• Home
  • »
  • News
  • »
  • tech
  • »
  • Whatsapp Income: ವಾಟ್ಸಪ್ ಆದಾಯ ಗಳಿಸುವುದು ಹೇಗೆ? ನಿಮ್ಮ ಡೇಟಾಗಳು ಲೀಕ್ ಆಗ್ತಿದ್ಯಾ? ಇಲ್ಲಿದೆ ಮಾಹಿತಿ

Whatsapp Income: ವಾಟ್ಸಪ್ ಆದಾಯ ಗಳಿಸುವುದು ಹೇಗೆ? ನಿಮ್ಮ ಡೇಟಾಗಳು ಲೀಕ್ ಆಗ್ತಿದ್ಯಾ? ಇಲ್ಲಿದೆ ಮಾಹಿತಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಒಂದು ಆ್ಯಪ್ ಯಾವುದೇ  ಜಾಹೀರಾತನ್ನು ನೀಡದೆ, ಜನರಿಂದ ನಯಾಪೈಸೆ ಹಣ ತೆಗೆದುಕೊಳ್ಳದೆ ಗ್ರಾಹಕರಿಗೆ ಬಳಕೆ ಮಅಡಲು ಅನುಮತಿ ನೀಡುತ್ತದೆ ಎಂದರೆ ಅದು ವಾಟ್ಸಾಪ್. ಹಾಗಿದ್ರೆ  ವಾಟ್ಸಾಪ್​ಗೆ ಡುಡ್ಡು ಎಲ್ಲಿಂದ ಬರುತ್ತದೆ? ಉಚಿತ ಸೇವೆ ಹೇಗೆ ನೀಡ್ತದೆ? ಯಾಕೆ ಜಾಹೀರಾತು ನೀಡುವುದಿಲ್ಲ? ಎಂಬ ಪ್ರಶ್ನೆಗಳು ಎಲ್ಲರಲ್ಲೂ ಮೂಡುತ್ತದೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಮುಂದೆ ಓದಿ ...
  • Share this:

    ಪ್ರಪಂಚದಾದ್ಯಂತ ಬಹಳಷ್ಟು ಸೋಷಿಯಲ್ ಮೀಡಿಯಾ (Social Media) ಅಪ್ಲಿಕೇಶನ್​ಗಳಿವೆ. ಕೆಲವೊಂದು ಆ್ಯಪ್​ಗಳು (Apps) ಕೆಲವೊಂದು ದೇಶಗಳಲ್ಲಿ ಅದರದೇ ಆದ ಸ್ಥಾನವನ್ನು ಉಳಿಸಿಕೊಂಡಿವೆ. ಇತ್ತೀಚೆಗೆ ವಾಟ್ಸಪ್ (Whatsapp), ಫೇಸ್​ಬುಕ್ (Facebook), ಟ್ವಿಟರ್ (twitter), ಇನ್ಸ್ಟಾಗ್ರಾಮ್ (Instagram) ಅತೀ ಹೆಚ್ಚು ಬಳಕೆಯಲ್ಲಿರುವ ಅಪ್ಲಿಕೇಶನ್​ಗಳಾಗಿವೆ. ಆದರೆ ಪ್ರಪಂಚದಾದ್ಯಂತ 250 ಕೋಟಿಗೂ ಹೆ್ಚ್ಚು ಜನರು ಉಪಯೋಗಿಸುತ್ತಿರುವ ಮೆಸೇಜಿಂಗ್ ಪ್ಲಾಟ್​ಫಾರ್ಮ್ (Messaging Platform) ಯಾವುದೆಂದರೆ ಅದು ವಾಟ್ಸಪ್. ಇದರ ವಿಶೇಷತೆಯೆಂದರೆ ಇದನ್ನು ಬಳಸಲು ಯಾರೊಬ್ಬರೂ ಒಂದು ರೂಪಾಯಿಯು ಹಣ ಪಾವತಿಸಬೇಕಿಲ್ಲ. ಈ ಅಪ್ಲಿಕೇಶನ್ ಬಳಕೆದಾರರಿಗೆ ಉಚಿತ ಸೇವೆಯನ್ನು ನೀಡುತ್ತದೆ. ಆದರೆ ವಾಟ್ಸಪ್ ತನ್ನ ಅಭಿವೃದ್ಧಿಗಾಗಿ ವರ್ಷದಿಂದ ವರ್ಷಕ್ಕೆ ಸಾವಿರಾರು ಕೋಟಿ ಖರ್ಚು ಮಾಡುತ್ತದೆ. 


    ಒಂದು ಆ್ಯಪ್ ಯಾವುದೇ  ಜಾಹೀರಾತನ್ನು ನೀಡದೆ, ಜನರಿಂದ ನಯಾಪೈಸೆ ಹಣ ತೆಗೆದುಕೊಳ್ಳದೆ ಗ್ರಾಹಕರಿಗೆ ಬಳಕೆ ಮಾಡಲು ಅನುಮತಿ ನೀಡುತ್ತದೆ ಎಂದರೆ ಅದು ವಾಟ್ಸಪ್. ಹಾಗಿದ್ರೆ  ವಾಟ್ಸಾಪ್​ಗೆ ದುಡ್ಡು ಎಲ್ಲಿಂದ ಬರುತ್ತದೆ? ಉಚಿತ ಸೇವೆ ಹೇಗೆ ನೀಡ್ತದೆ? ಯಾಕೆ ಜಾಹೀರಾತು ನೀಡುವುದಿಲ್ಲ? ಎಂಬ ಪ್ರಶ್ನೆಗಳು ಎಲ್ಲರಲ್ಲೂ ಮೂಡುತ್ತದೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.


    ಮೆಟಾ ಸಂಸ್ಥೆಯ ಒಡೆತನದಲ್ಲಿರುವ ವಾಟ್ಸಾಪ್:


    ಹೌದು, ಇತ್ತೀಚೆಗೆ ಮೆಟಾ ಒಡೆತನದಲ್ಲಿರುವ ವಾಟ್ಸಪ್ ಸಂಸ್ಥೆ ಬಹಳಷ್ಟು ಉನ್ನತ ಮಟ್ಟದಲ್ಲಿದೆ. ಆದರೆ ಈ ವಾಟ್ಸಪ್ ಯಅವ ರೀತಿಯಲ್ಲಿ ಹಣ ಗಳಿಸುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ಮುಖ್ಯ ವಿಷಯ ಏನೆಂದರೆ ವಾಟ್ಸಪ್ ಹಣ ಮಾಡುವುದೇ ಒಂದು ವಿಚಿತ್ರ ರೀತಿಯಲ್ಲಿ ಅಂತ ಹೇಳಬಹುದು. ನಿಮಗೆ ತಿಳಿದಿರುವಂತೆ ವಾಟ್ಸಪ್ ಮೆಟಾ ಸಂಸ್ಥೆಯ ಅಸ್ಥಿತ್ವದಲ್ಲಿದೆ.


    ಇದನ್ನೂ ಓದಿ: ಫ್ಲಿಪ್​ಕಾರ್ಟ್​ನಲ್ಲಿ ಆ್ಯಪಲ್ ಡೇಸ್ ಆರಂಭ! ಭಾರೀ ಅಗ್ಗದಲ್ಲಿ ಸಿಗಲಿದೆ ಐಫೋನ್​ಗಳು


    ಆದ್ದರಿಂದ ವಾಟ್ಸಪ್​ನ ಅಭಿವೃದ್ಧಿ ಮತ್ತು ನಿರ್ವಹಣೆ ಎಲ್ಲವನ್ನೂ ಮೆಟಾ ಸಂಸ್ಥೆಯೇ ನೋಡಿಕೊಳ್ಳುತ್ತದೆ. ಈ ಮೂಲಕವೇ ಬಳಕೆದಾರರು ಉಚಿತವಾಗಿ ವಾಟ್ಸಪ್ ಬಳಕೆ ಮಾಡಲು ಸಾಧ್ಯವಾಗುತ್ತಿರುವುದು. ಮೆಟಾ ಸಂಸ್ಥೆ ಲಕ್ಷಾಂತರ ಕೋಟಿಗಳಷ್ಟು ಹಣಗಳಿಸುತ್ತದೆ. ಇದಕ್ಕೆಲ್ಲಾ ಕಾರಣ ವಾಟ್ಸಪ್ ಬಳಕೆದಾರರ ಡೇಟಾ ಅಂತ ಹೇಳಬಹುದು. ಆದರೆ ವಾಟ್ಸಪ್ ಬಳಕೆದಾರರಿಂದ ನೇರವಾಗಿ ಹಣ ಗಳಿಸುತ್ತಿಲ್ಲ.


    ವಾಟ್ಸಾಪ್ ಅತ್ಯಂತ ಅವಶ್ಯಕ ಅಪ್ಲಿಕೇಶನ್:


    ವಾಟ್ಸಾಪ್ ನೇರವಾಗಿ ಹಣಗಳಿಸುವುದಿಲ್ಲ ಆದರೆ ಇದು ಲಕ್ಷಾಂತರ ಆದಾಯವನ್ನು ಗಳಿಸುವ ಮಾಧ್ಯಮವಾಗಿದೆ. ಏಕೆಂದರೆ, ವಾಟ್ಸಪ್​ನ ಅವಶ್ಯಕತೆ ಮೆಟಾ ಸಂಸ್ಥೆಗೆ ಮಾತ್ರವಲ್ಲದೇ ಬಹುತೇಕ ಎಲ್ಲಾ ಆನ್‌ಲೈನ್ ಕಂಪೆನಿಗಳಿಗೂ ಇದೆ ಜೊತೆಗೆ ವಾಟ್ಸಪ್ ಬಳಸದೇ ಇರುವಂತಹ ಜನರೇ ಇಲ್ಲ. ನೀವು ತಿಳಿಯದಿರಬಹುದು. ಇಂದು ಮಾಸ್ ಡೇಟಾ ಎಂಬುದು ಹಣಗಳಿಕೆಯ ದಾರಿ.


    ಇಡೀ ಜಗತ್ತು ಇಂದು ಡೇಟಾದ ಮೇಲೆ ನಿಂತಿದೆ. ಜಾಹೀರಾತು ಜಗತ್ತಿಗೆ ಈ ಮಾಸ್ ಡೇಟಾ ಎಂಬುದು ಚಿನ್ನದ ಮೊಟ್ಟೆ ಇದ್ದಂತೆ. ಆನ್‌ಲೈನ್‌ನಲ್ಲಿ ಒಂದು ವಸ್ತುವನ್ನು ಯಾರಿಗೆ ಮಾರಬೇಕು, ಹೇಗೆ ಮಾರಬೇಕು ಎಂಬುದನ್ನು ತಿಳಿದುಕೊಳ್ಳಲು ಈ ಮಾಸ್ ಡೇಟಾ ಅಗತ್ಯ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಅಪ್ಲಿಕೇಶನ್‌ಗಳಂತಹ ಜಾಲತಾಣಗಳು ಮಾತ್ರವಲ್ಲದೇ, ಅಮೆಜಾನ್, ಗೂಗಲ್ ಮತ್ತು ಮೈಕ್ರೋಸಾಫ್ಟ್ ಕಂಪನಿಗಳಿಗೂ ಇದರ ಅವಶ್ಯಕತೆ ಇದೆ.


    ಫೇಸ್​ಬುಕ್, ಇನ್ಸ್ಟಾಗ್ರಾಮ್​ನಲ್ಲಿ ಮಾಸ್​​ಡೇಟಾದ ಮೂಲಕ ಜಾಹೀರಾತು:


    ಇತ್ತೀಚೆಗೆ ಈ ಮಾಸ್​​ಡೇಟಾ ಎಂಬುದು ಎಲ್ಲವನ್ನೂ ಎನಲೈಸ್ ಮಾಡಲು ಸಹಾಯವಾಗುತ್ತದೆ. ಇದೀಗ ನಿಮ್ಮ ಇನ್ಸ್ಟಾಗ್ರಾಮ್ ಮತ್ತು ಫೇಸ್​ಬುಕ್​ನಲ್ಲಿ ವಾಟ್ಸಪ್  ಮಾಸ್​​ಡೇಟಾದ ಮೂಲಕ ಜಾಹೀರಾತನ್ನು ನೀಡಲು ಆರಂಬಿಸಿದ್ದಾರೆ. ಉದಾಹರಣೆಗೆ ಒಬ್ಬ ಬಳಕೆದಾರ ತನ್ನ ಸ್ನೇಹಿತನೊಂದಿಗೆ ವಾಚ್ ಬಗ್ಗೆ ಏನಾದರು ವಾಟ್ಸಪ್​ನಲ್ಲಿ ಸಂಭಾಷಣೆ ಮಾಡಿದರೆ ಅದನ್ನು ಮೆಟಾ ಅನಲೈಸ್ ಮಅಡಿ ಜಾಹೀರಾತನ್ನು ನೀಡುತ್ತದೆ. ಈ ರೀತಿ ಜಾಹೀರಾತು ನೀಡುವ ಮೂಲಕ ಮೆಟಾ ಹಣ ಗಳಿಸುತ್ತದೆ.


    ವಾಟ್ಸಪ್ ಡೇಟಾ ಮಾರಾಟವಾಗುವುದಿಲ್ಲ:


    ವಾಟ್ಸಾಪ್ ಡೇಟಾ ಇದೀಗ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಅಪ್ಲಿಕೇಶನ್‌ಗಳಿಗೆ ಜಾಹೀರಾತುವಿನ ಮೂಲವಾಗಿದೆ. ಇದರಿಂದ ಮೆಟಾ ಸಂಸ್ಥೆ ಲಕ್ಷಾಂತರ ಕೋಟಿಗಳನ್ನು ದುಡಿಯುತ್ತಿದೆ. ಆದರೆ ವಾಟ್ಸಾಪ್ ನಿಮ್ಮ ವೈಯಕ್ತಿಕ ಡೇಟಾವನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡುವುದಿಲ್ಲ ಎಂದು ಹೇಳಿಕೊಂಡಿದೆ.

    Published by:Prajwal B
    First published: