Instagram ಖಾತೆಯನ್ನು ಡಿಲೀಟ್​ ಮಾಡುವುದು ಹೇಗೆ?


Updated:July 18, 2018, 11:23 AM IST
Instagram ಖಾತೆಯನ್ನು ಡಿಲೀಟ್​ ಮಾಡುವುದು ಹೇಗೆ?

Updated: July 18, 2018, 11:23 AM IST
ಸಾಮಾಜಿಕ ಜಾಲತಾಣ ಫೇಸ್​ಬುಕ್​ ಒಡೆತನದ ಇನ್ಸ್ಟಾಗ್ರಾಂ  ಇತ್ತೀಚಿಗಿನ ದಿನಗಳಲ್ಲಿ ಸ್ನಾಪ್​ಚಾಟ್​ನಂತಹ ಇತರೇ ಸಾಮಾಜಿಕ ಮಾಧ್ಯಮಗಳಿಗೆ ತೀವ್ರ ಸ್ಪರ್ಧೆ ನೀಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಲಕ್ಷ ಕೋಟಿ ಮಂದಿ ಇಂದು ದೈನಂದಿನ ಬದುಕಿನಲ್ಲಿ ಕಾಣುವ ಚಿತ್ರ, ವಿಡಿಯೋಗಳನ್ನು ಶೇರ್​ ಮಾಡುವ ಮೂಲಕ  ವರ್ಚುವಲ್​ ಬದುಕಿಗೆ ದಾಸರಾಗಿದ್ದಾರೆ ಎಂದರೂ ತಪ್ಪಾಗಲಾರದು. ಹೀಗಾಗಿ ಈ ಎಲ್ಲಾ ಟೆಕ್​​ ಜೀವನದಿಂದ ವಾಸ್ತವದ ಬದುಕಿನಲ್ಲಿ ಮಾತ್ರಾ ಹಲವಾರು ಬದಲಾವಣೆಗಳಾಗಿವೆ. ಹೀಗಾಗಿ ಇಂದು ಇನ್ಸ್ಟಾಗ್ರಾಂ ಆ್ಯಪ್​ನಲ್ಲಿ ತಮ್ಮ ಖಾತೆಯನ್ನು ಡಿಲೀಟ್​ ಮಾಡಲು ಬಯಸುವವರಿಗೆ ಟಿಪ್ಸ್​ ನೀಡಿದ್ದೇ ಮುಂದೆ ಓದಿ.

ಖಾತೆಯನ್ನು ಡಿಲೀಟ್​ ಮಾಡುವ ಮುನ್ನ ಇದನ್ನು ಓದಿ
ಇನ್ಸ್ಟಾದಿಂದ ಹೊರ ಬರಲು ನಿಮ್ಮ ಬಳಿ ತಾತ್ಕಾಲಿಕ ಹಾಗೂ ಶಾಶ್ವತ ವಿಧಾನಗಳಿರುತ್ತದೆ. ತಾತ್ಕಾಲಿಕವಾಗಿ ನೀವು ಖಾತೆಯನ್ನು ಸ್ಥಗಿತಗೊಳಿಸಿದರೆ ನಿಮ್ಮ ಡೇಟಾಗಳನ್ನು ಡಿಲೀಟ್​ ಮಾಡುವುದಿಲ್ಲ. ಆದರೆ ನೀವು ಶಾಶ್ವತವಾಗಿ ಖಾತೆಯನ್ನು ಡಿಲೀಟ್​ ಮಾಡುವುದಾದರೆ ನಿಮ್ಮ ಖಾತೆಯಲ್ಲಿ ಅಪ್ಲೋಡ್​ ಮಾಡಿರುವು ಚಿತ್ರಗಳು, ವಿಡಿಯೋಗಳನ್ನು ಬೇರೆಡೆ ಡೌನ್​ಲೋಡ್​ ಮಾಡಿಟ್ಟುಕೊಳ್ಳಿ. ಏಕೆಂದರೆ ಒಂದು ಬಾರಿ ಖಾತೆ ಡಿಲೀಟ್​ ಆದರೆ ನೀವು ಶೇರ್​ ಮಾಡಿಕೊಂಡಿದ್ದ ಎಲ್ಲಾ ಮಾಹಿತಿಯನ್ನು ಇನ್ಸ್ಟಾ ಸರ್ವರ್​ನಿಂದ ಡಿಲೀಟ್​ ಮಾಡಲಾಗುತ್ತದೆ.

ಇನ್ಸ್ಟಾ ಖಾತೆಯನ್ನು ಡಿಸೇಬಲ್​ (ತಾತ್ಕಾಲಿಕ ಸ್ಥಗಿತ) ಮಾಡುವುದು

ನಿಮ್ಮ ಲ್ಯಾಪ್​ಟಾಪ್​ ಅಥವಾ ಕಂಪ್ಯೂಟರ್​ನ ಬ್ರೌಸರ್​ನಲ್ಲಿ  Instagram.com ತೆರೆಯಿರಿ,
ಇನ್ಸ್ಟಾ ಲಾಗಿನ್​ ಐಡಿ ಮೂಲಕ ನಿಮ್ಮ ಖಾತೆಯನ್ನು ಓಪನ್​ ಮಾಡಿ



Profile ಗೆ ಕ್ಲಿಕ್​ ಮಾಡಿ , ಬಳಿಕ ‘Edit Profile’ ಆಯ್ಕೆನ್ನು ಒತ್ತಿರಿ


ಈಗೊಂದು ಹೊಸ ಡೈಲಾಗ್​ ಬಾಕ್ಸ್​ ತೆರೆಯುತ್ತದೆ. ‘Temporarily disable my account’

ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ.ಅದನ್ನು ಒತ್ತಿ
ನೀವು ಖಾತೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸುವ ಕಾರಣವನ್ನು ಕೇಳುತ್ತದೆ. ಅಲ್ಲಿರುವ ಮಾಹಿತಿಯನ್ನು ಆಯ್ಕೆ ಮಾಡಿ.


ಬಳಿಕ ನಿಮ್ಮ ಪಾಸ್​ವರ್ಡ್​ನ್ನು ಹಾಕಿ, ನಿಮ್ಮ ಖಾತೆ ತಾತ್ಕಾಲಿಕ ಸ್ಥಗಿತಗೊಂಡಿರುತ್ತದೆ.

ಖಾತೆಯನ್ನು ಡಿಲೀಟ್​ ಮಾಡುವುದು ಹೇಗೆ? 

ಒಂದು ವೇಳೆ ನಿಮಗೆ ಖಾತೆ ಸಂಪೂರ್ಣವಾಗಿ ಡಿಲೀಟ್​ ಮಾಡಬೇಕೆಂದಿದ್ದರೆ ಮೊದಲು ಲ್ಯಾಪ್​ಟಾಪ್​ / ಕಂಪ್ಯೂಟರ್​ನಲ್ಲಿ Instagram.com ಲಿಂಕ್​ ಓಪನ್ ಮಾಡಿ.
ನಿಮ್ಮ ಐಡಿಯನ್ನು ಬಳಸಿ ಲಾಗ್ ಇನ್​ ಆಗಿ.
ಬಳಿಕ ಈ ಆ್ಯಪ್ ಡಿಲೀಟ್​ ಮಾಡುವ ಲಿಂಕ್​ ಇಲ್ಲಿದೆ ಅದನ್ನು ಒತ್ತಿರಿ
ಬಳಿಕ ನಿಮ್ಮ ಡಿಲೀಟ್​ ಮಾಡುವ ಉದ್ಧೇಶವನ್ನು ಆಯ್ಕೆ ಮಾಡಿಕೊಳ್ಳಿ


ಖಾತೆಯ ಪಾಸ್​ವರ್ಡ್​ ಮತ್ತೊಮ್ಮೆ ನಮೂದಿಸಿ, ಓಕೆ ಎಂದು ಒತ್ತಿರಿ.
ನಿಮ್ಮ ಖಾತೆ ಡಿಲೀಟ್​ ಆಗಿರುತ್ತದೆ.
First published:July 18, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ