How To Escape From Online Fraud ಇತ್ತೀಚಿನ ದಿನಗಳಲ್ಲಿ ವಂಚಕರು ನೇರವಾಗಿ ಮೋಸಮಾಡುವುದನ್ನು ಕಡಿಮೆ ಮಾಡಿದ್ದಾರೆ. ಆದರೆ ಆನ್ಲೈನ್(Online fraud) ಮೂಲಕ ವಂಚಿಸಲು ಶುರುಮಾಡಿದ್ದಾರೆ. ಎಲ್ಲೋ ಕೂತು, ಕೇವಲ ಆನ್ಲೈನ್ ಮೂಲಕವೇ ಲಕ್ಷ ಲಕ್ಷ ಹಣ ಎಗರಿಸುತ್ತಿದ್ದಾರೆ. ನಮಗೆ ತಿಳಿಯದ ಹಾಗೇ ನಮ್ಮ ಖಾತೆ(Account)ಯಲ್ಲಿರುವ ಹಣ(Money)ವನ್ನು ಕದಿಯುತ್ತಿರುತ್ತಾರೆ. ಕೆಲವು ದಿನಗಳಿಂದ ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ದಿನಬೆಳಗಾದರೇ ಚಿತ್ರ, ವಿಚಿತ್ರ ರೀತಿಯಲ್ಲಿ ಜನ ಆನ್ಲೈನ್ನಲ್ಲಿ ಮೋಸ ಹೋಗುತ್ತಿದ್ದಾರೆ. ಲಾಕ್ಡೌನ್(Lockdown) ಸಮಯವನ್ನೇ ಬಂಡವಾಳ ಮಾಡಿಕೊಂಡ ವಂಚಕರು, ಸಿಕ್ಕ ಸಿಕ್ಕವರನ್ನ ದೋಚಿದ್ದಾರೆ. ಲಾಕ್ಡೌನ್ ಸಮಯದಲ್ಲೇ ಆನ್ಲೈನ್ ವಂಚನೆಯಂತಹ ಸೈಬರ್ ಅಪರಾಧ(Cyber Crime) ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ. ಎದುರಿಗೆ ಮೋಸ ಮಾಡಿದರೆ, ಪೊಲೀಸರಿಗೆ ದೂರು ನೀಡಿ ಮೋಸ ಹೋದ ಹಣವನ್ನು ಮರಳಿ ಪಡೆಯುವ ಸಾಧ್ಯತೆ ಹೆಚ್ಚಿದೆ. ಆದರೆ ಆನ್ಲೈನ್ನಲ್ಲಿ ಮೋಸ ಹೋದರೆ ಹಣ ಮರಳಿ ಪಡೆಯಲು ಸಾಧ್ಯವಿಲ್ಲವೆಂದು ಎಲ್ಲರಿಗೂ ಗೊತ್ತೇ ಇದೆ. ಈಗ ಆನ್ಲೈನ್ ಫ್ರಾಡ್ನಿಂದ ನೀವು ಹಣ ಕಳೆದುಕೊಂಡಿದ್ದರೆ ಅದನ್ನು ನೀವು ಮರಳಿ ಪಡೆಯಬಹುದು. ಹೇಗೆ ಅಂತೀರಾ? ವಿವರ ಇಲ್ಲಿದೆ..
ಕಳೆದುಕೊಂಡ ಹಣವನ್ನು ಮತ್ತೆ ಪಡೆಯಬಹುದು
ವೈಯಕ್ತಿಕ ಹಾಗೂ ಸೂಕ್ಷ್ಮ ಮಾಹಿತಿಯನ್ನು ಕದಿಯುವ ಮೂಲಕ ಸೈಬರ್ ಕಳ್ಳರು ಜನರ ಖಾತೆಯಿಂದ ಹಣವನ್ನು ಎಗರಿಸುತ್ತಿದ್ದಾರೆ. ಆನ್ಲೈನ್ ವಂಚನೆಯಲ್ಲಿ ಹಣದ ಕಳ್ಳತನ ತುಂಬಾ ಗಂಭೀರವಾಗಿದೆ. ಯಾಕೆಂದರೆ ಖಾತೆಯಿಂದ ಒಮ್ಮೆ ಹಣ ಕಳ್ಳತನವಾದರೆ, ಅದನ್ನು ಮತ್ತೆ ಮರಳಿ ಪಡೆಯಲು ಯಾವುದೇ ದಾರಿಗಳಿರಲ್ಲ. ಆದರೆ ಆನ್ಲೈನ್ ವಂಚನೆಗಳನ್ನು ತಪ್ಪಿಸಲು ಕೆಲ ಸುಲಭ ಹಂತಗಳಿವೆ. ಇದಲ್ಲದೇ, ಒಂದು ವೇಳೆ ನಿಮಗೆ ಮೋಸವಾದರೆ, ಮೋಸ ಹೋದ ಹಣವನ್ನು ಮತ್ತೆ ಪಡೆಯಬಹುದು. ನಿಜಕ್ಕೂ ಮೋಸ ಹೋದ ಹಣ ವಾಪಸ್ ಬರುತ್ತಾ? ಅದನ್ನು ಮರಳಿ ಪಡೆಯುವುದು ಹೇಗೆ? ಇಲ್ಲಿದೆ ನೋಡಿ.
ಇದನ್ನು ಓದಿ: ಒಟಿಪಿ ಸಾವಿರಾರು ರೂ ಹಣ ಕಳೆದುಕೊಂಡ ಮಾಜಿ ಡಿಜಿಪಿ- ಕಳೆದುಕೊಂಡ ಹಣ ಎಷ್ಟು ಗೊತ್ತಾ?
ನಕಲಿ ವೆಬ್ಸೈಟ್ ರಚಿಸಿ ವಂಚನೆ
ಆನ್ಲೈನ್ನಲ್ಲಿ ವಂಚಿಸಲು, ಹ್ಯಾಕರ್ಗಳು ಅಸಲಿಯಂತೆ ಕಾಣುವ ನಕಲಿ ವೆಬ್ಸೈಟ್ಗಳನ್ನು ಸೃಷ್ಟಿ ಮಾಡುತ್ತಾರೆ. ಬ್ಯಾಂಕ್ ರೂಲ್ಸ್ ಪ್ರಕಾರ, ಇಂತಹ ಮೋಸಕ್ಕೆ ನೀವು ಸಿಲುಕಿ ಹಣ ಕಳೆದುಕೊಂಡರೆ ಆ ಹಣವನ್ನು ಮರಳಿ ಪಡೆಯಬಹುದು. ವಂಚನೆಗೊಳಗಾದ ಕೂಡಲೇ ಖಾತೆದಾರರು ತಕ್ಷಣವೇ ಆ ವಹಿವಾಟಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಬ್ಯಾಂಕ್ನವರಿಗೆ ನೀಡಬೇಕು.
ಹಣ ಮರಳಿ ಪಡೆಯುವುದು ಹೇಗೆ?
ಹೆಚ್ಚಿನ ಬ್ಯಾಂಕ್ಗಳು ತಮ್ಮ ಗ್ರಾಹಕರಿಗೆ ಹಣಕಾಸು ವಂಚನೆ ವಿಮೆಯನ್ನ ಹೊಂದಿವೆ. ಹಣ ವರ್ಗಾವಣೆ ವೇಳೆ ವಂಚನೆಯಾಗಿದ್ದರೆ, ಗ್ರಾಹಕರು ತಕ್ಷಣವೇ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಬ್ಯಾಂಕಿಗೆ ನೀಡಬೇಕು. ಇದಾದ ಬಳಿಕ ವಂಚನೆಯ ಬಗ್ಗೆ ವಿಮಾ ಕಂಪನಿಗೆ ಬ್ಯಾಂಕ್ನವರು ವರದಿ ಮಾಡಲಾಗುತ್ತದೆ. ಈ ರೀತಿಯಾಗಿ ವಂಚನೆಗೊಳಗಾಗಿ ಹಣ ಕಳೆದುಕೊಂಡಿದ್ದರೆ, ಆ ಹಣವನ್ನು ಮರಳಿ ಪಡೆಯಬಹುದು.
ಇದನ್ನುಓದಿ: ಫೇಸ್ಬುಕ್ನಲ್ಲಿ ನಗ್ನ ಕರೆ ಮಾಡಿದ ಮಾಯಾಂಗನೆ, ವಿಡಿಯೋ ಕಾಲ್ ರೆಕಾರ್ಡ್ ಮಾಡಿ ಬ್ಲ್ಯಾಕ್ಮೇಲ್
ಬ್ಯಾಂಕಿಗೆ ಮಾಹಿತಿ ತಿಳಿಸಲು ತಡ ಮಾಡಬೇಡಿ
ಬ್ಯಾಂಕ್ಗಳು ಸಾಮಾನ್ಯವಾಗಿ 10 ವ್ಯವಹಾರ ದಿನಗಳಲ್ಲಿ ನಷ್ಟವಾದ ಹಣವನ್ನು ಮರಳಿ ನೀಡುತ್ತವೆ. ಅನಧಿಕೃತ ವಹಿವಾಟುಗಳನ್ನು ಸಾಮನ್ಯವಾಗಿ ಬ್ಯಾಂಕ್ಗಳು ಮತ್ತು ವಿಮಾ ಕಂಪನಿಗಳು ಮರುಪಾವತಿ ಮಾಡುತ್ತವೆ. ಹೀಗಾಗಿ, ಗ್ರಾಹಕರು ವಂಚನೆಗೊಳಗಾದ ದಿನ ಅಥವಾ ಮೂರು ದಿನಗಳಲ್ಲಿ ಬ್ಯಾಂಕಿಗೆ ಮಾಹಿತಿ ನೀಡಬೇಕು. ಮೂರು ದಿನಗಳೊಳಗೆ ಗ್ರಾಹಕರು ಬ್ಯಾಂಕಿಗೆ ಮಾಹಿತಿ ನೀಡದಿದ್ದರೆ ನಿಮ್ಮ ಹಣವನ್ನು ಮರಳಿ ಪಡೆಯಲು ಸಾಧ್ಯವಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ