Reliance JioFiber: ಉಚಿತ 4K ಟಿವಿ ಪಡೆಯುವುದು ಹೇಗೆ?

ಜಿಯೋ ಗಿಗಾ ಫೈಬರ್ ಪ್ರಕಟಿಸಿರುವ 6 ಪ್ಯಾಕೇಜ್​ಗಳ ಪೈಕಿ ಗೋಲ್ಡ್​, ಡೈಮಂಡ್​, ಪ್ಲಾಟಿನಂ, ಮತ್ತು ಟೈಟಾನಿಯಂ ಪ್ಲಾನ್​ ಮೂಲಕ ಉಚಿತ HD ಟಿವಿ ದೊರೆಯಲಿದೆ.

news18-kannada
Updated:September 6, 2019, 3:41 PM IST
Reliance JioFiber: ಉಚಿತ 4K ಟಿವಿ ಪಡೆಯುವುದು ಹೇಗೆ?
ಜಿಯೋ ಗಿಗಾ ಫೈಬರ್
news18-kannada
Updated: September 6, 2019, 3:41 PM IST
ರಿಲಾಯನ್ಸ್​ ಜಿಯೋ ಫೈಬರ್​ ಸೆ.5 ರಂದು ವಾಣಿಜ್ಯ  ಸೇವೆಯನ್ನು ಆರಂಭಿಸಿದೆ. ಇದರಲ್ಲಿ ವಿವಿಧ ಪ್ಲಾಣ್​ ಮತ್ತು ಪ್ಯಾಕೇಜ್​ಗಳ ಜೊತೆಗೆ ಉಚಿತ HD ಟಿವಿಯನ್ನು ನೀಡುವುದಾಗಿ ಘೋಷಿಸಿದೆ.

ರಿಲಾಯನ್ಸ್​ ಜಿಯೋ ಫೈಬರ್​ ಒಟ್ಟು 6 ಪ್ಲಾನ್​ಗಳನ್ನು ಫೋಷಿಸಿದೆ. ಅದರ ಜೊತೆಗೆ ನಾರ್ಟನ್​ ಡಿವೈಸ್​ ಸೆಕ್ಯುರಿಟಿ ಕೂಡ ಲಭ್ಯವಿದ್ದು, 5 ಡಿವೈಸ್​ಗಳಿಗೆ ಬಳಸಬಹುದು.

ಜಿಯೋ ಫೈಬರ್​ ಸೇವೆಯನ್ನು ಅಳವಡಿಸಿಕೊಳ್ಳುವ ಗ್ರಾಹಕರು ಮೊದಲಿಗೆ 2,500 ರೂ. ಶುಲ್ಕವನ್ನು ಪಾವತಿಸಬೇಕು ಮತ್ತು 1,000 ರೂ. ಇನ್​ಸ್ಟಾಲೇಶನ್​ ಶುಲ್ಕ ಪಾವತಿಸಬೇಕು.

ದೇಶದಾದ್ಯಂತ 1,600 ನಗರಗಳಲ್ಲಿ ಜಿಯೋ ಗಿಗಾಫೈಬರ್​ ಸೇವೆ ಆರಂಭಗೊಂಡಿದ್ದು, 100Mbps  ವೇಗದ 699 ರೂ. ಗಳ ಆರಂಭಿಕ ಪ್ಯಾಕೇಜ್​ ಮೂಲಕ ಗ್ರಾಹಕರಿಗೆ ಲಭ್ಯವಿದೆ.

ಜಿಯೋ ಗಿಗಾ ಫೈಬರ್ ಪ್ರಕಟಿಸಿರುವ 6 ಪ್ಯಾಕೇಜ್​ಗಳ ಪೈಕಿ ಗೋಲ್ಡ್​, ಡೈಮಂಡ್​, ಪ್ಲಾಟಿನಂ, ಮತ್ತು ಟೈಟಾನಿಯಂ ಪ್ಲಾನ್​ ಮೂಲಕ ಉಚಿತ HD ಟಿವಿ ದೊರೆಯಲಿದೆ.

 ಗೋಲ್ಡ್​ ಪ್ಲ್ಯಾನ್​​

ಜಿಯೋ ಗೋಲ್ಡನ್​​ ಪ್ಲ್ಯಾನ್​ ಬಳಕೆದಾರರು 2 ವರ್ಷಕ್ಕೆ 31,176 ರೂ. ಶುಲ್ಕ ಪಾವತಿಸಬೇಕಿದ್ದು, ಬಳಕೆದಾರರಿಗೆ 12,000GB ಡೇಟಾ ದೊರೆಯಲಿದೆ. ಅಲ್ಲದೆ ತಿಂಗಳಿಗೆ ದರ 1,299 ರೂ.ಆಗಿದ್ದು, 250Mbps​ ವೇಗ ಲಭ್ಯವಿದೆ. ಈ ಯೋಜನೆಯನ್ನು ಬಳಸಿಕೊಂಡ ಗ್ರಾಹಕರಿಗೆ 12,990 ರೂ. ಮೌಲ್ಯದ 24 ಇಂಚಿನ ಎಚ್​ಡಿ ಟಿವಿ ದೊರೆಯಲಿದೆ
Loading...

 ಡೈಮಂಡ್​ ಪ್ಲ್ಯಾನ್

ಡೈಮಂಡ್​ ಪ್ಲಾನ್​ ಶುಲ್ಕ ತಿಂಗಳಿಗೆ 2,499 ರೂ. ಆಗಿದ್ದು, 15,000GB ಇಂಟರ್​ನೆಟ್​ ಅನ್ನು ಪಡೆಯಲಿದ್ದಾರೆ. ಅಲ್ಲದೆ 500Mbps​ ವೇಗದಲ್ಲಿ ಇಂಟರ್​ನೆಟ್​​ ಒದಗಲಿದೆ. ವಾರ್ಷಿಕ ಶುಲ್ಕ 29,988 ರೂ. ಆಗಿದ್ದು, ಬಳಕೆದಾರರು ಈ ಪ್ಲಾನ್​ ಅನ್ನು ಅಳವಡಿಸಿಕೊಂಡರೆ 12,990 ಇಂಚಿನ HD ಟಿವಿ ಸಿಗಲಿದೆ.

ಇದನ್ನೂ ಓದಿ: ಇಸ್ರೋ ಸಾಧನೆಗೆ ಮತ್ತೊಂದು ಮುಕುಟ; ಚಂದ್ರಯಾನ-1ರಿಂದ ಚಂದ್ರಯಾನ-2 ಯಶಸ್ಸಿನವರೆಗೆ ಇಲ್ಲಿದೆ ವಿವರ

ಪ್ಲಾಟಿನಂ ಪ್ಲ್ಯಾನ್ 

ಜಿಯೋ ಫೈಬರ್​​ ಪ್ಲಾಟಿನಂ ಪ್ಲ್ಯಾನ್​ ರೂ. 3,999 ಗೆ ಲಭ್ಯವಿದ್ದು, ಈ ಪ್ಲಾನ್​ ಅಳವಡಿಸಿಕೊಂಡ ಗ್ರಾಹಕರಿಗೆ 1GBps​ ವೇಗದ ಇಂಟರ್​ನೆಟ್​ ಒದಗಲಿದೆ. ವಾರ್ಷಿಕ ಪ್ಲಾನ್ 47,988 ರೂ ಆಗಿದ್ದು, 30,000 GB ಇಂಟರ್​ ನೆಟ್​ ಡೇಟಾ ಸಿಗಲಿದೆ. ಈ ಪ್ಲಾನ್​ ಅಳವಡಿಸಿಕೊಂಡ ಗ್ರಾಹಕರಿಗೆ 22,990 ಮೌಲ್ಯದ 32 ಇಂಚಿನ ಟಿವಿ ದೊರೆಯಲಿದೆ.

ಟೈಟಾನಿಯಂ ಪ್ಲ್ಯಾನ್

ಜಿಯೋ ಗೀಗಾ ಫೈಬರ್​ನ ಧೀರ್ಘಾವದಿ ಪ್ಲಾನ್​ ಇದಾಗಿದ್ದು, ತಿಂಗಳಿಗೆ 8,499 ರೂ ನೀಡುವ ಮೂಲಕ 1Gbps​ ವೇಗದ ಇಂಟರ್​ನೆಟ್​ ಸೇವೆ ಸಿಗಲಿದೆ. ಅಂತೆಯೇ ವಾರ್ಷಿಕ ಸೇವೆಯನ್ನು ಪಡೆಯುವುದಾದರೆ 1,01,988 ರೂ. ಗೆ  60,000GB ಡೇಟಾ ಸಿಗಲಿದೆ. ಈ ಪ್ಲಾನ್​​ ಆಯ್ದು ​ಕೊಂಡ ಗ್ರಾಹಕರಿಗೆ 44,999 ರೂ. ಮೌಲ್ಯದ 4K Tv ದೊರೆಯಲಿದೆ.

ಜಿಯೋ ಗಿಗಾಫೈಬರ್​ ಈ ನಾಲ್ಕು ಪ್ಲಾನ್​ ಅನ್ನು ಅಳವಡಿಸಿಕೊಳ್ಳುವ ಗ್ರಾಹಕರಿಗೆ ಮಾತ್ರ ಉಚಿತ ಟಿವಿ ದೊರೆಯಲಿದೆ​.

 

 
First published:September 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...