• ಹೋಂ
 • »
 • ನ್ಯೂಸ್
 • »
 • ಮೊಬೈಲ್- ಟೆಕ್
 • »
 • Chat Hide: ನೀವು ವಾಟ್ಸಾಪ್​ನಲ್ಲಿ ಮೆಸೇಜ್​ ಮಾಡಿದ್ದು ಇನ್ನೊಬ್ಬರಿಗೆ ಕಾಣ್ಬಾರ್ದಾ? ಇಲ್ಲಿದೆ ಸಿಂಪಲ್​ ಟ್ರಿಕ್ಸ್​

Chat Hide: ನೀವು ವಾಟ್ಸಾಪ್​ನಲ್ಲಿ ಮೆಸೇಜ್​ ಮಾಡಿದ್ದು ಇನ್ನೊಬ್ಬರಿಗೆ ಕಾಣ್ಬಾರ್ದಾ? ಇಲ್ಲಿದೆ ಸಿಂಪಲ್​ ಟ್ರಿಕ್ಸ್​

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಹೆಚ್ಚಿನ ಜನರಿಗೆ ತಾವು ವಾಟ್ಸಾಪ್​ನಲ್ಲಿ ಮಾಡುವಂತಹ ಮೆಸೇಜ್​ ಇನ್ನೊಬ್ಬರು ನೋಡ್ಬಾರ್ದು ಎಂದು ಅಂದುಕೊಳ್ತಾರೆ. ಆದರೆ ಈ ಸಂದರ್ಭದಲ್ಲಿ ಏನು ಮಾಡೋದು ಅನ್ನೋ ಯೋಚನೆಯಲ್ಲಿರ್ತಾರೆ. ಆದರೆ ಈ ಟ್ರಿಕ್ಸ್ ಮೂಲಕ ನೀವು ವಾಟ್ಸಾಪ್​ನಲ್ಲಿ ಮಾಡುವಂತಹ ಚಾಟ್​ ಅನ್ನು ಸಹ ಈಗ ಹೈಡ್ ಮಾಡಬಹುದು.

 • Share this:

  ದೇಶದ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ (Messaging Application) ಆಗಿರುವ ವಾಟ್ಸಾಪ್​ ಇತ್ತೀಚೆಗೆ ಹೊಸ ಹೊಸ ಫೀಚರ್ಸ್​ಗಳನ್ನು ಪರಿಚಯಿಸುವ ಮೂಲ ಭಾರೀ ಚರ್ಚೆಯಲ್ಲಿದೆ. ವಾಟ್ಸಾಪ್​​ ಬಳಕೆದಾರರಿಗೆ ಅನುಕೂಲವಾಗುವಂತಹ  ಹಲವಾರು ಫೀಚರ್ಸ್​ಗಳನ್ನು ಇದುವರೆಗೆ ಪರಿಚಯಿಸಿದೆ. ಆದರೆ ಎಷ್ಟೋ ಜನರಿಗೆ ವಾಟ್ಸಾಪ್​ನಲ್ಲಿರುವಂತಹ (WhatsApp) ಕೆಲವು ಸೆಟ್ಟಿಂಗ್ಸ್​ಗಳ ಬಗ್ಗೆ ಗೊತ್ತೇ ಇಲ್ಲ. ಆದರೆ ಈ ಸೆಟ್ಟಿಂಗ್ಸ್​ ಮೂಲಕ ಬಳಕೆದಾರರು ತಮ್ಮ ವಾಟ್ಸಾಪ್ ಅಕೌಂಟ್ ಅನ್ನು ತಮಗೆ ಬೇಕಾದ ರೀತಿಯಲ್ಲಿ ಸೆಟ್​ ಮಾಡಿಟ್ಟುಕೊಳ್ಳಬಹುದು. ಇನ್ನು ನಮಗೆಲ್ಲರಿಗೂ ವಾಟ್ಸಾಪ್​ನಲ್ಲಿ ಸ್ಟೇಟಸ್​ ಹೈಡ್​ ಮಾಡುವ ಫೀಚರ್​ ತಿಳಿದಿರಬಹುದು. ಆದರೆ ಇನ್ಮುಂದೆ ಮೆಸೇಜ್​ ಅನ್ನು ಸಹ ಹೈಡ್ (Message Hide)​ ಮಾಡಬಹುದು.


  ಹೆಚ್ಚಿನ ಜನರಿಗೆ ತಾವು ವಾಟ್ಸಾಪ್​ನಲ್ಲಿ ಮಾಡುವಂತಹ ಮೆಸೇಜ್​ ಇನ್ನೊಬ್ಬರು ನೋಡ್ಬಾರ್ದು ಎಂದು ಅಂದುಕೊಳ್ತಾರೆ. ಆದರೆ ಈ ಸಂದರ್ಭದಲ್ಲಿ ಏನು ಮಾಡೋದು ಅನ್ನೋ ಯೋಚನೆಯಲ್ಲಿರ್ತಾರೆ. ಆದರೆ ಈ ಟ್ರಿಕ್ಸ್ ಮೂಲಕ ನೀವು ವಾಟ್ಸಾಪ್​ನಲ್ಲಿ ಮಾಡುವಂತಹ ಚಾಟ್​ ಅನ್ನು ಸಹ ಈಗ ಹೈಡ್ ಮಾಡಬಹುದು.


  ಆರ್ಕೈವ್ಡ್​ ಫೀಚರ್​


  ವಾಟ್ಸಾಪ್​ನಲ್ಲೊ ನಾವೆಲ್ಲರೂ ಈ ಸೆಟ್ಟಿಂಗ್ಸ್​ ಅನ್ನು ನೋಡಿರಬಹುದು. ಅದೇ ಆರ್ಕೈವ್ಡ್​ ಸೆಟ್ಟಿಂಗ್ಸ್​. ಇದು ಪ್ರತಿಯೊಬ್ಬರ ವಾಟ್ಸಾಪ್​ ಅಪ್ಲಿಕೇಶನ್​ನಲ್ಲಿರುತ್ತದೆ. ಈ ಫೀಚರ್ ಮೂಲಕ ನೀವು ಯಾವ ಮೆಸೇಜ್​ ಅನ್ನು ಹೈಡ್ ಮಾಡಬೇಕೆಂದು ಬಯಸುತ್ತೀರೋ ಅದನ್ನು ಹೈಡ್ ಮಾಡಬಹುದು. ಈ ಆಯ್ಕೆಯನ್ನು ಸೆಲೆಕ್ಟ್ ಮಾಡಿದರೆ ನೀವು ಸೆಲೆಕ್ಟ್ ಮಾಡಿದ ಕಾಂಟ್ಯಾಕ್ಸ್ ನಿಮ್ಮ ಚಾಟ್​ ಲೀಸ್ಟ್​ನಲ್ಲಿ ಕಾಣುವುದಿಲ್ಲ.
  ಇನ್ನು ಈ ಆರ್ಕೈವ್ಡ್​ ಫೀಚರ್​ ಮೂಲಕ ನಿಮ್ಮ ಚಾಟ್​ ಸ್ಕ್ರೀನ್​ ಅನ್ನು ಚಾಟ್​ ಹೈಡ್​ ಮಾಡ್ಬಹುದು. ಹಾಗೆಯೇ ನಿಮಗೆ ಅನ್​ಹೈಡ್​ ಮಾಡಬೇಕು ಎಂದಾಗ ಆರ್ಕೈವ್ಡ್​ ಸೆಟ್ಟಿಂಗ್ಸ್​ಗೆ ಹೋಗಿ ಅನ್​ಹೈಡ್​ ಮಾಡಿಕೊಳ್ಳಬಹುದು. ಈ ಆರ್ಕೈವ್ಡ್​ ಫೀಚರ್​ ಮೂಲಕ ಪರ್ಸನಲ್​ ಚಾಟ್​ ಮಾತ್ರವಲ್ಲದೇ, ಗ್ರೂಪ್​ ಚಾಟ್​ ಅನ್ನು ಸಹ ಹೈಡ್​ ಮಾಡ್ಬಹುದು.  ವಾಟ್ಸಾಪ್​​​ನಲ್ಲಿ ಶಾಶ್ವತವಾಗಿ ಚಾಟ್‌ ಹೈಡ್‌ ಮಾಡುವುದು ಹೇಗೆ?


  • ಮೊದಲಿಗೆ ವಾಟ್ಸಾಪ್​​​​​ ಅನ್ನು ಓಪನ್​ ಮಾಡಿ, ನೀವು ಆರ್ಕೈವ್ ಮಾಡಲು ಬಯಸುವ ಚಾಟ್ ಅನ್ನು ಆಯ್ಕೆಮಾಡಿ.

  • ಮೇಲಿನ ಮೂರು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಪಿನ್ ಮಾಡಿ, ಮ್ಯೂಟ್ ಮಾಡಿ ಮತ್ತು ಆರ್ಕೈವ್ ಮಾಡಿ.


  ಸಾಂಕೇತಿಕ ಚಿತ್ರ


  • ಆ ಆಯ್ಕೆಗಳಲ್ಲಿ ಆರ್ಕೈವ್ ಬಟನ್ ಮೇಲೆ ಕ್ಲಿಕ್ ಮಾಡಿ.

  • ಈ ಆರ್ಕೈವ್ ಆಯ್ಕೆಯು ನಿಮ್ಮ ಚಾಟ್ ಫೀಡ್‌ನ ಮೇಲ್ಭಾಗದಲ್ಲಿ ಕಾಣಿಸುತ್ತದೆ. ನೀವು ವಿಭಾಗಕ್ಕೆ ಹೋಗಬಹುದು ಮತ್ತು ನಿಮ್ಮ ಖಾಸಗಿ ಚಾಟ್‌ಗಳನ್ನು ಯಾವುದೇ ಸಮಯದಲ್ಲಿ ವೀಕ್ಷಿಸಬಹುದು.

  • ಅನ್ ಆರ್ಕೈವ್ ಆಯ್ಕೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಬಳಕೆದಾರರು ಆ ಚಾಟ್ ಅನ್ನು ಅನ್ ಆರ್ಕೈವ್ ಮಾಡಬಹುದು.

  • ನೀವು ಎಲ್ಲಾ ಚಾಟ್‌ಗಳನ್ನು ಆರ್ಕೈವ್ ಮಾಡಲು ಬಯಸಿದರೆ, ಚಾಟ್ಸ್ ಟ್ಯಾಬ್‌ಗೆ ಹೋಗಿ.

  • ಇನ್ನಷ್ಟು ಮೇಲೆ ಟ್ಯಾಪ್ ಮಾಡಿ ಮತ್ತು ನಂತರ ಸೆಟ್ಟಿಂಗ್‌ಗಳಿಗೆ ಹೋಗಿ. ಅಲ್ಲಿ ಚಾಟ್ಸ್ ಮೇಲೆ ಟ್ಯಾಪ್ ಮಾಡಿ.

  • ಈಗ ಚಾಟ್ ಹಿಸ್ಟರಿಗೆ ಹೋಗಿ ಮತ್ತು ಎಲ್ಲಾ ಚಾಟ್‌ಗಳನ್ನು ಹೈಡ್ ಮಾಡಿ.


  ಇದನ್ನೂ ಓದಿ: ವಾಟ್ಸಾಪ್​ನಿಂದ ಮತ್ತೊಂದು ಹೊಸ ಅಪ್ಡೇಟ್, ಇನ್ಮುಂದೆ ಕಾಲ್​ ಶೆಡ್ಯೂಲ್ ಸಹ​ ಮಾಡಿಡಬಹುದು!


  15 ನಿಮಿಷದಲ್ಲಿ ಎಡಿಟ್​ ಮಾಡ್ಬಹುದು


  ವಾಟ್ಸಾಪ್‌ ಶೀಘ್ರದಲ್ಲೇ ಎಡಿಟ್‌ ಸೆಂಡ್‌ ಮೆಸೇಜ್‌ ಆಯ್ಕೆಯನ್ನು ಪರಿಚಯಿಸಲು ಮುಂದಾಗಿದೆ. ಇದರಿಂದ ನೀವು ಈಗಾಗಲೇ ಸೆಂಡ್‌ ಮಾಡಿರುವ ಮೆಸೇಜ್‌ ಅನ್ನು ಎಡಿಟ್‌ ಮಾಡಲು ಅವಕಾಶ ನೀಡಲಿದೆ. ಆದರೆ ನೀವು ಮೆಸೇಜ್‌ ಅನ್ನು ಕಳುಹಿಸಿದ 15 ನಿಮಿಷಗಳ ಒಳಗೆ ಎಡಿಟ್ ಮಾಡಲು ಅವಕಾಶ ನೀಡಲಿದೆ ಎಂದು ವರದಿಯಾಗಿದೆ. ಇದರಿಂದ ನೀವು ಯಾರಿಗಾದರೂ ಮೆಸೇಜ್ ಕಳುಹಿಸಿದಾಗ ಅದರಲ್ಲಿ ಏನಾದರು ತಪ್ಪಿದ್ದರೆ ಆಗಲೇ ಎಡಿಟ್​ ಮಾಡುವಂತಹ ಅವಕಾಶ ಲಭ್ಯವಾಗುತ್ತದೆ.


  Published by:Prajwal B
  First published: