• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • Instagram: ಇನ್​​ಸ್ಟಾಗ್ರಾಮ್​ನಲ್ಲಿ ಮ್ಯೂಸಿಕ್​ ಜೊತೆ ಸ್ಟೋರಿ ಡೌನ್​ಲೋಡ್​ ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟ್ರಿಕ್ಸ್​

Instagram: ಇನ್​​ಸ್ಟಾಗ್ರಾಮ್​ನಲ್ಲಿ ಮ್ಯೂಸಿಕ್​ ಜೊತೆ ಸ್ಟೋರಿ ಡೌನ್​ಲೋಡ್​ ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟ್ರಿಕ್ಸ್​

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

Story Download: ಇನ್​ಸ್ಟಾಗ್ರಾಮ್​​ನಲ್ಲಿ ಎಷ್ಟೋ ಜನರು ಸ್ಟೋರಿ ಹಾಕ್ತಾರೆ. ಆದ್ರೆ ಅದನ್ನು ಡೌನ್​ಲೋಡ್​ ಮಾಡಲು ಮುಂದಾಗುತ್ತಾರೆ. ಆದರೆ ಡೌನ್​ಲೋಡ್​ ಮಾಡುವ ಸಂದರ್ಭದಲ್ಲಿ ವಿಡಿಯೋದಲ್ಲಿ ಮ್ಯೂಸಿಕ್​ ಇರುವುದೇ ಇಲ್ಲ. ಆದರೆ ಈ ಟ್ರಿಕ್ಸ್​ ಮೂಲಕ ನೀವು ಹಾಕಿದ ವಿಡಿಯೋ ಸ್ಟೋರಿಯನ್ನು ಮ್ಯೂಸಿಕ್​ ಜೊತೆಗೆ ಡೌನ್​ಲೋಡ್​ ಮಾಡ್ಬಹುದು.

ಮುಂದೆ ಓದಿ ...
  • Share this:

    ಸೋಶಿಯಲ್​ ಮೀಡಿಯಾಗಳಲ್ಲಿ (Social Media) ಭಾರೀ ಜನಪ್ರಿಯತೆ ಪಡೆದಿರುವ ಅಪ್ಲಿಕೇಶನ್​ ಎಂದರೆ ಅದು ಇನ್​ಸ್ಟಾಗ್ರಾಮ್ (Instagram)​. ಈ ಅಪ್ಲಿಕೇಶನ್​ ತನ್ನ ಗ್ರಾಹಕರಿಗಾಗಿ ದಿಹೋದಂತೆ ಒಂದಲ್ಲೊಂದು ಫೀಚರ್ಸ್​​ಗಳನ್ನು ಪರಿಚಯಿಸುವ ಮೂಲಕ ಭಾರೀ ಪ್ರಚಲಿತದಲ್ಲಿದೆ. ಅದ್ರಲ್ಲೂ ಟಿಕ್​​ಟಾಕ್ (TikTok) ದೇಶದೆಲ್ಲೆಡೆ ಬ್ಯಾನ್​ ಆದ ನಂತರವಂತೂ ಎಲ್ಲರೂ ಇನ್​ಸ್ಟಾಗ್ರಾಮ್​ ಅನ್ನೇ ಬಳಸಿದ್ದಾರೆ. ಇದಕ್ಕೆ ಕಾರಣ ಇನ್​​ಸ್ಟಾ ಪರಿಚಯಿಸಿದ ರೀಲ್​ ಫೀಚರ್​ ಅಂತಾನೇ ಹೇಳ್ಬಹುದು. ವಾಟ್ಸಾಪ್, ಟೆಲಿಗ್ರಾಮ್​​ನಂತೆಯೇ ಕಾರ್ಯನಿರ್ವಹಿಸುವ ಈ ಅಪ್ಲಿಕೇಶನ್​ ವಿಭಿನ್ನ ಫೀಚರ್ಸ್​ಗಳನ್ನು ಹೊಂದಿದೆ. ಈ ಅಪ್ಲಿಕೇಶನ್​ ಮೂಲಕವೇ ಇತ್ತೀಚೆಗೆ ಎಷ್ಟೋ ಜನರು ಸೆಲೆಬ್ರಿಟಿಗಳಾಗಿಬಿಟ್ಟಿದ್ದಾರೆ. ಇನ್ನು ಇದರಲ್ಲಿ ಹಾಕುವಂತಹ ಸ್ಟೋರಿಗಳಾಗಿರಬಹುದು, ಪೋಸ್ಟ್​ಗಳು, ರೀಲ್ಸ್​ಗಳು ಇವೆಲ್ಲವೂ ಬಳಕೆದಾರರ ಫಾಲೋವರ್ಸ್​​ಗಳನ್ನು ಹೆಚ್ಚಿಸಲು ಕಾರಣವಾಗುತ್ತದೆ.


    ಹೌದು, ಇನ್​ಸ್ಟಾಗ್ರಾಮ್​​ನಲ್ಲಿ ಎಷ್ಟೋ ಜನರು ಸ್ಟೋರಿ ಹಾಕ್ತಾರೆ. ಆದ್ರೆ ಅದನ್ನು ಡೌನ್​ಲೋಡ್​ ಮಾಡಲು ಮುಂದಾಗುತ್ತಾರೆ. ಆದರೆ ಡೌನ್​ಲೋಡ್​ ಮಾಡುವ ಸಂದರ್ಭದಲ್ಲಿ ವಿಡಿಯೋದಲ್ಲಿ ಮ್ಯೂಸಿಕ್​ ಇರುವುದೇ ಇಲ್ಲ. ಆದರೆ ಈ ಟ್ರಿಕ್ಸ್​ ಮೂಲಕ ನೀವು ಹಾಕಿದ ವಿಡಿಯೋ ಸ್ಟೋರಿಯನ್ನು ಮ್ಯೂಸಿಕ್​ ಜೊತೆಗೆ ಡೌನ್​ಲೋಡ್​ ಮಾಡ್ಬಹುದು.


    ಮ್ಯೂಸಿಕ್​ ಜೊತೆಗೆ ಸ್ಟೋರಿ ಡೌನ್​ಲೋಡ್​ ಮಾಡುವುದು ಹೇಗೆ?


    • ಮೊದಲಿಗೆ ನಾವೊಂದು ಯಾವುದಾದ್ರೂ ವಿಡಿಯೋ ಅಥವಾ ಫೋಟೋವನ್ನು ಮ್ಯೂಸಿಕ್​ ಜೊತೆಗೆ ನಮ್ಮ ಇನ್​​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಪೋಸ್ಟ್​ ಮಾಡ್ಬೇಕು.

    • ನಂತರ ಅದನ್ನು ನಿಮಗೆ ಡೌನ್​ಲೋಡ್​ ಮಾಡ್ಬೇಕು ಎಂದು ಮುಂದಾದ್ರೆ ಸ್ಟೋರಿ ಓಪನ್ ಮಾಡಿದಾಗ ಮೇಲ್ಗಡೆ ಬಲಭಾಗದಲ್ಲಿ ಸೇವ್​ ಎಂಬ ಆಯ್ಕೆ ಸಿಗುತ್ತದೆ.

    • ಅದರಲ್ಲಿ ಸೇವ್​ ಎಂಬ ಆಪ್ಷನ್ ಅನ್ನು ಸೆಲೆಕ್ಟ್​ ಮಾಡಿದ್ರೆ ನಿಮ್ಮ ಸ್ಟೋರಿ ನಿಮ್ಮ ಗ್ಯಾಲರಿಯಲ್ಲಿ ಸೇವ್ ಆಗಿರುತ್ತದೆ. ಆದರೆ ಇದರಲ್ಲಿ ಮ್ಯೂಸಿಕ್​ ಇರಲ್ಲ ಕೇವಲ ವಿಡಿಯೋ ಮಾತ್ರ ಪ್ಲೇ ಆಗುತ್ತದೆ.


    ಇದನ್ನೂ ಓದಿ: ಸ್ಮಾರ್ಟ್​​​ಫೋನ್​ಗಳು ಹ್ಯಾಂಗ್​ ಆಗ್ತಿದ್ಯಾ? ಇಲ್ಲಿದೆ 5 ಟ್ರಿಕ್ಸ್​


    ಮ್ಯೂಸಿಕ್​ ಜೊತೆಗೆ ಡೌನ್​ಲೋಡ್​ ಮಾಡುವುದು ಹೇಗೆ?


    • ಸ್ಟೋರಿ ಸೇವ್ ಮಾಡಿಕೊಂಡ ನಂತರ ನೀವು ಇನ್​​​ಸ್ಟಾಗ್ರಾಮ್​ನಲ್ಲೇ ಯಾರದಾದ್ರೂ ಒಂದು ಚಾಟ್​ ವಿಂಡೋವನ್ನು ಓಪನ್​ ಮಾಡ್ಬೇಕು.

    • ಅಲ್ಲಿ ನೀವು ಎಡಭಾಗದಲ್ಲಿ ಏನಾದರೊಂದು ಫೋಟೋ, ವಿಡಿಯೋ ಶೇರ್​ ಮಾಡುವ ಆಯ್ಕೆ ಸಿಗುತ್ತದೆ.

    • ಅದನ್ನು ಓಪನ್​ ಮಾಡಿ ನೀವು ಈಗಾಗಲೇ ಸೇವ್​ ಮಾಡಿಕೊಂಡಿರುವ ಸ್ಟೋರಿ ವಿಡಿಯೋವನ್ನು ಓಪನ್ ಮಾಡಿ.


    ಸಾಂಕೇತಿಕ ಚಿತ್ರ


    • ನಂತರ ಅಲ್ಲಿ ನಿಮಗೆ ಮೇಲ್ಗಡೆ ಸ್ಟಿಕ್ಕರ್​ ಆಯ್ಕೆ ಕಾಣುತ್ತದೆ. ಅದರಲ್ಲಿ ನೀವು ಮ್ಯೂಸಿಕ್​ ಸೆಲೆಕ್ಟ್ ಮಾಡಿಕೊಂಡು, ನಿಮಗೆ ಬೇಕಾದ ಹಾಡನ್ನು ಆಯ್ಕೆ ಮಾಡ್ಬಹುದು.

    • ಮ್ಯೂಸಿಕ್ ಸೆಲೆಕ್ಟ್​ ಮಾಡಿದ ನಂತಗರ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಕೆಳಗಡೆಯಲ್ಲಿ ಎಡಭಾಗದಲ್ಲಿ ‘ಕೀಪ್​​ ಇನ್​ ಚಾಟ್​‘ ಎಂಬ ಆಯ್ಕೆ ಸಿಗುತ್ತದೆ. ಅದನ್ನು ಸೆಲೆಕ್ಟ್ ಮಾಡ್ಬೇಕು.

    • ಇವೆಲ್ಲಾ ಸೆಲೆಕ್ಟ್​ ಮಾಡಿದ ನಂತರ ನೀವು ಆ ವಿಡಿಯೋವನ್ನು ಸೆಂಡ್ ಮಾಡ್ಬಹುದು.

    • ನಂತರ ಅಲ್ಲಿ ಸೆಂಡ್​ ಮಾಡಿದ ವಿಡಿಯೋವನ್ನು ಹೋಲ್ಡ್ ಮಾಡಿದ್ರೆ ಅಲ್ಲಿ ಮೋರ್​ ಎಂಬ ಆಯ್ಕೆ ಕಾಣುತ್ತದೆ. ಅಲ್ಲಿ ಸೇವ್​ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡ್ಬೇಕು.

    • ಈಗ ನಿಮಗೆ ಬೇಕಾದ ಸ್ಟೋರಿಯನ್ನು ಮ್ಯೂಸಿಲ್​ ಜೊತೆಗೆ ಯಾರಿಗೂ ಶೇರ್​ ಮಾಡ್ಬಹುದು, ಸ್ಟೇಟಸ್​ ಸಹ ಹಾಕ್ಬೋದು.


    ವಾಟ್ಸಾಪ್​ನಿಂದ ಹೊಸ ಫೀಚರ್​ ಬಿಡುಗಡೆ




    15 ನಿಮಿಷದಲ್ಲಿ ಎಡಿಟ್​ ಮಾಡ್ಬಹುದು


    ವಾಟ್ಸಾಪ್‌ ಶೀಘ್ರದಲ್ಲೇ ಎಡಿಟ್‌ ಸೆಂಡ್‌ ಮೆಸೇಜ್‌ ಆಯ್ಕೆಯನ್ನು ಪರಿಚಯಿಸಲು ಮುಂದಾಗಿದೆ. ಇದರಿಂದ ನೀವು ಈಗಾಗಲೇ ಸೆಂಡ್‌ ಮಾಡಿರುವ ಮೆಸೇಜ್‌ ಅನ್ನು ಎಡಿಟ್‌ ಮಾಡಲು ಅವಕಾಶ ನೀಡಲಿದೆ. ಆದರೆ ನೀವು ಮೆಸೇಜ್‌ ಅನ್ನು ಕಳುಹಿಸಿದ 15 ನಿಮಿಷಗಳ ಒಳಗೆ ಎಡಿಟ್ ಮಾಡಲು ಅವಕಾಶ ನೀಡಲಿದೆ ಎಂದು ವರದಿಯಾಗಿದೆ. ಇದರಿಂದ ನೀವು ಯಾರಿಗಾದರೂ ಮೆಸೇಜ್ ಕಳುಹಿಸಿದಾಗ ಅದರಲ್ಲಿ ಏನಾದರು ತಪ್ಪಿದ್ದರೆ ಆಗಲೇ ಎಡಿಟ್​ ಮಾಡುವಂತಹ ಅವಕಾಶ ಲಭ್ಯವಾಗುತ್ತದೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು