Youtube: 60 ಸೆಕೆಂಡ್​​​​ಗಳಲ್ಲಿ ಯೂಟ್ಯೂಬ್​ ವಿಡಿಯೋ ಡೌನ್​ಲೋಡ್​ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

Youtube Videos Download: ಕೆಲಮೊಮ್ಮೆ ಇಷ್ಟವಾದ ವಿಡಿಯೋವನ್ನು ಡೌನ್​ಲೋಡ್​ ಮಾಡುತ್ತಾರೆ. ಆದರೆ ಈ ಡೌನ್​ಲೋಡ್​​ ಸಮಯದಲ್ಲಿ ಬಹುತೇಕರು ಕಷ್ಟ ಅನುಭವಿಸುತ್ತಾರೆ. ಬೇಕೆನಿಸಿದಾಗ ವಿಡಿಯೋ ಡೌನ್​ಲೋಡ್​ ಮಾಡಲು ಆಗುವುದಿಲ್ಲ. ವೇಗವಾಗಿ ಡೌನ್​ಲೋಡ್​ ಆಗದೇ ಇರುವುದು ಬಳಕೆದಾರರ ಬೇಸರಕ್ಕೆ ಕಾರಣವಾಗುತ್ತದೆ.

youtube

youtube

  • Share this:
    ಯೂಟ್ಯೂಬ್​ ಅತ್ಯಂತ ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್​ ಆ್ಯಪ್​ಗಳಲ್ಲಿ ಒಂದು. ಇದರ ಮೂಲಕ ಮನರಂಜನೆ ಕುರಿತಾದ ವಿಡಿಯೋವನ್ನು ವೀಕ್ಷಿಸುತ್ತಾರೆ. ಕೆಲಮೊಮ್ಮೆ ಇಷ್ಟವಾದ ವಿಡಿಯೋವನ್ನು ಡೌನ್​ಲೋಡ್​ ಮಾಡುತ್ತಾರೆ. ಆದರೆ ಈ ಡೌನ್​ಲೋಡ್​​ ಸಮಯದಲ್ಲಿ ಬಹುತೇಕರು ಕಷ್ಟ ಅನುಭವಿಸುತ್ತಾರೆ. ಬೇಕೆನಿಸಿದಾಗ ವಿಡಿಯೋ ಡೌನ್​ಲೋಡ್​ ಮಾಡಲು ಆಗುವುದಿಲ್ಲ. ವೇಗವಾಗಿ ಡೌನ್​ಲೋಡ್​ ಆಗದೇ ಇರುವುದು ಬಳಕೆದಾರರ ಬೇಸರಕ್ಕೆ ಕಾರಣವಾಗುತ್ತದೆ.

    60 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಯೂಟ್ಯೂಬ್​ ವಿಡಿಯೋ ಡೌನ್​ಲೋಡ್​ ಮಾಡುವುದು ಹೇಗೆ?



    ಥರ್ಟ್​ ಪಾರ್ಟಿ ಆ್ಯಪ್​ ಬಳಸಿ ಡೌನ್​ಲೋಡ್​ ಮಾಡಿ:

    ಯೂಟ್ಯೂಬ್ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಬಯಸುವವರು, ಅದಕ್ಕಾಗಿ ಥರ್ಡ್​​ಪಾರ್ಟಿ  ಅಪ್ಲಿಕೇಶನ್ ಡೌನ್‌ಲೋಡ್ ಮಾಡಬಹುದು. ಅದಕ್ಕಾಗಿ ಸ್ನಾಪ್​ಟ್ಯೂಬ್​ ಆ್ಯಪ್​ ಬಳಸಿ ಸುಲಭವಾಗಿ ವಿಡಿಯೋ ಡೌನ್​ಲೋಡ್​ ಮಾಡಬಹುದಾಗಿದೆ. ಅಂದಹಾಗೆಯೇ ಸ್ನಾಪ್​​ಟ್ಯೂಬ್​ ಆ್ಯಪ್​ ಪ್ಲೇ ಸ್ಟೋರ್ ನಲ್ಲಿ ಡೌನ್ಲೋಡ್ ಮಾಡಲು ಲಭ್ಯವಿಲ್ಲ. ಬಳಕೆದಾರರು ಅಧಿಕೃತ ಸೈಟ್‌ಗೆ ಭೇಟಿ ನೀಡುವ ಮೂಲಕ ಆ್ಯಪ್​ ಡೌನ್‌ಲೋಡ್ ಮಾಡಬಹುದಾಗಿದೆ.

    ಸ್ನಾಪ್ ಟ್ಯೂಬ್ ಸಹಾಯದಿಂದ ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಇನ್ನಿತರ ಪ್ಲಾಟ್‌ಫಾರ್ಮ್‌ಗಳಿಂದ ವೀಡಿಯೊಗಳನ್ನು ಡೌನ್‌ಲೋಡ್ ಮಾಡಬಹುದು. ಆಂಡ್ರಾಯ್ಡ್ ಬಳಕೆದಾರರು ಕೇವಲ Snaptubeapp.com ಗೆ ಭೇಟಿ ನೀಡಿ ಮತ್ತು ಅದನ್ನು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್​ಸ್ಟಾಲ್​ಮಾಡಬೇಕು ನಂತರ, ನೀವು ಡೌನ್‌ಲೋಡ್ ಮಾಡಲು ಬಯಸುವ ಯೂಟ್ಯೂಬ್ ವಿಡಿಯೋದ URL ಅನ್ನು ನಕಲಿಸಬೇಕು ಬಳಿಕ ಸ್ನ್ಯಾಪ್‌ಟ್ಯೂಬ್ ಅಪ್ಲಿಕೇಶನ್‌ನ ಸರ್ಚ್ ಬಾರ್‌ನಲ್ಲಿ ನಮೂದಿಸಬೇಕು

    ನಂತರ ವೀಡಿಯೊವನ್ನು ತೋರಿಸುತ್ತದೆ ಮತ್ತು ಡೌನ್‌ಲೋಡ್ ಬಟನ್ ಅನ್ನು ಸಹ ಪ್ರದರ್ಶಿಸುತ್ತದೆ. ನೀವು ಯಾವುದೇ ರೆಸಲ್ಯೂಶನ್ ನಲ್ಲಿ ವೀಡಿಯೊವನ್ನು ಡೌನ್ಲೋಡ್ ಮಾಡಬಹುದು.

    ವೆಬ್​ಸೈಟ್​ ಸಹಾಯದಿಂದ ಡೌನ್​ಲೋಡ್​ ಮಾಡಿ:

    ಆ್ಯಪ್​ ಮೂಲಕ ಯ್ಯೂಟೂಬ್​ ವಿಡಿಯೋ ಡೌನ್‌ಲೋಡ್ ಮಾಡಲು ನೀವು ಬಯಸದಿದ್ದರೆ, ಬೇರೆ ವಿಧಾನವೊಂದಿದೆ. "En.savefrom.net" ಎಂಬ ವೆಬ್‌ಸೈಟ್ ಮೂಲಕ ವೇಗವಾಗಿ ವಿಡಿಯೋ ಡೌನ್​ಲೋಡ್​ ಮಾಡಬಹುದಾಗಿದೆ

    ಯೂಟ್ಯೂಬ್​ನಲ್ಲಿ ಡೌನ್​ಲೋಡ್​ ಮಾಡಿ:

    YouTube ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಿಡಿಯೋಗಳನ್ನು ಡೌನ್‌ಲೋಡ್ ಮಾಡಲು ವಿಧಾನಗಳಿವೆ. ಈ ವಿಧಾನಗಳು ಸರಳವಾಗಿವೆ. ಅದಕ್ಕಾಗಿ ನೀವು ಆ್ಯಪ್​ ಅನ್ನು ತೆರೆಯಬೇಕು ಮತ್ತು ಆಫ್‌ಲೈನ್ ವೀಕ್ಷಣೆಗಾಗಿ ಯಾವುದಾದರು ವೀಡಿಯೊವನ್ನು ಡೌನ್‌ಲೋಡ್ ಮಾಡಬೇಕು. ಆದರೆ ಸ್ಮಾರ್ಟ್​ಫೋನಿನ ಸ್ಥಳೀಯ ಸಂಗ್ರಹಣೆಯಲ್ಲಿ ವೀಡಿಯೊವನ್ನು ಡೌನ್‌ಲೋಡ್ ಮಾಡಲು ಅಪ್ಲಿಕೇಶನ್ ನಿಮಗೆ ಅವಕಾಶ ನೀಡುವುದಿಲ್ಲ ಮತ್ತು ಅದಕ್ಕಾಗಿ, ಇತರ ವಿಧಾನಗಳಿವೆ.

    ಯೂಟ್ಯೂಬ್ ಆ್ಯಪ್‌ನಲ್ಲಿ, ನೀವು ಯಾವುದೇ ವಿಡಿಯೋವನ್ನು ತೆರೆದಾಗ, ಅದರ ಕೆಳಗೆ ಒಂದು ಡೌನ್‌ಲೋಡ್ ಆಯ್ಕೆಯನ್ನು ನೀವು ನೋಡುತ್ತೀರಿ. ನೀವು ಆ ಡೌನ್‌ಲೋಡ್ ಬಟನ್ ಅನ್ನು ಟ್ಯಾಪ್ ಮಾಡಿ ಮತ್ತು ಡೌನ್‌ಲೋಡ್ ಪ್ರಾರಂಭವಾಗುತ್ತದೆ. ಯೂಟ್ಯೂಬ್‌ನ ಲೈಬ್ರರಿ ವಿಭಾಗದಲ್ಲಿ ಬಳಕೆದಾರರು ಡೌನ್‌ಲೋಡ್ ಮಾಡಿರುವ ಎಲ್ಲಾ ವಿಡಿಯೋಗಳನ್ನು ಪರಿಶೀಲಿಸಬಹುದು ಮತ್ತು ನೀವು ಇಂಟರ್ನೆಟ್ ಇಲ್ಲದೆ ಅವುಗಳನ್ನು ವೀಕ್ಷಿಸಬಹುದು.
    Published by:Harshith AS
    First published: