WhatsApp: ವಾಟ್ಸ್ಯಾಪ್ ನ ಬ್ಯಾಕ್‌ಗ್ರೌಂಡ್‌ ಡೇಟಾ ಬಳಕೆಯನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

ಮೊಬೈಲ್‌ ಬಳಕೆ ಮಾಡಲಿ ಬಿಡಲಿ, ಡೇಟಾ ಪ್ಯಾಕ್‌ ಮಾತ್ರ ಯಾವಾಗಲೂ ಆನ್‌ ಮೋಡ್‌ನಲ್ಲಿಯೇ ಇರುತ್ತದೆ. ಇದು ಒಂದು ದೊಡ್ಡ ಸಮಸ್ಯೆ. ಈ ಸಮಸ್ಯೆ ನಮ್ಮನ್ನು ನಿಮ್ಮನ್ನು ಕೂಡ ಬಿಟ್ಟಿಲ್ಲ. ಹೌದು ತಾನೇ. ಹೌದು ಮೊಬೈಲ್‌ ಬಳಸದೇ ಇದ್ದರೂ ಸಹ ಮೊಬೈಲ್‌ ಡೇಟಾ ಹಾಗೆ ಆನ್‌ನಲ್ಲಿಯೇ ಇರುತ್ತದೆ. ಇದರಿಂದ ಏನೆಲ್ಲ ಸಮಸ್ಯೆಗಳು ಆಗುತ್ತವೆ ಎಂಬುದರ ಕುರಿತು ನಿಮ್ಗೆ ಏನಾದ್ರೂ ಗೊತ್ತಿದಿಯಾ? ಹಾಗಿದ್ರೆ ಇದರ ಕುರಿತು ಈಗ ನೋಡೋಣ.

ವಾಟ್ಸ್ಯಾಪ್ ಅಪ್ಲಿಕೇಶನ್‌

ವಾಟ್ಸ್ಯಾಪ್ ಅಪ್ಲಿಕೇಶನ್‌

  • Share this:
ಇಂದಿನ ಆಧುನಿಕ ಕಾಲದಲ್ಲಿ ಎಲ್ಲರ ಕೈಯಲ್ಲೂ ಒಂದು ಸ್ಮಾರ್ಟ್‌ಪೋನ್‌ (Smart Phone) ಅದಕ್ಕೆ ತಕ್ಕದಾದ ಡೇಟಾ ಪ್ಯಾಕ್‌ ಇದ್ದೆ ಇರುತ್ತದೆ. ಮೊಬೈಲ್‌ ಬಳಕೆ (Mobile Usage) ಮಾಡಲಿ ಬಿಡಲಿ, ಡೇಟಾ ಪ್ಯಾಕ್‌ ಮಾತ್ರ ಯಾವಾಗಲೂ ಆನ್‌ ಮೋಡ್‌ನಲ್ಲಿಯೇ ಇರುತ್ತದೆ. ಇದು ಒಂದು ದೊಡ್ಡ ಸಮಸ್ಯೆ. ಈ ಸಮಸ್ಯೆ  (Problem) ನಮ್ಮನ್ನು ನಿಮ್ಮನ್ನು ಕೂಡ ಬಿಟ್ಟಿಲ್ಲ. ಹೌದು ತಾನೇ. ಹೌದು ಮೊಬೈಲ್‌ ಬಳಸದೇ ಇದ್ದರೂ ಸಹ ಮೊಬೈಲ್‌ ಡೇಟಾ (Data) ಹಾಗೆ ಆನ್‌ನಲ್ಲಿಯೇ ಇರುತ್ತದೆ. ಇದರಿಂದ ಏನೆಲ್ಲ ಸಮಸ್ಯೆಗಳು ಆಗುತ್ತವೆ ಎಂಬುದರ ಕುರಿತು ನಿಮ್ಗೆ ಏನಾದ್ರೂ ಗೊತ್ತಿದಿಯಾ? ಹಾಗಿದ್ರೆ ಇದರ ಕುರಿತು ಈಗ ನೋಡೋಣ.

ವಾಟ್ಸ್ಯಾಪ್ ನ ಬ್ಯಾಕ್‌ಗ್ರೌಂಡ್‌ ಡೇಟಾ ಬಳಕೆಯನ್ನು ನಿಷ್ಕ್ರಿಯಗೊಳಿಸುವುದು ಹೇಗೆ?
ಸ್ಮಾರ್ಟ್‌ಪೋನ್‌ ಬಳಕೆ ಮಾಡುವ ಪ್ರತಿಯೊಬ್ಬರೂ ಕೂಡ ಇಂಟರ್ನೆಟ್ ಪ್ಯಾಕೇಜ್‌ಗಳನ್ನು ಅವಲಂಬಿಸಿರುತ್ತಾರೆ. ಮೊಬೈಲ್‌ ಬಳಸದೇ ಇದ್ದಾಗಲೂ ಸಹ ಡೇಟಾವನ್ನು ಆಫ್‌ ಮಾಡದೇ ಹಾಗೆಯೇ ಬಿಟ್ಟಿರುತ್ತಾರೆ. ಇದರಿಂದ ಅನೇಕ ನೋಟಿಫಿಕೆಶನ್‌ಗಳು ಸುಮ್ಮನೆ ಬರುತ್ತಲೇ ಇರುತ್ತವೆ. ನಿಮ್ಮ ಡೇಟಾ ಪ್ಯಾಕೇಜ್‌ ಇನ್ನು ಆನ್‌ನಲ್ಲಿ ಇದೆ ಎಂಬುದನ್ನು ಈ ನೋಟಿಫಿಕೇಶನ್‌ಗಳು ನಿಮಗೆ ಮತ್ತೆ ಮತ್ತೆ ನೆನಪಿಸುತ್ತಲೇ ಇರುತ್ತವೆ. ಕೆಲವು ಅಪ್ಲಿಕೇಶನ್‌ಗಳು ನೀವು ಮೊಬೈಲ್‌ ಬಳಕೆ ಮಾಡದೇ ಇದ್ದಾಗ ನಿಮ್ಮ ಡೇಟಾವನ್ನು ಪೂರ್ತಿಯಾಗಿ ಖಾಲಿ ಮಾಡುವ ಸಂಭವ ಹೆಚ್ಚಿರುತ್ತದೆ. ಅದರಲ್ಲಿ ಪ್ರಮುಖವಾಗಿ ನಮ್ಮೆಲ್ಲರ ನೆಚ್ಚಿನ ಅಪ್ಲಿಕೇಶನ್‌ ವಾಟ್ಸ್‌ಅಪ್‌ ನಾವು ಮೊಬೈಲ್‌ ಬಳಸದೇ ಇದ್ದಾಗಲೂ ಸಹ ಡೇಟಾವನ್ನು ಬಳಸುತ್ತಲೇ ಇರುತ್ತದೆ. ಹಾಗಿದ್ರೆ ಇದನ್ನು ತಡೆಯುವುದು ಹೇಗೆ ಎಂಬುದನ್ನು ನಾವಿಲ್ಲಿ ಚರ್ಚಿಸೋಣ ಬನ್ನಿ.

ಡೇಟಾ ಪ್ಯಾಕ್‌ ಬಳಸುವ ಹಿನ್ನಲೆಯಲ್ಲಿ ಮೊಬೈಲ್‌ ಬಳಸದೇ ಇದ್ದಾಗಲೂ ಆನ್‌ಮೋಡ್‌ನಲ್ಲಿರುವ ಡೇಟಾವನ್ನು ಖಾಲಿ ಮಾಡದಂತೆ ವಾಟ್ಸ್ಯಾಪ್ ಅನ್ನು ನಿಷ್ಕ್ರಿಯಗೊಳಿಸುವ ಮೂಲಕ ಈ ಅನಗತ್ಯ ಡೇಟಾ ಬಳಕೆಯನ್ನು ನಿಲ್ಲಿಸಬಹುದು. ಬಳಕೆದಾರರು ತಮ್ಮ ದೈನಂದಿನ ಜೀವನದಲ್ಲಿ ವಾಟ್ಸ್ಯಾಪ್ ಡೇಟಾ ಬಳಕೆಯನ್ನು ಕಡಿಮೆ ಮಾಡಲು ಕೆಲವು ಪರಿಹಾರಗಳನ್ನು ಬಳಸಿ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.

ಇದನ್ನೂ ಓದಿ: Airtel: ವರ್ಷ ಪೂರ್ತಿ ಅನಿಯಮಿತ ಕರೆ, 24GB ಡೇಟಾ! ಬೆಸ್ಟ್​ ಪ್ರಿಪೇಯ್ಡ್​​ ಪ್ಲಾನ್​ ಪರಿಚಯಿಸಿದ ಏರ್​​ಟೆಲ್​

ಇದರ ಹೊರತಾಗಿ, ವಾಟ್ಸ್‌ಅಪ್‌ ಬಳಕೆದಾರರು ಈ ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸುವ ಮೂಲಕ ಮೇಟಾ -ಮಾಲೀಕತ್ವದ ವಾಟ್ಸ್‌ಅಪ್‌ ನೇರ ಸಂದೇಶ ಅಪ್ಲಿಕೇಶನ್‌ನಿಂದ ಮಾತ್ರ ಇಂಟರ್ನೆಟ್ ಸಂಪರ್ಕವನ್ನು ನಿಷ್ಕ್ರಿಯಗೊಳಿಸಬಹುದು. ಆಂಡ್ರಾಯ್ಡ್‌ ಮತ್ತು ಐಪೋನ್‌ ಬಳಕೆದಾರರಿಬ್ಬರೂ ಈ ವೈಶಿಷ್ಟ್ಯವನ್ನು ಬಳಸುವ ಮೂಲಕ ವಾಟ್ಸ್ಯಾಪ್ ಡೇಟಾ ಬಳಕೆಯನ್ನು ನಿಷ್ಕ್ರಿಯಗೊಳಿಸಬಹುದು. ಹಾಗಿದ್ರೆ ಆ ಹಂತಗಳನ್ನು ತಿಳಿಯೋಣ ಬನ್ನಿ.

ಆ ಹಂತಗಳು ಹೀಗಿವೆ:

  1. ಮೊದಲು ಮೊಬೈಲ್‌ನಲ್ಲಿರುವ ಸೆಟ್ಟಿಂಗ್ಸ್‌ ಆಯ್ಕೆಗೆ ಹೋಗಿ.

  2. ಕನೆಕ್ಷನ್/ಸಂಪರ್ಕ ಮತ್ತು ಶೇರಿಂಗ್‌/ಹಂಚಿಕೆ (Xiaomi ಮೊಬೈಲ್‌ಗಾಗಿ)/ ಮೊಬೈಲ್ ನೆಟ್‌ವರ್ಕ್ (OnePlus ಮೊಬೈಲ್‌ಗಾಗಿ) ಕ್ಲಿಕ್ ಮಾಡಿ.

  3. ಬ್ಯಾಕ್‌ಗ್ರೌಂಡ್‌ನಲ್ಲಿ ಡೇಟಾವನ್ನು ಬಳಸುತ್ತಿರುವ ಅಪ್ಲಿಕೇಶನ್‌ಗಳ ಪಟ್ಟಿಯನ್ನು ತೆರೆಯಲು "ಡೇಟಾ ಬಳಕೆ/ ಡೆಟಾ ಯೂಸೇಜ್" ಎಂದು ಹೇಳುವ ಆಯ್ಕೆಯನ್ನು ಕ್ಲಿಕ್‌ ಮಾಡಿ.

  4. ಈ ಪಟ್ಟಿಯಿಂದ ವಾಟ್ಸ್‌ಅಪ್‌ ಆಯ್ಕೆಯನ್ನು ಕ್ಲಿಕ್ ಮಾಡಿ.

  5. ಈ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸಲು "ಬ್ಯಾಕ್‌ಗ್ರೌಂಡ್‌ ಡೇಟಾ ಬಳಕೆಯನ್ನು ಅನುಮತಿಸಿ" ಎಂಬ ಆಯ್ಕೆಯನ್ನು ಟಾಗಲ್ ಆಫ್ ಮಾಡಿ.


ನಂತರ

  1. ಮತ್ತೆ ಸೆಟ್ಟಿಂಗ್ಸ್‌ ಆಯ್ಕೆ ಮೇಲೆ ಕ್ಲಿಕ್‌ ಮಾಡಿ.

  2. ನಂತರ ಮೊಬೈಲ್ ಮೇಲೆ ಕ್ಲಿಕ್ ಮಾಡಿ.

  3. ಮೊಬೈಲ್‌ ಸ್ಲೈಡರ್ ಅನ್ನು ಎಳೆಯಿರಿ ಮತ್ತು "ಸೆಲ್ಯುಲಾರ್ ಡೇಟಾ" ಎಂಬ ಆಯ್ಕೆಯನ್ನು ಆಯ್ಕೆ ಮಾಡಿ.

  4. ಆಗ ವಾಟ್ಸ್ಯಾಪ್ ಆಯ್ಕೆ ಮೇಲೆ ಕ್ಲಿಕ್‌ ಮಾಡಿ ನಂತರ ಅದನ್ನು 'ನಿಷ್ಕ್ರಿಯ' ಎಂಬ ಆಯ್ಕೆಯನ್ನು ಆಯ್ಕೆ ಮಾಡಿ ಈ ಡೇಟಾ ಬಳಕೆ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ.


ಇದನ್ನೂ ಓದಿ:  WhatsApp: ವಾಟ್ಸ್​ಆ್ಯಪ್​ನಲ್ಲಿ ಡಿಲೀಟ್​ ಮಾಡಿದ ಮೆಸೇಜ್​ ಅನ್ನು ಮರಳಿ ಪಡೆಯಿರಿ

ಬಳಕೆದಾರರು ಅದೇ ಹಂತಗಳನ್ನು ಬಳಸಿಕೊಂಡು ಬ್ಯಾಕ್‌ಗ್ರೌಂಡ್‌ ಡೇಟಾವನ್ನು ಖಾಲಿ ಮಾಡದಂತೆ ಇತರ ಅಪ್ಲಿಕೇಶನ್‌ಗಳನ್ನು ಸಹ ನಿರ್ಬಂಧಿಸಬಹುದು. ಸಾಮಾನ್ಯವಾಗಿ ಬಹಳಷ್ಟು ನೋಟಿಫಿಕೆಶನ್‌ಗಳನ್ನು ಕಳುಹಿಸುವ ಮತ್ತು ಹೆಚ್ಚಿನ ಡೇಟಾವನ್ನು ಬಳಸುವ ಅಪ್ಲಿಕೇಶನ್‌ಗಳಿಗೆ ಈ ವೈಶಿಷ್ಟ್ಯವನ್ನು ಬಳಕೆ ಮಾಡಬಹುದು. ಇದಲ್ಲದೆ, ಈ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸುವುದರಿಂದ ಬ್ಯಾಟರಿ ಬಳಕೆಯು ಉಳಿತಾಯವಾಗಿ, ಬ್ಯಾಟರಿ ದೀರ್ಘಕಾಲದವರೆಗೆ ಬರುತ್ತದೆ ಎಂದು ಹೇಳಲಾಗುತ್ತದೆ.
Published by:Ashwini Prabhu
First published: