ಫೇಸ್ಬುಕ್ ನಕಲಿ ಖಾತೆಗಳನ್ನ ಗುರುತಿಸಿ ಡಿಲೀಟ್ ಮಾಡುತ್ತಿದೆ. ಆದರೂ ಅಲ್ಲೊಂದು ಇಲ್ಲೊಂದರಂತೆ ಅಡಗಿ ಕುಳಿತು ಉಪಟಳ ನೀಡುವ ಖಾತೆಗಳಿರುತ್ತವೆ. ಇನ್ನು ಕೆಲವರು ಬ್ಲಾಕ್ ಮೇಲ್ ಮಾಡುವ ಅಥವಾ ಸಹಾಯದ ರೂಪದಲ್ಲಿ ಹಣ ಎಗರಿಸುವ ನಕಲಿ ಖಾತೆಗಳಿರುತ್ತದೆ. ಅಂತಹ ಖಾತೆಗಳನ್ನು ಸರಿಯಾಗಿ ಪರಿಶೀಲಿಸಿ ಫೇಸ್ಬುಕ್ ಡಿಲೀಟ್ ಮಾಡುತ್ತದೆ.
ಕೆಲಮೊಮ್ಮೆ ಒಬ್ಬನ ಹೆಸರಲ್ಲಿ ಎರಡು ಖಾತೆಯನ್ನು ತೆರೆಯಲಾಗಿರುತ್ತದೆ. ಆದರೆ ಬಳಕೆದಾರರ ಗಮನಕ್ಕೆ ಬಂದಾಗ ಆತ ಅಕ್ಷರಶ: ಖಾತೆ ಹ್ಯಾಕ್ ಆಗಿದೆ ಎಂದು ಭಾವಿಸುತ್ತಾನೆ. ಆದರೆ ನಿಜವಾಗಿಯೂ ಖಾತೆ ಹ್ಯಾಕ್ ಆಗಿರುವುದಿಲ್ಲ. ನಕಲಿ ಖಾತೆ ಸೃಷ್ಟಿಸಿ ಈ ರೀತಿಯ ತೊಂದರೆ ನೀಡಿರುತ್ತಾರೆ.ಆದರೆ ಇಂತಹ ನಕಲಿ ಖಾತೆಗಳು ಕಣ್ಣ ಮುಂದೆ ಬಂದಾಗ 5 ನಿಮಿಷದಲ್ಲಿ ತೆಗೆದು ಹಾಕಬಹುದಾಗಿದೆ. ಕೆಲವೊಂದು ಕ್ರಮ ಅನುಸರಿಸಿ ನಿಮ್ಮ ಕಣ್ಣೆದುರಿಗೆ ಕಾಣಿಸಿದ ನಕಲಿ ಖಾತೆಯನ್ನು ರಿಮೂವ್ ಮಾಡಬಹುದಾಗಿದೆ.
ಮುಖ್ಯವಾಗಿ ನಕಲಿ ಖಾತೆಯ ಮೂಲಕ ಫ್ರೆಂಡ್ಸ್ ರಿಕ್ವೆಸ್ಟ್ ಬಂದರೆ ಸ್ವೀಕರಿಸಬಾರದು. ಆ ಖಾತೆಯನ್ನು ರಿಮೂವ್ ಮಾಡುವುದಾದರೆ ನಕಲಿ ಖಾತೆಯ ರೆಸ್ಪಾಂಡ್ ಪಕ್ಕದಲ್ಲಿ ಮೂರು ಚುಕ್ಕಿ ಕಾಣಿಸುತ್ತದೆ. ಅದನ್ನು ಒತ್ತಿದ ನಂತರ ಪ್ರೊಫೈಲ್ ಸೆಟ್ಟಿಂಗ್ ಕಾಣಿಸುತ್ತದೆ. ಸರಿಯಾಗಿ ಗಮನಿಸಬೇಕಾದ ಅಂಶವೆಂದರೆ ಖಾತೆ ನಕಲಿ ಅಥವಾ ಅಸಲಿ ಎಂದು ತಿಳಿಯಲು ಖಾತೆದಾರ ಹೆಸರು ಕಾಣಿಸುತ್ತದೆ. ಉದಾಹರಣೆ ಫೇಸ್ಬುಕ್.ಕಾಂ/ ರಮೇಶ್ ಎಂದು ಇರುತ್ತದೆ. ಇದು ಫೆಸ್ಬುಕ್ ಯುನಿಕ್ ಐಡಿಯಾಗಿದ್ದು, ಅಸಲಿ ಎಂದು ಗೋಚರಿಸುತ್ತದೆ.
ಆದರೆ ಇದೇ ಜಾಗದಲ್ಲಿ ಬೇರೆ ಹೆಸರಿದ್ದರೆ. ನಕಲಿ ಎಂದು ಪತ್ತೆಹಚ್ಚಬಹುದಾಗಿದೆ. ಯಾಕೆಂದರೆ ಖಾತೆದಾರ ಹೆಸರನ್ನು ಬದಲಾಯಿಸಿಕೊಂಡಿದ್ದಾನೆ ಎಂಬುದು ಪ್ರಮುಖವಾಗಿ ಗೋಚರಿಸುತ್ತದೆ.
ನಕಲಿ ಖಾತೆ ಎಂದು ದೃಢಪಟ್ಟರೆ ಅದೇ ಪ್ರೊಪೈಲ್ನಲ್ಲಿ -ಪೈಂಡ್ ಸಪೋರ್ಟ್ ಆರ್ ರಿಪೋರ್ಟ್ ಪ್ರೊಫೈಲ್ ಎಂಬ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಮುಂದಿನ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ -ಪ್ರಿಟೆಂಡಿಂಗ್ ಟು ಬಿ ಸಮ್ಒನ್ ಮೇಲೆ ಕ್ಲಿಕ್ ಮಾಡಿ Me ಎಂದು ಒತ್ತಿದರಾಯ್ತು. ನಿಮ್ಮ ಹೆರಿನಲ್ಲಿ ತೆರೆದ ನಕಲಿ ಖಾತೆಯ ಬಗ್ಗೆ ರಿಪೋರ್ಟ್ ಫೇಸ್ಬುಕ್ಗೆ ಹೋಗುತ್ತದೆ. ನಂತರ ಪರಿಶೀಲಿಸಿ ಖಾತೆ ಡಿಲೀಟ್ ಮಾಡುತ್ತದೆ.
ಇನ್ನು ಸ್ನೇಹಿತನ ಹೆಸರಿನಲ್ಲಿ ನಕಲಿ ಖಾತೆಯಿದ್ದರೆ –ಎ ಫ್ರೆಂಡ್ ಆಯ್ಕೆ ಒತ್ತಿ. ನಂತರ ಕೇಳುವ ವಿಚ್ ಫ್ರೆಂಡ್ ಆಯ್ಕೆಯನ್ನು ಕ್ಲಿಕ್ ಮಾಡಿ ರಿಪೋರ್ಟ್ ಮಾಡಿ
ದಿನಕಳೆದಂತೆ ಇಂಟರ್ನೆಟ್ ಮೂಲಕ ಅನೇಕ ಮೋಸದ ಜಾಲಗಳು ಪತ್ತೆಯಾಗುತ್ತಿರುತ್ತದೆ. ಅದರಂತೆ ಫೇಸ್ಬುಕ್ನಲ್ಲಿ ನಕಲಿ ಅಥವಾ ಫೇಕ್ ಖಾತೆಯ ಉಪಟಳದಿಂದ ಅನೇಕರು ತೊಂದರೆ ಸಿಲುಕಿದ ಪ್ರಸಂಗ ಕಣ್ಣೆದುರಿಗೆ ಬರುತ್ತಿರುತ್ತದೆ, ಆದರೆ ಇಂತಹ ನಕಲಿ ಖಾತೆ ಕಂಡರೆ ಕೂಡಲೇ ರಿಪೋರ್ಟ್ ಮಾಡಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ