ವಾಟ್ಸಾಪ್ ಸ್ಟೇಟಸ್​ನ ವಿಡಿಯೋಗಳನ್ನು ಡೌನ್​ಲೋಡ್​ ಮಾಡುವುದು ಹೇಗೆ?

news18
Updated:July 10, 2018, 1:25 PM IST
ವಾಟ್ಸಾಪ್ ಸ್ಟೇಟಸ್​ನ ವಿಡಿಯೋಗಳನ್ನು ಡೌನ್​ಲೋಡ್​ ಮಾಡುವುದು ಹೇಗೆ?
news18
Updated: July 10, 2018, 1:25 PM IST
ಕಳೆದ ವರ್ಷ ಚಲಾವಣೆಗೆ ಬಂದ ವಾಟ್ಸಾಪ್​ ಸ್ಟೇಟಸ್​ ಅಪ್​ಡೇಟ್​ನಿಂದಾಗಿ ದಿನಕ್ಕೊಂದು ಹೊಸ ಹೊಸ ವಿಡಿಯೋ, ಚಿತ್ರಗಳು ಅಥವಾ ಇನ್ನಾವುದೇ ಬರವಣಿಗೆ, ವೆಬ್​ಸೈಟ್​ ಲಿಂಕ್​ ಇತ್ಯಾದಿಗಳನ್ನು ನಿಮ್ಮ ಸ್ನೇಹಿತರ ಸ್ಟೇಟಸ್​ ವಾಲ್​ನಲ್ಲಿ ನೋಡಿರುತ್ತೀರಿ.

ಈ ಸ್ಟೇಟಸ್​ ಬಾರ್​ನಲ್ಲಿ ಚಿತ್ರಗಳನ್ನು ಕಂಡು ಇಷ್ಟವಾದರೆ ಸ್ಕ್ರೀನ್​ ಶಾಟ್​ ಮೂಲಕ ಡೌನ್​ಲೋಡ್​ ಮಾಡಿ ಸೇವ್​ ಮಾಡಿಟ್ಟುಕೊಳ್ಳಬಹುದು, ಆದರೆ ವಿಡಿಯೋಗಳನ್ನು ಮಾತ್ರ ಡೌನ್​ಲೋಡ್​ ಮಾಡಲು ಯಾವುದೇ ಆಯ್ಕೆಗಳಿಲ್ಲ. ಇಂದು ನಾವು ವಾಟ್ಸಾಪ್​ನಲ್ಲಿ ಸ್ನೇಹಿತರ ಸ್ಟೇಟಸ್​ ಬಾರ್​ನಲ್ಲಿರುವ ವಿಡಿಯೋಗಳನ್ನು ಡೌನ್​ಲೋಡ್​ ಮಾಡಲು ಸುಲಭದ ಎರಡು ಟ್ರಿಕ್​ಗಳನ್ನು ಇಲ್ಲಿ ನೀಡಿದ್ದೇವೆ.

.Statuses ಫೋಲ್ಡರ್​

ಕೇವಲ ಒಂದೇ ದಿನದಲ್ಲಿ ಸ್ಟೋರಿಗಳು ನಿಮ್ಮ ಸ್ನೇಹಿತರ ಸ್ಟೇಟಸ್​ ಬಾರ್​ನಿಂದ ಕಾಣೆಯಾದರೂ ಒಂದು ಬಾರಿ ಆ ಚಿತ್ರ ಅಥವಾ ವಿಡಿಯೋವನ್ನು ನೋಡಿದರೆ ಅದು ನಿಮಗರಿವಿಲ್ಲದಂತೆಯೇ ನಿಮ್ಮ ಮೊಬೈಲ್​ನಲ್ಲಿ ಡೌನ್​ಲೋಡ್​ ಆಗಿರುತ್ತದೆ.

ಆದರೆ ಈ ಚಿತ್ರಗಳನ್ನು ಹಾಗೂ ವಿಡಿಯೋಗಳನ್ನು ನೇರವಾಗಿ ಡೌನ್​ಲೋಡ್​ ಮಾಡಿಕೊಳ್ಳುವ ಆಯ್ಕೆಯನ್ನು ನೀಡುವ ಯಾವುದೇ ಹಕ್ಕನ್ನು ವಾಟ್ಸಾಪ್​ ಹೊಂದಿಲ್ಲ. ಒಂದು ವೇಳೆ ಈ ರೀತಿ ಮಾಡಿದರೆ ಕೃತಿಸ್ವಾಮ್ಯ ಉಲ್ಲಂಘನೆಯಾಗುತ್ತೆ. ಹೀಗಾಗಿ ವಾಟ್ಸಾಪ್​ ತನ್ನ ಫೈಲ್​ ಮ್ಯಾನೇಜರ್​ ಫೋಲ್ಡರ್​ನಲ್ಲಿ .Statuses ಹೊಸ ಫೋಲ್ಡರ್​ವೊಂದನ್ನು ತೆರೆಯುತ್ತದೆ. ಅಲ್ಲಿ ಈ ಎಲ್ಲಾ ವಿಡಿಯೋಗಳನ್ನು ಸೇವ್​​ ಮಾಡುತ್ತದೆ. ಈ ಫೋಲ್ಡರ್​ನ್ನು ನೀವು ಅನ್​ಹೈಡ್​ ಮಾಡಿದರೆ ಸಾಕು. ನಿಮಗೆ ಬೇಕಾದ ವಿಡಿಯೋಗಳು ಆ ಫೋಲ್ಡರ್​ನಲ್ಲಿ ಲಭ್ಯವಿರುತ್ತೆ.

ಸ್ಟೇಟಸ್​ ವೀಕ್ಷಿಸುವ ಆ್ಯಪ್​ಗಳು
ಹೆಚ್ಚಿನ ಸಂದರ್ಭದಲ್ಲಿ ನೀವು ವಾಟ್ಸಾಪ್​ .Statuses ಅನ್​ಹೈಡ್​ ಮಾಡಲು ರೂಟ್​ ವಿಧಾನ ಅಳವಡಿಸಬೇಕಾಗಬಹುದು, ಆದರೆ ಈ ರೀತಿ ಮಾಡುವ ಬದಲು ವಾಟ್ಸಾಪ್​ ಸ್ಟೋರಿಗಳನ್ನು ಸೇವ್​ ಮಾಡುವ ‘Story Saver for Whatsapp ಆ್ಯಪ್​ನ್ನು ಡೌನ್​ಲೋಡ್​ ಮಾಡಿದರೆ ಉತ್ತಮ.
Loading...

ಈ ಆ್ಯಪ್​ನ್ನು ಇನ್ಸ್ಟಾಲ್​ ಮಾಡಿದ ಬಳಿಕ ನಿಮ್ಮ ನಿಮ್ಮ ಸ್ನೇಹಿತರ ಸ್ಟೋರಿಯನ್ನು ತೆರೆದು ಬಳಿಕ ಬಲ ಬದಿಯಲ್ಲಿರುವ ಮೂರು ಚುಕ್ಕಿಗಳಲ್ಲಿ ಕಾಣಿಸುವ ಡೌನ್​ಲೋಡ್​ ಆಯ್ಕೆಯನ್ನು ಒತ್ತಿದರೆ ಮುಗಿಯಿತು. ನಿಮ್ಮ ನೆಚ್ಚಿನ ವಿಡಿಯೋವನ್ನು ಡೌನ್​ ಮಾಡಿಕೊಳ್ಳಬಹುದು.
First published:July 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ