ವಾಟ್ಸಪ್​ನಲ್ಲಿ ನಿಮ್ಮದೇ ಸ್ಟಿಕ್ಕರ್ ತಯಾರಿಸಬಹುದು..! ಹೇಗಂತೀರಾ?

ವಾಟ್ಸಪ್ ಚಾಟ್​ ಫ್ಲಾಟ್​ಫಾರ್ಮ್​ನಲ್ಲಿ ಎಮೊಜಿ ಮತ್ತು Gifs ಆಯ್ಕೆ ಪಕ್ಕದಲ್ಲಿ ಮತ್ತೊಂದು ಆಯ್ಕೆಯನ್ನು ನೀಡಲಾಗಿದೆ. | Now you can create your own custom whatsapp sticker

zahir | news18
Updated:November 12, 2018, 6:18 PM IST
ವಾಟ್ಸಪ್​ನಲ್ಲಿ ನಿಮ್ಮದೇ ಸ್ಟಿಕ್ಕರ್ ತಯಾರಿಸಬಹುದು..! ಹೇಗಂತೀರಾ?
ವಾಟ್ಸಪ್ ಚಾಟ್​ ಫ್ಲಾಟ್​ಫಾರ್ಮ್​ನಲ್ಲಿ ಎಮೊಜಿ ಮತ್ತು Gifs ಆಯ್ಕೆ ಪಕ್ಕದಲ್ಲಿ ಮತ್ತೊಂದು ಆಯ್ಕೆಯನ್ನು ನೀಡಲಾಗಿದೆ. | Now you can create your own custom whatsapp sticker
  • Advertorial
  • Last Updated: November 12, 2018, 6:18 PM IST
  • Share this:
-ನ್ಯೂಸ್ 18 ಕನ್ನಡ

ವಾಟ್ಸಪ್​ ಇತ್ತೀಚೆಗೆ ವಿಶೇಷ ಫೀಚರ್ಸ್​ ಮೂಲಕ ಬಳಕೆದಾರರ ಗಮನ ಸೆಳೆಯುತ್ತಿದೆ. ಅದರಂತೆ ಕಳೆದ ತಿಂಗಳು ಹೊಸ ಸ್ಟಿಕ್ಕರ್​ಗಳನ್ನು ಪರಿಚಯಿಸಿತ್ತು. ಆದರೆ ಹೆಚ್ಚಿನ ಬಳಕೆದಾರರಿಗೆ ಇದರ ಮಾಹಿತಿ ಕೊರತೆಯಿದೆ. ವಾಟ್ಸಪ್ ಚಾಟ್​ ಫ್ಲಾಟ್​ಫಾರ್ಮ್​ನಲ್ಲಿ ಎಮೊಜಿ ಮತ್ತು Gifs ಆಯ್ಕೆ ಪಕ್ಕದಲ್ಲಿ ಕಂಡು ಬರುವ ಈ ಸ್ಟಿಕ್ಕರ್​ ಆಯ್ಕೆ ಕೆಲ ಮೊಬೈಲ್​ಗಳಲ್ಲಿ ಅಪ್​ಡೇಟ್​ ಆಗಿಲ್ಲ. ಆದರೂ ನಿಮ್ಮ ಚಾಟಿಂಗ್​ನ್ನು ಸ್ಟಿಕ್ಕರ್ಸ್​ ಮೂಲಕ ಮತ್ತಷ್ಟು ಆಸಕ್ತಿಕರವಾಗಿಸಲು  ಮತ್ತೊಂದು ಆಯ್ಕೆಯಿದೆ.

ಇದಕ್ಕಾಗಿ  ನೀವು ಬೇರೊಂದು ಆ್ಯಪ್​ನ್ನು ಡೌನ್​ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಅಂಡ್ರಾಯ್ಡ್​ ಬಳಕೆದಾರಿಗೆ ಈ ಆಯ್ಕೆಯು ಪ್ಲೇಸ್ಟೋರ್​ನಲ್ಲಿ ಲಭ್ಯವಿದ್ದು, ಐಒಎಸ್​ ಸ್ಮಾರ್ಟ್​ಫೋನ್ ಹೊಂದಿರುವವರು ಆ್ಯಪ್​ ಸ್ಟೋರ್​ನಲ್ಲಿ ಡೌನ್​ಲೋಡ್ ಮಾಡಿಕೊಳ್ಳಬಹುದು. ಸ್ಟಿಕ್ಕರ್​ನ್ನು ರಚಿಸುವುದು ಹೇಗೆ?
- ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್​ಗೆ ಹೋಗಿ 'Sticker maker for WhatsApp'ಸರ್ಚ್ ಮಾಡಿ
- Sticker maker for WhatsApp ಎಂಬ ಆ್ಯಪ್​ನ್ನು ಡೌನ್​ಲೋಡ್ ಮಾಡಿಕೊಳ್ಳಿ- ಇನ್​ಸ್ಟಾಲ್​ ಆದ ಅಪ್ಲಿಕೇಶನ್ ಒಪನ್​ ಮಾಡಿ 'Add sticker'ಆಯ್ಕೆ ಮಾಡಿ
- ಇಲ್ಲಿ ನಿಮ್ಮದೇ Custom Stickerಗಳನ್ನು ರಚಿಸಲು ನಿಮ್ಮ ಗ್ಯಾಲರಿ ಅಥವಾ ಗೂಗಲ್​ ಫೋಟೋಗಳಿಂದ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
- ಸ್ಟಿಕ್ಕರ್​ಗೆ ಸೂಕ್ತವಾಗುವಂತೆ ಫೋಟೋವನ್ನು ಕ್ರಾಪ್ ಮಾಡಿಕೊಳ್ಳಬಹುದು.
- ಇಲ್ಲಿ ನೀಡಲಾದ ಪ್ಯಾಕ್​ನಲ್ಲಿ 30 ಸ್ಟಿಕ್ಕರ್​ಗಳನ್ನು ರಚಿಸಿಕೊಳ್ಳಬಹುದು.
- ಇದಾದ ಬಳಿಕ 'Publish Sticker Pack'ಕ್ಲಿಕ್ ಮಾಡಿದರೆ ವಾಟ್ಸಪ್​ನಲ್ಲಿ ಸ್ಟಿಕ್ಕರ್ ಆ್ಯಡ್​ ಆಗಿರುತ್ತದೆ. ಇಲ್ಲಿ ನಿಮ್ಮ ಅಭಿರುಚಿಗೆ ತಕ್ಕಂತೆ ಹಲವು ಸ್ಟಿಕ್ಕರ್​ಗಳ ಆಯ್ಕೆ ನೀಡಲಾಗಿರುತ್ತದೆ.
- ಈ ಸ್ಟಿಕ್ಕರ್ ಆಯ್ಕೆಯು ನಿಮ್ಮ ವಾಟ್ಸಪ್​ನ ಚಾಟ್​ ಪ್ಲಾಟ್​ಫಾರ್ಮ್​ನಲ್ಲಿ ಟ್ರೇ ಐಕಾನ್​ನಲ್ಲಿ ಕಾಣಿಸುತ್ತದೆ.

ಇದನ್ನೂ ಓದಿ: ರಿಸರ್ವ್​ ಬ್ಯಾಂಕ್ ನೇಮಕಾತಿ: 10ನೇ ತರಗತಿ ಪಾಸಾದವರು​ ಅರ್ಜಿ ಸಲ್ಲಿಸಿಇದನ್ನೂ ಓದಿ: #KGF ಹೊಸ ದಾಖಲೆ: ಸೂಪರ್ ಸ್ಟಾರ್​ಗಳನ್ನು ಹಿಂದಿಕ್ಕಿದ ರಾಕಿಂಗ್ ಸ್ಟಾರ್
First published:November 12, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ