ನಗರದಲ್ಲಿ ಸ್ಮಾರ್ಟ್ಫೋನ್ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ನಮಗೆ ಗೊತ್ತಿಲ್ಲದಂತೆ ಕಳ್ಳರು ಮೊಬೈಲ್ ಎಗರಿಸುತ್ತಾರೆ. ಮೆಟ್ರೋ, ಬಸ್ಸಿನಲ್ಲಿ ಚಲಿಸುವ ವೇಳೆಗೆ ಗೊಚರಕ್ಕೆ ಬಾರದಂತೆ ಮೊಬೈಲ್ ಎಗರಿಸಿ ಮಾಯವಾಗುತ್ತಾರೆ. ಇಂತಹ ಘಟನೆಗಳು ತಕ್ಷಣಕ್ಕೆ ನಮಗೆ ಗೊತ್ತಾಗದಿದ್ದರು, ಮೊಬೈಲ್ ಕಳೆದುಕೊಂಡ ಬಳಿಕ ಚಿಂತೆಗೆ ದೂಡುವಂತೆ ಮಾಡುತ್ತದೆ. ತಕ್ಷಣಕ್ಕೆ ಏನು ತೋಚದೆ ಕೊನೆಗೆ ಪೋಲೀಸ್ ಠಾಣೆಯಲ್ಲಿ ದೂರು ನೀಡಬೇಕಾದ ಅನಿವಾರ್ಯತೆ ಎದುರಾಗುತ್ತದೆ.
ಇಂತಹ ಸಂದರ್ಭದಲ್ಲಿ ಪೊಲೀಸರ ನೆರವಿನಿಂದ ಕೆಲಮೊಮ್ಮೆ ಸ್ಮಾರ್ಟ್ಫೋನ್ಗಳು ಮರಳಿ ಸಿಗುತ್ತದೆ. ಆದರೆ ಶೇ 50 ರಷ್ಟು ಸ್ಮಾರ್ಟ್ಫೋನ್ಗಳು ಮತ್ತೆ ಕೈ ಸೇರುವುದು ಬಹಳ ವಿರಳ. ಹಾಗಾಗಿ ತಕ್ಷಣ ಸ್ಮಾರ್ಟ್ಫೋನ್ ಕಳೆದುಕೊಂಡರೆ ಮೊದಲು ಏನು ಮಾಡಬೇಕು? ಆ ಸ್ಮಾರ್ಟ್ಫೋನ್ ಅನ್ನು ಹುಡುಕುವುದು ಹೇಗೆ? ಇಲ್ಲಿದೆ ಮಾಹಿತಿ.
ಸಾಕಷ್ಟು ಜನರಿಗೆ ತಿಳಿದಿಲ್ಲ. ಕಳೆದುಕೊಂಡ ಸ್ಮಾರ್ಟ್ಫೋನ್ಗಳನ್ನು ತಾವೇ ಹುಡುಕಬಹುದು!. ಅದು ಯಾವ ಪ್ರದೇಶದದಲ್ಲಿದೆ ತಿಳಿಯಬಹುದು ಎಂದು!. ಈ ಸರಳ ವಿಧಾನದ ಮೂಲಕ ಸ್ಮಾರ್ಟ್ಫೋನ್ ಪತ್ತೆ ಹಚ್ಚಬಹುದಾಗಿದೆ.
ಕೆಲವು ಸುಳಿವುಗಳ ಮೂಲಕ ನಿಮ್ಮ ಸ್ಮಾರ್ಟ್ಫೋನ್ ಅನ್ನು ನೀವು ಸುಲಭವಾಗಿ ಪತ್ತೆಹಚ್ಚಬಹುದು. ಇದಕ್ಕಾಗಿ ನಿಮ್ಮ ಸ್ಮಾರ್ಟ್ಫೋನ್ ಇಂಟರ್ನೆಟ್ ಸಂಪರ್ಕವನ್ನು ಹೊಂದಿರಬೇಕು. ಮಾತ್ರವಲ್ಲದೆ, Google ಖಾತೆ ಲಾಗಿನ್ ಇರಬೇಕು ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕು.
ಈ ಮೂಲಕ ಕಳೆದು ಹೋದ ಸ್ಮಾರ್ಟ್ಫೋನ್ ಟ್ರ್ಯಾಕ್ ಮಾಡಿ:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ