ಸೈಬರ್ ಕ್ರೈಂ ಪ್ರಕರಣ: ಆನ್​ಲೈನ್​ನಲ್ಲಿ ದೂರು ದಾಖಲಿಸುವುದು ಹೇಗೆ ಗೊತ್ತಾ?

ಸಾರ್ವಜನಿಕರು ದೇಶದ ಯಾವುದೇ ಮೂಲೆಯಲ್ಲಿ ಸೈಬರ್​ ಪ್ರಕರಣಗಳಿಗೆ ಸಂಭಂದಿಸಿದಂತೆ ಆನ್​ಲೈನ್​ನಲ್ಲೇ ದೂರುದಾಖಲಿಸುವ ಅವಕಾಶವನ್ನು ವ್ಯವಸ್ಥೆಯನ್ನು ಮಾಡಲಾಗಿದೆ.

news18
Updated:May 1, 2019, 3:37 PM IST
ಸೈಬರ್ ಕ್ರೈಂ ಪ್ರಕರಣ: ಆನ್​ಲೈನ್​ನಲ್ಲಿ ದೂರು ದಾಖಲಿಸುವುದು ಹೇಗೆ ಗೊತ್ತಾ?
ಅಲ್ಲಿ ಸಿಕ್ಕ ನಂಬರ್ಗೆ ಕರೆ ಮಾಡಿ ನಡೆದ ಘಟನೆ ಬಗ್ಗೆ ಹೇಳಿದ್ದಾರೆ. ದೂರವಾಣಿ ಕರೆಯಲ್ಲಿ ಮಾತನಾಡಿ ವ್ಯಕ್ತಿ ಡೆಬಿಟ್ ಕಾರ್ಡ್ ಮಾಹಿತಿ ಕೇಳಿದ್ದಾನೆ.
  • News18
  • Last Updated: May 1, 2019, 3:37 PM IST
  • Share this:
ದೇಶದಲ್ಲಿ ಸೈಬರ್ ಕ್ರೈಂ ವಂಚನೆ​ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ನಿಟ್ಟಿನಲ್ಲಿ ಸೈಬರ್​ ಪಾತಕಿಗಳಿಗೆ ಕಡಿವಾಣ  ಹಾಕಲು ಕೇಂದ್ರ ಸರ್ಕಾರ ಹೊಸದಾದ ಯೋಜನೆಯನ್ನು ರೂಪಿಸಿದೆ. ಎಟಿಎಂ, ಕ್ರೆಡಿಟ್​ ಕಾರ್ಡ್​ ವಂಚನೆ, ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೋ-ಫೋಟೋ ಅಪ್​ಲೋಡ್​, ಅವಹೇಳನಕಾರಿ ಬರಹ, ಹ್ಯಾಕಿಂಗ್​ ವಿಚಾರಗಳಿಗೆ ಸಂಬಂಧಿಸಿ ಸಾರ್ವಜನಿಕರು ಆನ್​ಲೈನ್​ನಲ್ಲೇ ದೂರುದಾಖಲಿಸಲು ವ್ಯವಸ್ಥೆಯನ್ನು ಅನುವುಮಾಡಿಕೊಟ್ಟಿದೆ.

ಸಾರ್ವಜನಿಕರು ದೇಶದ ಯಾವುದೇ ಮೂಲೆಯಲ್ಲಿ ಸೈಬರ್​ ಪ್ರಕರಣಗಳಿಗೆ ಸಂಭಂದಿಸಿದಂತೆ ಆನ್​ಲೈನ್​ನಲ್ಲೇ ದೂರುದಾಖಲಿಸುವ ಅವಕಾಶವನ್ನು ವ್ಯವಸ್ಥೆಯನ್ನು ಮಾಡಲಾಗಿದೆ. ಈ ವ್ಯವಸ್ಥೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲೂ ವೃದ್ಧಿಸುವ ಸಲುವಾಗಿ ಸಹ ಸಮಿತಿ ರಚನೆಗೆ ಕೇಂದ್ರ ಸರ್ಕಾರ ಸೂಚಿಸಿದೆ.

ಆನ್​ಲೈನ್​ನಲ್ಲೇ ದೂರು ಸ್ವೀಕಾರ ವ್ಯವಸ್ಥೆಗಾಗಿ ಕೇಂದ್ರ ಸರ್ಕಾರ ‘ಸೈಕಾರ್ಡ್​‘ ಹೆಸರಿನ ಪೋರ್ಟಲ್​ವೊಂದನ್ನು​ ಅಭಿವೃದ್ಧಿ ಪಡಿಸಿದ್ದು, ಐಸಿಸಿಸಿ (Indian Cyber crime co ordinate center) ಎಂಬ ಹೆಸರು ನೀಡಲಾಗಿದೆ.

ಇದನ್ನೂ ಓದಿ: ಅಂಬಿ ಇಲ್ಲದ ಹುಟ್ಟುಹಬ್ಬಕ್ಕೆ ಬೇಸರದಲ್ಲೂ ಖುಷಿ : ಮೇ 23ಕ್ಕೆ ಮಂಡ್ಯ ಫಲಿತಾಂಶ, 24ಕ್ಕೆ ಸಿನಿಮಾ ರಿಲೀಸ್ !

ಸಾರ್ವಜನಿಕರು ಸೈಬರ್​ ಕ್ರೈಂ ಕುರಿತಾದ ಅಪರಾಧ ಮಾಹಿತಿಗಳನ್ನು ಈ ಪೋರ್ಟಲ್​ ಮೂಲಕ ಲಾಗಿನ್​ ಆಗಿ ದೂರು ದಾಖಲಿಸಬಹುದು. ಬಳಿಕ ದೂರುಗಳಿಗೆ ಸಂಬಂಧ ಪಟ್ಟ ಸ್ಥಳೀಯ ಸೈಬರ್​ ಕ್ರೈಂ ಪೋಲಿಸರಿಗೆ ಈ ವಿಚಾರವನ್ನು ರವಾನಿಸಲಾಗುತ್ತದೆ. ಈ ಮೂಲಕ ಸೈಬರ್​ ಸಿಬ್ಬಂಧಿ ದೂರುದಾರರನ್ನು ಸಂಪರ್ಕಿಸಿ ಎಫ್​ಐಆರ್​​ ದಾಖಲಿಸಿಕೊಳ್ಳುತ್ತಾರೆ.

ರಾಜ್ಯ ಮಟ್ಟದಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಚಾಲನೆಗೆ ಬಂದಿದೆ. ಸೈಕಾರ್ಡ್​ ಪೋರ್ಟಲ್​ನಲ್ಲಿ ಸಲ್ಲಿಕೆಯಾಗುವ ಕೆಲವು ದೂರುಗಳಿಗೆ ಸ್ಪಂದಿಲಾಗುತ್ತಿದೆ. ಈ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯ ರೂಪಕ್ಕೆ ಇಳಿಸುವ ಕಾರ್ಯ ಅಂತಿಮ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಸಾರ್ವಜನಿಕರಿಗೆ ಇದರ ಸೇವೆ ಲಭ್ಯವಾಗಲಿದೆ.

First published:May 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading