• Home
  • »
  • News
  • »
  • tech
  • »
  • iPhone: ನಿಮ್ಮ ಹಳೆ ಐಫೋನ್ ಹೊಸದರಂತೆ ಸ್ಪೀಡ್ ಆಗಬೇಕಾ? ಹಾಗಿದ್ರೆ ಈ 3 ಸಿಂಪಲ್ ಟಿಪ್ಸ್ ಫಾಲೋ ಮಾಡಿ

iPhone: ನಿಮ್ಮ ಹಳೆ ಐಫೋನ್ ಹೊಸದರಂತೆ ಸ್ಪೀಡ್ ಆಗಬೇಕಾ? ಹಾಗಿದ್ರೆ ಈ 3 ಸಿಂಪಲ್ ಟಿಪ್ಸ್ ಫಾಲೋ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಲಕ್ಷಗಟ್ಟಲೇ ವ್ಯಯಿಸಿದ ಫೋನ್‌ (Phone) ಅನ್ನು ಒಂದೆರಡು ವರ್ಷನಾದರೂ ಬಳಸದಿದ್ದರೆ ಹೇಗೆ ಅಲ್ವಾ? ಹಳೇ ಫೋನ್‌ (Old Phone) ಅನ್ನೇ ಇನ್ನೂ ಕೆಲ ವರ್ಷಗಳ ಕಾಲ ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಲು ಕೆಲವು ಟಿಪ್ಸ್‌ (Tips) ಗಳಿವೆ.

  • Trending Desk
  • 5-MIN READ
  • Last Updated :
  • Share this:

ಪ್ರತಿವರ್ಷ ಆಪಲ್‌ (Apple) ಹೊಸ ಸರಣಿಯ ಐಫೋನ್ (iPhone) ಅನ್ನು ತನ್ನ ಗ್ರಾಹಕರಿಗೆ ಪರಿಚಯಿಸುತ್ತಲೇ ಇರುತ್ತದೆ. ಹೊಸ ಸರಣಿ (New Models) ಬಂದಾಗ ಅದರ ಫೀಚರ್‌ (Features) ಗಳಿಗೆ ಮಾರುಹೋಗುವಾಗ ಗ್ರಾಹಕರಿಗೆ ಹಳೇ ಫೋನ್‌ ಬೋರಾಗಿ ಬಿಡುತ್ತದೆ. ಆದರೆ ಲಕ್ಷಗಟ್ಟಲೇ ವ್ಯಯಿಸಿದ ಫೋನ್‌ (Phone) ಅನ್ನು ಒಂದೆರಡು ವರ್ಷನಾದರೂ ಬಳಸದಿದ್ದರೆ ಹೇಗೆ ಅಲ್ವಾ? ಹಳೇ ಫೋನ್‌ (Old Phone) ಅನ್ನೇ ಇನ್ನೂ ಕೆಲ ವರ್ಷಗಳ ಕಾಲ ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಲು ಕೆಲವು ಟಿಪ್ಸ್‌ (Tips) ಗಳಿವೆ. ಸಾಮಾನ್ಯ ಬಳಕೆದಾರರು ಯಾವುದೇ ಪ್ರಮುಖ ವೈಶಿಷ್ಟ್ಯವನ್ನು ಕಳೆದುಕೊಳ್ಳದೆ ಕನಿಷ್ಠ ಮೂರು ವರ್ಷಗಳವರೆಗೆ ಐಫೋನ್ ಅನ್ನು ಬಳಸುವುದನ್ನು ಮುಂದುವರಿಸಬಹುದು.


ಸ್ಪೀಡ್‌ ಆಗಿ ಕಾರ್ಯನಿರ್ವಹಿಸಲು ಮೂರು ಸಲಹೆ


ನಿಮ್ಮ ಐಫೋನ್‌ನ ಜೀವಿತಾವಧಿಯನ್ನು ವಿಸ್ತರಿಸಲು ಮತ್ತು ನಿಮ್ಮ ಆಪಲ್‌ ಸಾಧನದಿಂದ ಹೆಚ್ಚಿನ ವೈಶಿಷ್ಟ್ಯತೆ ಪಡೆಯಲು ಈ ಸಿಂಪಲ್‌ ಸಲಹೆಗಳನ್ನು ಅನುಸರಿಸಿ.


1) ಯಾವಾಗಲೂ ಅಪ್ಡೇಟ್ ಸಾಫ್ಟ್‌ವೇರ್ ‌ಅನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಿ


ಸಾಫ್ಟ್‌ವೇರ್ ನವೀಕರಣಗಳೊಂದಿಗೆ ಹೊಸ ವೈಶಿಷ್ಟ್ಯಗಳನ್ನು ಸೇರಿಸಲು ಆಪಲ್ ಹೆಸರುವಾಸಿಯಾಗಿದೆ. ಐಫೋನ್ ಕನಿಷ್ಠ ನಾಲ್ಕು ಪ್ರಮುಖ iOS ನವೀಕರಣಗಳನ್ನು ಸ್ವೀಕರಿಸುತ್ತದೆ.ಇದು ಐಫೋನ್ ಅನ್ನು ಸುರಕ್ಷಿತವಾಗಿ ಮತ್ತು ನವೀಕೃತವಾಗಿರಿಸಲು ಸಹಕಾರಿಯಾಗಿದೆ. ಇತ್ತೀಚಿನ iOS 16.2 ಅಪ್‌ಡೇಟ್‌ನೊಂದಿಗೆ, ಐಫೋನ್‌ 12 ಮತ್ತು ಐಫೋನ್ 13 ಸರಣಿಯಲ್ಲಿ 5G ನೆಟ್‌ವರ್ಕಿಂಗ್ ಅನ್ನು ಸಕ್ರಿಯಗೊಳಿಸಿದೆ.


ಹೊಸ ವೈಶಿಷ್ಟ್ಯಗಳ ಜೊತೆಗೆ, ಸಾಫ್ಟ್‌ವೇರ್ ನಿರ್ಣಾಯಕ ಭದ್ರತಾ ಪರಿಹಾರಗಳನ್ನು ನೀಡುತ್ತದೆ ಮತ್ತು ಹಿಂದಿನ ನಿರ್ಮಾಣದಲ್ಲಿ ಅಸ್ತಿತ್ವದಲ್ಲಿರುವ ಸಾಫ್ಟ್‌ವೇರ್ ದೋಷವನ್ನು ಸರಿಪಡಿಸುತ್ತದೆ. ಆದ್ದರಿಂದ, ನಿಮ್ಮ ಐಫೋನ್‌ನಲ್ಲಿ ಇತ್ತೀಚಿನ ಸಾಫ್ಟ್‌ವೇರ್ ಅಪ್‌ಡೇಟ್ ಅನ್ನು ಸ್ಥಾಪಿಸಲು ಯಾವಾಗಲೂ ಶಿಫಾರಸು ಮಾಡಲಾಗುತ್ತದೆ.ನಿಮ್ಮ ಐಫೋನ್‌ನಲ್ಲಿ ಲಭ್ಯವಿರುವ ಇತ್ತೀಚಿನ iOS ಆವೃತ್ತಿಯನ್ನು ಸ್ಥಾಪಿಸಲು ಸೆಟ್ಟಿಂಗ್‌ಗಳು > ಜನರಲ್ > ಸಾಫ್ಟ್‌ವೇರ್ ಅಪ್‌ಡೇಟ್‌ಗೆ‌ ಹೋಗಿ ಇನ್‌ಸ್ಟಾಲ್‌ ಮಾಡಿಕೊಳ್ಳಿ.


ಸಾಫ್ಟ್‌ವೇರ್ ಇನ್‌ಸ್ಟಾಲ್‌ ಮಾಡುವ ಮುನ್ನ ನಿಮ್ಮ ಫೋನ್‌ನಲ್ಲಿ ಕನಿಷ್ಠ 60% ಬ್ಯಾಟರಿ ಮತ್ತು ಉತ್ತಮ ಇಂಟರ್ನೆಟ್ ಇದೆಯೇ ಎಂದು ಖಚಿತಪಡಿಸಿಕೊಳ್ಳಿ.


ಇದನ್ನೂ ಓದಿ: ಸ್ಮಾರ್ಟ್​ಫೋನ್​ ಅಖಾಡದಲ್ಲಿ ಇದ್ರದ್ದೇ ಹವಾ, ಎಲ್ಲರ ಕೈಯಲ್ಲೂ ರಾರಾಜಿಸುತ್ತಿದೆ ರಿಯಲ್​ಮಿ 10 ಪ್ರೋ!


2) ಬ್ಯಾಟರಿಯನ್ನು ಬದಲಾಯಿಸುವುದು


ಹಳೆಯ ಐಫೋನ್‌ ಉತ್ತಮವಾಗಿ ಕಾರ್ಯನಿರ್ವಹಿಸಲು ಬ್ಯಾಟರಿಯನ್ನು ನೀವು ಬದಲಾಯಿಸಬಹುದು. ನಿಮ್ಮ ಹಳೆಯ ಐಫೋನ್‌ ಉತ್ತಮವಾಗಿ ಕಾರ್ಯನಿರ್ವಹಿಸಲು ಇದು ಪ್ರಮುಖವಾದ ಅಂಶ.


ಮುಖ್ಯವಾಗಿ ಬ್ಯಾಟರಿ ಬದಲಾವಣೆ ಮಾಡುವಾಗ ಐಫೋನ್‌ನ ಅಧಿಕೃತ ಸೇವಾ ಕೇಂದ್ರದಿಂದ ಬದಲಿಸಿ. ಡಮ್ಮಿ ಬ್ಯಾಟರಿಗಳನ್ನು ಹಾಕುವುದಿಂದ ಫೋನ್‌ ಬೇಗ ಹಾಳಾಗಬಹುದು. ಹೀಗಾಗಿ ಅಧಿಕೃತ ಅಂಗಡಿಗಳಲ್ಲಿ ಖರೀದಿಸಿ.ನಿಮ್ಮಹಳೇಯ ಫೋನಿನ ಬ್ಯಾಟರಿ ಸಾಮರ್ಥ್ಯ ಪರಿಶೀಲಿಸಲು ಸೆಟ್ಟಿಂಗ್‌ಗಳು > ಬ್ಯಾಟರಿ > ಬ್ಯಾಟರಿ ಹೆಲ್ತ್‌ ಮತ್ತು ಚಾರ್ಜಿಂಗ್‌ಗೆ ಹೋಗಿ ಮತ್ತು ಗರಿಷ್ಠ ಸಾಮರ್ಥ್ಯವನ್ನು ಪರಿಶೀಲಿಸಿ. ಬ್ಯಾಟರಿಯ ಗರಿಷ್ಠ ಸಾಮರ್ಥ್ಯವು 80 ಪ್ರತಿಶತಕ್ಕಿಂತ ಕಡಿಮೆಯಿದ್ದರೆ ಐಫೋನ್ ಅನ್ನು ಬದಲಾಯಿಸಲು ಸೂಚಿಸಲಾಗುತ್ತದೆ.


ಇನ್ನೂ ಆಪಲ್‌ ಐಫೋನ್‌ 13 ಮತ್ತು ಹಳೆಯ ಮಾದರಿಗಳ ಬ್ಯಾಟರಿ ಬದಲಾವಣೆಗೆ 5,699 ರೂ. ಬೇಕಾದರೆ, ಐಫೋನ್ 14 ಮತ್ತು ಹೊಸ ಮಾದರಿಗಳ ಬ್ಯಾಟರಿ ಬದಲಾವಣೆಗೆ 8,177 ರೂ.ವ್ಯಯವಾಗಬಹುದು.


3)  ನಿಮ್ಮ ಹಳೆಯ ಐಫೋನ್‌ ಅನ್ನು ರೀಸೆಟ್‌ ಮಾಡಿ


ಫೋನ್‌ನಲ್ಲಿ ಸ್ಟೋರೆಜ್‌ ಭರ್ತಿಯಾಗುತ್ತಿದ್ದಂತೆ, ಫೋನ್‌ ಕೂಡ ನಿಧಾನವಾಗುತ್ತದೆ. ಯಾವುದೇ ಫೋನ್‌ ಅಲ್ಲಾದರೂ ಸಹ ಸ್ಟೋರೆಜ್‌ ಕ್ಲಿಯರ್‌ ಮಾಡುತ್ತಿರಬೇಕು. ಇದು ಐಫೋನ್‌ಗೂ ಅನ್ವಯವಾಗುತ್ತದೆ. ಇಲ್ಲಿ ನಿಮ್ಮ ಐಫೋನ್‌ನಲ್ಲಿ ಕ್ಯಾಶೆ ಮತ್ತು ಟೆಂಪ್ ಫೈಲ್‌ಗಳನ್ನು ತೆಗೆದುಹಾಕಿ. ಇಂಟರ್‌ನಲ್‌ ಸ್ಟೋರೆಜ್‌ ಅನ್ನು ಖಾಲಿ ಮಾಡುವುದರಿಂದ ಐಫೋನ್ ವೇಗವಾಗಿ ಕೆಲಸ ಮಾಡುತ್ತದೆ.


ಇದನ್ನೂ ಓದಿ: ಆ್ಯಪಲ್​ನ ಈ ಸಾಧನಗಳನ್ನು ಭಾರೀ ಅಗ್ಗದಲ್ಲಿ ಖರೀದಿಸಿ, ಡಿಸೆಂಬರ್​ 31ರಿಂದ ಡಿಸ್ಕೌಂಟ್​ ಸೇಲ್​ ಆರಂಭ


ಆಪಲ್ ಐಫೋನ್‌ಗಳಲ್ಲಿ ಸಾಫ್ಟ್‌ವೇರ್ ಅಪ್‌ಡೇಟ್‌ಗಳನ್ನು ಡೌನ್‌ಲೋಡ್ ಮಾಡಲು ಮತ್ತು ಇನ್‌ಸ್ಟಾಲ್ ಮಾಡಲು ಅತ್ಯಗತ್ಯವಾಗಿರುವ ಕನಿಷ್ಠ ಎರಡು GB ಗಳಷ್ಟು ಇಂಟರ್‌ನಲ್‌ ಸ್ಟೋರೇಜ್‌ ಇರುವುದು ಅವಶ್ಯಕ. ಆಂತರಿಕ ಸಂಗ್ರಹಣೆಯನ್ನು ಮುಕ್ತಗೊಳಿಸಲು Apple iCloud ನಲ್ಲಿ ನಿಮ್ಮ ಬ್ಯಾಕಪ್ ಅನ್ನು ಸಹ ನೀವು ತೆಗೆದುಕೊಳ್ಳಬಹುದು. ಸೆಟ್ಟಿಂಗ್‌ಗಳು> ಜನರಲ್>‌ ಟ್ರಾನ್ಸ್‌ಫರ್‌ ಅಥವಾ ರಿಸೆಟ್ ಐಫೋನ್> ಎರೈಸ್‌ ಆಲ್‌ ಕಂಟೆನ್ಟ್‌ > ಫೋನ್‌ ರಿಸೆಟ್‌ ಆಯ್ಕೆ ಮಾಡಿಕೊಂಡರೆ ಐಫೋನ್ ಅನ್ನು ಮರುಹೊಂದಿಸಬಹುದು.

Published by:ವಾಸುದೇವ್ ಎಂ
First published: