋಸ ಹೋಗುತ್ತಾರೆ ಮತ್ತು ಇದರ ಪರಿಣಾಮವಾಗಿ ಅಪರಾಧಿಗಳು ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡುತ್ತಾರೆ. ಅದಕ್ಕಾಗಿಯೇ ನೀವು ಮೋಸವನ್ನು ತಪ್ಪಿಸಲು ನಕಲಿ ಅಪ್ಲಿಕೇಶನ್‌ಗಳನ್ನು ಗುರುತಿಸುವುದು ಬಹಳ ಮುಖ್ಯ.

    ಸೈಬರ್ ಕಳ್ಳರು ಜನರ ಗೌಪ್ಯ ಡೇಟಾ ಅಥವಾ ಆನ್‌ಲೈನ್ ಬ್ಯಾಂಕಿಂಗ್ ಐಡಿ-ಪಾಸ್‌ವರ್ಡ್ ಇತ್ಯಾದಿಗಳ ಮೇಲೆ ನಕಲಿ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳನ್ನು ಹರಿಬಿಟ್ಟು ಖಾತೆಯಲ್ಲಿರುವ ಎಲ್ಲಾ ಹಣವನ್ನು ಹಿಂಪಡೆಯಲು ಮುಂದಾಗುತ್ತಾರೆ. ಹಾಗಾಗಿ ಎಚ್ಚರಿಕೆ ಮೂಲಕ ಬ್ಯಾಂಕ್​ ವ್ಯವಹಾರವನ್ನು ಆನ್​ಲೈನನಲ್ಲಿ ನಡೆಸಬೇಕಿದೆ.

    ನಿಮ್ಮ ಬ್ಯಾಂಕ್ ಖಾತೆಯನ್ನು ಸುರಕ್ಷಿತವಾಗಿರಿಸುವುದು ಹೇಗೆ?

    ಥರ್ಡ್ ಪಾರ್ಟಿ ಸೈಟ್​​ನಿಂದ ಯಾವುದೇ ಆ್ಯಪ್ ಅನ್ನು ಇನ್ ಸ್ಟಾಲ್ ಮಾಡಿಕೊಳ್ಳಬೇಡಿ. ಯಾವಾಗಲೂ ನಿಮ್ಮ ಫೋನ್‌ನಲ್ಲಿ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಿಂದ ಪರಿಶೀಲಿಸಿದ ಆಪ್‌ಗಳನ್ನು ಇರಿಸಿಕೊಳ್ಳಿ. ಇದು ವಂಚನೆಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

    ನಕಲಿ ಬ್ಯಾಂಕಿಂಗ್ ಆಪ್‌ಗಳನ್ನು ಗುರುತಿಸುವುದು ಹೇಗೆ?

    ನಕಲಿ ಬ್ಯಾಂಕಿಂಗ್ ಆ್ಯಪ್‌ಗಳು ನಿಮ್ಮ ಮೊಬೈಲ್ ಫೋನ್ ಬ್ಯಾಟರಿಯನ್ನು ಬೇಗನೆ ಖಾಲಿ ಮಾಡಬಹುದು. ಹಾಗಾಗಿ ನಿಮ್ಮ ಮೊಬೈಲ್ ಫೋನ್ ಹೊಸದಾಗಿದ್ದರೂ ಕಡಿಮೆ ಸಮಯದಲ್ಲಿ ಬ್ಯಾಟರಿ ಪದೇ ಪದೇ ಕಡಿಮೆಯಾಗುತ್ತಿದ್ದರೆ, ಅದು ಮೊಬೈಲ್ ನಲ್ಲಿ ಮಾಲ್ ವೇರ್ ಅಥವಾ ವೈರಸ್ ದಾಳಿಯಾಗಿದೆ ಎಂಬುದು ತಿಳಿದುಬರುತ್ತದೆ.

    ಯಾವುದೇ ಆ್ಯಪ್ ಡೌನ್‌ಲೋಡ್ ಮಾಡುವಾಗ ಮುನ್ನ ಅದರ ಹೆಸರಿನ ಕಾಗುಣಿತಕ್ಕೆ ಗಮನ ಕೊಡಿ. ಅದರಲ್ಲಿ ಏನಾದರೂ ತಪ್ಪಾಗಿದ್ದರೆ ಡೌನ್‌ಲೋಡ್ ಮಾಡಬೇಡಿ. ಆ್ಯಪ್ ಹೆಸರಿನಲ್ಲಿ ಒಂದೇ ಒಂದು ಅಕ್ಷರವನ್ನು ತಪ್ಪಾಗಿ ಬರೆದರೆ, ಅದು ನಕಲಿ ಆ್ಯಪ್ ಎಂದು ಅರ್ಥೈಸಿಕೊಳ್ಳಿ. ಈ ಆ್ಯಪ್​ಗಳಿಂದ ಬೇಗನೇ ಮೋಸ ಹೋಗಬಹುದು, ಅಂದರೆ ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು.

    Read Also:ಕರ್ನಾಟಕದಲ್ಲಿ ಇನ್ಮೇಲೆ Online Fantasy Game ಆಡಲು ಸಾಧ್ಯವಿಲ್ಲ!

    ಅಪ್ಲಿಕೇಶನ್ ಡೌನ್‌ಲೋಡ್ ಮಾಡುವಾಗ, ಎಷ್ಟು ಬಾರಿ ಡೌನ್‌ಲೋಡ್ ಮಾಡಲಾಗಿದೆ? ಎಂಬುದನ್ನು ಸಹ ನೆನಪಿನಲ್ಲಿಡಿ. ವಾಸ್ತವವಾಗಿ, ನೀವು ಒಂದೇ ಹೆಸರಿನ ಹಲವು ಆ್ಯಪ್‌ಗಳನ್ನು ನೋಡಿದರೆ ನಂತರ ಎಷ್ಟು ಬಾರಿ ಡೌನ್‌ಲೋಡ್‌ ಆಗಿದೆ ಎಂದು ಗಮನಿಸಿದರೆ ಯಾವುದು ನೈಜ ಮತ್ತು ನಕಲಿ ಆ್ಯಪ್​ ಎಂದು ಗುರುತಿಸಬಹುದು.
    Published by:Harshith AS
    First published: