Whatsapp ಆ್ಯಂಡ್ರಾಯ್ಡ್​ಗೂ ಬಂತು ಫಿಂಗರ್​ ಪ್ರಿಂಟ್​ ಲಾಕ್​ ಫೀಚರ್​; ಬಳಸುವುದು ಹೇಗೆ ಗೊತ್ತಾ?

news18-kannada
Updated:November 1, 2019, 5:35 PM IST
Whatsapp ಆ್ಯಂಡ್ರಾಯ್ಡ್​ಗೂ ಬಂತು ಫಿಂಗರ್​ ಪ್ರಿಂಟ್​ ಲಾಕ್​ ಫೀಚರ್​; ಬಳಸುವುದು ಹೇಗೆ ಗೊತ್ತಾ?
ಫಿಂಗರ್ ಪ್ರಿಂಟ್​​ ಲಾಕ್​​ ಫೀಚರ್​
  • Share this:
ವಾಟ್ಸ್​ಆ್ಯಪ್​ ತನ್ನ ಆ್ಯಂಡ್ರಾಯ್ಡ್​ ಬಳಕೆದಾರರಿಗೆ ಫಿಂಗರ್ ಪ್ರಿಂಟ್​​ ಲಾಕ್​​ ಫೀಚರ್​ ಪರಿಚಯಿಸಿದೆ. ಈ ಹಿಂದೆ ಆ್ಯಪಲ್​ ಐಒಎಸ್​ ಬಳಕೆದಾರರಿಗೆ ಮಾತ್ರ ಟಚ್​ ಐಡಿ ಮತ್ತು ಫೇಸ್​ ಐಡಿ ಆಯ್ಕೆಯನ್ನು ಪರಿಚಯಿಸಿತ್ತು. ಇದೀಗ ಆ್ಯಂಡ್ರಾಯ್ಡ್​ ಬಳಕೆದಾರರಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸುವ ಸಲುವಾಗಿ ಫಿಂಗರ್​ ಪ್ರಿಂಟ್ ಲಾಕ್​​ ಫಿಚರ್​ ಪರಿಚಯಿಲು ವಾಟ್ಸ್​ಆ್ಯಪ್​ ಸಂಸ್ಥೆ ಮುಂದಾಗಿದೆ.

ಇಸ್ರೇಲಿನ ಬೇಹುಗಾರರು ದೇಶದ ವಾಟ್ಸ್​ಆ್ಯಪ್​ ಬಳಕೆದಾರರ ಮೇಲೆ ಕಣ್ಣಿಟ್ಟಿದ್ದಾರೆ. ಈ ಕಾರಣಕ್ಕಾಗಿ ಹೆಚ್ಚಿನ ಸುರಕ್ಷತೆಯನ್ನು ನೀಡಲು ಫಿಂಗರ್​ ಪ್ರಿಂಟ್​ ಲಾಕ್​ ಫೀಚರ್​ ನೀಡುತ್ತಿದೆ. ಬಳಕೆದಾರರ ವೈಯಕ್ತಿಕ ಚಾಟ್​ ಹಾಗೂ ರಕ್ಷಣೆಗಾಗಿ ಫಿಂಗರ್​ ಪ್ರಿಂಟ್​ ಲಾಕ್​ ಅನುಕೂಲಕ್ಕೆ ಬರಲಿದೆ.

ಪ್ರೈವೆಸಿ


ಫಿಂಗರ್​ ಪ್ರಿಂಟ್​ ಲಾಕ್​


ಫಿಂಗರ್​ ಪ್ರಿಂಟ್​ ಲಾಕ್​ ಬಳಸುವುದು ಹೇಗೆ?

- ಮೊದಲಿಗೆ ಗೂಗಲ್​ ಪ್ಲೇಸ್ಟೋರ್​ಗೆಹೋಗಿ, ಮೈ ಆ್ಯಪ್ಸ್​ ಮೂಲಕ ವಾಟ್ಸ್​ಆ್ಯಪ್​ ಅನ್ನು ಅಪ್ಡೇಟ್​ ಮಾಡಿ

- ಬಳಿಕ ವಾಟ್ಸ್​ಆ್ಯಪ್​ ತೆರೆದು, ಸೆಟ್ಟಿಂಗ್​ ಆಯ್ಕೆಯನ್ನು ಕ್ಲಿಕ್​ ಮಾಡಿ- ನಂತರ, ಅಕೌಂಟ್​​ ಆಯ್ಕೆಯಲ್ಲಿ ಪ್ರೈವಸಿ ಆಯ್ಕೆ ಮಾಡಿ.

- ಪ್ರೈವಸಿ ಆಯ್ಕೆಯನ್ನು ಕ್ಲಿಕ್​ ಮಾಡುತ್ತಿದ್ದಂತೆ ಕಾಣಿಸಿಕೊಳ್ಳುವ ಫಿಂಗರ್​ ಪ್ರಿಂಟ್​ ಲಾಕ್​ ಆಯ್ದುಕೊಳ್ಳಿ. ಅದನ್ನು ಟರ್ನ್​ ಆನ್​ ಮಾಡಿರಿ.

- ಇದೀಗ ನಿಮ್ಮ ವಾಟ್ಸ್​ಆ್ಯಪ್​ನಲ್ಲಿ ಫಿಂಗರ್​ ಪ್ರಿಂಟ್​ ಲಾಕ್​ ಫೀಚರ್​ ಲಭ್ಯವಾಗುತ್ತದೆ.
First published:November 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading