ಟಿಕ್​ ಟಾಕ್​ ಬ್ಯಾನ್​ ಆದ್ರೂ ಡೌನ್​ಲೋಡ್​ ಮಾಡಬಹುದು: ಹೇಗೆ ಗೊತ್ತಾ?

TikTok App: ಗೂಗಲ್​ ಟ್ರೆಂಡ್​ ಮಾಹಿತಿ ಪ್ರಕಾರ ‘ಟಿಕ್​ ಟಾಕ್​ ಡೌನ್​ಲೋಡ್​‘ ಎಂಬ ಪದವು ಗೂಗಲ್​ ಪೇಜ್​ನಲ್ಲಿ ಅಧಿಕವಾಗಿ ಹುಡುಕಾಟ ನಡೆಸಿದ ಪದವಾಗಿದೆ.

news18
Updated:April 20, 2019, 3:45 PM IST
ಟಿಕ್​ ಟಾಕ್​ ಬ್ಯಾನ್​ ಆದ್ರೂ ಡೌನ್​ಲೋಡ್​ ಮಾಡಬಹುದು: ಹೇಗೆ ಗೊತ್ತಾ?
ಸಾಂದರ್ಭಿಕ ಚಿತ್ರ
  • News18
  • Last Updated: April 20, 2019, 3:45 PM IST
  • Share this:
ಚೀನಾದ ಮೂಲಕ ಟಿಕ್​ ಟಾಕ್​ ಆ್ಯಪ್​ ಅನ್ನು ಭಾರತದಲ್ಲಿ ಬ್ಯಾನ್​ ಮಾಡಲಾಗಿದೆ. ಗೂಗಲ್​ ಹಾಗೂ ಪ್ಲೇಸ್ಟೋರ್​ ಮೂಲಕ ಟಿಕ್​ ಅನ್ನು ಕೈಬಿಡಲಾಗಿದೆ. ಆದರೆ ಟಿಕ್​ಟಾಕ್​ ಅಭಿಮಾನಿಗಳಂತೂ  ಆ್ಯಪ್​ ಅನ್ನು ಡೌನ್​ಲೋಡ್​ ಮಾಡುವ ಪ್ರಮೇಯ ಕಡಿಮೆಯಾಗಿಲ್ಲ.

ಟಿಕ್​ ಟಾಕ್​ ಆ್ಯಪ್​ ಡೌನ್​ ಲೋಡ್​ ಮಾಡುವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತದೆ. ಥರ್ಡ್​ ಪಾರ್ಟಿ ವೆಬ್​ ಸೈಟ್​ ಮೂಲಕ ಟಿಕ್​ಟಾಕ್​ ಆ್ಯಪ್​ ಅನ್ನು ಡೌನ್​ಲೋಡ್​ ಮಾಡುವವರ ಸಂಖ್ಯೆ ಅಧಿಕವಾಗುತ್ತಿದೆ.

ಗೂಗಲ್​ನಲ್ಲಿ ದೊರಕುವ ಆ್ಯಂಡ್ರಾಯ್ಡ್​ ಆ್ಯಪ್​ ಸ್ಟೋರ್​ ‘ಎಪಿಕೆ ಮಿರರ್‘​​ನಿಂದ ಸಾಕಷ್ಟು ಜನರು ಟಿಕ್​ಟಾಕ್​ ಆ್ಯಪ್​ ಅನ್ನು ಡೌನ್​ಲೋಡ್​ ಮಾಡಿಕೊಳ್ಳುತ್ತಿದ್ದಾರೆ. ಏ.19 ರಂದು 1,346 ಜನರು ಟಿಕ್​ ಟಾಕ್​ ಆ್ಯಪ್​ ಅನ್ನು ಡೌನ್​ಲೋಡ್ ಮಾಡಿದ್ದಾರೆ.

ಇದನ್ನೂ ಓದಿ: ಮೈತ್ರಿ ಸರ್ಕಾರಕ್ಕೆ ಮಂಡ್ಯ ಬಿಟ್ಟರೆ ಬೇರೆ ಜಿಲ್ಲೆಗಳು ಕಾಣುವುದೇ ಇಲ್ಲ; ಶೋಭಾ ಕರಂದ್ಲಾಜೆ ಆರೋಪ

ಇನ್ನೂ ಸಾಕಷ್ಟು ಜನರು ಗೂಗಲ್​ ಮತ್ತು ಪ್ಲೇ ಸ್ಟೋರ್​ನಲ್ಲಿ ಟಿಕ್​ಟಾಕ್​ ಆ್ಯಪ್​ಗೆ ಸಾಕಷ್ಟು ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಕೆಲವರು ಟಿಕ್​ ಟಾಕ್​ ಅನ್ನು ಶೇರ್​ ಇಟ್​ ಮೂಲಕ ಬಳಸಿಕೊಳ್ಳುತ್ತಿದ್ದಾರೆ. ಗೂಗಲ್​ ಟ್ರೆಂಡ್​ ಮಾಹಿತಿ ಪ್ರಕಾರ ‘‘ ಟಿಕ್​ ಟಾಕ್​ ಡೌನ್​ಲೋಡ್​‘‘ ಎಂಬ ಪದವು ಗೂಗಲ್​ ಪೇಜ್​ನಲ್ಲಿ ಅಧಿಕವಾಗಿ ಹುಡುಕಾಟ ನಡೆಸಲ್ಪಟ್ಟ ಪದವಾಗಿದೆ.

First published:April 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading